ಕನ್ನಡ

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸುವ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ

(ನ್ಯೂಸ್‌ ಕಡಬ)newskadaba.com ಬೆಂಗಳೂರು,ಫೆ.16: ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. 2024ರ ತಿದ್ದುಪಡಿ ಮಸೂದೆ ಇದಾಗಿದ್ದು, ವಾಣಿಜ್ಯ, ಕೈಗಾರಿಕೆ, ಉದ್ಯಮ, ಆಸ್ಪತ್ರೆಗಳು, ಪ್ರಯೋಗಾಲಯಗಳು, ಹೋಟೆಲ್ ಗಳು ಸೇರಿದಂತೆ ಎಲ್ಲಾ ನಾಮಫಲಕಗಳಲ್ಲಿಯೂ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯವಾಗಲಿದೆ. ನಾಮಫಲಕಗಳ ಮೇಲ್ಭಾಗದಲ್ಲಿ ಕನ್ನಡವನ್ನು ಪ್ರದರ್ಶಿಸಬೇಕು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ನಿಯಮ ಪಾಲಿಸದಿದ್ದಲ್ಲಿ ಉದ್ಯಮಗಳ ಪರವಾನಗಿ ರದ್ದತಿಗೆ ಕಾರಣವಾಗುತ್ತದೆ […]

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸುವ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ Read More »

ಕರ್ನಾಟಕ

ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು

(ನ್ಯೂಸ್ ಕಡಬ) newskadaba.com ಕಡಬ, ನ.3. ಗೂಗಲ್ ನಕ್ಷೆಯಲ್ಲಿ ಈಗ ಸ್ಥಳಗಳ ಹೆಸರು ಇಂಗ್ಲಿಷ್‍‌ನಲ್ಲಿ ಮಾತ್ರ ಅಲ್ಲ ಕನ್ನಡದಲ್ಲಿಯೂ ಲಭ್ಯವಿದೆ. ಇಲ್ಲಿಯವರೆಗೆ ಗೂಗಲ್ ಮ್ಯಾಪ್‍ನಲ್ಲಿ ಸ್ಥಳಗಳ ಹೆಸರು ಇಂಗ್ಲಿಷ್‍ನಲ್ಲಿ ಮಾತ್ರ ಕಾಣುತ್ತಿತ್ತು. ಇದೀಗ ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಸ್ಥಳದ ಹೆಸರನ್ನು ಓದಬಹುದು. ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರಿಗೊಂದು ಸಂತೋಷದ ಸುದ್ದಿ ಇದಾಗಿದೆ. ಆಯಾ ಪ್ರಾಂತೀಯ ಭಾಷೆ ನಕ್ಷೆಯಲ್ಲಿ ಕಾಣಿಸಿಕೊಳ್ಳಲಿದೆ. ಗೂಗಲ್‌ನ ಈ ಕ್ರಮವನ್ನು ಪ್ರಶಂಸಿಸಿ, ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಸಂತೋಷ ವ್ಯಕ್ತಪಡಿಸಿ, ಗೂಗಲ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು Read More »

ಕರಾವಳಿ
Scroll to Top