ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ► ಇಮಾನ್ ಅಹ್ಮದ್ ನಿಧನ
(ನ್ಯೂಸ್ ಕಡಬ) newskadaba.com ಅಬುಧಾಬಿ,ಸೆ.25, ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ಎಂದೇ ಹೆಸರಾಗಿದ್ದ ಈಜಿಪ್ಟ್ನ ಇಮಾನ್ ಅಹ್ಮದ್ ಸೋಮವಾರ ನಿಧನರಾಗಿದ್ದಾರೆ. ಇಮಾನ್ ಅಹ್ಮದ್( 37) ನಿಧನ ಕುರಿತಂತೆ ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದು, ಹೃದ್ರೋಗ ಹಾಗೂ ಕಿಡ್ನಿಗಳ ವೈಫಲ್ಯವೇ ಸಾವಿಗೆ ಕಾರಣ ಎಂದು ಮಾಹಿತಿ ನೀಡಿದ್ದಾರೆ. ಈಜಿಪ್ಟ್ ನ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿರುವ ಇಮಾನ್ ಬರೋಬ್ಬರಿ 500 ಕೆಜಿ ತೂಗುತ್ತಿದ್ದ ದೇಹದ ತೂಕ ಕಡಿಮೆ ಮಾಡಲು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮುಂಬೈಗೆ ಕರೆತರಲಾಗಿತ್ತು. ಮುಂಬೈ ವೈದ್ಯರು ಆಕೆಯ […]
ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ► ಇಮಾನ್ ಅಹ್ಮದ್ ನಿಧನ Read More »
ಅಂತರ್ರಾಷ್ಟ್ರೀಯ ನ್ಯೂಸ್
