ಮಂಗಳೂರು

ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಗುಳಿಕ್ಕಾನ ಸಂತ್ರಸ್ತರ ಪ್ರದೇಶಕ್ಕೆ ಭೇಟಿಗೆ ನಿರ್ಧಾರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ,ಜೂ.12: ಮಲೆನಾಡು ಜನಹಿತ ರಕ್ಷಣಾ ವೇದಿಕೆ ಮಾಸಿಕ ಮಹಾಸಭೆ ಗುರುವಾರ ಸುಬ್ರಹ್ಮಣ್ಯ – ಐನೆಕಿದು ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ ಜರಗಿತು. ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕಲ್ಮಕ್ಕಾರು ಗ್ರಾಮ ಗುಳಿಕ್ಕಾನದ 9 ಕುಟುಂಬಗಳಿಗೆ ಸರಕಾರ ಬಿಡುಗಡೆಗೊಳಿಸಿದ ಪರಿಹಾರ ಮೊತ್ತ ವಿನಿಯೋಗ ಮತ್ತು ನಿವೇಶನ ಮಂಜೂರಾತಿ ಸಮಸ್ಯೆ ಪರಿಹಾರಕ್ಕಾಗಿ ವೇದಿಕೆ ನಿಯೋಗ ಶೀಘ್ರ ಸ್ಥಳ ಪರಿಶೀಲನೆಗೆ ತೆರಳಲು ಸಭೆಯಲ್ಲಿ ನಿರ್ಧರಿಸಲಾಯಿತು.   ವೇದಿಕೆಯ […]

ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಗುಳಿಕ್ಕಾನ ಸಂತ್ರಸ್ತರ ಪ್ರದೇಶಕ್ಕೆ ಭೇಟಿಗೆ ನಿರ್ಧಾರ Read More »

ಕರಾವಳಿ, ಕರ್ನಾಟಕ

ಕೊರೊನಾ ಏರಿಕೆ ಹಿನ್ನಲೆ ➤ ಸದ್ಯಕಿಲ್ಲ ಶಬರಿಮಲೆ ಅಯ್ಯಪ್ಪನ ದರ್ಶನ

(ನ್ಯೂಸ್ ಕಡಬ) newskadaba.com ತಿರುವನಂತಪುರ,ಜೂ.12: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತರು ಇನ್ನೂ ಸ್ವಲ್ಪದಿನ ಕಾಯಬೇಕಾದ ಪರಿಸ್ಥಿತಿ ಬಂದಿದ್ದು, ಕೇರಳ ಸರಕಾರ ಶಬರಿಮಲೆಗೆ ಭಕ್ತರಿಗೆ ಪ್ರವೇಶಕ್ಕೆ ಸದ್ಯಕ್ಕೆ ಅನುಮತಿ ನಿರಾಕರಿಸಿದೆ.   ಕೇಂದ್ರ ಸರಕಾರದ ಅನ್ ಲಾಕ್ 1.0ದಲ್ಲಿ ಧಾರ್ಮಿಕ ಕೇಂದ್ರಗಳನ್ನು ಮಾರ್ಗಸೂಚಿ ಗಳೊಂದಿಗೆ ತೆರೆಯಲು ಅನುಮತಿ ನೀಡಿದ ಬೆನ್ನಲ್ಲೆ ದೇಶದಾದ್ಯಂತ ಹಲವು ದೇವಸ್ಥಾನಗಳು ಭಕ್ತರಿಗೆ ದೇವರ ದರ್ಶನಕ್ಕ ಅವಕಾಶ ನೀಡಿವೆ. ಈ ಹಿನ್ನಲೆ ಕೇರಳ ಸರಕಾರವೂ ಕೂಡ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಿತ್ತು. ಆದರೆ ದೇಶದಾದ್ಯಂತ

ಕೊರೊನಾ ಏರಿಕೆ ಹಿನ್ನಲೆ ➤ ಸದ್ಯಕಿಲ್ಲ ಶಬರಿಮಲೆ ಅಯ್ಯಪ್ಪನ ದರ್ಶನ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ಮಕ್ಕಳ ವಿರುದ್ದ ದೂರು ➤ ಕೆರೆಗೆ ಹಾರಿ ವೃದ್ದ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಪುತ್ತೂರು,ಜೂ.12:  ಮಕ್ಕಳ ಮೇಲೆ ದೂರು ನೀಡಿದ ತಂದೆ ಕೊನೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ 11ರ ಗುರುವಾರ ಶಾಂತಿಗೋಡು ಗ್ರಾಮದ ನೆಕ್ಕರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಾಂತಿಗೋಡು ಗ್ರಾಮದ ನೆಕ್ಕರೆ ಸೇಸಪ್ಪ ಕುಲಾಲ್ (74) ಎನ್ನಲಾಗಿದೆ. 20 ದಿನಗಳ ಹಿಂದೆ ಸೇಸಪ್ಪ ಕುಲಾಲ್ ಅವರು ತನ್ನ ಇಬ್ಬರು ಮಕ್ಕಳ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ಈ ವಿಚಾರದ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಮನೆಯಲ್ಲಿ ಯಾರೊಂದಿಗೆ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಕೆಲಸಕ್ಕೂ

ಮಕ್ಕಳ ವಿರುದ್ದ ದೂರು ➤ ಕೆರೆಗೆ ಹಾರಿ ವೃದ್ದ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಶ್ರೀ ಮಂಗಳಾದೇವಿ ಕ್ಷೇತ್ರದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.12 : ಶ್ರೀಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್(49) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೂ. 11ರಂದು ನಿಧನರಾಗಿದ್ದಾರೆ.   ಶ್ರೀಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪೂಜಾ ಮನೆತನಕ್ಕೆ ಸೇರಿದ ಇವರು, ಈ ವರ್ಷದ ಪ್ರಧಾನ ಅರ್ಚಕರಾಗಿ ನಿಯುಕ್ತಿಗೊಂಡಿದ್ದರು. ದೇವಸ್ಥಾನದ ಪೂಜಾ ಕೆಲಸದೊಂದಿಗೆ ಊರಿನ ಪೌರೋಹಿತ್ಯವನ್ನು ನಿರ್ವಹಿಸುತ್ತಿದ್ದರು ಇವರು ತಾಯಿ ಜಲಜಾಕ್ಷಿ, ಸಹೋದರ ವೇದಮೂರ್ತಿ ಚಂದ್ರಶೇಖರ್ ಐತಾಳ್, ಹರೀಶ್ ಐತಾಳ್, ಸಹೋದರಿ ಲಕ್ಷ್ಮೀ ಹೊಳ್ಳರವರನ್ನ

ಮಂಗಳೂರು: ಶ್ರೀ ಮಂಗಳಾದೇವಿ ಕ್ಷೇತ್ರದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್ ನಿಧನ Read More »

ಕರಾವಳಿ, ಕರ್ನಾಟಕ

ಆಟೋ, ಟ್ಯಾಕ್ಸಿ ಚಾಲಕರಿಗೆ ಗುಡ್ ನ್ಯೂಸ್ ➤ 40 ಕೋಟಿ ರೂ. ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್ 11: ಕೊರೊನಾವೈರಸ್ ಲಾಕ್ಡೌನ್ ಸಲುವಾಗಿ ಕಳೆದ ಮೂರು ತಿಂಗಳು ಆದಾಯವಿಲ್ಲದೇ ತೀವ್ರ ತೊಂದರೆ ಅನುಭವಿಸಿದ್ದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ ತಲಾ 5 ಸಾವಿರ ರುಪಾಯಿಯ ಭರವಸೆ ನೀಡಿತ್ತು.   ಇದರ ಅಂಗವಾಗಿ ಕರ್ನಾಟಕ ಸರ್ಕಾರ ಬುಧವಾರ 40 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಒಂದು ಬಾರಿ ಪರಿಹಾರವಾಗಿ ತಲಾ 5 ಸಾವಿರ ರುಪಾಯಿ ಘೋಷಣೆ ಮಾಡಿದ್ದರು. ಸದ್ಯ

ಆಟೋ, ಟ್ಯಾಕ್ಸಿ ಚಾಲಕರಿಗೆ ಗುಡ್ ನ್ಯೂಸ್ ➤ 40 ಕೋಟಿ ರೂ. ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕಾಫಿನಾಡಿಗೂ ಕಾಲಿಟ್ಟ ಮಿಡತೆಗಳು ➤ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು,ಜೂ.10:  ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳು ಈಗ ಕಾಫಿನಾಡಿಗೂ ಕಾಲಿಟ್ಟಿದ್ದು, ಮಲೆನಾಡಿಗರು ಕಂಗಾಲಾಗಿದ್ದಾರೆ.. ಈಗಾಗಲೇ ಕಳೆದ ಎರಡು ದಶಕಗಳಿಂದ ಅಡಕೆಗೆ ಹಳದಿ ಎಲೆ ರೋಗ ತಗುಲಿದೆ. ಕಳೆದ ಎರಡು ವರ್ಷಗಳ ನಿರಂತರ ಭಾರೀ ಮಳೆಯಿಂದ ಅಡಕೆ ತೋಟಕ್ಕೆ ಕೊಳೆ ರೋಗ ಕೂಡ ಆವರಿಸಿತ್ತು. ತೋಟದಲ್ಲಿ ಎರಡು ಮೂರು ಅಡಿ ನೀರು ನಿಂತಿತ್ತು.   ಇದರಿಂದ ಮಲೆನಾಡಿಗರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಹೀಗೆ ಹಲವು ಸಮಸ್ಯೆಗಳ ನಡುವೆ ಕೆಲವರು ಅಡಕೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು.

ಕಾಫಿನಾಡಿಗೂ ಕಾಲಿಟ್ಟ ಮಿಡತೆಗಳು ➤ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣು Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಜಮ್ಮು- ಕಾಶ್ಮೀರದಲ್ಲಿ ಮತ್ತೆ ಐವರು ಉಗ್ರರ ಹತ್ಯೆ

(ನ್ಯೂಸ್ ಕಡಬ) newskadaba.com ಶೋಪಿಯಾನ್ ,ಜೂ.10: ಕಳೆದ ಎರಡು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಉಗ್ರರನ್ನು ಹೊಡೆದುರುಳಿಸುತ್ತಿದ್ದು ಬುಧವಾರ ಮತ್ತೆ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನಾಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಕಳೆದ 72 ಗಂಟೆಗಳ ಅವಧಿಯಲ್ಲಿ ಇದು ಮೂರನೇ ಭಾರೀ ನಡೆದ ಕಾರ್ಯಾಚರಣೆ ಮಾಡಲಾಗಿದೆ. ಸೋಮವಾರ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದಿನ್ಗೆ ಸೇರಿದ ನಾಲ್ವರು ಉಗ್ರರನ್ನು ಹಾಗೂ

ಜಮ್ಮು- ಕಾಶ್ಮೀರದಲ್ಲಿ ಮತ್ತೆ ಐವರು ಉಗ್ರರ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಕೇರಳ ಮಾಜಿ ರಣಜಿ ಕ್ರಿಕೆಟಿಗ ಸಾವು ➤ ಮಗ ಅಶ್ವಿನ್ ಬಂಧನ..!

(ನ್ಯೂಸ್ ಕಡಬ) newskadaba.com ತಿರುವನಂತಪುರಂ,ಜೂ.10: ಕೇರಳ ರಣಜಿ ಟ್ರೋಫಿಯ ಮಾಜಿ ಕ್ರಿಕೆಟಿಗ ಕೆ. ಜಯಮೋಹನ್ ಥಂಪಿ(64) ಇಲ್ಲಿನ ಮನಕ್ಕಾಡುವಿನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ತಂದೆಯನ್ನು ಹತ್ಯೆ ಮಾಡಿದ ಶಂಕೆಯಡಿ ಮಗ ಅಶ್ವಿನ್ ಥಂಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಕೆ. ಜಯಮೋಹನ್ 1982ರಿಂದ 84ರ ಅವಧಿಯಲ್ಲಿ ಕೇರಳ ಪರ 6 ರಣಜಿ ಪಂದ್ಯಗಳನ್ನು ಆಡಿದ್ದು,114 ರನ್ ಬಾರಿಸಿದ್ದರು. ಕೇರಳ ತಂಡದಲ್ಲಿ ಜಯಮೋಹನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು.ಇದಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ತ್ರಾವಂಕೂರುವಿನಲ್ಲಿ

ಕೇರಳ ಮಾಜಿ ರಣಜಿ ಕ್ರಿಕೆಟಿಗ ಸಾವು ➤ ಮಗ ಅಶ್ವಿನ್ ಬಂಧನ..! Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬದಲ್ಲಿ ಪೇಟೆಯಲ್ಲಿ ಲೋಕಾಯ್ತುಕ ರೈಡ್ ➤ ಮಾಸ್ಕ್ ಹಾಕದವರಿಗೆ ಭರ್ಜರಿ ಕ್ಲಾಸ್

(ನ್ಯೂಸ್ ಕಡಬ) newskadaba.com ಕಡಬ ಜೂ.10:  ಕಡಬ ಪೇಟೆಯಲ್ಲಿ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಸಾರ್ವಜನಿಕರಿಗೆ ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ವಿಜಯ ಪ್ರಸಾದ್ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.   ಮಂಗಳವಾರದಂದು ಕಡಬ ಪೇಟೆಯಲ್ಲಿ ಅಧಿಕಾರಿಗಳ ಜತೆ ರೌಂಡ್ಸ್ ಮಾಡಿದ ಲೋಕಾಯುಕ್ತ ಡಿವೈಎಸ್ಪಿ, ಅಂಗಡಿ, ಹೋಟೆಲ್, ಬ್ಯಾಂಕ್, ಕಛೇರಿಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಇರುವವರಿಗೆ ಕ್ಲಾಸ್ ತೆಗೆದುಕೊಂಡರು. ಈ ಸಂದರ್ಭದಲ್ಲಿ ಲೋಕಾಯುಕ್ತ ಹೆಡ್ ಕಾನ್ಸ್‌ಟೇಬಲ್

ಕಡಬದಲ್ಲಿ ಪೇಟೆಯಲ್ಲಿ ಲೋಕಾಯ್ತುಕ ರೈಡ್ ➤ ಮಾಸ್ಕ್ ಹಾಕದವರಿಗೆ ಭರ್ಜರಿ ಕ್ಲಾಸ್ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜೂ.10: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ 2.194 ಮಂದಿ ದೇವರ ದರ್ಶನ ಮಾಡಿದ್ದಾರೆ. ಮಂಗಳವಾರವೂ ಕೊಲ್ಲೂರಿನ ಶ್ರೀ ಮೂಕಾಂಬಿಕಾ  ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು ಮೊದಲ ದಿನ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಭಕ್ತ ಸಮೂಹ ಹೆಚ್ಚಾಗಿತ್ತು. ಆದರೆ ಮಂಗಳವಾರ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು.ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಎರಡನೇ ದಿನ ಆಗಮಿಸಿದ ಭಕ್ತರಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಭಕ್ತರಿಗೆ ಥರ್ಮಲ್ ಟೆಸ್ಟ್ ಮಾಡಿಸಿಯೇ ಒಳಗೆ ಬಿಡಲಾಗುತ್ತಿತ್ತು. ಕೊರೋನಾ

ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು Read More »

ಕರಾವಳಿ, ಕರ್ನಾಟಕ
Scroll to Top