ಕಡಬ ನ್ಯೂಸ್

ವಲಯ ಮಟ್ಟದ ಕಬಡ್ಡಿ ► ಸೈಂಟ್ ಆ್ಯನ್ಸ್‌ ಅಂಗ್ಲ ಮಾಧ್ಯಮ ಶಾಲೆ ತಾಲೂಕು ಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.28, ಆತೂರು ಬದ್ರಿಯಾ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸೈಂಟ್ ಆಂಗ್ಲಮಾಧ್ಯಮ ಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಫಾ| ರೊನಾಲ್ಡ್‌ ಲೋಬೋ ಅಭಿನಂದನೆ ಸಲ್ಲಿಸಿದ್ದಾರೆ.

ವಲಯ ಮಟ್ಟದ ಕಬಡ್ಡಿ ► ಸೈಂಟ್ ಆ್ಯನ್ಸ್‌ ಅಂಗ್ಲ ಮಾಧ್ಯಮ ಶಾಲೆ ತಾಲೂಕು ಮಟ್ಟಕ್ಕೆ Read More »

ಕರಾವಳಿ

ಬಚ್ಚಲು ಕೋಣೆಯಲ್ಲಿ ಚಿರತೆ ಪ್ರತ್ಯಕ್ಷ ► ಅರಣ್ಯ ಸಿಬ್ಬಂದಿಗಳಿಂದ ಸೆರೆ

(ನ್ಯೂಸ್ ಕಡಬ) newskadaba.com ತುಮಕೂರು, ಆ.28, ಇಲ್ಲಿಯ ಗುಬ್ಬಿ ತಾಲೂಕಿನ ನಾಗಸಂದ್ರ ಗ್ರಾಮದ ಅಶೋಕ್ ಎಂಬವರ  ಮನೆಯ ಸ್ನಾನದ ಕೋಣೆಯಲ್ಲಿ ಸೋಮವಾರ ಬೆಳ್ಳಂ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಅಶೋಕ್ ಎಂಬವರ ಮನೆಯ ಹಿಂಭಾಗದ ಸ್ನಾನದ ಕೋಣೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಳಗಿನ ಜಾವ ಸುಮಾರು 5 ಗಂಟೆಗೆ ಮನೆಯವರು ಸ್ನಾನದ ಕೋಣೆಗೆ ಹೋಗಿದ್ದಾಗ ಚಿರತೆ ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿಯ ಗ್ರಾಮಸ್ಥರ ಸಹಾಯದಿಂದ ಆ ಚಿರತೆಯನ್ನು ಸ್ನಾನದ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಗುಬ್ಬಿ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ಅದಕ್ಕೆ

ಬಚ್ಚಲು ಕೋಣೆಯಲ್ಲಿ ಚಿರತೆ ಪ್ರತ್ಯಕ್ಷ ► ಅರಣ್ಯ ಸಿಬ್ಬಂದಿಗಳಿಂದ ಸೆರೆ Read More »

ಕರ್ನಾಟಕ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ►ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 28, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ಹತ್ತಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ ಸಂಭವಿಸಿದ್ದು, ಬೇಕರಿ, ಮೊಬೈಲ್ ಶಾಪ್ ಸೇರಿದಂತೆ ಐದು ಅಂಗಡಿಗಳಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು, ಈ ಕುರಿತು ನೆಲೋಗಿ ಪೊಲೀಸ್

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ►ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ Read More »

ಕರ್ನಾಟಕ

ಮೂರೇ ದಿನಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ…..!!!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ.28. ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನು ಉಂಟುಮಾಡಿದ್ದ ಬಹುನಿರೀಕ್ಷಿತ 4 ಜಿ ಸೌಲಭ್ಯದ ಉಚಿತ ಜಿಯೋಫೋನ್ ಬುಕ್ಕಿಂಗ್ ನ್ನು ಕೇವಲ ಮೂರೇ ದಿನಗಳಲ್ಲಿ ಕಂಪೆನಿಯು ದಿಢೀರ್ ಸ್ಥಗಿತಗೊಳಿಸಿದೆ. ನಿರೀಕ್ಷೆಗಿಂತ ಅಧಿಕ ಬುಕ್ಕಿಂಗ್ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಬುಕ್ಕಿಂಗ್ ಆದ ಫೋನ್‌ಗಳನ್ನು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕರಿಗೆ ವಿತರಿಸಲಿದೆ. ಈಗಾಗಲೇ ಲಕ್ಷಾಂತರ ಮಂದಿ ಜಿಯೋಫೋನ್ ಬುಕ್ಕಿಂಗ್ ಮಾಡಿದ್ದು, ಮುಂದಿನ ಬುಕ್ಕಿಂಗ್ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಾಗುವುದು

ಮೂರೇ ದಿನಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ…..!!! Read More »

ರಾಷ್ಟ್ರೀಯ ನ್ಯೂಸ್

ಗಣೇಶ ವಿಸರ್ಜನೆ ವೇಳೆ ಅವಘಢ ► ಇಬ್ಬರು ಬಲಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಂಡ್ಯ, ಆ.28, : ಗಣೇಶ ವಿಸರ್ಜನೆಯ ವೇಳೆ ಸಂಭವಿಸಿದ ಅವಘಡದಿಂದ ಇಬ್ಬರು ಬಲಿಯಾದ ಘಟನೆ ಬೆಂಗಳೂರು ಮತ್ತು ಮಂಡ್ಯದಲ್ಲಿ ಆದಿತ್ಯವಾರ ನಡೆದಿದೆ. ಅವಘಡಕ್ಕೆ ಬೆಂಗಳೂರಿನಲ್ಲಿ 15 ವರ್ಷದ ವೆಂಕಟೇಶ ಹಾಗೂ ಮಂಡ್ಯದಲ್ಲಿ 25 ವರ್ಷದ ವಿಜಯಕುಮಾರ್ ಬಲಿಯಾದ ದುರ್ದೈವಿಗಳು. ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಮೂರನೇ ದಿನ ಮೂರ್ತಿ ವಿಸರ್ಜನೆ ಮಾಡಲು ಹೊರಟ ಟೆಂಪೋವೊಂದು ಬಾಲಕ ವೆಂಕಟೇಶ್ ಮೇಲೆ ಹರಿದಿದೆ. ಪರಿಣಾಮ ಗಣೇಶ ವಿಸರ್ಜನೆ ನೋಡಲು ಬಂದಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದನು. ಗಣೇಶ ಹೊತ್ತ ಟೆಂಪೋ

ಗಣೇಶ ವಿಸರ್ಜನೆ ವೇಳೆ ಅವಘಢ ► ಇಬ್ಬರು ಬಲಿ Read More »

ಕರ್ನಾಟಕ

ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆ ► ಕೊೖಲದಲ್ಲಿ ಗೋಕುಲ ಗ್ರಾಮ ಅನುಷ್ಠಾನಕ್ಕೆ ಮುನ್ನುಡಿ

(ನ್ಯೂಸ್ ಕಡಬ) newskadaba.com ಕಡಬ, ಆ.25, ಪಾಳುಬಿದ್ದಿದ್ದ ಕೊೖಲ ಪಶು ಸಂಗೋಪನ ಕ್ಷೇತ್ರ ಕಳೆದ ನಾಲ್ಕೈದು ವರ್ಷದಳಿಂದ ಹಲವಾರು ಕಾರಣಗಳಿಗಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಹೆಸರು ಮಾಡುತ್ತಿದೆ. ಡಿ.ವಿ.ಸದಾನಂದ ಗೌಡರು ಇಲ್ಲಿಗೆ ಪಶುವೈದ್ಯಕೀಯ ಕಾಲೇಜು ಘೋಷಣೆ ಮಾಡಿ ಈಗ ಸಿದ್ದರಾಮಯ್ಯ ಕಾಲದಲ್ಲಿ ಅದು ಅನುಷ್ಠಾನವಾಗುತ್ತಿರುವುದು ಒಂದೆಡೆಯಾದರೆ ಇತ್ತ ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆಗಾಗಿ ಕ್ಷೇತ್ರದಲ್ಲಿ ಗೋಕುಲ ಗ್ರಾಮ ಅನುಷ್ಠಾನ ಮಾಡಲು ಮುನ್ನುಡಿ ಬರೆಯಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ

ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆ ► ಕೊೖಲದಲ್ಲಿ ಗೋಕುಲ ಗ್ರಾಮ ಅನುಷ್ಠಾನಕ್ಕೆ ಮುನ್ನುಡಿ Read More »

ಕರಾವಳಿ

ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೌಡಿಶೀಟರ್ ► ರಕ್ಷಣೆಗೆ ದಾವಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಧಾರವಾಡ, ಆ.25, ರೌಡಿಶೀಟರ್ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮಂಜುನಾಥ್ ಬಸಪ್ಪ ಕೌದಿ(25) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಕಳ್ಳತನ ಮಾಡಿರುವ ಆರೋಪದ ಮೇಲೆ ವಿಚಾರಣೆಗೆ ಆಗಮಿಸಿದಾಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಇನ್ಸ್ ಪೆಕ್ಟರ್ ಮಾರುತಿ ಗುಳ್ಳಾರಿ ಸೇರಿದಂತೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಆರೋಪಿ ಮಂಜುನಾಥ್ ಪೊಲೀಸರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಶುಕ್ರವಾರ ಠಾಣೆಗೆ ಬಂದು ಏಕಾಏಕಿ

ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೌಡಿಶೀಟರ್ ► ರಕ್ಷಣೆಗೆ ದಾವಿಸಿದ ಪೊಲೀಸರು Read More »

ಕರ್ನಾಟಕ

ರಸ್ತೆ ಬದಿಯ ಮೀನು ಮಾರಾಟ ಗೊಂದಲ ► ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಮೀನು ಮಾರಾಟಗಾರ

(ನ್ಯೂಸ್ ಕಡಬ) newskadaba.com ಕಡಬ, ಆ.25, ಆಲಂಕಾರಿನ ರಾಜ್ಯ ಹೆದ್ದಾರಿಬದಿಯಲ್ಲಿ ಹಸಿಮೀನು ಮಾರಾಟ ಗೊಂದಲ ಇನ್ನೂ ಜೀವಂತವಾಗಿದ್ದು ಗುರುವಾರ ರಸ್ತೆ ಬದಿಯಲ್ಲಿ ಹಸಿ ಮೀನು ಮಾರಾಟ ಮಾಡುವುದನ್ನು ತೆರವು ಮಾಡಲು ಬಂದ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಬರಿಗೈಯಲ್ಲಿ ವಾಪಾಸ್ಸಾದ ಘಟನೆ ನಡೆದಿದೆ. ಮೀನು ಮಾರಾಟಗಾರ ಹಾಗೂ ಕೆಲವರು ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಪರಿಣಾಮ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್ಸಾಗಿರುವುದರಿಂದ ಪ್ರಕರಣ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆಲಂಕಾರು ಪೇಟೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ

ರಸ್ತೆ ಬದಿಯ ಮೀನು ಮಾರಾಟ ಗೊಂದಲ ► ತೆರವಿಗೆ ಬಂದ ಅಧಿಕಾರಿಯ ವಿರುದ್ಧ ತಿರುಗಿ ಬಿದ್ದ ಮೀನು ಮಾರಾಟಗಾರ Read More »

ಕರಾವಳಿ

ಭೀಕರ ರಸ್ತೆ ಅಪಘಾತ  ► ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ರಾಮನಗರ, ಆ.25, ಓಮಿನಿ ಕಾರು ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಸಾಸಲಪುರದ ರಾಯರದೊಡ್ಡಿ ಬಳಿ ಶುಕ್ರವಾರ ನಡೆದಿದೆ.   ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರೆಲ್ಲರೂ ಮೈಸೂರಿನವರು ಎಂದು ಹೇಳಲಾಗಿದೆ. ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಭೀಕರ ರಸ್ತೆ ಅಪಘಾತ  ► ಮೂವರು ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಮುಂಡಗೋಡ, ಆ.25, ಗಣೇಶ ಚತುರ್ಥಿಯ ಮುನ್ನಾದಿನ ಹಬ್ಬದ ಸಂಭ್ರಮದಲ್ಲಿ ಇರಬೇಕಿದ್ದ ನವ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಬಾಚಣಕಿ ಜಲಾಶಯದಲ್ಲಿ ನಡೆದಿದೆ. ಯೋಗೀಶ್ ಮತ್ತು ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಹುಬ್ಬಳ್ಳಿಯ ಹೋಸೂರು ಮೂಲದವರಾದ ಇವರು ಕಾರಿನ ಮೂಲಕ ಮುಂಡಗೋಡದ ಬಾಚಣಿಕೆ ಜಲಾಶಯಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗಳ ಸಾವಿಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಡಿಕೊಳ್ಳುವ ಪೂರ್ವದಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ಸಿಕ್ಕಿದೆ. ಡೆತ್’ನೋಟ್ ನಲ್ಲಿ ತಮ್ಮಿಬ್ಬಿರ

ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣು Read More »

ಕರ್ನಾಟಕ
Scroll to Top