ನ್ಯೂಸ್ ಕಡಬ

ಬಂಟ್ವಾಳ: ವಿವಾಹಿತ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ   ಯುವತಿಯಿಂದ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com. ಬಂಟ್ವಾಳ, ಜು.24. ವಿವಾಹಿತ ವ್ಯಕ್ತಿಯೋರ್ವ ಸಂಬಂಧಿ ಯುವತಿಯನ್ನು ಅಕ್ರಮವಾಗಿ, ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ಗರ್ಭವತಿ ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ. ಗುರುಪ್ರಸಾದ್ ಎಂಬಾತ ಸಂಬಂಧಿ ಯುವತಿಗೆ ಕಳೆದ ಒಂದು ವರ್ಷಗಳಿಂದ ಎರಡು ಬಾರಿ ಇಚ್ಚೆಗೆ ವಿರುದ್ದವಾಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಸಂತ್ರಸ್ತ ಯುವತಿ ಠಾಣೆಗೆ ದೂರು‌ ನೀಡಿದ್ದಾರೆ. ಆರೋಪಿಗೆ ಈಗಾಗಲೇ ‌ಮದುವೆಯಾಗಿದ್ದು, ಸಂತ್ರಸ್ತ ಯುವತಿಗೆ ಅನ್ಯಾಯ ಎಸಗಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಲ್ಲದೆ […]

ಬಂಟ್ವಾಳ: ವಿವಾಹಿತ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ   ಯುವತಿಯಿಂದ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

‘ಬಜೆಟ್‌ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ- ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶದಿಂದ ಕೂಡಿದೆ’ ನಿರ್ಮಲಾ ಸೀತಾರಾಮನ್

(ನ್ಯೂಸ್ ಕಡಬ)newskadaba.com. ನವದೆಹಲಿ, ಜು 24. ಈ ಬಾರಿಯ ಬಜೆಟ್ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎನ್ನಲಾಗಿದೆ. ರಾಜ್ಯಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್‌, ಪ್ರತಿ ಬಜೆಟ್‌ನಲ್ಲಿ ಈ ದೇಶದ ಪ್ರತಿಯೊಂದು ರಾಜ್ಯವನ್ನು ಹೆಸರಿಸಲು ಅವಕಾಶ ಸಿಗುವುದಿಲ್ಲ. ಈ ಪ್ರತಿಭಟನೆ ದುರುದ್ದೇಶದಿಂದ ಕೂಡಿದೆ ಎಂದರು.

‘ಬಜೆಟ್‌ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ- ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶದಿಂದ ಕೂಡಿದೆ’ ನಿರ್ಮಲಾ ಸೀತಾರಾಮನ್ Read More »

ರಾಷ್ಟ್ರೀಯ ನ್ಯೂಸ್

ಪಾರಿವಾಳದ ಪ್ರಾಣ ಉಳಿಸಲು ವಿದ್ಯುತ್ ಕಂಬವೇರಿದ ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಚಿತ್ರದುರ್ಗ, ಜು.24. ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಮೃತ ಬಾಲಕನನ್ನು ರಾಮಚಂದ್ರ (12) ಎಂದು ಗುರುತಿಸಲಾಗಿದೆ. ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಜೀವ ಉಳಿಸಲು ಕಂಬ ಏರಿದ್ದ ಬಾಲಕ ವಿದ್ಯುತ್ ಹರಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.   ವಿದ್ಯುತ್ ಶಾಕ್‌ ನಿಂದಾಗಿ ಬಾಲಕನ ಶವ ವಿದ್ಯುತ್ ಕಂಬದಲ್ಲಿನ ತಂತಿಗೆ ಸಿಲುಕಿ ನೇತಾಡುತ್ತಿದ್ದು, ಮಾನವೀಯತೆಯಿಂದ ಪಾರಿವಾಳದ ಜೀವ ಉಳಿಸಲು ಮುಂದಾಗಿದ್ದ ಬಾಲಕ ತನ್ನ ಜೀವವನ್ನೇ ಬಲಿ

ಪಾರಿವಾಳದ ಪ್ರಾಣ ಉಳಿಸಲು ವಿದ್ಯುತ್ ಕಂಬವೇರಿದ ಬಾಲಕ ಮೃತ್ಯು Read More »

ಕರ್ನಾಟಕ

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.24. ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಮಾಣಿ ಸಮೀಪದ ಬುಡೋಳಿ ಮಡಲ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ . ಮೃತರನ್ನು ಬುಡೋಳಿ ಮಡಲ ನಿವಾಸಿ ಸುಶಾಂತ್ (25) ಎಂದು ಗುರುತಿಸಲಾಗಿದೆ. ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸುಶಾಂತ್ ಅವರು ಮಿನಿ ಬಸ್ ಖರೀದಿಸಿ ಸ್ವಂತ ವಾಹನದಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಸಾಮಾಜಿಕವಾಗಿ ಸೇವಾಕಾರ್ಯಗಳನ್ನು ಸಂಘಟನೆಯ ಜೊತೆಗೆ ‌ಮಾಡಿಕೊಂಡಿದ್ದು, ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ.ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಸ್ಪಷ್ಟವಾದ ಕಾರಣ

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ

ಬಜೆಟ್ ವಿರೋಧಿಸಿ ಸಂಸತ್ ನಲ್ಲಿ ಇಂದು INDIA ಮೈತ್ರಿಕೂಟ ಪ್ರತಿಭಟನೆ      

(ನ್ಯೂಸ್ ಕಡಬ)newskadaba.com ನವದೆಹಲಿ, ಜು.24.   ಕೇಂದ್ರ ಬಜೆಟ್ ವಿರೋಧಿಸಿ ಇಂದು ವಿಪಕ್ಷ INDIA ಮೈತ್ರಿಕೂಟ ಸಂಸತ್ ನಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ವರದಯಾಗಿದೆ. ಕೇಂದ್ರ ಬಜೆಟ್ ನ್ನು ವಿಪಕ್ಷಗಳು ತಾರತಮ್ಯದ ಬಜೆಟ್ ಎಂದು ಹೇಳಿವೆ. ಲೋಕಸಭೆಯಲ್ಲಿ INDIA ಮೈತ್ರಿಕೂಟವನ್ನು ಪ್ರತಿನಿಧಿಸುವ ನಾಯಕರು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಸಿದ್ದು, ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ‘ಈ ಬಾರಿಯ ಕೇಂದ್ರ ಬಜೆಟ್‌ನಿಂದ ಈಗಾಗಲೇ ಬಜೆಟ್‌ನ ಪರಿಕಲ್ಪನೆ ನಾಶವಾಗಿದೆ. ಬಹುತೇಕ ರಾಜ್ಯಗಳಿಗೆ

ಬಜೆಟ್ ವಿರೋಧಿಸಿ ಸಂಸತ್ ನಲ್ಲಿ ಇಂದು INDIA ಮೈತ್ರಿಕೂಟ ಪ್ರತಿಭಟನೆ       Read More »

ರಾಷ್ಟ್ರೀಯ ನ್ಯೂಸ್

ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24.  ಲೇಡಿಸ್‌ ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದು, ಮೃತ ಯುವತಿಯನ್ನು ಬಿಹಾರ ಮೂಲದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದೆ. ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಸುಮಾರು 11.10ಕ್ಕೆ ಯುವಕನೋರ್ವ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೃತಿ ಕುಮಾರಿ ಅವರ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ

ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಖ್ಯಾತ ಭೂಗಳ್ಳ ಜಾನ್ ಮೋಸೆಸ್ ಬಂಧನ.!      

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24.  ನಕಲಿ ಆಸ್ತಿ ದಾಖಲೆಗಳನ್ನು ಸೃಷ್ಟಿಸಿ ನಗರದಲ್ಲಿ 100 ಕ್ಕೂ ಹೆಚ್ಚು ನಿವೇಶನಗಳನ್ನು ಕಬಳಿಸಿದ ಆರೋಪದ ಮೇಲೆ ಕುಖ್ಯಾತ ಭೂಗಳ್ಳರ ವಿರುದ್ಧ ಸಿಐಡಿ ಕಠಿಣ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ, 2000 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎನ್ನಲಾಗಿದೆ. KCOCA ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಮುಂದಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ. ಸಿಐಡಿ ಅಧಿಕಾರಿಗಳು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೋಸೆಸ್‌ನ ಸಹಚರರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ

ಕುಖ್ಯಾತ ಭೂಗಳ್ಳ ಜಾನ್ ಮೋಸೆಸ್ ಬಂಧನ.!       Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಅಪರಿಚಿತ ಕಾರು ಢಿಕ್ಕಿ.!   ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24. ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಆಯುಷ್ ಅಯ್ಯಪ್ಪ(21) ಎಂದು ಗುರುತಿಸಲಾಗಿದೆ. ಈತ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಅಪರಿಚಿತ ಕಾರು ಢಿಕ್ಕಿ.!   ಯುವಕನೋರ್ವ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ವ್ಯಕ್ತಿ ನಾಪತ್ತೆ.! ಪತ್ತೆಗಾಗಿ ಕುಟುಂಬಸ್ಥರ ಮನವಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು.24. ಕಳೆದ ಐದು ದಿನದಿಂದ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಮಾಣಿಮಜಲು ಗ್ರಾಮದಿಂದ ಯುವಕನೊಬ್ಬ ಕಾಣೆಯಾಗಿದ್ದಾನೆ ಎಂದು ವರದಿಯಾಗಿದ್ದು, ನಾಪತ್ತೆಯಾದ ಯುವಕನನ್ನು ಸಮದ್ ಎಂದು ಗುರುತಿಸಲಾಗಿದೆ. ಸಮದ್ ಮೂರು ಮಕ್ಕಳ ತಂದೆಯಾಗಿದ್ದು, ಆತ ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣ ಬಂಟ್ವಾಳ ಟೌನ್ ಪೋಲಿಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಥವಾ +91 90082 18612, +91 9901090586 ನಂಬರಿಗೆ ತಿಳಿಸಬೇಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ವ್ಯಕ್ತಿ ನಾಪತ್ತೆ.! ಪತ್ತೆಗಾಗಿ ಕುಟುಂಬಸ್ಥರ ಮನವಿ Read More »

ಕರಾವಳಿ, ಕರ್ನಾಟಕ

ನೀಟ್ ಯುಜಿ ಮರುಪರೀಕ್ಷೆಯ ಮನವಿ ತಿರಸ್ಕರಿಸಿದ ಸುಪ್ರಿಂ ಕೋರ್ಟ್

(ನ್ಯೂಸ್ ಕಡಬ)newskadaba.com ನವದೆಹಲಿ, ಜು.24. ನೀಟ್ಯು್ಜಿ 2024 ಮರುಪರೀಕ್ಷೆಯ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅರ್ಜಿದಾರರು ಆರೋಪಿಸಿದಂತೆ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಗೆ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಿತು.ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಆರೋಪಿಸಿದಂತೆ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಯನ್ನು ತೋರಿಸಲು ತನ್ನ ಮುಂದೆ

ನೀಟ್ ಯುಜಿ ಮರುಪರೀಕ್ಷೆಯ ಮನವಿ ತಿರಸ್ಕರಿಸಿದ ಸುಪ್ರಿಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್
Scroll to Top