ನ್ಯೂಸ್ ಕಡಬ

ಮಂಗಳೂರು :ಮಹಿಳೆಯ ಚಿನ್ನದ ಸರ ಕಸಿದು ಬೈಕ್ ಸವಾರ ಪರಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಪಾವಂಜೆ ರಾಷ್ಟ್ರೀಯ ಹೆದ್ದಾರಿ ಬಳಿ ಬೈಕಿನಲ್ಲಿ ಬಂದ ಖದೀಮನೊಬ್ಬ ಮಹಿಳೆಯ ಸರ ಕಸಿದು ಪರಾರಿಯಾಗಿದ್ದಾನೆ.   ಪಾವಂಜೆ ನಿವಾಸಿ ಸುಧಾಮಣಿ (58) ಎಂಬವರು ಪಾವಂಜೆ ದೇವಸ್ಥಾನದಿಂದ ಪೂಜೆ ಮುಗಿಸಿ ವಾಪಸ್ ಮನೆ ಕಡೆಗೆ ತೆರಳುತ್ತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗದ್ದೆ ಕಡೆಗೆ ಇಳಿಯುತ್ತಿದ್ದಾಗ ಬೈಕಿನಲ್ಲಿ ಬಂದ ಕಳ್ಳ, ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈ […]

ಮಂಗಳೂರು :ಮಹಿಳೆಯ ಚಿನ್ನದ ಸರ ಕಸಿದು ಬೈಕ್ ಸವಾರ ಪರಾರಿ Read More »

ಕರಾವಳಿ

ಕೌನ್‌ ಬನೇಗಾ ಕರೋಡ್ ‌ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿ ಬಾಲಕ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.17: ಕೌನ್‌ ಬನೇಗಾ ಕರೋಡ್‌ ಪತಿ(ಕೆಬಿಸಿ) ಹಾಟ್‌ ಸೀಟಿಗೇರಿದ್ದ ಉಡುಪಿಯ ಬಾಲಕ 12 ವರ್ಷದ ಅನಮಯ 50 ಲಕ್ಷ ರೂ.ಬಹುಮಾನ ಗೆದ್ದಿದ್ದಾನೆ. ಒಂದು ಕೋಟಿ ರೂ. ಮೊತ್ತದ 12ನೇ ಪ್ರಶ್ನೆಯಾದ ಮಹಾಭಾರತ ಯುದ್ಧದಲ್ಲಿ ಬದುಕುಳಿದು ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ಕರ್ಣನ ಪುತ್ರ ಯಾರೆನ್ನುವ ಪ್ರಶ್ನೆಗೆ(ಉತ್ತರ- ವೃಷಕೇತು) ಇದ್ದ ಒಂದು ಲೈಫ್‌ ಲೈನ್‌ ಬಳಸಿ 50:50 ಅವಕಾಶ ಬಳಸಿದರೂ ಉತ್ತರ ಸಿಗದೆ ಕೊನೆಗೆ ಸ್ಪರ್ಧೆಯಿಂದ ಹಿಂದೆ ಸರಿದು 50 ಲಕ್ಷ ರೂ.ಮೊತ್ತಕ್ಕೆ ತೃಪ್ತಿಪಡಬೇಕಾಯಿತು.

ಕೌನ್‌ ಬನೇಗಾ ಕರೋಡ್ ‌ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿ ಬಾಲಕ Read More »

ಕರಾವಳಿ

ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17:  ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಹಾಗೂ ಯುನೈಟೆಡ್ ಬ್ಲಡ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ನಡೆಯಿತು.   ಈ ಸಂದರ್ಭ ಯುವ ಜನತಾದಳ ದ.ಕ. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಯುವ ಜನತಾದಳ ಮುಖಂಡರಾದ ನಝೀರ್ ಕಂದಕ್, ಅಝರ್ ಕಂದಕ್ , ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಆಸೀಫ್ ಕುದ್ರೋಳಿ,

ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ Read More »

ಕರಾವಳಿ

ನವ ಮುರುಡೇಶ್ವರದ ನಿರ್ಮಾತೃ ಆರ್ ಎನ್ ಶೆಟ್ಟಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17:  ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ಹಿರಿಯ ಉದ್ಯಮಿ, ಶಿಕ್ಷಣ ತಜ್ಞ ಆರ್ ಎನ್ ಶೆಟ್ಟಿ ಗುರುವಾರ ನಿಧನರಾಗಿದ್ದಾರೆ. 92 ವರ್ಷದ ಆರ್ ಎನ್ ಶೆಟ್ಟಿ ಅವರು ಗುರುವಾರ ನಸುಕಿನ 3.30ರ ಸುಮಾರಿಗೆ ನಿಧನರಾದರು ಎನ್ನಲಾಗಿದೆ. ಡಾ. ರಾಮ ನಾಗಪ್ಪ ಶೆಟ್ಟಿ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ್ದರು. ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ

ನವ ಮುರುಡೇಶ್ವರದ ನಿರ್ಮಾತೃ ಆರ್ ಎನ್ ಶೆಟ್ಟಿ ಇನ್ನಿಲ್ಲ Read More »

ಕರಾವಳಿ

ಮಂಗಳೂರು: ಖಾಸಗಿ ಶಾಲಾ ಶಿಕ್ಷಕಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17: ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಗ್ರೆಟಾ ಡಿಸೋಜಾ (40) ಮೃತ ಶಿಕ್ಷಕಿ. ಮೂಲಗಳ ಪ್ರಕಾರ, ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮೇಜಿನ ಮೇಲೆ ಡೆತ್ ನೋಟ್ ಸಿಕ್ಕಿದ್ದು , ಅದರಲ್ಲಿ ‘ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ನಾನು ಬದುಕುವುದಿಲ್ಲ’ ಎಂದು ಬರೆಯಲಾಗಿತ್ತು. ಬಳಿಕ ಮಕ್ಕಳು ಹುಡುಕಾಡಿದಾಗ ಮನೆ ಆವರಣದ ಬಾವಿಯಲ್ಲಿ ಶವ ತೇಲುತ್ತಿರುವುದು ಕಂಡು ಬಂದಿತ್ತು ಎಂದು ತಿಳಿದುಬಂದಿದೆ.ಈ ಕುರಿತು ಕಂಕನಾಡಿ ನಗರ ಪೊಲೀಸ್

ಮಂಗಳೂರು: ಖಾಸಗಿ ಶಾಲಾ ಶಿಕ್ಷಕಿ ಆತ್ಮಹತ್ಯೆಗೆ ಶರಣು Read More »

ಕರಾವಳಿ

ಹಿಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ಪ್ರಸ್ತುತ ಸಾಲಿನ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಮುಂದಿನ ಎರಡು ವಾರಗಳ ಕಾಲಾವಧಿಯಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆಪ್‍ನ್ನು ಅಭಿವೃದ್ಧಿ ಪಡಿಸಲಾಗಿದೆ.ಜಿಲ್ಲೆಯ ರೈತರು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿರುವ  ಆ್ಯಪ್ಅನ್ನು ಡೌನ್‍ಲೋಡ್ ಮಾಡಿ ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸಬೇಕು. ನಂತರ ಆಧಾರ್ ಕ್ಯೂ ಆರ್ ಕೋಡ್‍ನ್ನು ಸ್ಕ್ಯಾನ್ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ. ಬರಲಿದ್ದು,

ಹಿಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಿಡುಗಡೆ Read More »

ಕರಾವಳಿ

ಹೃದಯಾಘಾತದಿಂದಾಗಿ ಕೊನೆಯುಸಿರೆಳೆದ ಮಾಜಿ ಸಚಿವೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.16: ರೇಷ್ಮೆ ಖಾತೆ ಸಚಿವರಾಗಿ ಕೆಲಸ ನಿರ್ವಹಿಸಿ ರಾಜ್ಯ ರಾಜಕೀಯದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದ ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ (78) ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ, ಇಂದು ಬೆಳಗ್ಗೆ ದಿಢೀರ್ ಹೃದಯಾಘಾತದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೊರೋನಾ ಇಡೀ ದೇಶಕ್ಕೆ ವ್ಯಾಪಿಸಿದ್ದ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ರೇಣುಕಾ ರಾಜೇಂದ್ರನ್ ಅವರಿಗೂ ಸಹ ಸೋಂಕು ತಗುಲಿತ್ತು. ಆದರೆ, ಅವರು ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ

ಹೃದಯಾಘಾತದಿಂದಾಗಿ ಕೊನೆಯುಸಿರೆಳೆದ ಮಾಜಿ ಸಚಿವೆ Read More »

ಕರ್ನಾಟಕ

ಮಂಗಳೂರು :ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ತಲವಾರಿನಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ಕರ್ತವ್ಯದಲ್ಲಿದ್ದ ಹೆಡ್‌‌ ಕಾನ್ಸ್‌ಟೇಬಲ್‌ಯೋರ್ವರ ಮೇಲೆ ದುಷ್ಕರ್ಮಿಯೋರ್ವ ತಲವಾರಿನಿಂದ ಹಲ್ಲೆ ಮಾಡಿದ ಘಟನೆ ಇಂದು ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರಾ ಟಾಕೀಸ್‌ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಬಂದರು ಠಾಣೆಯ ಹೆಡ್‌‌ ಕಾನ್ಸ್‌ಟೇಬಲ್‌‌‌ ಗಣೇಶ್‌‌ ಕಾಮತ್‌ ಹಾಗೂ ಇಬ್ಬರು ಸಿಬ್ಬಂದಿ ತಪಾಸಣೆ ನಿರತರಾಗಿದ್ದರು. ಈ ಸಂದರ್ಭ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಮುಖ್ಯ ಪೇದೆ ಗಣೇಶ್‌ ಕಾಮತ್‌ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ

ಮಂಗಳೂರು :ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ತಲವಾರಿನಿಂದ ಹಲ್ಲೆ Read More »

ಕರಾವಳಿ, ಕ್ರೈಮ್ ನ್ಯೂಸ್

ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ನಗರದ ಬಲ್ಮಠದ ಬಳಿಯಿರುವ ಪೆಟ್ರೋಲ್ ಬಂಕ್‍ನಲ್ಲಿ ಕುಸಿದು ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಿಲಾಯಿತು ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 27ರಂದು ಮೃತಪಟ್ಟಿದ್ದಾರೆ. ಅಪರಿಚಿತ ಮೃತ ವ್ಯಕ್ತಿಯು ಕುದ್ರೋಳಿಯ ನಿವಾಸಿಯಾಗಿದ್ದು, ಸುಮಾರು 5 ಅಡಿ ಎತ್ತರವಿದ್ದು, ಗೋಧಿ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಈ ಚಹರೆಯುಳ್ಳ ಮೃತರ ವಾರಸುದಾರರಿದ್ದಲ್ಲಿ ಮಂಗಳೂರು ಪೂರ್ವಪೊಲೀಸ್ ಠಾಣಾ (ಕದ್ರಿ ಪೊಲೀಸ್ಠಾಣೆ) ದೂ.ಸಂ:0824-2220520 ಗೆ ಸಂಪರ್ಕಿಸುವಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ

ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ.! Read More »

ಕರಾವಳಿ

ನೂಜಿಬಾಳ್ತಿಲ: ಶಾಸಕರಿಂದ ಮನೆ ಭೇಟಿ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಡಿ.16: ಸುಳ್ಯ ಶಾಸಕ ಎಸ್.ಅಂಗಾರ ಅವರು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ಸೋಮವಾರ ಮನೆ ಬೇಟಿ ನಡೆಸಿದರು. ನೂಜಿಬಾಳ್ತಿಲ 2ನೇ ವಾರ್ಡ್‍ಗೆ ಬೇಟಿ ನೀಡಿದ ಶಾಸಕರು ಸ್ಥಳೀಯರ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಮನೆ ಬೇಟಿ ನಡೆಸಿದರು. ಬದಿಬಾಗಿಲು-ಒರುಂಬಾಲು ರಸ್ತೆಗೆ ವಿಶೇಷ ಅನುದಾನ ರೂ.10 ಲಕ್ಷ ಮಂಜೂರಾಗಿದ್ದು, ಚುನಾವಣೆ ಮುಗಿದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದರು. ಪ್ರಮುಖರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಎ.ಪಿ.ಗಿರೀಶ್, ಚಂದ್ರಶೇಖರ ನೂಜಿ, ರಾಮಚಂದ್ರ ಎಸ್., ಪ್ರಭಾಕರ ಬಳಕ್ಕ, ಅನಿಲ್

ನೂಜಿಬಾಳ್ತಿಲ: ಶಾಸಕರಿಂದ ಮನೆ ಭೇಟಿ Read More »

ಕರಾವಳಿ
Scroll to Top