ಮಂಗಳೂರು

ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ರಕ್ತದಾನ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.05:  ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಸಂಸದೆ ಶೋಭಾ ಕರಂದ್ಲಾಜೆ ರವರು ರಕ್ತ ದಾನ ಮಾಡಿದರು. ಪ್ರತೀ 3 ತಿಂಗಳಿಗೊಂದು ಬಾರಿ ರಕ್ತದಾನ ಮಾಡುವ ಶೋಭಾ ಕರಂದ್ಲಾಜೆ, ಕಳೆದ ದಿನ ರಾಷ್ಟ್ರೋತ್ತಾನ ರಕ್ತ ನಿಧಿಯ ಮೂಲಕ ಥಲಸ್ಸೆಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ರಕ್ತದಾನ ಮಾಡಿದರು.   ಬೆಂಗಳೂರಿನ ರಾಷ್ಟ್ರೋತ್ತಾನ ರಕ್ತ ನಿಧಿಯ ವಿಶೇಷ ರೀತಿಯ ಸೇವೆ ಮಾಡುತ್ತಿದೆ. ಪ್ರತೀ ತಿಂಗಳು 700ಕ್ಕೂ ಅಧಿಕ ಥಲಸ್ಸೆಮಿಯಾ ಹಾಗೂ ಇತರ ವಿಶಿಷ್ಟ ಕಾಲಯಿಲೆಗಳಿಂದ […]

ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ರಕ್ತದಾನ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ Read More »

ಕರಾವಳಿ, ಕರ್ನಾಟಕ

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ➤ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.04:  ಹಿಂದೂಗಳ ದಶಕಗಳ ಕನಸು ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.   ಆಗಸ್ಟ್ 5 ಅಂದರೆ ನಾಳೆ ಆಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಇದೇ ಕಾರಣಕ್ಕೆ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮಂಗಳೂರು ಪೊಲೀಸರು ನಾಳೆ ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಸಿಆರ್ ಪಿಸಿ ಸೆಕ್ಷನ್ 144 ಜಾರಿ

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ➤ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ Read More »

ಕರಾವಳಿ

ಚಲಿಸುತ್ತಿದ್ದ ಪಿಕಪ್ ಮೇಲೆ ಉರುಳಿ ಬಿದ್ದ ಹೈಟೆನ್ಸನ್ ವಿದ್ಯುತ್ ಕಂಬ ➤ ತಪ್ಪಿದ ಭಾರಿ ಅನಾಹುತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಆ.04:  ಕರಾವಳಿಯಲ್ಲಿ ಮಳೆರಾಯನ ಅಬ್ಬರ ಮುಂದವರಿಯುತ್ತಿದ್ದು, ಸಣ್ಣ ಪುಟ್ಟ ಅವಾಂತಗಳು ಸೃಷ್ಟಿಯಾಗುತ್ತಲೇ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಪಡಂಗಡಿ ಗ್ರಾಮದ ಕನ್ನಡಿ ಕಟ್ಟೆ ರಬ್ಬರ್ ನರ್ಸರಿ ಮುಂಬಾಗದಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಕರೆಂಟ್ ಕಂಬವೊಂದು ಉರುಳಿ ಬಿದ್ದ ದುರ್ಘಟನೆ ಇಂದು ಮುಂಜಾನೆ ಸಂಭವಿಸಿದೆ.       ಇತ್ತಿಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಸುಬೋದ್ ಮಹಲ್ ಬಳಿ ಚಲಿಸುತ್ತಿದ್ದ ಪಿಕಪ್ ವಾಹನ ದ ಮೇಲೆ ಹೈಟೆನ್ಸನ್

ಚಲಿಸುತ್ತಿದ್ದ ಪಿಕಪ್ ಮೇಲೆ ಉರುಳಿ ಬಿದ್ದ ಹೈಟೆನ್ಸನ್ ವಿದ್ಯುತ್ ಕಂಬ ➤ ತಪ್ಪಿದ ಭಾರಿ ಅನಾಹುತ Read More »

ಕರಾವಳಿ, ಕರ್ನಾಟಕ

ವರ್ಕ್ ಫ್ರಮ್ ಹೋಮ್ ಗೆ ಇಂಟರ್ ನೆಟ್ ಸಮಸ್ಯೆ ಹಿನ್ನೆಲೆ ➤ ಕ್ಯೂಬಿಕಲ್ ಸೆಂಟರ್ ಆರಂಭ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.04:  ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಪುತ್ತೂರಿನಲ್ಲಿ ಉದ್ಯೋಗಿಗಳಿಗೆ ಕ್ಯೂಬಿಕಲ್ ಸೆಂಟರ್ ಆರಂಭಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಪ್ರಯತ್ನ ಮಾಡುವ ಮೂಲಕ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೊರೋನಾ ವಿರುದ್ಧದ ಹೋರಾಟವನ್ನು ಸಮರ್ಥವಾಗಿ ಎದುರಿಸಿ ಪುತ್ತೂರು ತಾಲೂಕನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದ ಹೆಮ್ಮೆ ಇವರದ್ದು. ನಗರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸದ್ಯ ಮನೆಯಿಂದಲೇ ತಮ್ಮ ಕೆಲಸವನ್ನ ಮಾಡುವ ಒತ್ತಡವನ್ನ ಎದುರಿಸುತ್ತಿದ್ದಾರೆ.   ಕೊವಿಡ್ 19 ಹಿನ್ನಲೆಯಲ್ಲಿ ಮಹಾನಗರದಲ್ಲಿ ಕೆಲಸ ಮಾಡುತ

ವರ್ಕ್ ಫ್ರಮ್ ಹೋಮ್ ಗೆ ಇಂಟರ್ ನೆಟ್ ಸಮಸ್ಯೆ ಹಿನ್ನೆಲೆ ➤ ಕ್ಯೂಬಿಕಲ್ ಸೆಂಟರ್ ಆರಂಭ Read More »

ಕರಾವಳಿ, ಕರ್ನಾಟಕ

ನಾಳೆ ಬಿಳಿನೆಲೆಯಲ್ಲಿ ಉಚಿತ ಕೊರೋನಾ ಟೆಸ್ಟ್

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಆ.04: ನಾಳೆ ದಿನಾಂಕ 05/08/2020 ನೆ ಬುಧವಾರ ದಂದು ದ. ಕ. ಜಿ.ಪ.ಹಿ. ಪ್ರ ಶಾಲೆ ಬೈಲು ಬಿಳಿನೆಲೆ ಬಳಿ ಉಚಿತವಾಗಿ ಉಚಿತ ಕೊವೀಡ್ ಪರೀಕ್ಷೆ  (CORONA RAPID TEST CAMP)  ನಡೆಯಲಿದೆ.   ಬೆಳಿಗ್ಗೆ ಗಂಟೆ 10.30 ರಿಂದ 1.00 ಗಂಟೆ ವರೆಗೆ  ಕೊರೋನಾ ಹರಡದಂತೆ ಮಾಡಲು ಪರೀಕ್ಷೆ ಮಾಡಿಸಿಕೊಳ್ಳುವುದು ಸುಲಭ ಮತ್ತು ಉಚಿತ ವಿಧಾನ ಇದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಲು

ನಾಳೆ ಬಿಳಿನೆಲೆಯಲ್ಲಿ ಉಚಿತ ಕೊರೋನಾ ಟೆಸ್ಟ್ Read More »

ಕರಾವಳಿ, ಕರ್ನಾಟಕ

ಬಳ್ಪ : ಮೂರು ಪ್ರಗತಿ ಬಂಧು ಸಂಘಗಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.04:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಪ ಒಕ್ಕೂಟದಲ್ಲಿ ಶ್ರೀ ಧವ್ವಂತರಿ , ತ್ರಿಶೂಲಿನಿ, ಶ್ರೀ ದುರ್ಗಾ, ಎಂಬ ಮೂರು ಪ್ರಗತಿ ಬಂಧು ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆದಿದೆ.   ಹಿರಿಯರಾದ ಪಠೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು ರವರು ಈ ಕಾರ್ಯಕ್ರಮಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ವಲಯ ಮೇಲ್ವಿಚಾರಕ ಸೀತಾರಾಮ, ಸೇವಾಪ್ರತಿನಿಧಿ ಭವ್ಯ ಕಾಯರ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಬಳ್ಪ : ಮೂರು ಪ್ರಗತಿ ಬಂಧು ಸಂಘಗಳ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ಕನಕಮಜಲು: ಮುಗೇರು ಮಾಣಿಮಜಲು ಶಾಲಾ ಕಟ್ಟಡಕ್ಕೆ ಬಣ್ಣ ಬಳಿದ ಯುವಕ ಮಂಡಲ

(ನ್ಯೂಸ್ ಕಡಬ) newskadaba.com ಕನಕಮಜಲು, ಆ.03:  ಕೊರೋನಾ ಭೀತಿಯಿಂದಾಗಿ ಸುಮಾರು 5 ರಿಂದ 6 ತಿಂಗಳುಗಳಿಂದ ಕಾಲ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ. ಮತ್ತೊಂದೆಡೆ ಶಾಲಾ ಕಾಲೇಜುಗಳ ಸ್ಪಚ್ಚತೆಯ ಕಾರ್ಯದಲ್ಲಿ ಕೆಲವರು ತೊಡಗಿಕೊಂಡಿದ್ದಾರೆ . ಅದರಂತೆ ಯುವಜನ ವಿಕಾಸ ಕೇಂದ್ರ ಯುವಕ ಮಂಡಲ ಕನಕಮಜಲು ಇದರ ವತಿಯಿಂದ ಮುಗೇರು ಮಾಣಿಮಜಲು ಸ.ಕಿ. ಪ್ರಾ. ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯುವ ಕೆಲಸಕ್ಕೆ ಮುಂದಾಗಿದ್ದಾರೆ.   ಮಕ್ಕಳು ಶಾಲೆಗಳತ್ತ ಮುಖ ಮಾಡದೆ ತಿಂಗಳುಗಳೇ ಕಳೆದಿದೆ. ಶಾಲಾ ಕಾಲೇಜುಗಳನ್ನ ತೆರೆಯುವ ಕುರಿತಾಗಿ ಇನ್ನು

ಕನಕಮಜಲು: ಮುಗೇರು ಮಾಣಿಮಜಲು ಶಾಲಾ ಕಟ್ಟಡಕ್ಕೆ ಬಣ್ಣ ಬಳಿದ ಯುವಕ ಮಂಡಲ Read More »

ಕರಾವಳಿ, ಕರ್ನಾಟಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ.03:  ಪವಿತ್ರ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಇಂದು ಬೆಳಗ್ಗೆ ವಿಧಾನ ಪರಿಷತ್ ಸದಸ್ಯಪ್ರತಾಪ್ ಸಿಂಹ ನಾಯಕ್ ಭೇಟಿ ನೀಡಿದ್ದರು.   ದೇವರ ದರ್ಶನ ಪಡೆದು ಬಳಿಕ ಅಲ್ಲಿಂದ ತೆರಳಿದರು. ಈ ವೇಳೆ ಅತಿಥಿಗಳೊಂದಿಗೆ ದೇವಾಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್, ಉದಯ್ ಕುಮಾರ್, ಬಿಜೆಪಿಯ ಪ್ರಶಾಂತ್ ಮಾಣಿಲ, ದೀನೆಶ್ ಸಂಪ್ಯಾಡಿ, ಅಚ್ಚುತ್ ಗೌಡ, ಚಿದಾನಂದ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು.    

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ Read More »

ಕರಾವಳಿ, ಕರ್ನಾಟಕ

ಐವನ್ ಡಿ ಸೋಜ ಜೊತೆ ಕಾರ್ಯಕ್ರಮದಲ್ಲಿ ಇದ್ದ, ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್​.!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.03:  ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲೇ ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.   ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಐವನ್ ಡಿ ಸೋಜ ಜೊತೆ ನಾನು ಇದ್ದೆ ಹಾಗಾಗಿ ನಾನು ಕೆಲವು ದಿನಗಳ ಕಾಲ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ. ಆದ್ದರಿಂದ ಈಗಾಗಲೇ ನಿಗದಿಯಾಗಿರುವ ಜನ ಸಾಮಾನ್ಯರ ಭೇಟಿ, ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳನ್ನು

ಐವನ್ ಡಿ ಸೋಜ ಜೊತೆ ಕಾರ್ಯಕ್ರಮದಲ್ಲಿ ಇದ್ದ, ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್​.! Read More »

ಕರಾವಳಿ, ಕರ್ನಾಟಕ

ವಿವಾಹಿತ ಮಹಿಳೆಯ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನ ➤ ವಿಚಾರ ತಿಳಿಸಿದ್ದಲ್ಲಿ ಜೀವ ತೆಗೆಯುವ ಬೆದರಿಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಆ.03:  ವಿವಾಹಿತ ಮಹಿಳೆಯ ಮನೆಗೆ ನುಗ್ಗಿ ಯುವಕನೊಬ್ಬ ಮಾನಭಂಗಕ್ಕೆ ಯತ್ನಿಸಿರುವ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ಗ್ರಾಮದಲ್ಲಿ ನಡೆದಿದೆ. ಮದಕ ನಿವಾಸಿ ಸಾಧಿಕ್ ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿ ಸಾಧಿಕ್ ಮಹಿಳೆಯ ಮೊಬೈಲ್ ಗೆ ಮೆಸೇಜ್ ಹಾಗೂ ಕರೆ ಮಾಡಿ ತೊಂದರೆ ನೀಡುತ್ತಿದ್ದ ಶನಿವಾರ ಆರೋಪಿ ರಾತ್ರಿ ಸಮಯದಲ್ಲಿ ಮಹಿಳೆಯ ಮನೆಗೆ ಬಂದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂಡು ತಿಳಿದುಬಂದಿದೆ.     ಅವರ ಮಕ್ಕಳು ಮನೆಯಲ್ಲಿ ಮಲಗಿದ್ದ ಸಮಯ ರಾತ್ರಿ

ವಿವಾಹಿತ ಮಹಿಳೆಯ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನ ➤ ವಿಚಾರ ತಿಳಿಸಿದ್ದಲ್ಲಿ ಜೀವ ತೆಗೆಯುವ ಬೆದರಿಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top