ಕಡಬ ನ್ಯೂಸ್

ಗ್ರಾ.ಪಂ. ಚುನಾವಣೆ ಹಿನ್ನಲೆ ➤ ಚುನಾವಣಾ ಆಯೋಗದಿಂದ ಮತಗಟ್ಟೆಗಳಿಗೆ ಕೋವಿಡ್ ಕಿಟ್ ಸರಬರಾಜು

(ನ್ಯೂಸ್ ಕಡಬ) newskadaba.com ಉಡುಪಿ, ಡಿ.16: ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು ಜಿಲ್ಲೆಯ ಒಟ್ಟು 153 ಗ್ರಾಮ ಪಂಚಾಯತ್ ಗಳಲ್ಲಿ ನಡೆಯಲಿದ್ದು, ಕೋವಿಡ್19 ಹಿನ್ನೆಲೆಯಲ್ಲಿ ಈ ಎಲ್ಲಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೊರೋನಾ ಸುರಕ್ಷಿತ ಕಿಟ್‌ಗಳನ್ನು ರಾಜ್ಯ ಚುನಾವಣಾ ಆಯೋಗ ಸರಬರಾಜು ಮಾಡಿದೆ.   ಎಂ.ಎಸ್.ಐ.ಲ್ ನಿಂದ ಸರಬರಾಜು ಮಾಡಿರುವ ಈ ಕಿಟ್‌ಗಳಲ್ಲಿ, 500 ಎಂಲ್‌ನ 4 ಸ್ಯಾನಿಟೈಸ್ ಬಾಟೆಲ್, 100 ಎಂಎಲ್‌ನ […]

ಗ್ರಾ.ಪಂ. ಚುನಾವಣೆ ಹಿನ್ನಲೆ ➤ ಚುನಾವಣಾ ಆಯೋಗದಿಂದ ಮತಗಟ್ಟೆಗಳಿಗೆ ಕೋವಿಡ್ ಕಿಟ್ ಸರಬರಾಜು Read More »

ಕರಾವಳಿ, ಕರ್ನಾಟಕ

ಪುತ್ತೂರಿನಲ್ಲಿ ಹೆಚ್ಚಿದ ಚಿರತೆ ಕಾಟ➤ ಆತಂಕದಲ್ಲಿ ಸ್ಥಳೀಯರು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.16: ಕಳೆದ ಮೂರು ವರ್ಷಗಳಿಂದ ಪುತ್ತೂರು ತಾಲೂಕಿನ ವಿವಿಧ ಭಾಗದಲ್ಲಿ ಚಿರತೆ ಕಾಟ ಆರಂಭವಾಗಿದ್ದು, ಜನರನ್ನು ಆತಂಕಿತರನ್ನಾಗಿಸಿದೆ. ಕಳೆದ ವರ್ಷ ಹಳೆನೇರೆಂಕಿ, ವಳಕಡಮ, ಈಶ್ವರಮಂಗಲ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಚಿರತೆ ಕಾಟ ಜನತೆಯನ್ನು ಕಾಡಿತ್ತು. ಇದೀಗ ಕೋಡಿಂಬಾಡಿಯಲ್ಲೂ ಸಿಸಿ ಕ್ಯಾಮರಾದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಇಲ್ಲಿನ ಜನತೆ ಭಯಭೀತರಾಗಿದ್ದಾರೆ.     ಕೋಡಿಂಬಾಡಿಯ ಜಿನರಾಜ್ ಜೈನ್ ಅವರ ಮನೆಯ ಬಳಿ ಕಳೆದ ಆದಿತ್ಯವಾರ ರಾತ್ರಿ ಸುಮಾರು 1:45ರ ಸುಮಾರಿಗೆ ಚಿರತೆಯೊಂದು ಓಡಾಟ ನಡೆಸಿರುವುದು

ಪುತ್ತೂರಿನಲ್ಲಿ ಹೆಚ್ಚಿದ ಚಿರತೆ ಕಾಟ➤ ಆತಂಕದಲ್ಲಿ ಸ್ಥಳೀಯರು Read More »

ಕರಾವಳಿ

ಹಸಿ ಮೀನುಗಳಿಗೆ ಫಾರ್ಮಾಲಿನ್ ಬಳಸಿದರೆ ಕ್ರಿಮಿನಲ್ ಕೇಸ್ ➤ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.16: ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಸಿ ಮೀನುಗಳಲ್ಲಿ ಜನರ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಫಾರ್ಮಾಲಿನ್‌ಗಳನ್ನು ವಿಪರೀತವಾಗಿ ಬಳಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಕಚೇರಿಗೆ ದೂರುಗಳು ಬಂದಿರುತ್ತವೆ.   ಈ ಹಿನ್ನೆಲೆಯಲ್ಲಿ ಹಸಿ ಮೀನುಗಳಿಗೆ ಫಾರ್ಮಾಲಿನ್ ಕಂಡುಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಜನರ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಇಂತಹ ಹಾನಿಕಾರಕ ಫಾರ್ಮಾಲಿನ್‌ಗಳನ್ನು ಬಳಸಿಕೊಂಡು ಅನೈತಿಕ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ

ಹಸಿ ಮೀನುಗಳಿಗೆ ಫಾರ್ಮಾಲಿನ್ ಬಳಸಿದರೆ ಕ್ರಿಮಿನಲ್ ಕೇಸ್ ➤ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ Read More »

ಕರಾವಳಿ

ಬಂಟ್ವಾಳ: ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ➤ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.16:ಜಗತ್ತಿಗೆ ಮಹಾಮಾರಿಯಾಗಿ ಕಾಡಿದ ಕೊರೋನದಂತಹ ಸಂಕಷ್ಟಗಳನ್ನು ದೂರಗೊಳಿಸಿ ಜನತೆಗೆ ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ಎಂದು ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ ಹೇಳಿದ್ದಾರೆ. ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಶ್ರೀ ಮಂತ್ರದೇವತೆ,ಕೊರಗಜ್ಜ ಕ್ಷೇತ್ರದಲ್ಲಿ ಮಂಗಳವಾರ ನಡೆದ ಚಂಡಿಕಾಯಾಗಕ್ಕೆ ಪೂರ್ಣಾಹುತಿ ನೆರವೇರಿಸಿದ ಬಳಿಕ ಅವರು ಆಶೀರ್ವಚನ ನೀಡಿದರು. ಕೊರಗಜ್ಜ ದೈವ ಭಕ್ತರ ಸಂಕಷ್ಟ ಕಳೆಯಲು ಭಕ್ತಿಗೆ ತ್ವರಿತವಾಗಿ ಒಲಿಯುತ್ತಾನೆ ಎಂದರು. ಕಟೀಲು ಕ್ಷೇತ್ರದ ವೇದಮೂರ್ತಿ ಕಮಲಾದೇವಿ ಅಸ್ರಣ್ಣ

ಬಂಟ್ವಾಳ: ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ➤ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥ ನಿರ್ಮಾಣ ➤ ಇದು ಮಲೆಕುಡಿಯರಿಗೆ ಒಲಿದ ಕಲೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.16: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಾರಂಪರಿಕ ಮತ್ತು ಜನಪದೀಯ ಶೈಲಿಯಲ್ಲಿ ರಚಿಸಲಾಗುವ ರಥ ಮತ್ತು ಅಲಂಕಾರಿಕ ಕೆಲಸಗಳಿಗೆ, ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಚಾಲನೆ ನೀಡುತ್ತಾರೆ. ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತಗಳನ್ನು ಸಂಗ್ರಹಿಸಿ, ಬ್ರಹ್ಮರಥ ಕಟ್ಟಲು ಆರಂಭಿಸುತ್ತಾರೆ. ನಾಡಿನ ಇತರ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಮಾತ್ರ ಕೇವಲ ಬಿದಿರು, ಮರದ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥ ನಿರ್ಮಾಣ ➤ ಇದು ಮಲೆಕುಡಿಯರಿಗೆ ಒಲಿದ ಕಲೆ Read More »

ಕರಾವಳಿ

ಮಂಗಳೂರು :ತಡರಾತ್ರಿ ಯುವಕನ ಮೇಲೆ ತಲವಾರ್ ನಿಂದ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.16: ಅಡ್ಡೂರಿನಲ್ಲಿ ಯುವಕನೋರ್ವನ‌ ಮೇಲೆ ಮೂವರು ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (30) ತಲವಾರು ದಾಳಿಯಿಂದ‌ ಗಾಯಗೊಂಡವರು ಎಂದು ತಿಳಿದುಬಂದಿದೆ. ಹಳೆ‌ ವೈಷಮ್ಯದಿಂದಲೇ ದಾಳಿ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ತಾಜುದ್ದೀನ್ ಮಂಗಳವಾರ ತಡರಾತ್ರಿ ಅಡ್ಡೂರಿನಿಂದ ಮನೆ ಕಡೆಗೆ ತೆರಳುತ್ತಿದ್ದು, ಈ ವೇಳೆ‌ ಮೂವರಿದ್ದ ದುಷ್ಕರ್ಮಿಗಳ ತಂಡ ಯುವಕನ‌ ಮೇಲೆ ತಲವಾರು ಬೀಸಿದ್ದಾರೆ. ಪರಿಣಾಮ ಯುವಕನ ತೊಡೆ ಭಾಗ,

ಮಂಗಳೂರು :ತಡರಾತ್ರಿ ಯುವಕನ ಮೇಲೆ ತಲವಾರ್ ನಿಂದ ದಾಳಿ Read More »

ಕರಾವಳಿ, ಕ್ರೈಮ್ ನ್ಯೂಸ್

9 ಮಂದಿಯ ಹತ್ಯೆ ಮಾಡಿದ “ಟ್ವಿಟರ್ ಹಂತಕನಿ”ಗೆ ಮರಣದಂಡನೆ

(ನ್ಯೂಸ್ ಕಡಬ) newskadaba.com ಟೋಕಿಯೊ, ಡಿ.16:‘ಟ್ವಿಟರ್ ಹಂತಕ’ನೆಂದು ಕುಖ್ಯಾತಿ ಪಡೆದ ಜಪಾನ್ ನ 30 ವರ್ಷದ ಯುವಕನೊಬ್ಬನಿಗೆ ಟೋಕಿಯೊ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ. ಆನ್ ಲೈನ್ ನಲ್ಲಿ ಪರಿಚಯವಾದ 9 ಮಂದಿಯನ್ನು ಹತ್ಯೆಗೈದ ಅಪರಾಧಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ. ತಾಕಾಹಿರೊ ಶಿರೈಶಿ (30) ತಾನು ಮಾಡಿರುವ ಕೊಲೆಗಳನ್ನು ಒಪ್ಪಿಕೊಂಡಿದ್ದಾರೆ. ಟ್ವಿಟರ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೆನಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದವರನ್ನು ಗುರಿಯಾಗಿಸಿ, ಅವರ ಸ್ನೇಹ ಸಂಪಾದಿಸಿ, ಸಾಯಲು ನಿಮಗೆ ಸಹಾಯ ಮಾಡುತ್ತೇನೆ ಎಂದು

9 ಮಂದಿಯ ಹತ್ಯೆ ಮಾಡಿದ “ಟ್ವಿಟರ್ ಹಂತಕನಿ”ಗೆ ಮರಣದಂಡನೆ Read More »

ಕ್ರೈಮ್ ನ್ಯೂಸ್

ಉಪ್ಪಿನಂಗಡಿ : ಮೋರಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.16: ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ರಸ್ತೆ ಬದಿ ಮೋರಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.     ಸುಮಾರು 45ರಿಂದ 50ರ ಹರೆಯದ ವ್ಯಕ್ತಿಯ ಶವ ಇದಾಗಿದ್ದು, ಮೃತಪಟ್ಟು ಸುಮಾರು ಮೂರು ದಿನಗಳಾಗಿರಬಹುದೆಂದು ಶಂಕಿಸಿ, ಸ್ಥಳೀಯ ಗ್ರಾ.ಪಂ. ಪಿಡಿಒ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಉಪ್ಪಿನಂಗಡಿ : ಮೋರಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ Read More »

ಕರಾವಳಿ

ಉಡುಪಿ: ಅಗಲಿದ ಹಿರಿಯ ಚೇತನಗಳಿಗೆ ನುಡಿನಮನ, ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.15: ಅಗಲಿದ ಹಿರಿಯ ಚೇತನಗಳಿಗೆ ನಾಗರಿಕ ಸಮಿತಿಯಿಂದ ನುಡಿನಮನ, ಶ್ರದ್ಧಾಂಜಲಿ ಸಲ್ಲಿಸಿದರು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಯೋಜನೆಯಲ್ಲಿ ಅಗಲಿದ ಉಡುಪಿ ಜಿಲ್ಲೆಯ ಹಿರಿಯ ಚೇತನಗಳಾದ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ಸಾಮಾಜಿಕ ಹೋರಾಟಗಾರ ದಾಮೋದರ ಐತಾಳ್, ಸಾಹಿತಿ ಉದ್ಯಾವರ ಮಾಧವ ಆಚಾರ್ಯ, ಮಕ್ಕಳ ಹಕ್ಕುಗಳ ಹೋರಾಟಗಾರ ದಾಮೋದರ ಆಚಾರ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸುವ ಕಾರ್ಯಕ್ರಮ ಉಡುಪಿ ಮಾರುತಿ ವೀಥಿಕಾದ ನಾಗರಿಕ ಸಮಿತಿಯ ಕಚೇರಿ ವಠಾರದಲ್ಲಿ ನಡೆಯಿತು.ಅಗಲಿದ ಗಣ್ಯರಿಗೆ ನಾಗರಿಕ

ಉಡುಪಿ: ಅಗಲಿದ ಹಿರಿಯ ಚೇತನಗಳಿಗೆ ನುಡಿನಮನ, ಶ್ರದ್ಧಾಂಜಲಿ Read More »

ಕರಾವಳಿ, ಕರ್ನಾಟಕ

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿ.20 ರವರೆಗೆ ಸಕಾಲ ಸಪ್ತಾಹ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.15: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿಸೆಂಬರ್ 14 ರಿಂದ 20 ರವರೆಗೆ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಅಗ್ನಿಶಾಮಕ ಇಲಾಖೆಯಲ್ಲಿ 05 ಸೇವೆಗಳನ್ನು ಸಕಾಲ ವ್ಯಾಪ್ತಿಯಲ್ಲಿ ತಂದಿದ್ದು, ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಇಲಾಖೆಯಲ್ಲಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಹೊಸ ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು. ಸಪ್ತಾಹದ ಅಂತ್ಯದಲ್ಲಿ ವಿಲೇವಾರಿ ಮಾಡಿರುವ ಅರ್ಜಿಗಳ ಕುರಿತು ಸಕಾಲ ಮಿಷನ್‍ಗೆ ವರದಿ ನೀಡಲಾಗುತ್ತದೆ. ಅಗ್ನಿಶಾಮಕ ಇಲಾಖೆಯಲ್ಲಿ

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿ.20 ರವರೆಗೆ ಸಕಾಲ ಸಪ್ತಾಹ Read More »

ಕರ್ನಾಟಕ
Scroll to Top