ಮಂಗಳೂರು

ಪಂಜದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಪಂಜ ನ. 27: ಕಳೆದ ದಿನ ಪಂಜದ ಯುವಕನೋರ್ವ ಬೆಂಗಳೂರಿನ ತನ್ನ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪಂಜದ ಬರೆಮೇಲು ಮೋನಪ್ಪ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರ ಜತಿನ್ ಕುಮಾರ್(30)(ದೀಕ್ಷಿತ್) ಎಂದು ಗುರುತಿಸಲಾಗಿದೆ.   ಬೆಂಗಳೂರಿನಲ್ಲಿ ಹುಂಡೈ ಕಂಪೆನಿಯ ಉದ್ಯೋಗಿಯಾಗಿರುವ ಇವರು ಕಳೆದ ದಿನ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ವಿಷಯ ತಿಳಿದ ಸಂಬಂಧಿಕರು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ […]

ಪಂಜದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು : ಕದ್ರಿಯಲ್ಲಿ ಉಗ್ರ ಸಂಘಟನೆ ಲಷ್ಕರ್‌‌ ಪರ ಗೋಡೆ ಬರಹ

(ನ್ಯೂಸ್ ಕಡಬ) newskadaba.com ಮಂಗಳೂರು ನ. 27: ಮಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಗೋಡೆಗಳ ಮೇಲೆ ಬರಹಗಳನ್ನು ಬರೆದಿದ್ದಾರೆ .ಸರ್ಕ್ಯೂಟ್‌ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರ ಕಾಂಪೌಂಡ್‌ ಮೇಲೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿದೆ. ಲಷ್ಕರ್ ಉಗ್ರರನ್ನು ಕರೆಸುವಂತೆ ನಮಗೆ ಒತ್ತಾಯ ಮಾಡಬೇಡಿ ಎಂದೆಲ್ಲಾ ಗೋಡೆಯಲ್ಲಿ ಬರೆಯಲಾಗಿದೆ.       ಇದು ಜನನಿಬಿಡ ರಸ್ತೆಯಾಗಿದ್ದು,  ಹತ್ತಿರದಲ್ಲೇ ಕದ್ರಿ ಪಾರ್ಕ್, ಕದ್ರಿ ಪೊಲೀಸ್ ಠಾಣೆಯಿದೆ.ಕಳೆದ ರಾತ್ರಿ ತಡರಾತ್ರಿ ಈ ವಿವಾದಾತ್ಮಕ ಬರಹ ಬರೆಯಲಾಗಿದೆ

ಮಂಗಳೂರು : ಕದ್ರಿಯಲ್ಲಿ ಉಗ್ರ ಸಂಘಟನೆ ಲಷ್ಕರ್‌‌ ಪರ ಗೋಡೆ ಬರಹ Read More »

ಕರಾವಳಿ, ಕ್ರೈಮ್ ನ್ಯೂಸ್

ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಘಟಕಾಧಿಕಾರಿಗಳ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26:  ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ನೇತೃತ್ವದಲ್ಲಿ ಘಟಕಾಧಿಕಾರಿಗಳ ಸಭೆಯನ್ನು ನ.26 ರ ಇಂದು ನಡೆಸಲಾಯಿತು. ಮುಂಬರುವ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಹಾಗೂ ಗೃಹರಕ್ಷಕ ದಿನಾಚರಣೆ ಆಚರಿಸುವ ಬಗ್ಗೆ ಚರ್ಚಿಸಲಾಯಿತು.   ಬಾಕಿ ಇರುವ ಗೃಹರಕ್ಷಕರ ನವೀಕರಣ ಕಡ್ಡಾಯವಾಗಿ ಮಾಡುವಂತೆ ಸೂಚಿಸಲಾಯಿತು. ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಗೆ ವಂತಿಗೆಯನ್ನು ಕಟ್ಟಲು ಬಾಕಿ ಇರುವ ಗೃಹರಕ್ಷಕರಿಂದ ಸಂಗ್ರಹಿಸಿ ಕಛೇರಿಗೆ ಹಸ್ತಾಂತರಿಸಲು

ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಘಟಕಾಧಿಕಾರಿಗಳ ಸಭೆ Read More »

ಕರಾವಳಿ, ಕರ್ನಾಟಕ

ಶ್ರೀ ಕೃಷ್ಣಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ➤ ಶ್ರೀ ಪಾದರಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ

(ನ್ಯೂಸ್ ಕಡಬ) newskadaba.com ಉಡುಪಿ ನ. 26: ಶ್ರೀಕೃಷ್ಣಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ದಿನವಾದ ದೇವಪ್ರಬೋಧಿನಿ ಏಕಾದಶಿಯಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ತಪ್ತಮುದ್ರಾಧಾರಣೆ ನಡೆಯಿತು. ಪರ್ಯಾಯ ಮಠದ ಪುರೋಹಿತ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು. ಪೇಜಾವರ ಶ್ರೀಪಾದರು ತಾವೇ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು. ನಂತರ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.  

ಶ್ರೀ ಕೃಷ್ಣಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ➤ ಶ್ರೀ ಪಾದರಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಅಹ್ಮದ್ ಪಟೇಲ್ ನಿಧನ ➤ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ ಅರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಕಳೆದ ದಿನ ನಿಧನರಾದ ನಿಧನರಾದ ರಾಜ್ಯಸಭೆ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.   ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನ ವಿವಿಧ ಪದಾಧಿಕಾರಿಗಳು ಅಹ್ಮದ್ ಪಟೇಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ನುಡಿ ನಮನ ಸಲ್ಲಿಸಿದ ಮಾಜಿ ಸಚಿವ ರಮಾನಾಥ ರೈ, “ಗಾಂಧಿ ಕುಟುಂಬದ

ಮಂಗಳೂರು: ಅಹ್ಮದ್ ಪಟೇಲ್ ನಿಧನ ➤ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ ಅರ್ಪಣೆ Read More »

ಕರಾವಳಿ, ಕರ್ನಾಟಕ

ಪುತ್ತೂರು: ವಾಹನ ಶೋ ರೂಮ್ ಒಳಗೆ ನುಗ್ಗಿ ಮಾಜಿ ನೌಕರನಿಂದ ದಾಂದಲೆ ➤ ಪಿಎಫ್‍ಗಾಗಿ ನಡೆಯಿತು ನೂಕಾಟ- ತಲ್ಲಾಟ

(ನ್ಯೂಸ್ ಕಡಬ) newskadaba.com ಪುತ್ತೂರು ನ. 26: ದ್ವಿಚಕ್ರ ವಾಹನ ಶೋ ರೂಮ್ ಗೆ ಅಕ್ರಮ ಪ್ರವೇಶಿಸಿ ಮಾಜಿ ನೌಕರ ದಾಂಧಲೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.     ಪುತ್ತೂರಿನ ಪ್ರತಿಷ್ಟಿತ ವಾಹನ ಶೋ ರೂಮ್ ವೊಂದಕ್ಕೆ ಮಾಜಿ ನೌಕರರಾದ ರಂಜನ್ (26) ಎಂಬುವರು ಅಕ್ರಮವಾಗಿ ಪ್ರವೇಶಿಸಿ ಅವರ ಪಿಎಫ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಹೆಚ್ ಆರ್ ಗಿರೀಶ್ ಅವರನ್ನು ಅವಾಚ್ಯವಾಗಿ ನಿಂದಿಸಿದಲ್ಲದೆ, ಕ್ಯಾಬೀನ್ನಲ್ಲಿದ್ದ ಕೃಷ್ಣ ಕಿಶೋರ್ ಎಂಬುವರ ಮೇಲೆ ಹಲ್ಲಗೆ ಯತ್ನಿಸಿದ್ದಾನೆ, ಈ ವೇಳೆ ಕೃಷ್ಣ ಕಿಶೋರ್

ಪುತ್ತೂರು: ವಾಹನ ಶೋ ರೂಮ್ ಒಳಗೆ ನುಗ್ಗಿ ಮಾಜಿ ನೌಕರನಿಂದ ದಾಂದಲೆ ➤ ಪಿಎಫ್‍ಗಾಗಿ ನಡೆಯಿತು ನೂಕಾಟ- ತಲ್ಲಾಟ Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ :ಮಿನಿ ಟಿಪ್ಪರ್ ಕದ್ದು ಪರಾರಿಯಾದ ಚಾಲಕನ ಬಂಧನ

(ನ್ಯೂಸ್ ಕಡಬ) newskadaba.com ಕುಂದಾಪುರ ನ. 26: ಮಿನಿ ಟಿಪ್ಪರ್ ವಾಹನ ಕದ್ದು ಪರಾರಿಯಾದ ಚಾಲಕನನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ನ. 20 ರಂದು 12-30 ಗಂಟೆಯ ಸುಮಾರಿಗೆ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಉಸ್ಮಾನ್‌‌ ಎನ್ನುವರಿಗೆ ಸೇರಿದ ರೂ. 9 ಲಕ್ಷ ಮೌಲ್ಯದ ಟಾಟಾ ಮಿನಿ ಟಿಪ್ಪರ್ ವಾಹನವು ಕಳವಾಗಿದ್ದು ಈ ಟಿಪ್ಪರ್ ಓಡಿಸುತ್ತಿದ್ದ ಚಾಲಕ ಪರುಶುರಾಮ ಎನ್ನುವಾತನ ಮೇಲೆ ಸಂಶಯ ವ್ಯಕ್ತಪಡಿಸಿ ಉಸ್ಮಾನ್ ಪೊಲೀಸರಿಗೆ ದೂರು ನೀಡಿದ್ದರು. ಕುಂದಾಪುರ

ಕುಂದಾಪುರ :ಮಿನಿ ಟಿಪ್ಪರ್ ಕದ್ದು ಪರಾರಿಯಾದ ಚಾಲಕನ ಬಂಧನ Read More »

ಕರಾವಳಿ

ಮೈಸೂರು ವಿವಿಯಲ್ಲಿ ಖ್ಯಾತ ಹಿನ್ನಲೆ ಗಾಯಕ ಎಸ್ಪಿಬಿ ಹೆಸರಿನಲ್ಲಿ ಸಂಗೀತ ಪೀಠ ಸ್ಥಾಪನೆ

(ನ್ಯೂಸ್ ಕಡಬ) newskadaba.com ಮೈಸೂರು ನ. 26: ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ದಿವಂಗತ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.     ಈ ಹಿನ್ನಲೆಯಲ್ಲಿ ಸಂಗೀತ ಪೀಠ ಸ್ಥಾಪನೆಗೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಅನುಮೋದನೆ ನೀಡಿದ್ದು, ಅವರ ಹೆಸರಿನ ಸಂಗೀತ ಪೀಠ ಪ್ರಾರಂಭವಾಗಲಿದ್ದು ಇದಕ್ಕಾಗಿ ವಾರ್ಷಿಕ ಐದು ಲಕ್ಷ ಮೀಸಲು ಇರಿಸಲಾಗುತ್ತದೆ. ಈ ಹಣದಲ್ಲಿ ವಿಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಗ್ರಂಥ ಪ್ರಕಟಣೆ ಸೇರಿ ವಿವಿಧ ಶೈಕ್ಷಣಿಕ

ಮೈಸೂರು ವಿವಿಯಲ್ಲಿ ಖ್ಯಾತ ಹಿನ್ನಲೆ ಗಾಯಕ ಎಸ್ಪಿಬಿ ಹೆಸರಿನಲ್ಲಿ ಸಂಗೀತ ಪೀಠ ಸ್ಥಾಪನೆ Read More »

ಕರ್ನಾಟಕ

ಉಡುಪಿ: ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ

(ನ್ಯೂಸ್ ಕಡಬ) newskadaba.com ಉಡುಪಿ ನ. 26: ಕರಾವಳಿ ನಗರಿ ಉಡುಪಿಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಳೆದ ದಿನ ನಡೆದಿದೆ.     ಉಡುಪಿ ತಾಲೂಕಿನ ಮಲ್ಪೆ ಬಸ್ಸು ನಿಲ್ದಾಣದ ಬಳಿ ಕಟ್ಟಡಕ್ಕೆ ತಾಗಿಕೊಂಡಿರುವ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನಾ ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಆತನನ್ನು ಕಂಬದಿಂದ ಇಳಿಸಿ ವಿಚಾರಿಸಿದಾಗ ಈತ ಫಕೀರಪ್ಪ ಸವದತ್ತಿ ಮೂಲದವ ಅಲ್ಲದೇ, ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.  

ಉಡುಪಿ: ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ Read More »

ಕರಾವಳಿ

ಪೋಕ್ಸೊ ಮತ್ತು ಸೈಬರ್ ಕ್ರೈಮ್ ಕಾಯಿದೆಯ ಕುರಿತು ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ, ಇಲ್ಲಿಯ ಐ.ಕ್ಯೂ.ಎ.ಸಿ. ಮತ್ತು ಎನ್.ಎಸ್.ಎಸ್‍ ಘಟಕ ಹಾಗೂ ಲಯನ್ಸ್ ಕಬ್ಲ್ ಮಂಗಳಾದೇವಿ ಇವುಗಳ ಜಂಟಿ ಆಶ್ರಯದಲ್ಲಿ ಪೋಕ್ಸೋ ಕಾಯಿದೆಯ ಕುರಿತು ಕಾನೂನು ಮಾಹಿತಿ ಕಾರ್ಯಕ್ರಮವು ಜರುಗಿತು. ಇತೀಚೆಗೆ ನಗರದ ಕಾರ್‍ಸ್ಟ್ರೀಟ್‍ನ ಕಾಲೇಜಿನಲ್ಲಿ ಜಿಲ್ಲಾ ಕಾನೂನು ವೇದಿಕೆಯ ಅಧ್ಯಕ್ಷರು ಹಾಗೂ ವಕೀಲ ಎಸ್.ಪಿ ಚಂಗಪ್ಪರವರು ಉದ್ಘಾಟಿಸಿ ಮಾತನಾಡಿ, ಕಾನೂನು ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ರಕ್ಷಣೆಯ ನೆಲೆಯಾಗಿದೆ. ಯುವಜನರು

ಪೋಕ್ಸೊ ಮತ್ತು ಸೈಬರ್ ಕ್ರೈಮ್ ಕಾಯಿದೆಯ ಕುರಿತು ಮಾಹಿತಿ ಕಾರ್ಯಾಗಾರ Read More »

ಕರಾವಳಿ, ಕರ್ನಾಟಕ
Scroll to Top