ನ್ಯೂಸ್ ಕಡಬ

ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು

(ನ್ಯೂಸ್ ಕಡಬ) newskadaba.com ಚಾರ್ಮಾಡಿ ಘಾಟ್, ಆ,12: ಚಿಕ್ಕಮಗಳೂರು -ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಸದ್ಯಕ್ಕೆ ಮುಕ್ತಿಗೊಂಡಿದೆ. ಬಾರಿ ಗಾಳಿ ಮಳೆಯಿಂದ ಗುಡ್ಡ ಮಣ್ಣು ಕುಸಿದು ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನ ಸಂಚರಿಸಲು ನಿರ್ಬಂಧ ಹೇರಳಾಗಿತ್ತು. ಆರು ದಿನಗಳ ಈ ಸಂಚಾರ ನಿರ್ಬಂಧಕ್ಕೆ ನಾಳೆಯಿಂದ ತೆರವು ಮಾಡುವುಂತೆ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ನೀಡಿದ್ದಾರೆ.ಬೆಳ್ಳಗೆ 7 ರಿಂದ ಸಂಜೆ 7ರ ತನಕ ಮಾತ್ರ ಸಮಚಾರಕ್ಕೆ ಅನುಮತಿ ನೀಡಲಾಗಿದೆ.    

ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು Read More »

ಕರಾವಳಿ, ಕರ್ನಾಟಕ

ಜನಪ್ರಿಯ ನಟ ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್

(ನ್ಯೂಸ್ ಕಡಬ) newskadaba.com ಮುಂಬೈ, ಆ,12: ಹಿಂದಿ ಚಿತ್ರರಂಗದ ಜನಪ್ರಿಯ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಯುಎಸ್ ಗೆ ತೆರಳುತ್ತಿದ್ದಾರೆ. ಕಳೆದ ಶನಿವಾರ ಉಸಿರಾಟದ ತೊಂದರೆ ಕಂಡು ಬಂದಿದ್ದರಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸಂಜಯ ದತ್ ಅವರಿಗೆ ಕೊರೊನಾವೈರಸ್ ಸೋಂಕು ಇರುವ ಬಗ್ಗೆ ಪರೀಕ್ಷೆ ನಡೆಸಲಾಗಿದ್ದು, ನೆಗಟಿವ್ ಎಂದು ವರದಿ ಬಂದಿತ್ತು. “ನಾನು ಹುಷಾರಾಗಿದ್ದೇನೆ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ನನ್ನ ಕೊವಿಡ್ 19 ಪರೀಕ್ಷೆ ವರದಿ

ಜನಪ್ರಿಯ ನಟ ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 9 ಕೊರೊನಾ ಕೇಸ್‌ ಪತ್ತೆ

(ನ್ಯೂಸ್ ಕಡಬ) newskadaba.com.ಕಡಬ,ಆ.11:  ಪುತ್ತೂರು ಮತ್ತು ಕಡಬ ಉಭಯ ತಾಲೂಕಿನಲ್ಲಿ ಇಂದು ೯ಮಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಇದರಿಂದಾಗಿ ಜನರ ಆತಂಕ ಮತ್ತೆ ಹೆಚ್ಚಾಗುತ್ತಿದೆ. ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ ಪರ್ಲಡ್ಕ ನಿವಾಸಿ ೫೦ ವರ್ಷದ ಮಹಿಳೆ, ಕೊರ್ನಡ್ಕ ನಿವಾಸಿ ೬೦ ವರ್ಷದ ವ್ಯಕ್ತಿ, ಕೆಮ್ಮಿಂಜೆಯ ೩೪ ವರ್ಷದ ವ್ಯಕ್ತಿ, ೨೫ ವರ್ಷದ ಮಹಿಳೆ, ೪ ವರ್ಷದ ಬಾಲಕ, ಬೆಟ್ಟಂಪಾಡಿ ನಿವಾಸಿ ೨೪ ವರ್ಷದ ಮಹಿಳೆ, ೫೩ ವರ್ಷದ ವ್ಯಕ್ತಿ, ತಿಂಗಳಾಡಿ ನಿವಾಸಿ ೪೭ ವರ್ಷದ ಮಹಿಳೆಯಲ್ಲಿ

ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 9 ಕೊರೊನಾ ಕೇಸ್‌ ಪತ್ತೆ Read More »

ಕರಾವಳಿ

ಕೊರೋನಾ ಸೋಂಕು| ಪ್ರಣಬ್‌ ಮುಖರ್ಜಿ ಆರೋಗ್ಯ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

(ನ್ಯೂಸ್ ಕಡಬ) newskadaba.com ದೆಹಲಿ, ಆ.11:  ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಪ್ರಣಬ್ ಮುಖರ್ಜಿ ಅವರನ್ನು ದೆಹಲಿಯ ಸೇನಾ ರೆಫರಲ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆಯಲ್ಲಿ ಸೋಮವಾರ ಅವರು ಮೆದುಳಿನ ಶಸ್ತ್ರ ಚಿಕಿತ್ಸೆಗೂ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಅವರಿಗೆ ಕೃತಕ  ಉಸಿರಾಟ

ಕೊರೋನಾ ಸೋಂಕು| ಪ್ರಣಬ್‌ ಮುಖರ್ಜಿ ಆರೋಗ್ಯ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬ್ರಹ್ಮಗಿರಿಯಲ್ಲಿ ಕಾರ್ಯಾಚರಣೆ ಮುಂದುವರಿಕೆ ➤ ಅರ್ಚಕ ನಾರಾಯಣ ಆಚಾರ್‌ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕೊಡಗು, ಆ.11:  ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದ ಪ್ರದೇಶದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆಯ ಮುಂದುವರಿದಿದ್ದು, ಸ್ಥಳದಲ್ಲಿ ಇಂದು ಮಧ್ಯಾಹ್ನ ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿದೆ.     ಬೆಳಗ್ಗೆ ಎರಡು ಕಾರುಗಳು ಮತ್ತು ನಾಯಿಗಳ ಶವ ಸಿಕ್ಕಿತ್ತು. ಬಳಿಕ ಕಾರ್ಯಾಚರಣೆ ಮುಂದುವರಿಸಿದಾಗ ನಾರಾಯಣ ಆಚಾರ್‌ ಅವರ ಶವ ಸಿಕ್ಕಿದೆ. ಐದು ದಿನಗಳ ಬಳಿಕ ನಾರಾಯಣ ಆಚಾರ್ ಮೃತದೇಹ ಪತ್ತೆಯಾಗಿದೆ. 2 ದಿನಗಳ ಹಿಂದೆ ಆನಂದತೀರ್ಥ ಅವರ ಮೃತದೇಹ ಪತ್ತೆಯಾಗಿತ್ತು.ಕಾರ್ಯಾಚರಣೆ

ಬ್ರಹ್ಮಗಿರಿಯಲ್ಲಿ ಕಾರ್ಯಾಚರಣೆ ಮುಂದುವರಿಕೆ ➤ ಅರ್ಚಕ ನಾರಾಯಣ ಆಚಾರ್‌ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ

ರಾಜ್ಯಕ್ಕೆ ಟಾಪರ್ ಆಗಿ ಸಾಧನೆಗೈದ ಅನುಷ್‍ರವರಿಗೆ ಕುಕ್ಕೆ ದೇವಳದದಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಆ.11: ಕುಮಾರಸ್ವಾಮಿ ಆಂಗ್ಲ ಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ SSLC ಯಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೋರ ಹೊಮ್ಮಿದ ಅನುಷ್ ಎಣ್ಣೆಮಜಲು ಅವರನ್ನು ಇಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವಸ್ಥಾನದ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.   ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಎಸ್. ಎಸ್. ಎಲ್. ಸಿ ಯಲ್ಲಿ ಸಾಧನೆಗೈದು ದಕ್ಷಿಣ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದ, ಅನುಷ್ ಎಣ್ಣೆಮಜಲು ಅವರನ್ನು ಇಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವಸ್ಥಾನದ ವತಿಯಿಂದ ಗೌರವ

ರಾಜ್ಯಕ್ಕೆ ಟಾಪರ್ ಆಗಿ ಸಾಧನೆಗೈದ ಅನುಷ್‍ರವರಿಗೆ ಕುಕ್ಕೆ ದೇವಳದದಿಂದ ಸನ್ಮಾನ Read More »

ಕರಾವಳಿ, ಕರ್ನಾಟಕ

ಅಬಕಾರಿ ಅಧಿಕಾರಿಗಳಿಂದ ಕಳ್ಳಭಟ್ಟಿಯ ವಿರುದ್ದ ಜನಜಾಗೃತಿ

(ನ್ಯೂಸ್ ಕಡಬ) newskadaba.com.ಪೆರಾಜೆ ,ಆ.11:  ಕಳ್ಳಭಟ್ಟಿ ತಯಾರಿಸಿ ಕೇಸಿಗೊಳಗಾಗುತ್ತಿದ್ದ ಮನೆಗಳಿಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪುನಃ ಕಳ್ಳಭಟ್ಟಿ ತಯಾರಿಸದಂತೆ ಜಾಗೃತಿ ಮತ್ತು ಎಚ್ಚರಿಕೆ ನೀಡುವ ಕಾರ್ಯದಲ್ಲಿ ತೊಡಗಿರುವುದು ಪೆರಾಜೆ ಗ್ರಾಮದಲ್ಲಿ ಕಂಡುಬಂದಿದೆ. ಈ ಪ್ರದೇಶದಲ್ಲಿ ಕಳ್ಳಭಟ್ಟಿ ತಯಾರಿಸಿ ಸಿಕ್ಕಿಬಿದ್ದಿದ್ದಂತಹ ಮನೆಗಳನ್ನು ಗುರುತಿಸಿ ಮುಂದೆ ಕಳ್ಳಭಟ್ಟಿ ತಯಾರಿಸದಂತೆ ಎಚ್ಚರಿಕೆ ನೀಡಿದರು. ಇಲ್ಲಿನ ಹಲವು ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಕಳ್ಳಭಟ್ಟಿಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಹೇಳಿದರು .ಅಬಕಾರಿ ಅಧಿಕಾರಿಗಳಾದ ಮಂಗಳೂರು ವಿಭಾಗದ ಸುಪರಿಂಟೆಂಡೆಂಟ್‌ ವಿನೋದ್ ಕುಮಾರ್‌, ಡಿಸ್ಟ್ರಿಕ್ಟ್‌ ಸ್ಕ್ವಾಡ್‌ ಇನ್‌ಸ್ಪೆಕ್ಟರ್‌

ಅಬಕಾರಿ ಅಧಿಕಾರಿಗಳಿಂದ ಕಳ್ಳಭಟ್ಟಿಯ ವಿರುದ್ದ ಜನಜಾಗೃತಿ Read More »

ಕರ್ನಾಟಕ

ಮಂಗಳೂರು : ಶ್ರೀನಿವಾಸ್‌ ವಿಶ್ವವಿದ್ಯಾಲಯದಲ್ಲಿ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಮಂಗಳೂರು , ಆ.11: ಪಾಂಡೇಶ್ವರಲ್ಲಿರುವ ಶ್ರೀನಿವಾಸ್‌ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಿಗೆ ಉನ್ನತ ಶಿಕ್ಷಣದ ಮುಂದಿನ ದಿನಗಳಲ್ಲಿ ಅಳವಡಿಸುವ ಹೊಸ ವೇದಿಕೆಗಳು ಹಾಗೂ ಅವುಗಳ ಕಾರ್ಯತಂತ್ರ ಎನ್ನುವ ವಿಷಯದ ಕುರಿತು ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು. ಸಂಪೂನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಓಡಿನ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನ್‌ ಕುಮಾರ್‌ ಮಾಹಿತಿ ನೀಡಿದರು.   ಈ ವೇಳೆ ಓಡಿನ್‌ ಎಕ್ಸ್ಲಾನ್ಸ್‌ ನ ಶ್ರೀನಿವಾಸ್‌ ರಾವ್, ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್‌. ಐತಾಳ್‌, ಸಿ.ಸಿ.ಐ.ಎಸ್‌., ಸಿ.ಎಸ್.ಎಸ್‌.ಹೆಚ್.,

ಮಂಗಳೂರು : ಶ್ರೀನಿವಾಸ್‌ ವಿಶ್ವವಿದ್ಯಾಲಯದಲ್ಲಿ ಮಾಹಿತಿ ಕಾರ್ಯಗಾರ Read More »

ಕರಾವಳಿ, ಕರ್ನಾಟಕ

ಆನ್ ಲೈನ್ ಕ್ಲಾಸ್ ಪಜೀತಿ, ನೆಟ್ ವರ್ಕ್ ಸಮಸ್ಯೆ ➤ ಬಸ್ ನಿಲ್ದಾಣದಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಪಾಲೆತ್ತಡಿ, ಆ.11:  ಕೊರೊನಾ ಹಾವಳಿಯಿಂದ ಇನ್ನೂ ಸರಿಯಾಗಿ ಶಾಲೆಗಳು ತೆರೆದುಕೊಂಡಿಲ್ಲ. ಆದರೆ ಆನ್ ಲೈನ್ ಕ್ಲಾಸ್ ಗಳ ಪಜೀತಿಯಲ್ಲಿ ಮಕ್ಕಳು ಸಿಲುಕಿ ಒದ್ದಾಡುತ್ತಿದ್ದಾರೆ. ಮೊಬೈಲ್ ಹಿಡಿದುಕೊಂಡು ನೆಟ್ವರ್ಕ್‍ಗಾಗಿ ಕಾಡು ಮೇಡು ಸುತ್ತುವ ಪರಿಸ್ಥಿತಿ ಗೆ ಸಿಲುಕಿದ್ದಾರೆ. ದ. ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂ‌ಬಲ್ಲಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿಯಾಗಿದೆ. ದಕ್ಷಿಣ ಕನ್ನಡ ವಿದ್ಯಾವಂತರ, ಅಭಿವೃದ್ಧಿ ಹೊಂದಿರುವ ಜಿಲ್ಲೆ ಎನ್ನುವ ಮಾತಿದೆ. ಆದರೆ ಇಲ್ಲಿನ ವಿದ್ಯಾವಂತರಾಗಲು ಪಡುವ ಪಾಡು

ಆನ್ ಲೈನ್ ಕ್ಲಾಸ್ ಪಜೀತಿ, ನೆಟ್ ವರ್ಕ್ ಸಮಸ್ಯೆ ➤ ಬಸ್ ನಿಲ್ದಾಣದಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು Read More »

ಕರಾವಳಿ, ಕರ್ನಾಟಕ

ಸುಳ್ಯ ಕೃಷಿ ಭೂಮಿಗೆ ಆನೆಗಳ ದಾಳಿ➤ ಅಪಾರ ಕೃಷಿ ನಷ್ಟ

(ನ್ಯೂಸ್ ಕಡಬ) newskadaba.com.ಸುಳ್ಯ,ಆ.11: ಕಳೆದ ಕೆಲ ದಿನಗಳಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ಉಪಟಳ ನೀಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು ಮಂಡೆಕೋಲು ಗ್ರಾಮದ ದೇವರಗುಂಡ ಆಶಿಕ್‌ ಹಾಗೂ ದುಗ್ಗಪ್ಪ ದೇವರಗುಂಡರವರ ತೋಟಕ್ಕೆ ಆನೆಗಳ ಹಿಂಡು ಬಂದು ಕೃಷಿ ಹಾಳುಗೆಡವಿರುವುದು ವರದಿಯಾಗಿದೆ. ಹಲವು ದಿನಗಳಿಂದ ಇಲ್ಲಿನ ಮಂಡೆಕೋಲು, ಅಜ್ಜಾವರ ಹಾಗೂ ಆಲೆಟ್ಟಿ ಭಾಗದಲ್ಲಿ ಆನೆಗಳ ಹಿಂಡು ಸಂಚರಿಸುವುದನ್ನು ಸ್ಥಳೀಯರು ಗಮನಿಸಿದ್ದಾರೆ. ರಾತ್ರಿ ಹೊತ್ತಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಆನೆಗಳು ಇದೀಗ ಈ ಭಾಗಗಳಲ್ಲಿ ಹಗಲು ಹೊತ್ತಲೇ ಕಣ್ಣಿಗೆ ಬೀಳುತ್ತಿರುವುದು ಹಾಗೂ ಕೃಷಿಭೂಮಿಗೆ

ಸುಳ್ಯ ಕೃಷಿ ಭೂಮಿಗೆ ಆನೆಗಳ ದಾಳಿ➤ ಅಪಾರ ಕೃಷಿ ನಷ್ಟ Read More »

ಕರಾವಳಿ
Scroll to Top