ನ್ಯೂಸ್ ಕಡಬ

ರಾಜ್ಯದ ಹೊಸ ಕೊರೊನಾ ಕೇಸ್‌ 5 ಸಾವಿರಕ್ಕೆ ಇಳಿಕೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ರಾಜ್ಯದಲ್ಲಿ ಹೊಸ ಕೊರೊನಾ ಸೋಂಕು ಇಳಿಕೆಯ ಹಾದಿಯಲ್ಲಿದ್ದು ಮಂಗಳವಾರ 5041 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 27,77,010ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 1,32,600 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಪಾಸಿಟಿವಿಟಿ ದರ ಶೇ. 3.80ಗೆ ಕುಸಿದಿದೆ. ಬೆಂಗಳೂರಿನಲ್ಲಿ ಹೊಸ ಕೇಸ್‌ ಸಂಖ್ಯೆ ಸಾವಿರಕ್ಕಿಂತ ಕೆಳಕ್ಕಿಳಿದಿದ್ದು ಮಂಗಳವಾರ 985 ಪ್ರಕರಣ ಬೆಳಕಿಗೆ ಬಂದಿದೆ. ಹಾಸನದಲ್ಲಿ 522, ಮೈಸೂರಿನಲ್ಲಿ 490, ದಕ್ಷಿಣ ಕನ್ನಡದಲ್ಲಿ 482, ತುಮಕೂರಿನಲ್ಲಿ 329 ಹೊಸ ಪ್ರಕರಣಗಳು ವರದಿಯಾಗಿವೆ. […]

ರಾಜ್ಯದ ಹೊಸ ಕೊರೊನಾ ಕೇಸ್‌ 5 ಸಾವಿರಕ್ಕೆ ಇಳಿಕೆ Read More »

ಕರಾವಳಿ

ಮರವೂರು ಸೇತುವೆ ದುರಸ್ತಿ ಬಗ್ಗೆ ಶೀಘ್ರವೇ ತಿರ್ಮಾನ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.15:ಮಂಗಳವಾರ ಕುಸಿತಕ್ಕೆ ಒಳಗಾದ ಮರವೂರು ಸೇತುವೆಯ ಪುನರ್‌ ನಿರ್ಮಾಣ ಮಾಡಬೇಕೆ ಅಥವಾ ದುರಸ್ತಿ ಕೈಗೊಳ್ಳಬೇಕೆ ಎನ್ನುವುದಕ್ಕೆ ತಜ್ಞರನ್ನೊಳಗೊಂಡ ಸಮಿತಿ ಪರಿಶೀಲಿಸಿ ಇನ್ನೆರೆಡು ದಿನದೊಳಗೆ ವರದಿ ನೀಡಲಿದೆ. ವರದಿಯನ್ನಾಧರಿಸಿ, ಅಗತ್ಯ ಅನುದಾನವನ್ನು ಸಿಎಂ ಜತೆ ಮಾತನಾಡಿ ಬಿಡುಗಡೆ ಮಾಡಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮರವೂರು ಸೇತುವೆಯ ಬಿರುಕನ್ನು ಪರಿಶೀಲಿಸಿದ ಅವರು ಈ ರಸ್ತೆಯ ಸೇತುವೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 50 ಕೋಟಿ ರೂ. ಮಂಜೂರಾಗಿದ್ದು, ಹಾಲಿ ಸೇತುವೆಯ ಪಕ್ಕದಲ್ಲಿ

ಮರವೂರು ಸೇತುವೆ ದುರಸ್ತಿ ಬಗ್ಗೆ ಶೀಘ್ರವೇ ತಿರ್ಮಾನ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ

ಜುಲೈನಲ್ಲಿ ಎಸ್ಎಸ್ಎಲ್’ಸಿ ಪರೀಕ್ಷೆ ➤ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದ ಸಚಿವ ಸುರೇಶ್ ಕುಮಾರ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.10:ಕೊರೋನಾ ಸಾಂಕ್ರಾಮಿಕ ರೋಗದ ಆತಂಕದ ನಡುವಲ್ಲೇ ಜುಲೈ ಮೂರನೇ ವಾರದಲ್ಲಿ ಎಸ್ಎಸ್ಎಲ್’ಸಿ ಪರೀಕ್ಷೆ ಆರಂಭಿಸುವುದಾಗಿ ಹೇಳಿರುವ ರಾಜ್ಯ ಶಿಕ್ಷಣ ಇಲಾಖೆಯು, ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಈ ವೇಳೆ ಅಧಿಕಾರಿಗಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು, ವಿದ್ಯಾರ್ಥಿಗಳು ಹಾಗೂ ಪೋಷಕರ ವಿಶ್ವಾಸ ಗಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಜುಲೈನಲ್ಲಿ ಎಸ್ಎಸ್ಎಲ್’ಸಿ ಪರೀಕ್ಷೆ ➤ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದ ಸಚಿವ ಸುರೇಶ್ ಕುಮಾರ್ Read More »

ಕರ್ನಾಟಕ

ಲಾಕ್​ಡೌನ್​ ಸಡಿಲಿಕೆ ಕುರಿತು ಇನ್ನೆರಡು ದಿನಗಳಲ್ಲಿ ಸಿಎಂ ಚರ್ಚೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09: ಕೊರೋನಾ ನಿಯಂತ್ರಣಕ್ಕೆ ಜೂ 14ರವರೆಗೆ ಲಾಕ್​ಡೌನ್​ ವಿಸ್ತರಿಸಿ ಈಗಾಗಲೇ ಸಿಎಂ ಆದೇಶ ನೀಡಿದ್ದರು. ಜೂ. 14 ಬಳಿಕ ರಾಜ್ಯದಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿ, ಹಂತ ಹಂತವಾಗಿ ಅನ್​ಲಾಕ್​ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ.   ಈಗಾಗಲೇ ಮೂರು ಬಾರಿ ಲಾಕ್​ಡೌನ್​ ವಿಸ್ತರಿಸಿರುವ ಮುಖ್ಯಮಂತ್ರಿಗಳು ಜೂ 14 ರಬಳಿಕ ಮತ್ತೊಮ್ಮೆ ಲಾಕ್​ಡೌನ್​ ಹೇರುವ ಸಂಭಾವ್ಯ ಕಡಿಮೆ ಇದೆ. ಇದೇ ಹಿನ್ನಲೆ ಯಾವ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಬೇಕು ಎಂಬ ಕುರಿತು

ಲಾಕ್​ಡೌನ್​ ಸಡಿಲಿಕೆ ಕುರಿತು ಇನ್ನೆರಡು ದಿನಗಳಲ್ಲಿ ಸಿಎಂ ಚರ್ಚೆ Read More »

ಕರ್ನಾಟಕ

ಬೆಲೆ ಏರಿಕೆ ಬಿಸಿಯ ನಡುವೆ ಮತ್ತೊಂದು ಶಾಕ್ ➤ ವಿದ್ಯುತ್​ ದರ ದಿಢೀರ್ ಏರಿಸಿದ ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09:ಪೆಟ್ರೋಲ್ ಬೆಲೆ ಏರಿಕೆ ದೆಸೆಯಿಂದ ದಿನೋಪಯೋಗಿ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದ್ದು, ಸಾರ್ವಜನಿಕರು ಪ್ರತಿನಿತ್ಯ ಬದುಕುವುದೇ ದುಸ್ಥರವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಇಂದು ವಿದ್ಯುತ್​ ಬೆಲೆಯನ್ನು ಮತ್ತೆ ಏರಿಸುವ ಮೂಲಕ ಜನರಿಗೆ ಶಾಕ್ ನೀಡಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನಡುವೆಯೇ ವಿದ್ಯುತ್​ ಬೆಲೆಯೂ ಇಂದು ದಾಖಲೆ ಬರೆದಿದ್ದು, ರಾಜ್ಯ ಸರ್ಕಾರ ಯೂನಿಟ್ ಗೆ 30 ಪೈಸೆ ಹೆಚ್ಚಳ‌ ಮಾಡಿ ಆದೇಶಿಸಿದೆ. ಕೆಪಿಟಿಸಿಎಲ್- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೂತನ ದರ ಎಪ್ರಿಲ್.1 

ಬೆಲೆ ಏರಿಕೆ ಬಿಸಿಯ ನಡುವೆ ಮತ್ತೊಂದು ಶಾಕ್ ➤ ವಿದ್ಯುತ್​ ದರ ದಿಢೀರ್ ಏರಿಸಿದ ರಾಜ್ಯ ಸರ್ಕಾರ Read More »

ಕರ್ನಾಟಕ

ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ ➤ ನಟ ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba,ಕೊಲ್ಕತ್ತ ಜೂ.09:ಕೋವಿಡ್ ಸೋಂಕು ಎಷ್ಟೋ ಜನರ ಬದಕನ್ನೇ ಕಿತ್ತುಕೊಂಡಿದೆ. ಲಕ್ಷಾಂತರ ಜನರ ಉಸಿರನ್ನೇ ನಿಲ್ಲಿಸಿದೆ. ಇದೇ ಹಿನ್ನೆಲೆಯಲ್ಲಿ ಕೋವಿಡ್ ನಿಂದ ಕೆಲಸವಿಲ್ಲದೆ ನೊಂದ ನಟನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಲಾಕ್‍ಡೌನ್ ವೇಳೆ ಎಲ್ಲೂ ಕೆಲಸ ಸಿಗದೆ ನಿರುದ್ಯೋಗದಿಂದ ಬಳಲಿದ ಬೆಂಗಾಲಿ ನಟನೊಬ್ಬ ಕೊಲ್ಕತ್ತಾದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ನಟನನ್ನು ಕಾಪಾಡಿದ್ದಾರೆ.ನಿದ್ದೆ ಮಾತ್ರೆಯನ್ನು ನುಂಗಿದ 31 ವರ್ಷದ ಧಾರವಾಹಿ ನಟ ಫೇಸ್ ಬುಕ್ ಲೈವ್ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ ➤ ನಟ ಆತ್ಮಹತ್ಯೆಗೆ ಯತ್ನ Read More »

ರಾಷ್ಟ್ರೀಯ ನ್ಯೂಸ್

ತರಕಾರಿ ವಾಹನದಲ್ಲಿ ಮದ್ಯ ಸಾಗಾಟ ➤ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09:ಬೆಂಗಳೂರಿನಿಂದ ತಮಿಳುನಾಡಿಗೆ ತರಕಾರಿ ಸಾಗಿಸುವ ವಾಹನದಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಗರದ ಕೆಆರ್ ಮಾರ್ಕೆಟ್ ನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಪೊಲೀಸರು ತಪಾಸಣೆ ಮಾಡುವ ವೇಳೆ ತರಕಾರಿ ತುಂಬಿದ್ದ ಜೀಪ್ ಕಲಾಸಿಪಾಳ್ಯ ಕಡೆಯಿಂದ ಬರುತ್ತಿತ್ತು. ಇಡೀ ಜೀಪ್ ತುಂಬಾ ಬೇರೆ ಬೇರೆ ರೀತಿಯ ತರಕಾರಿಗಳು ತುಂಬಿದ್ದವು. ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತರಕಾರಿಗಳ ನಡುವೆ, ಎರಡು ಬಗೆಯ ಬರೋಬ್ಬರಿ ಐನೂರು ಲೀಟರ್ ಮದ್ಯ ಪತ್ತೆಯಾಗಿದೆ.ತಕ್ಷಣ

ತರಕಾರಿ ವಾಹನದಲ್ಲಿ ಮದ್ಯ ಸಾಗಾಟ ➤ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ Read More »

ಕರ್ನಾಟಕ

28 ಪತ್ನಿಯರ ಎದುರು 37ನೇ ಮದುವೆಯಾದ ಭೂಪ..!

(ನ್ಯೂಸ್ ಕಡಬ) newskadaba,ನವದೆಹಲಿ ಜೂ.09: 21ನೇ ಶತಮಾನದಲ್ಲೂ ವ್ಯಕ್ತಿಯೊಬ್ಬ ಬರೋಬ್ಬರಿ 37 ಮದುವೆಯಾಗಿದ್ದಾನೆ. ಅದೂ, ಉಳಿದ ಪತ್ನಿಯರ ಎದುರಿಗೇ 37ನೇ ಪತ್ನಿಯನ್ನು ವರಿಸಿದ್ದಾನೆ. ಮದುವೆಯಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ಇದು ಅವರ 37ನೇ ಮದುವೆ ಎಂದು ಹೇಳಲಾಗಿದ್ದು, ಈ ವಿವಾಹಕ್ಕೆ ಅವರ ಉಳಿದ 28 ಪತ್ನಿಯರು, 35 ಮಕ್ಕಳು ಮತ್ತು 126 ಮರಿಮೊಮ್ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

28 ಪತ್ನಿಯರ ಎದುರು 37ನೇ ಮದುವೆಯಾದ ಭೂಪ..! Read More »

ಕರಾವಳಿ

ಬ್ಲಾಕ್ ಫಂಗಸ್‍ಗೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಔಷಧ ಪೂರೈಕೆ ➤ ಡಿವಿಎಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08: ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಬ್ಲಾಕ್ ಫಂಗಸ್ ಸೋಂಕು ಹೆಚ್ಚಾಗುತ್ತಿದೆ. ಬ್ಲಾಕ್ ಫಂಗಸ್ ನಿರ್ವಹಣೆಗೆ ಇಂದು ಹೆಚ್ಚುವರಿಯಾಗಿ 2,490 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ರಾಜ್ಯಕ್ಕೆ ಕೇಂದ್ರದಿಂದ ಪೂರೈಕೆ ಮಾಡಲಾಗಿದೆ.   ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕರ್ನಾಟಕಕ್ಕೆ ಮತ್ತೆ 2,490 ವಯಲ್ಸ್ ಆಂಫೊಟೆರಿಸಿನ್- ಬಿ ಔಷಧಿ ಪೂರೈಕೆ ಮಾಡಲಾಗಿದೆ ಕೇಂದ್ರ ಸಚಿವ ಡಿವಿಎಸ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಬ್ಲಾಕ್ ಫಂಗಸ್‍ಗೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಔಷಧ ಪೂರೈಕೆ ➤ ಡಿವಿಎಸ್ Read More »

ಕರಾವಳಿ

ಕನ್ಯಾನ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ

(ನ್ಯೂಸ್ ಕಡಬ) newskadaba,ಕನ್ಯಾನ ಜೂ.08: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕನ್ಯಾನ ಸಂಕದಬಳಿ ಸಂಭವಿಸಿದೆ.     ಕನ್ಯಾನ ದಿಲ್ ದಾರ್ ಹೊಟೇಲ್ ಮಾಲಕ ಇಬ್ರಾಹಿಂ ಅವರು ಕನ್ಯಾನ ಪೇಟೆಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಸ್ಕೂಟಿ ಇಬ್ರಾಹಿಂ ಅವರ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಇಬ್ರಾಹಿಂ ಅವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ಯಾನ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ Read More »

ಕರಾವಳಿ
Scroll to Top