ಮಂಗಳೂರು

ಕೊರೋನಾಗೆ ಕೊಂಬೆಟ್ಟು ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 29: ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊಂಬೆಟ್ಟು ನಿವಾಸಿಯೊಬ್ಬರು ಕೋವಿಡ್-19ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ತಮಿಳು ಮೂಲದವರಾದ ಇವರು ಕೊಂಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು, ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  

ಕೊರೋನಾಗೆ ಕೊಂಬೆಟ್ಟು ನಿವಾಸಿ ಮೃತ್ಯು Read More »

ಕರಾವಳಿ, ಕರ್ನಾಟಕ

2 ವರ್ಷದ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿದ ಪಾಪಿ ತಾಯಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29: ಮಗು ಅಳುವುದನ್ನು ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ತಾಯಿ ಹಾಗೂ ಅಜ್ಜಿ ಸೇರಿಕೊಂಡು ಮಗುವಿಗೆ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆದಿದೆ. ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಗೆ 4 ಮಕ್ಕಳಿದ್ದು, 5ನೇ ಮಗುವಿನ ಹೆರಿಗೆಂದು ತಾಯಿ ತವರು ಮನೆಗೆ ಬಂದಿದ್ದಾಳೆ. ಆ ವೇಳೆ 2 ವರ್ಷದ ನಾಲ್ಕನೇ ಮಗು ಅಪ್ಪ ಬೇಕೆಂದು ಹಠ ಹಿಡಿದಿದೆ. ಇದರಿಂದ ಕೋಪಗೊಂಡ ತಾಯಿ ಮತ್ತು ಅಜ್ಜಿ ಮಗುವಿನ ಹೊಟ್ಟೆ, ಮುಖಕ್ಕೆ ಮನಬಂದಂತೆ

2 ವರ್ಷದ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿದ ಪಾಪಿ ತಾಯಿ Read More »

ಕರಾವಳಿ, ಕರ್ನಾಟಕ

ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29: ಕಳೆದ ದಿನ ಕೊರೋನಾ ಪಾಸಿಟಿವ್ ಬಂದಿದ್ದ ಸುಳ್ಯ ಶಾಸಕ ಎಸ್.ಅಂಗಾರ ಅವರ ಪತ್ನಿಗೂ ಇಂದು ಕೊರೋನಾ ದೃಢಪಟ್ಟಿದೆ. ಅಂಗಾರರಿಗೆ ಹಾಗೂ ಅವರ ಕಾರು ಚಾಲಕ ಮುರಳಿಯವರಿಗೆ ಪಾಸಿಟಿವ್ ಬಂದಿತ್ತು. ಅವರಿಬ್ಬರೂ ಕ್ವಾರಂಟೈನ್‍ನಲ್ಲಿದ್ದಾರೆ. ಇಂದು ಇವರಿಬ್ಬರ ಮನೆಯವರಿಗೆ ಕೊರೋನಾ ಆಂಟಿಜೆನ್ ಪರೀಕ್ಷೆ ನಡೆಸಲಾಯಿತು. ಈ ವೇಳೆ ಅಂಗಾರರ ಪತ್ನಿಗೆ, ಅವರ ಮನೆಯಲ್ಲಿರುವ ಇಬ್ಬರು ಬಂಧುಗಳಿಗೆ ಪಾಸಿಟಿವ್ ಪತೆಯಾಗಿದೆ.ಮುರಳಿಯವರ ಮನೆಯವರಿಗೆ ನೆಗೆಟಿವ್ ಬಂದಿದೆ.

ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ Read More »

ಕರಾವಳಿ, ಕರ್ನಾಟಕ

ಕೊರಿಯರ್ ಮೂಲಕ ಗಾಂಜಾ ಮಾರಾಟ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29: ನಗರದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸರಬರಾಜು ಜೋರಾಗಿಯೇ ನಡೆಯುತ್ತಿದೆ. ಇದೀಗ ಕೊರಿಯರ್ ಮೂಲಕ ಗಾಂಜಾ ಹಂಚುತ್ತಿದ್ದ ಅರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಶಿವಾಜಿನಗರದ ಧೀರಜ್ ಕಪೂರ್ ಎಂಬಾತ ಆರೋಪಿ. ಈತ ಖಾಸಗಿ ಶಾಲೆಯಲ್ಲಿ ಓದುತ್ತಿರುವ 14 ವರ್ಷದ ಹುಡುಗನ ವಿಳಾಸಕ್ಕೆ ಪಾರ್ಸೆಲ್ ಮೂಲಕ ಗಾಂಜಾ ಕಳುಹಿಸಿದ್ದ. ಈ ಸಂಬಂಧ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆ ಮಾಹಿತಿಯನ್ವಯ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.  

ಕೊರಿಯರ್ ಮೂಲಕ ಗಾಂಜಾ ಮಾರಾಟ ➤ ಆರೋಪಿ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗಂಡನ ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ ಪತ್ನಿ

(ನ್ಯೂಸ್ ಕಡಬ) newskadaba.com ತ್ರಿಪುರ, ಆ. 29: ತಾಳಿ ಕಟ್ಟಿದ ಗಂಡನನ್ನು ಪತ್ನಿಯೊಬ್ಬಳು ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ್ದಾಳೆ. ಕೌಟುಂಬಿಕ ಕಾರಣಗಳಿಂದ ತನ್ನ ಪತಿ ಸಂಜಿತ್ ರೆಂಗ್ ನನ್ನು ಪತ್ನಿ ಭಾರತಿ ಕೊಲೆ ಮಾಡಿದ್ದಾಳೆ ಎನ್ನಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆ ಮಾಡಿದ ಬಳಿಕ ಮನೆಯ ಬೆಡ್ ರೂಮಿನಲ್ಲಿ ಪತಿಯ ಶವವನ್ನು ಸಮಾಧಿ ಮಾಡಿದ್ದಾಳೆ. ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿದ ಪತ್ನಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.    

ಗಂಡನ ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ ಪತ್ನಿ Read More »

ಕರಾವಳಿ, ಕರ್ನಾಟಕ

ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 29: ಪುತ್ತೂರಿನ ಗಾಯಕ ಜಗದೀಶ್ ಪುತ್ತೂರು ಅವರಿಗೆ ಓಮನ್ ತುಳುವೆರ್ ಸಂಘಟನೆಯ ವತಿಯಿಂದ ತುಳುನಾಡ ಗಾನ ಗಂಧರ್ವ ಬಿರುದು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಕೊಡಿಯಾಲ್‍ಬೈಲ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ನಿರ್ಮಾಪಕ ಕಿಶೋರ್.ಡಿ.ಶೆಟ್ಟಿ, ಸಂಗೀತ ನಿರ್ದೇಶಕ ಕಿಶೋರ್ ಹಾಗೂ ನಿರ್ಮಾಪಕ ಸಂದೇಶ್ ಬಂಗೇರ ಉಪಸ್ಥಿತರಿದ್ದರು.  

ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ

ಎಸ್. ಅಂಗಾರರ ಆರೋಗ್ಯ ಸುದಾರಿಸಲು ಭಜನೆಯ ಮೂಲಕ ದೇವರಲ್ಲಿ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29. ಸುಳ್ಯದ ಶಾಸಕ ಎಸ್.ಅಂಗಾರರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಶೀಘ್ರವಾಗಿ ಸುಧಾರಿಸಲೆಂದು ದೇವರಲ್ಲಿ ಪ್ರಾರ್ಥನೆಯನ್ನು ಕಳೆದ ದಿನ ಯೇನೆಕಲ್ಲಿನಲ್ಲಿ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ಭಜನೆ ಮಾಡಿ ದೇವರಲ್ಲಿ ಪ್ರಾರ್ಥಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷರು, ಸದಸ್ಯರು, ಊರಿನ ಕೆಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.    

ಎಸ್. ಅಂಗಾರರ ಆರೋಗ್ಯ ಸುದಾರಿಸಲು ಭಜನೆಯ ಮೂಲಕ ದೇವರಲ್ಲಿ ಪ್ರಾರ್ಥನೆ Read More »

ಕರಾವಳಿ, ಕರ್ನಾಟಕ

ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಸಿಎಂ ಅನುಮತಿ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,28:  ಕೊರೊನಾದಿಂದಾಗಿ ನಿಂತುಹೋಗಿದ್ದ ತುಳುನಾಡಿನ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ದೈವಾರಾಧನೆ, ನೇಮೋತ್ಸವ, ಮಾರಿಪೂಜೆ ಮತ್ತಿತರ ಶ್ರದ್ಧಾಭಕ್ತಿಯ ಆಚರಣೆಗಳಿಗೆ ಅನುಮತಿ ಕೋರಿ ಉಡುಪಿ ಶಾಸಕ ರಘುಪತಿ ಭಟ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಸಿಎಂ ಅವರು ಅನುಮತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಶಾಸಕ ರಘುಪತಿ ಭಟ್ ಅವರು, ಧಾರ್ಮಿಕ ಆಚರಣೆಗಳನ್ನು ಮುಂದುವರಿಸಲು ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯ

ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಸಿಎಂ ಅನುಮತಿ Read More »

ಕರಾವಳಿ, ಕರ್ನಾಟಕ

ಲಾರಿಯಲ್ಲಿ ಸಾಗಿಸುತ್ತಿದ್ದ 24ಕ್ಕೂ ಹೆಚ್ಚು ಜಾನುವಾರು ರಕ್ಷಣೆ ➤ ನಾಲ್ವರು ಆರೋಪಿಗಳು ಪೋಲಿಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಪೊನ್ನಂಪೇಟೆ. ಆ,28:  ಕೇರಳದ ಕೊಲ್ಲಂಗೆ ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗಡಿಭಾಗ ಕುಟ್ಟ ಚೆಕ್‌ಪೋಸ್ಟ್ ಬಳಿ ಪೊಲೀಸರು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ. ಲಾರಿಯಲ್ಲಿ ಸಾಗಿಸುತ್ತಿದ್ದ 24ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಕೊಲ್ಲಂ ನಿವಾಸಿ ನಿಜಾಮ್, ಮಧ್ಯಪ್ರದೇಶದ ಭೂಪಾಲ್‍ನ ಶಾನು, ಫೈಜಾನ್, ಮೊಹಮದ್ ರಫೀ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಸಿಪಿಐ ಪರಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಕುಟ್ಟ ಪಿಎಸ್‌ಐ ಎಚ್.ಜೆ. ಚಂದ್ರಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.  

ಲಾರಿಯಲ್ಲಿ ಸಾಗಿಸುತ್ತಿದ್ದ 24ಕ್ಕೂ ಹೆಚ್ಚು ಜಾನುವಾರು ರಕ್ಷಣೆ ➤ ನಾಲ್ವರು ಆರೋಪಿಗಳು ಪೋಲಿಸರ ವಶಕ್ಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಾಸಕ ಎಸ್ ಅಂಗಾರರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ. ಆ,28:  ಶಾಸಕ ಎಸ್ ಅಂಗಾರರವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ.  ಅವರ ಕಾರಿನ ಚಾಲಕ ಮುರಳಿ ಎಂಬುವವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದೀಗಾ ಶಾಸಕ ಎಸ್ ಅಂಗಾರರವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ಅತಂಕ ಎದುರಾಗಿದೆ.

ಶಾಸಕ ಎಸ್ ಅಂಗಾರರಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ
Scroll to Top