ಕಡಬ ನ್ಯೂಸ್

ರೆಂಜಿಲಾಡಿ➤ವಿಶೇಷ ದಾಖಲಾತಿ ಆಂದೋಲನ

(ನ್ಯೂಸ್ ಕಡಬ) newskadaba.com ರೆಂಜಿಲಾಡಿ, ಜೂನ್.7. ರೆಂಜಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2019-20ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ ನಡೆಯಿತು. ಶಾಲ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸಹಕಾರದೊಂದಿಗೆ ಗೋಳಿಯಡ್ಕ ಮೋಹಿತಾ, ಪದ್ಮಪ್ರಿಯ ಇವರ ಮನೆಗೆ ಬೇಟಿ ನೀಡಿ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಿಶೇಷ ದಾಖಲಾತಿ ಆಂದೋಲನದಲ್ಲಿ ಒಟ್ಟು 11 ವಿದ್ಯಾರ್ಥಿಗಳನ್ನು ಪ್ರಸಕ್ತ ವರ್ಷ ಶಾಲೆ ದಾಖಲಿಸಿಕೊಳ್ಳಲಾಯಿತು.ಮನೆ ಮನೆಗೆ ಬೇಟಿ ನೀಡಿ ವಿಶೇಷ ದಾಖಲಾತಿ ನಡೆಯಿತು.

ರೆಂಜಿಲಾಡಿ➤ವಿಶೇಷ ದಾಖಲಾತಿ ಆಂದೋಲನ Read More »

ಕರಾವಳಿ

ನೇರ್ಲ ಶಾಲಾ ಮಂತ್ರಿ ಮಂಡಲ ರಚನೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.7.ಇಚ್ಲಂಪಾಡಿ ನೇರ್ಲ ಉನ್ನತ ಹಿರಿಯ ಪ್ರಾಥಮಿಕ ಶಾಲಾ 2019-20ನೇ ಸಾಲಿನ ಮಂತ್ರಿಮಂಡಲವನ್ನು ಚುನಾವಣೆ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ 8ನೇ ತರಗತಿಯ ಅನನ್ಯ, ಉಪಮುಖ್ಯಮಂತ್ರಿಯಾಗಿ ಸಹನಾ ಆಯ್ಕೆಯಾಗಿದ್ದಾರೆ.ಶಾಲಾ ಸಂಸತ್ತಿನ ಮಾರ್ಗದರ್ಶಕರಾಗಿ ಮುಖ್ಯ ಶಿಕ್ಷಕಿ ಶಾಂತಿ ವಿ. ಭಟ್, ಸಂಚಾಲಕರಾಗಿ ಸಂದೀಪ್ ಕುಮಾರ್ ಎಂ., ಉಸ್ತುವಾರಿ ಶಿಕ್ಷಕರಾಗಿ ಗಿರೀಶ್ ಎಚ್.ಎಂ., ಹಾಗೂ ಶಿಕ್ಷಕ ವೃಂಧ, ವಿದ್ಯಾರ್ಥಿಗಳು ಸಹಕರಿಸಿದರು.

ನೇರ್ಲ ಶಾಲಾ ಮಂತ್ರಿ ಮಂಡಲ ರಚನೆ Read More »

ಕರಾವಳಿ

ಪೇರಡ್ಕ➤ರಸ್ತೆ ದುರಸ್ಥಿ ಕಾರ್ಯ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ಪರದಾಡುವಂತಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕಾಯರಡ್ಕ-ಪೇರಡ್ಕ ರಸ್ತೆಯ ದುರಸ್ಥಿ ಕಾರ್ಯ ಪ್ರಾರಂಭಗೊಂಡಿದೆ. ಈ ರಸ್ತೆ ದುರಾವಸ್ಥೆ ಬಗ್ಗೆ ಇತ್ತೀಚೆಗೆ ಮಾದ್ಯಮಗಳಲ್ಲೂ ಸಚಿತ್ರ ವರದಿ ಪ್ರಕಟಗೊಂಡಿತ್ತು. ನೂಜಿಬಾಳ್ತಿಲ ಗ್ರಾಮವನ್ನು ತಾಲೂಕು ಕೇಂದ್ರ ಕಡಬದಿಂದ ಸಂಪರ್ಕಿಸುವ ಕಾಯರಡ್ಕದಿಂದ ಪೇರಡ್ಕ ವರೆಗಿನ 2 ಕಿ.ಮೀ. ರಸ್ತೆ ತೀರಾ ಹೊಂಡ ಗುಂಡಿಗಳಿಂದ ಕೂಡಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು, ಈ ಬಗ್ಗೆ ಪ್ರಯಾಣಿಕರು ತೀರಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಲ್ಲದೇ ಕಳೆದ ಹಲವು ವರ್ಷಗಳಿಂದ

ಪೇರಡ್ಕ➤ರಸ್ತೆ ದುರಸ್ಥಿ ಕಾರ್ಯ ಪ್ರಾರಂಭ Read More »

ಕರಾವಳಿ

ನೇರ್ಲ ಶಾಲೆ➤ವಿಶ್ವ ಪರಿಸರ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.7. ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ’ ಇಚ್ಲಂಪಾಡಿ ನೇರ್ಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯೆ ಕೆ.ಟಿ.ವಲ್ಸಮ್ಮ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಶಾಂತಿ ವಿ.ಭಟ್ ಮಾತನಾಡಿ, ಬದಲಾದ ಇಂದಿನ ಜಗತ್ತಿಗೆ ಗಿಡ ನೆಡುವ ಅಗತ್ಯದ ಜೊತೆ ಪರಿಸರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕಾಗಿದೆ ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ

ನೇರ್ಲ ಶಾಲೆ➤ವಿಶ್ವ ಪರಿಸರ ದಿನಾಚರಣೆ Read More »

ಕರಾವಳಿ

ಭಯ ಅಥವಾ ಚಿಂತನೆಯೇ ಒಂದು ಮಾನಸಿಕ ರೋಗ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ಪ್ರತಿ ಒಬ್ಬ ಮನುಷ್ಯನು ಪರಿಪೂರ್ಣನಲ್ಲ, ಪ್ರತಿಯೊಬ್ಬರಲ್ಲೂ ಒಂದಾದರೂ ನ್ಯೂನ್ಯತೆ ಕಂಡುಬರುತ್ತದೆ ಅದನ್ನು ಅರಿತು ಬದುಕುವುದೇ ಜೀವನ ಎಂದು ಮಿಲಾಗ್ರಿಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾ ಮೈಖಲ್ ಸಾಂತುಮೇಯರ್ ಹೇಳಿದರು. ಇಂದು ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ವಿಶ್ವ ಚಿತ್ತವಿಕಲತೆ ದಿನ-2019 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಮಾನವನ ಮನಸ್ಸಿನ ಒತ್ತಡದಿಂದ ಉಂಟಾಗುವ ಭಯ ಅಥವಾ ಚಿಂತನೆಯೇ ಮಾನಸಿಕ ರೋಗ! ಭಯ ಹಾಗು ಚಿಂತನೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ

ಭಯ ಅಥವಾ ಚಿಂತನೆಯೇ ಒಂದು ಮಾನಸಿಕ ರೋಗ Read More »

ಕರಾವಳಿ

ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ತಂಬಾಕು ನಿಗ್ರಹ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಂಗ ಸಂಸ್ಥೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ “ವಿಶ್ವ ತಂಬಾಕು ಮುಕ್ತ ದಿನ” ಆಚರಿಸಲಾಯಿತು. ಈ ವಿಶೇಷ ದಿನದ ಸಂದರ್ಭದಲ್ಲಿ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದಿಂದ ನಿರ್ದೇಶಿಸಲ್ಪಟ್ಟ ಪ್ರತಿಜ್ಞೆಯನ್ನು ಮೀನುಗಾರಿಕಾ ಕಾಲೇಜಿನ ಡೀನ್ ರವರಾದ ಡಾ ಸೆಂಥಿಲ್ ವೆಲ್ ಎ. ರವರು ಕೇಂದ್ರದ ಮತ್ತು ಮೀನುಗಾರಿಕಾ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಾಚಿಸಿದರು.“ವಿಶ್ವ ತಂಬಾಕು ನಿಗ್ರಹ ದಿನವಾದಂತಹ

ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ತಂಬಾಕು ನಿಗ್ರಹ ದಿನಾಚರಣೆ Read More »

ಕರಾವಳಿ

ಖಾಸಗಿ ಗೋಶಾಲೆಗಳಿಂದ ಅರ್ಜಿ ಆಹ್ವಾನ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.2019-20ನೇ ಸಾಲಿನ ಮೈಸೂರಿನ ಪಿಂಜರಾಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮದಡಿ ಗೋಶಾಲೆಗಳಲ್ಲಿನ ಜಾನುವಾರುಗಳ ದೈನಂದಿನ ನಿರ್ವಹಣೆಗೆ ಅವಶ್ಯವಿರುವ ಸಹಾಯಧನ ಕೋರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಗೋಶಾಲೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಗೋಶಾಲೆಯವರು ಅರ್ಜಿ ಹಾಗೂ ಇನ್ನಿತರೆ ಮಾಹಿತಿಯನ್ನು ಕಚೇರಿಯ ವೇಳೆಯಲ್ಲಿ ಪಡೆದುಕೊಳ್ಳಬೇಕು. ಹಾಗೂ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಜೂನ್ 25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 0824-2492337 ಸಂಪರ್ಕಿಸಬಹುದು ಎಂದು

ಖಾಸಗಿ ಗೋಶಾಲೆಗಳಿಂದ ಅರ್ಜಿ ಆಹ್ವಾನ. Read More »

ಕರಾವಳಿ

ಡಿಪ್ಲೋಮಾ ಪದವಿಗೆ ಪ್ರವೇಶ ಪಡೆಯಲುಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ➤ವಿಶೇಷ ಮೀಸಲಾತಿ ಕೋಟಾದಲ್ಲಿ ಅಭ್ಯರ್ಥಿಗಳ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.2019-20ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಸ್ಪೋಟ್ರ್ಸ್/ಗೇಮ್ಸ್ ವಿಶೇಷ ಮೀಸಲಾತಿ ಕೋಟಾದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಉದ್ದೇಶದಿಂದ ಜೂನ್ 3 ರಂದು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಎಸ್.ಜೆ.ಪಿ ಕ್ಯಾಂಪಸ್ ಶೇಷಾದ್ರಿ ರಸ್ತೆ, ಬೆಂಗಳೂರು ಇಲ್ಲಿ ನಿಗದಿಪಡಿಸಲಾದ ದಿನಾಂಕವನ್ನುಮುಂದೂಡಲಾಗಿದೆ. ಆದ್ದರಿಂದ ಜೂನ್ 7 ರಂದು ನಿಗದಿಪಡಿಸಲಾಗಿದ್ದು ಬೆಳಿಗ್ಗೆ 9 ಗಂಟೆಗೆ ಟೆಕಿಪ್ ಸಭಾಂಗಣ, 01 ನೇ ಮಹಡಿ, ತಾಂತ್ರಿಕ ನಿರ್ದೇಶನಾಲಯ, ಬೆಂಗಳೂರು ಇಲ್ಲಿ ನಡೆಸಲಾಗುವುದು. ಸೀಟು ಆಯ್ಕೆಗಾಗಿ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ

ಡಿಪ್ಲೋಮಾ ಪದವಿಗೆ ಪ್ರವೇಶ ಪಡೆಯಲುಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ➤ವಿಶೇಷ ಮೀಸಲಾತಿ ಕೋಟಾದಲ್ಲಿ ಅಭ್ಯರ್ಥಿಗಳ ಆಯ್ಕೆ Read More »

ಕರಾವಳಿ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆಗಸ್ಟ್ 2019 ನೇ ಶೈಕ್ಷಣಿಕ ಸಾಲಿನ ಪ್ರವೇಶ ಅರ್ಜಿಗಳನ್ನು ಆನ್‍ಲೈನ್ ಮುಖಾಂತರ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಕಾವಳಕಟ್ಟೆ ಕೈಗಾರಿಕಾ ತರಬೇತಿ ಸಂಸ್ಥೆಗೆ ಪ್ರವೇಶ ಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ:25/05/2019 ರಿಂದ 15/06/2019 ರವರೆಗೆ ಸಂಸ್ಥೆಯಲ್ಲಿ ಲಭ್ಯವಿರುವ ಇಲೆಕ್ಟ್ರೀಷಿಯನ್ ಮತ್ತು ಫಿಟ್ಟರ್ ಕೋರ್ಸು/ವೃತ್ತಿಗಳಿಗೆ ಇಲಾಖೆಯ ವೆಬ್‍ಸೈಟ್ www.emptrg.kar.nic.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನ Read More »

ಕರಾವಳಿ

ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ಜೂನ್ 11 ರಿಂದ ಜೂನ್ 20 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 7 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಅವರು ಘೊಷಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿರುತ್ತಾರೆ. ಈ ನಿಷೇಧಿತ ಅವಧಿಯಲ್ಲಿ ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು, ಚೀಟಿ

ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿ Read More »

ಕರಾವಳಿ
Scroll to Top