ಕಡಬ ನ್ಯೂಸ್

ತಲೆ ಮೇಲೆ ಕಲ್ಲು ಹಾಕಿ ► ಸ್ನೇಹಿತನ ಹತ್ಯೆ

(ನ್ಯೂಸ್ ಕಡಬ) newskadaba.com ಬಳ್ಳಾರಿ,ಸೆ.03, ಆಟೋ ಚಾಲಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ಬಳ್ಳಾರಿಯ ಸರ್ಕಾರಿ ಐಟಿಐ ಕಾಲೇಜು ಮೈದಾನದಲ್ಲಿ ನಡೆದಿದೆ. ಕೊಲೆಯಾದ ಯುವಕ ಬಳ್ಳಾರಿ ಕೌಲಬಜಾರ ನಿವಾಸಿ 25 ವರ್ಷದ ಶಿವು ನಾಯಕ ಎಂಬ ಮಾಹಿತಿ ಇದೆ. ಬಳ್ಳಾರಿಯ ಸರ್ಕಾರಿ ಐಟಿಐ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ಶಿವು ನಾಯಕ ತನ್ನ ಸ್ನೇಹಿತರೊಂದಿಗೆ ಇದ್ದರು ಎನ್ನಲಾಗಿದೆ. ಆದಿತ್ಯವಾರ ಮುಂಜಾನೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಯಾದ ಸ್ಥಿತಿಯಲ್ಲಿದ್ದ ಯುವಕನ ಶವವನ್ನು […]

ತಲೆ ಮೇಲೆ ಕಲ್ಲು ಹಾಕಿ ► ಸ್ನೇಹಿತನ ಹತ್ಯೆ Read More »

ಕರ್ನಾಟಕ

ನನ್ನ ಮತ್ತು ನನ್ನ ಕುಟುಂಬದವರನ್ನು ಬ್ಲೂ ವೇಲ್’ನವರು ಸಾಯಿಸ್ತಾರಂತೆ ಪ್ಲೀಸ್ ಕಾಪಾಡಿ! ► ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ 12ರ ಬಾಲಕ..!!!

(ನ್ಯೂಸ್ ಕಡಬ) newskadaba.com ಚೆನ್ನೈ,ಸೆ.03, ಇತ್ತೀಚೆಗೆ ಬೆಳಕಿಗೆ ಬಂದ ಕೆಲ ಬ್ಲೂವೇಲ್ ಗೇಮ್ ಪ್ರಕರಣಗಳ ಪೈಕಿ ಕೆಲ ಪೋಷಕರು ಹಾಗೂ ಶಾಲಾ ಶಿಕ್ಷಕರು ಬಹಿರಂಗಪಡಿಸಿದ್ದರು. ಬಹಳಷ್ಟು ವಿದ್ಯಾರ್ಥಿಗಳು ತಾವು ಆಟ ಆಡುತ್ತಿರುವ ವಿಷಯನ್ನು ಬಹಿರಂಗಪಡಿಸದೇ ಗೋಂದಲಕ್ಕೀಡಾದಿದ್ದಾರೆ. ಇದಕ್ಕೂ ಕಾರಣವೂ ಇದೆ ತಾವು ಆಡುತ್ತಿರುವ ಆಟವನ್ನು ಬಹಿರಂಗ ಪಡಿಸಿದರೆ ತಮ್ಮ ಇಡೀ ಕುಟುಂಬ ಸರ್ವನಾಶ ಆಗುತ್ತದೆ ಎನ್ನುವ ಭೀತಿಯಿಂದಾಗಿ ಇದನ್ನು ಮುಚ್ಚಿಡುತ್ತಿದ್ದಾರೆ. ರಾಜ್ಯದಲ್ಲಿ ಮಕ್ಕಳ ನೆರವಿಗೆಂದೇ ಇರುವ 104 ಸಂಖ್ಯೆಗೆ ಇತ್ತೀಚೆಗೆ ಕರೆ ಮಾಡಿದ್ದ ತಮಿಳುನಾಡಿನ ತಿರುಪೂರ್‌ನ 12 ವರ್ಷದ

ನನ್ನ ಮತ್ತು ನನ್ನ ಕುಟುಂಬದವರನ್ನು ಬ್ಲೂ ವೇಲ್’ನವರು ಸಾಯಿಸ್ತಾರಂತೆ ಪ್ಲೀಸ್ ಕಾಪಾಡಿ! ► ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ 12ರ ಬಾಲಕ..!!! Read More »

ಕರಾವಳಿ

ಖಾಸಗಿ ಬಸ್ ಹಾಗೂ ಕಾರ್ ಡಿಕ್ಕಿ ► ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಮೈಸೂರು,ಸೆ.03, ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಟಿ.ನರಸೀಪುರ ತಾಲೂಕಿನ ಕಪಿಲಾ ಸೇತುವೆ ಬಳಿ ಆದಿತ್ಯವಾರ ನಡೆದಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕಪಿಲಾ ಸೇತುವೆ ಮೇಲೆ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಚಾಮರಾಜನಗರ ಜಿಲ್ಲೆಯ ಚಂದಕವಾಡಿ ಗ್ರಾಮದ ಮಹದೇವಸ್ವಾಮಿ(38), ರತ್ನಮ್ಮ(43) ಹಾಗೂ ದಿಶಾ(8) ಎಂಬುವುದಾಗಿ ಗುರುತಿಸಲಾಗಿದೆ. ನರಸೀಪುರ ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ ಖಾಸಗಿ ಬಸ್, ಹಾಗೂ ಮೈಸೂರು ಕಡೆ

ಖಾಸಗಿ ಬಸ್ ಹಾಗೂ ಕಾರ್ ಡಿಕ್ಕಿ ► ಮೂವರು ಗಂಭೀರ Read More »

ಕರಾವಳಿ

ಆಪೆ ರಿಕ್ಷಾಗೆ KSRTC ಬಸ್ ಢಿಕ್ಕಿ ►ಇಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ರಾಮನಗರ,ಸೆ.03, ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಆಪೆ ರಿಕ್ಷಾ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಪೆ ರಿಕ್ಷಾದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ಜ್ಯೋತಿ ಪಾಳ್ಯದ ಆದಿತ್ಯವಾರ ನಡೆದಿದೆ. ಬೆಂಗಳೂರು-ಮಾಗಡಿ ಹೆದ್ದಾರಿಯಲ್ಲಿ ಬರುವ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜ್ಯೋತಿ ಪಾಳ್ಯದ ಬಳಿ ಈ ಘಟನೆ ನಡೆದಿದೆ. ಚಿತ್ರದುರ್ಗ ಮೂಲದ ರಘು, ಪರಮೇಶ್ವರ್ ಮೃತ ದುರ್ದೈವಿಗಳು. ಮೃತರಿಬ್ಬರು ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಾಗಿದ್ದರು. ಮಾಗಡಿಯಿಂದ ತರಕಾರಿ ಖರೀದಿಸಿ ಅದನ್ನು ಬೆಂಗಳೂರಿನಲ್ಲಿ ಮಾರಾಟ

ಆಪೆ ರಿಕ್ಷಾಗೆ KSRTC ಬಸ್ ಢಿಕ್ಕಿ ►ಇಬ್ಬರ ದುರ್ಮರಣ Read More »

ಕರ್ನಾಟಕ

ಉಳ್ಳಾಲ: ವ್ಯಕ್ತಿಯ ಕೊಲೆ‌ ಮಾಡಲೆಂದು ಮನೆಗೆ ನುಗ್ಗಿದ ದುಷ್ಕರ್ಮಿಗಳು ► ಮನೆಯವರಿಗೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ..!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.03, ಪವಿತ್ರ ಉಳ್ಳಾಲ ದರ್ಗಾ ಸಮೀಪವಿರುವ ಮನೆಮನೆಯೊಂದಕ್ಕೆ ನುಗ್ಗಿದ 15 ಜನ ದುಷ್ಕರ್ಮಿಗಳ ತಂಡ ವೊಂದು ಮನೆಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಜರುಗಿದ್ದು, 15 ಜನರ ಗುಂಪೊಂದು ಲಾಂಗು ಮಚ್ಚು ಹಿಡಿದು ಮನೆ ಮಾಲೀಕ ಖಾಸಿಮ್, ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಖಾಸಿಮ್‌

ಉಳ್ಳಾಲ: ವ್ಯಕ್ತಿಯ ಕೊಲೆ‌ ಮಾಡಲೆಂದು ಮನೆಗೆ ನುಗ್ಗಿದ ದುಷ್ಕರ್ಮಿಗಳು ► ಮನೆಯವರಿಗೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ..!!! Read More »

ಕರಾವಳಿ

ಶಾಕಿಂಗ್ ನ್ಯೂಸ್ ► ಕರ್ನಾಟಕದ 20 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.03, ವಿದ್ಯಾರ್ಥಿಗಳ ಕಳಪೆ ಫಲಿತಾಂಶದ ಸಾಧನೆ ಮತ್ತು ಪ್ರವೇಶಾತಿ ಕಡಿಮೆ ಆಗುತ್ತಿರುವ ಕರ್ನಾಟಕದ 20 ಕಾಲೇಜುಗಳು ಸೇರಿದಂತೆ ದೇಶದಲ್ಲಿ ಸುಮಾರು 800 ಎಂಜಿನಿಯರಿಂಗ್ ಕಾಲೇಜುಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಒಳಗಡೆ ಬೀಗ ಬೀಳಲಿದೆ. ಕಳಪೆ ಗುಣಮಟ್ಟದ ಫಲಿತಾಂಶ ತೋರಿಸುತ್ತಿರುವ ದೇಶದ 800 ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಮುಖ್ಯಸ್ಥ ಅನಿಲ್ ದತ್ತಾತ್ರೇಯ ಸಹಸ್ರಬುದೆ ತಿಳಿಸಿದ್ದಾರೆ. ಮೂಲಸೌಕರ್ಯದ ಕೊರತೆ ಇರುವ ಹಾಗೂ ಸತತ 5 ವರ್ಷಗಳ ಕಾಲ ಶೇ.30ಕ್ಕಿಂತ ಕಡಿಮೆ ವಿದ್ಯಾರ್ಥಿಗಳು

ಶಾಕಿಂಗ್ ನ್ಯೂಸ್ ► ಕರ್ನಾಟಕದ 20 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ..!!! Read More »

ಕರಾವಳಿ

ಸೆಪ್ಟೆಂಬರ್ 9 ರಂದು ► ರಾಮಕುಂಜದಲ್ಲಿ ಬೃಹತ್ ವಿಜ್ಞಾನ ಮೇಳ

(ನ್ಯೂಸ್ ಕಡಬ) newskadaba.com ಕಡಬ,ಸೆ.03, ಬೆಂಗಳೂರಿನ ಸಿಸ್ಕೋ ಸಂಭ್ರಮ ಪ್ರಾಯೋಜಕತ್ವದಲ್ಲಿ ಅಗಸ್ತ್ಯ ಪೌಂಡೇಷನ್ನವರು ನಡೆಸಿಕೊಡುವ ವಿಜ್ಞಾನ ಮಾದರಿಯ ಪ್ರದರ್ಶನ ಹಾಗೂ ಸ್ಪರ್ಧೆ ನಡೆಸುವ ಬೃಹತ್ ವಿಜ್ಞಾನ ಮೇಳ ಕಾರ್ಯಕ್ರಮ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಸೆಪ್ಟೆಂಬರ್ 9 ರಂದು ಶನಿವಾರ ನಡೆಯಲಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ|ಸಂಕೀರ್ತ್ ಹೆಬ್ಬಾರ್ ತಿಳಿಸಿದರು. ಅವರು ಶನಿವಾರ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳ ವಿಜ್ಞಾನ ವಿಚಾರದ ಅಭಿರುಚಿ ಹಾಗೂ ಅವಿಷ್ಕಾರಗಳ ಪ್ರದರ್ಶನ, ಸ್ಪರ್ಧೆಗಳು ಕೇವಲ ಪೇಟೆಪಟ್ಟಣಗಳಿಗೆ ಮಾತ್ರ ಸೀಮಿತಿವಾಗಬಾರದು ಅದು ಗ್ರಾಮೀಣ ಪ್ರದೇಶದ

ಸೆಪ್ಟೆಂಬರ್ 9 ರಂದು ► ರಾಮಕುಂಜದಲ್ಲಿ ಬೃಹತ್ ವಿಜ್ಞಾನ ಮೇಳ Read More »

ಕರಾವಳಿ

ಪ್ರತಿಭಾಕಾರಂಜಿ ಸ್ಪರ್ಧೆ ► ಸಾಂತೋಮ್ ವಿಧ್ಯಾನಿಕೇತನ ವಿಧ್ಯಾರ್ಥಿಗಳ ಸಾಧನೆ

(ನ್ಯೂಸ್ ಕಡಬ) newskadaba.com ಕಡಬ,ಸೆ.02, ದ.ಕ.ಜಿ.ಪ.ಹಿ.ಪ್ರಾ.ಶಾಲೆ ನೂಜಿ ಬಾಳ್ತಿಲದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯ ವಿವಿಧ ಸ್ಪರ್ಧೆಯಲ್ಲಿ ರೆಂಜಿಲಾಡಿಯ ಸಾಂತೋಮ್ ವಿಧ್ಯಾನಿಕೇತನ ವಿಧ್ಯಾರ್ಥಿಗಳು ಜಯ ಗಳಿಸಿರುತ್ತಾರೆ. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳು 10 ಪ್ರಥಮ, 6 ದ್ವಿತೀಯ , 11 ತೃತೀಯ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ಪ್ರತಿಭಾಕಾರಂಜಿ ಸ್ಪರ್ಧೆ ► ಸಾಂತೋಮ್ ವಿಧ್ಯಾನಿಕೇತನ ವಿಧ್ಯಾರ್ಥಿಗಳ ಸಾಧನೆ Read More »

ಕರಾವಳಿ

ಕೊಣಾಜೆಯಲ್ಲಿ ಆನೆಗಳ ದಾಳಿ ► ಭತ್ತದ ಕೃಷಿ ನಾಶ

(ನ್ಯೂಸ್ ಕಡಬ) newskadaba.com ಕಡಬ,ಸೆ.02, ಕಳೆದ ನಾಲ್ಕು ದಿನಗಳಿಂದ ಕೊಣಾಜೆ ಗ್ರಾಮದ ನೆಕಾೖಜೆ ವ್ಯಾಪ್ತಿಯಲ್ಲಿ ನಿರಂತರ ಆನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಭತ್ತದ ಕೃಷಿ ನಾಶವಾಗಿದ ಬಗ್ಗೆ ವರದಿಯಾಗಿದೆ. ಕೊಣಾಜೆ ಗ್ರಾಮದ ನೆಕಾೖಜೆ ನಿವಾಸಿ, ಐತ್ತೂರು ಗ್ರಾ.ಪಂ.ಮಾಜಿ ಸದಸ್ಯ ಲೋಕಯ್ಯ ಗೌಡರ ಗದ್ದೆಗೆ ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳು ದಾಳಿ ನಡೆಸುತ್ತಿದ್ದು ಅಪಾರ ಪ್ರಮಾಣದ ಭತ್ತದ ಕೃಷಿ ನಾಶಗೊಳಿಸಿವೆ ಎಂದು ವರದಿಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಲೋಕಯ್ಯ ಗೌಡರು, ಕಳೆದ ನಾಲ್ಕು ದಿನಗಳಿಂದ ರಾತ್ರಿ

ಕೊಣಾಜೆಯಲ್ಲಿ ಆನೆಗಳ ದಾಳಿ ► ಭತ್ತದ ಕೃಷಿ ನಾಶ Read More »

ಕರಾವಳಿ

ಕಚ್ಚಿದ ಹೆಬ್ಬಾವು ಜೊತೆ ಉಡುಪಿಯ ಆಸ್ಪತ್ರೆಗೆ ಬಂದು ದಾಖಲಾದ ► ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್!

(ನ್ಯೂಸ್ ಕಡಬ) newskadaba.com ಉಡುಪಿ,ಸೆ.02, ಹೆಬ್ಬಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯೋರ್ವರು ಹೆಬ್ಬಾವಿನ ಜೊತೆಗೇ ಆಸ್ಪತ್ರೆಗೆ ಬಂದ ಘಟನೆ ಕುಂದಾಪುರ ತಾಲೂಕಿನಲ್ಲಿ ತಲ್ಲೂರಿನ ಕೋಟೆಬಾಗಿಲು ಎಂಬಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಹಿಡಿಯಲು ಯತ್ನಿಸಿದ್ದರು. ಈ ಸಂದರ್ಭ ಹೆಬ್ಬಾವು ಅವರ ಬಲಗೈಗೆ ಕಚ್ಚಿದ್ದು, ಅದೇ ಹಾವಿನ ಸಮೇತ ಜೋಸೆಫ್ ಆಸ್ಪತ್ರೆಗೆ ತೆರಳಿ ವೈದ್ಯರ ಮುಂದೆ ಬಂದಿದ್ದಾರೆ. ಪಾರ್ತಿಕಟ್ಟೆಯ ನಿವಾಸಿಯೋರ್ವರ ಮನೆಯ ಹಿತ್ತಲ

ಕಚ್ಚಿದ ಹೆಬ್ಬಾವು ಜೊತೆ ಉಡುಪಿಯ ಆಸ್ಪತ್ರೆಗೆ ಬಂದು ದಾಖಲಾದ ► ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್! Read More »

ಕರಾವಳಿ
Scroll to Top