ನ್ಯೂಸ್ ಕಡಬ

ನಾಳೆ (ಜು.29) ಗುತ್ತಿಗಾರಿನಲ್ಲಿ ಉಚಿತ ಕೋವಿಡ್ 19 ಪರೀಕ್ಷೆ

(ನ್ಯೂಸ್ ಕಡಬ) newskadaba.com ಗುತ್ತಿಗಾರು , ಜು.28:  ಗುತ್ತಿಗಾರಿನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಗ್ಗೆ ಗಂಟೆ 10 ರಿಂದ ಕೊವೀಡ್ 19 ಪರೀಕ್ಷೆ ನಡೆಯಲಿದೆ.     ಉಚಿತ ಕೊರೋನಾ ಪರೀಕ್ಷೆ ನಡೆಯಲಿದ್ದು, ಎಲ್ಲರೂ ಈ ಕೊರೋನಾ ಪರೀಕ್ಷೆಯ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಗುತ್ತಿಗಾರು ಪಂಚಾಯತ್ ಪ್ರಕಟನೆ ತಿಳಿಸಿದೆ.  

ನಾಳೆ (ಜು.29) ಗುತ್ತಿಗಾರಿನಲ್ಲಿ ಉಚಿತ ಕೋವಿಡ್ 19 ಪರೀಕ್ಷೆ Read More »

ಕರಾವಳಿ

ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ಸೋನು ಸೂದ್..!

(ನ್ಯೂಸ್ ಕಡಬ) newskadaba.com ಹೈದರಾಬಾದ್,ಜು.28: ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ  ನಟ. ಕೊರೋನಾ ಲಾಕ್ಡೌನ್ ಕಾರಣದಿಂದ ಹೈದರಾಬಾದ್ನ ಟೆಕ್ಕಿ ಉಂಡಾಡಿ ಶಾರದಾ ಕೆಲಸ ಕಳೆದುಕೊಂಡಿದ್ದರು.     ಉದ್ಯೋಗ ಕಳೆದುಕೊಂಡರೂ ಇಡೀ ಕುಟುಂಬವನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಈ ಮಹಿಳೆಯ ಮೇಲಿತ್ತು. ಹೀಗಾಗಿ ಹೈದರಾಬಾದ್ನ ಶ್ರೀನಗರ ಕಾಲೋನಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಈ ಬಗ್ಗೆ

ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ಸೋನು ಸೂದ್..! Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಇಂದು ಕೊರೋನಾ ಮಹಾಸ್ಪೋಟ ➤ ಇಂದು 5,536 ಜನರಿಗೆ ಕೊರೋನಾ, 102 ಸೋಂಕಿತರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.28:  ರಾಜ್ಯದಲ್ಲಿ ಇಂದು ಕೂಡ ಕೊರೋನಾ ರಣಕೇಕೆ ಮುಂದುವರೆದಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 5,536 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,07001ಕ್ಕೆ ಏರಿಕೆಯಾಗಿದೆ. ಅಲ್ಲದೇ ಕಿಲ್ಲರ್ ಕೊರೋನಾಗೆ ಇಂದು 102 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 2,055ಕ್ಕೆ ಏರಿಕೆಯಾಗಿದೆ.     ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ

ರಾಜ್ಯದಲ್ಲಿ ಇಂದು ಕೊರೋನಾ ಮಹಾಸ್ಪೋಟ ➤ ಇಂದು 5,536 ಜನರಿಗೆ ಕೊರೋನಾ, 102 ಸೋಂಕಿತರು ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರದಿಂದ ಹೊಸ ರೂಲ್ಸ್ ➤ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ…!!!

(ನ್ಯೂಸ್ ಕಡಬ) newskadaba.com ಬೆಂಗಳೂರು: ಜು.28., ಇನ್ನು ಮುಂದೆ ದ್ವಿಚಕ್ರ ವಾಹನ ಓಡಿಸುವವರು ಕೂಡ ಹೊಸ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಹೌದು ದ್ವಿಚಕ್ರ ವಾಹನ ಸವಾರರು ಓದಲೇಬೇಕಾದ ಸುದ್ದಿ ಇದು. ಟೂ ವಿಲ್ಹರ್ ಗಳಿಗಾಗಿಯೇ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮವನ್ನು ಪಾಲಿಸದಿದ್ದಲ್ಲಿ ದಂಡ ತೆರಬೇಕಾಗುತ್ತದೆ. ಇನ್ಮುಂದೆ ಬೈಕ್‌ ನ ಹಿಂಬದಿ ಸವಾರರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಹ್ಯಾಂಡ್‌ಹೋಲ್ಡ್‌ ಕಡ್ಡಾಯವಾಗಿದ್ದು, ಸೀರೆ ಗಾರ್ಡ್‌ ಜತೆಗೆ ಹ್ಯಾಂಡ್‌ಹೋಲ್ಡ್‌, ಫುಟ್‌ರೆಸ್ಟ್‌ ಕಡ್ಡಾಯ ಮಾಡಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ

ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರದಿಂದ ಹೊಸ ರೂಲ್ಸ್ ➤ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ…!!! Read More »

ಕರ್ನಾಟಕ

ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ವೈದ್ಯ ಸಲಹೆಯಂತೆ ಹೆರಿಗೆ ಮಾಡಿಸಿದ ಸ್ಥಳೀಯ ಮಹಿಳೆಯರು.. !!!

(ನ್ಯೂಸ್ ಕಡಬ) newskadaba.com ಹಾವೇರಿ: ಜು.28., . ತುಂಬು ಗರ್ಭಿಣಿ ಮಹಿಳೆಯೋರ್ವರಿಗೆ ಸ್ಥಳೀಯ ಮಹಿಳೆಯರು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ವೈದ್ಯರೊಬ್ಬರ ಸಲಹೆ ಮೇರೆಗೆ ಸಹಜ ಹೆರಿಗೆ ಮಾಡಿಸಿದ ಘಟನೆ ಹಾನಗಲ್ ಪಟ್ಟಣದಲ್ಲಿ ನಡೆದಿದೆ. ಸೋಮವಾರ ಕೊರೋನಾ ಲಾಕ್ಡೌನ್ ಹಿನ್ನೆಲೆ ಸ್ತಬ್ಧವಾಗಿದ್ದ ಹಾನಗಲ್ ಪಟ್ಟಣದ ತುಂಬು ಗರ್ಭಿಣಿ ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಸ್ಥಳೀಯವಾಗಿ ವಾಹನ ಮತ್ತು ವೈದ್ಯರು ಸಿಗದೆ ಪರದಾಡಿದರು. ನಂತರ ತಾವೇ ಹೆರಿಗೆ ಮಾಡಲು ನಿರ್ಧರಿಸಿದ ಸ್ಥಳೀಯ ಮಹಿಳೆಯರು ಹುಬ್ಬಳ್ಳಿ ಕಿಮ್ಸ್

ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ವೈದ್ಯ ಸಲಹೆಯಂತೆ ಹೆರಿಗೆ ಮಾಡಿಸಿದ ಸ್ಥಳೀಯ ಮಹಿಳೆಯರು.. !!! Read More »

ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಆಪೆ ರಿಕ್ಷಾದಲ್ಲಿ ದನದ ಮಾಂಸ ಸಾಗಾಟ ➤ ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ: ಜು.28., ಆಪೆ ರಿಕ್ಷಾವೊಂದರಲ್ಲಿ ದನದ ಮಾಂಸವನ್ನು ಸಾಗಿಸುತಿದ್ದಾಗ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಕುಕ್ಕಾವುನ ಕಾರ್ಯಕರ್ತರು ಮಿತ್ತಬಾಗಿಲು ಗ್ರಾಮದ ಎರ್ಮಾಳ್ಪಲ್ಕೆ ಗಜಂತೋಡಿ ರಸ್ತೆಯಲ್ಲಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. KA21B3001 ರಿಜಿಸ್ಟ್ರೇಷನ್ ನ ಈ ಆಪೆ ರಿಕ್ಷಾ ದಲ್ಲಿ ಸುಮಾರು 70 ಕೆಜಿಯಷ್ಟು ದನದ ಮಾಂಸ ಪತ್ತೆಯಾಗಿದೆ. ದನ ಸಾಗಿಸುತಿದ್ದ ವ್ಯಕ್ತಿಯನ್ನು ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಹಿಡಿದು ಕೊಟ್ಟಿದ್ದು ,ಸ್ಥಳದಲ್ಲಿ ಸಾರ್ವಜನಿಕರು ನೆರೆದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ ,ಆರೋಪಿಯನ್ನು

ಬೆಳ್ತಂಗಡಿ: ಆಪೆ ರಿಕ್ಷಾದಲ್ಲಿ ದನದ ಮಾಂಸ ಸಾಗಾಟ ➤ ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ Read More »

ಕರಾವಳಿ

ಗೋಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.28:  ಗೋಕಳ್ಳರನ್ನು ಪೋಲೀಸರಿಗೆ ಒಪ್ಪಿಸುವಂತೆ ಆಗ್ರಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸಾಮಾಜಿಕ ತಾಣಗಳಲ್ಲಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.       ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಸಿಂಧೂ ಬಿ, ರೂಪೇಶ್ ಆವರು ಅಕ್ರಮ ಗೋ ಸಾಗಾಟ ನಡೆಸುವವರನ್ನು ಪೋಲೀಸರಿಗೆ ಒಪ್ಪಿಸಬೇಕು, ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಲಬಾರದು ಎಂದು ಹೇಳಿದ್ದರು. ಅಲ್ಲದೆ ಜಾನುವಾರು ಸಾಗಾಟ ಮಾಡುವ ವಾಹನದ ಹಾಗೂ ಜನರ ಮೇಲೆ ಹಲ್ಲೆ

ಗೋಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ Read More »

ಕರಾವಳಿ

ಚಿನ್ನ, ಬೆಳ್ಳಿ ದರದಲ್ಲಿ ಐತಿಹಾಸಿಕ ಏರಿಕೆ ➤ ಗಗನಕ್ಕೇರಿದ ಆಭರಣಗಳ ದರ

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.28:  ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ ಕಾಣುತ್ತಲೇ ಇದೆ. ಕೆಜಿ ಬೆಳ್ಳಿಗೆ ಒಂದೇ ದಿನ 3490 ರೂಪಾಯಿ ಏರಿಕೆ ಕಂಡಿದ್ದು, ಬೆಳ್ಳಿ ದರ 64,700 ರೂಪಾಯಿ ಆಗಿದೆ. ಚಿನ್ನ ಖರೀದಿ ಮಾಡಬೇಕು ಎಂದು ಪ್ಲಾನ್​ ಹಾಕಿಕೊಂಡವರು ಕಂಗಾಲಾಗಿದ್ದಾರೆ.ಚಿನ್ನದ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಹೀಗಾಗಿ, ಬೇರೆ ದಾರಿ ಕಾಣದೆ, ಚಿನ್ನದ ಖರೀದಿಗೆ ಜನರು ಮುಂದಾಗುತ್ತಿಲ್ಲ.       ಲಾಕ್​ಡೌನ್​ ಪೂರ್ಣಗೊಳ್ಳುತ್ತಿದ್ದಂತೆ ಚಿನ್ನದ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ

ಚಿನ್ನ, ಬೆಳ್ಳಿ ದರದಲ್ಲಿ ಐತಿಹಾಸಿಕ ಏರಿಕೆ ➤ ಗಗನಕ್ಕೇರಿದ ಆಭರಣಗಳ ದರ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸಿಮೆಂಟ್ ಲಾರಿ- ಸಕ್ಕರೆ ಲಾರಿ ನಡುವೆ ಅಪಘಾತ ➤ ಚಾಲಕ ಅದೃಷ್ಟವಶಾತ್ ಪಾರು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು.28: ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಬಳಿ ಎರಡು ಲಾರಿಗಳ ನಡುವೆ ಅಪಘಾತ ನಡೆದಿದ್ದು, ಲಾರಿ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.       ಕಾಸರಗೋಡು ಕಡೆಗೆ ಸಾಗುತ್ತಿದ್ದ ಸಿಮೆಂಟ್ ಲೋಡ್ ಇದ್ದ ಲಾರಿಗೆ, ಬೆಳಗಾವಿಯಿಂದ ಸಕ್ಕರೆ ಸಾಗಾಟ ನಡೆಸುತ್ತಿದ್ದ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಎದುರುಗಡೆಯಿದ್ದ ಸಿಮೆಂಟ್ ಲಾರಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ನಡೆದ ಅಪಘಾತ ನಡೆದಿದೆ.ಅಪಘಾತ ನಡೆದ ಕಾರಣ ಹೆದ್ದಾರಿಯಲ್ಲಿ ಕೆಲವು ಕಾಲ ಸಂಚಾರಕ್ಕೆ ತಡೆಯಾಯಿತು. ನಂತರ

ಸಿಮೆಂಟ್ ಲಾರಿ- ಸಕ್ಕರೆ ಲಾರಿ ನಡುವೆ ಅಪಘಾತ ➤ ಚಾಲಕ ಅದೃಷ್ಟವಶಾತ್ ಪಾರು Read More »

ಕರಾವಳಿ

ಮಂಗಳೂರು: ಸಿಮೆಂಟ್ ಹಾಗೂ ಸಕ್ಕರೆ ಲಾರಿಗಳ ನಡುವೆ ಅಪಘಾತ ➤ ಚಾಲಕ ಪವಾಡಸದೃಶ ಪಾರು

(ನ್ಯೂಸ್ ಕಡಬ) newskadaba.com ಮಂಗಳೂರು: ಜು.28., ಸಿಮೆಂಟ್ ಲೋಡ್ ಇದ್ದ ಲಾರಿಗೆ ಸಕ್ಕರೆ ಸಾಗಾಟದ ಲಾರಿ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಎಕ್ಕೂರು ಬಳಿ ನಡೆದಿದೆ. ಕಾಸರಗೋಡು ಕಡೆಗೆ ಸಾಗುತ್ತಿದ್ದ ಸಿಮೆಂಟ್ ಲೋಡ್ ಇದ್ದ ಲಾರಿಗೆ, ಬೆಳಗಾಂನಿಂದ ಸಕ್ಕರೆ ಸಾಗಾಟ ನಡೆಸುತ್ತಿದ್ದ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು ಸಕ್ಕರೆ ಲಾರಿಯ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. ಮುಂದೆ ಇದ್ದ ಸಿಮೆಂಟ್ ಟ್ರಕ್‌ನ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಹಿಂದುಗಡೆಯಿದ್ದ ಲಾರಿಯು ಡಿಕ್ಕಿ ಹೊಡೆದಿದೆ

ಮಂಗಳೂರು: ಸಿಮೆಂಟ್ ಹಾಗೂ ಸಕ್ಕರೆ ಲಾರಿಗಳ ನಡುವೆ ಅಪಘಾತ ➤ ಚಾಲಕ ಪವಾಡಸದೃಶ ಪಾರು Read More »

ಕರಾವಳಿ
Scroll to Top