ಕಡಬ ನ್ಯೂಸ್

ಸಿದ್ದರಾಮಯ್ಯ ಸಿ ಎಲ್ ಪಿ ನಾಯಕ, ಗೌರವ ಕೊಡಲೇ ಬೇಕು ➤ ಸಚಿವ ಡಿಕೆಶಿವಕುಮಾರ್ ಹೇಳಿಕೆ

ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರು ರೋಷನ್‌ ಬೇಗ್‌ ಅವರ ಅಮಾನತು ವಿಚಾರದ ಕುರಿತು ಪ್ರಶ್ನಿಸಿದಾಗ, ಸಚಿವ ಡಿ.ಕೆ.ಶಿವಕುಮಾರ್‌ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಅವರಿಗೆ ಗೌರವ ಕೊಡಲೇಬೇಕು ಎಂದು ಹೇಳಿದ್ದಾರೆ.ಅವರು ಶಾಸಕ ರೋಷನ್‌ ಬೇಗ್‌ ಅವರ ಅಮಾನತು ವಿಚಾರಕ್ಕೆ ಸಂಬಂಧಿಸಿ  ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗ್ಗೆ ಯಾರೋ ಎಐಸಿಸಿಯಲ್ಲಿ ಮಾಹಿತಿ ನೀಡಿದರು. ಈ ಬಗ್ಗೆ ಕೇಳಿ ಹೇಳುತ್ತೇನೆ ಎಂದರು.ನಾವೆಲ್ಲ ಗಾಂಧಿ ಕಟುಂಬಕ್ಕೆ, ಪಕ್ಷಕ್ಕೆ ನಿಷ್ಠೆ ಉಳ್ಳವರು. ಯಾವತ್ತೂ ವ್ಯಕ್ತಿ ಪೂಜೆ ಮಾಡಬಾರದು, ಪಕ್ಷದ ಪೂಜೆ […]

ಸಿದ್ದರಾಮಯ್ಯ ಸಿ ಎಲ್ ಪಿ ನಾಯಕ, ಗೌರವ ಕೊಡಲೇ ಬೇಕು ➤ ಸಚಿವ ಡಿಕೆಶಿವಕುಮಾರ್ ಹೇಳಿಕೆ Read More »

ಕರಾವಳಿ

ಮೊಬೈಲ್ ಸೇವೆಯಲ್ಲಿ ವ್ಯತ್ಯಯ ➤ಬೇಸತ್ತ ಹರಿಹರ ಪಳ್ಳತ್ತಡ್ಕ ಗ್ರಾಮಸ್ಥರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂನ್.19.ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಮೊಬೈಲ್‌ ಟವರ್‌ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಕಳೆದ 8 ತಿಂಗಳಿಂದ ಸರಿಯಾಗಿ ಕಾರ್ಯಾಚರಿಸುತ್ತಿರಲಿಲ್ಲ. ಇದರಿಂದ ಬೇಸತ್ತ ಹರಿಹರ ಪಳ್ಳತ್ತಡ್ಕ ಗ್ರಾಮಸ್ಥರು ಮಂಗಳವಾರ ಮೊಬೈಲ್‌ ಟವರಿಗೆ ತರಕಾರಿ ಗಿಡಗಳನ್ನು ಹಬ್ಬಿಸುವ ಮೂಲಕ ವಿನೂತನ ಶೈಲಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಟವರ್‌ನ ಸಿಗ್ನಲ್‌ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸರಿಯಾಗಿರಲಿಲ್ಲ. ಇದಕ್ಕೆ ಬೇಸತ್ತ ಗ್ರಾಮಸ್ಥರು ಉಪಯೋಗಕ್ಕೆ ಬಾರದ ಮೊಬೈಲ್‌ ಟವರಿಗೆ ತರಕಾರಿ ಗಿಡಗಳನ್ನು

ಮೊಬೈಲ್ ಸೇವೆಯಲ್ಲಿ ವ್ಯತ್ಯಯ ➤ಬೇಸತ್ತ ಹರಿಹರ ಪಳ್ಳತ್ತಡ್ಕ ಗ್ರಾಮಸ್ಥರಿಂದ ಪ್ರತಿಭಟನೆ Read More »

ಕರಾವಳಿ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ➤ಡಾ.ಕಲಾಂ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜೂನ್.19ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಡಾ.ಕಲಾಂ ವಿಜ್ಞಾನ ಪ್ರಯೋಗಾಲಯ’ದ ಉದ್ಘಾಟನಾ ಸಮಾರಂಭ ದಿನಾಂಕ 22.06.2019ರಂದು ನಡೆಯಲಿದೆ. ಡಾ ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು(ರಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ ಅಂಗಾರ ಮಾನ್ಯಶಾಸಕರು ಸುಳ್ಯವಿಧಾನಸಭಾ ಕ್ಷೇತ್ರ ಪ್ರಯೋಗಾಲಯ ಉದ್ಘಾಟಿಸಲಿದ್ದಾರೆ. ಶ್ರೀ ರಘುನಂದನ್ ಸಿಸ್ಕೋ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ, ಉದ್ಯಮಿಗಳಾದ ಶ್ರೀ ಮಾಧವ ಗೌಡ ಕತ್ಲಡ್ಕ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಕೃಷ್ಣ ಶೆಟ್ಟಿ ಕಡಬ,

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ➤ಡಾ.ಕಲಾಂ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭ Read More »

ಕರಾವಳಿ

ಚರಂಡಿ, ದಾರಿದೀಪ ಅಳವಡಿಕೆ ಕಾಮಗಾರಿ ಶೀಘ್ರ ನಡೆಸಲು ಮನವಿ ➤ಸಮಸ್ಯೆ ಪರಿಹಾರವಾಗದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂನ್.19ಮಳೆಗಾಲ ಆರಂಭವಾದರೂ 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇನ್ನೊಂದೆಡೆ ದಾರಿ ದೀಪಗಳು ಉರಿಯುತ್ತಿಲ್ಲ. ಆದ್ದರಿಂದ 10 ದಿನದೊಳಗೆ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ದಾರಿ ದೀಪ ಅಳವಡಿಕೆ ಕಾಮಗಾರಿ ಆರಂಭಿಸದಿದ್ದಲ್ಲಿ ಜೂ.27ರಂದು ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಮ್ಮೂರು- ನೆಕ್ಕಿಲಾಡಿ ಸಂಘಟನೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಜೂ. 17ರಂದು 34ನೇ ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರಿಗೆ ಮನವಿ ನೀಡಿದ ನಮ್ಮೂರು- ನೆಕ್ಕಿಲಾಡಿ

ಚರಂಡಿ, ದಾರಿದೀಪ ಅಳವಡಿಕೆ ಕಾಮಗಾರಿ ಶೀಘ್ರ ನಡೆಸಲು ಮನವಿ ➤ಸಮಸ್ಯೆ ಪರಿಹಾರವಾಗದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ Read More »

ಕರಾವಳಿ

ನೂಜಿಬಾಳ್ತಿಲ: ಉಚಿತ ಬ್ಯಾಗ್, ನೋಟ್‍ಬುಕ್ ವಿತರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.19.ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ 1ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕವನ್ನು ಶನಿವಾರ ವಿತರಿಸಲಾಯಿತು. 1ನೇ ತರಗತಿಯಲ್ಲಿ ದಾಖಲಾದ 16ಮಂದಿ ವಿದ್ಯಾರ್ಥಿಗಳಿಗೆ ಕಲ್ಲುಗುಡ್ಡೆ ಜೆಜೆ ಪ್ಲಾಜಾ ಮಾಲಕರಾದ ಜೋಸ್ ಸಾಮ್ಯುವೆಲ್ ಕೊಡುಗೆಯಾಗಿ ನೀಡಿದ ಬ್ಯಾಗ್ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರವರು ಕೊಡುಗೆ ನೀಡಿದ ನೋಟ್ ಪುಸ್ತಕವನ್ನು ಅತಿಥಿಗಳು ವಿದ್ಯಾರ್ಥಿಗಳಿಗೆ ವಿತರಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಜೋಸ್ ಸಾಮ್ಯುವೆಲ್, ಶಾಲಾಭಿವೃದ್ಧಿ ಸಮಿತಿ

ನೂಜಿಬಾಳ್ತಿಲ: ಉಚಿತ ಬ್ಯಾಗ್, ನೋಟ್‍ಬುಕ್ ವಿತರಣೆ Read More »

ಕರಾವಳಿ

ಕೃಷಿ ವಿಜ್ಞಾನ ಕೇಂದ್ರ ಮತ್ತು ಕಿಟೆಲ್ ಮೆಮೋರಿಯಲ್ ಶಾಲೆಗಳಿಂದ ಪ್ರತಿಜ್ಞೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19.ಮತ್ಸ್ಯನಗರದ ಕೃಷಿ ವಿಜ್ಞಾನ ಕೇಂದ್ರವು ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ರೈತರಿಗೆ ಮತ್ತು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸುಧಾರಿತ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಕೃಷಿಗೆ ಪೂರಕ ತಾಂತ್ರಿಕತೆಗಳ ಕುರಿತು ಅರಿವು ಮೂಡಿಸುವ ವಿಸ್ತರಣಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.ಕೃಷಿ ವಿಜ್ಞಾನ ಕೇಂದ್ರವು, ಇತ್ತೀಚೆಗೆ ಗೋರಿಗುಡ್ಡದ ಕಿಟೆಲ್ ಮೆಮೋರಿಯಲ್‍ನ ಅಂಗಸಂಸ್ಥೆಗಳ ಶಾಲಾ-ಕಾಲೇಜಿನಲ್ಲಿ ‘ವಿಶ್ವ ತಂಬಾಕು ನಿಗ್ರಹ ದಿನ’ವನ್ನು ಆಚರಿಸಿತು. ಈ ವಿಶೇಷ ದಿನದ ಸಂದರ್ಭದಲ್ಲಿ ತಂಬಾಕು

ಕೃಷಿ ವಿಜ್ಞಾನ ಕೇಂದ್ರ ಮತ್ತು ಕಿಟೆಲ್ ಮೆಮೋರಿಯಲ್ ಶಾಲೆಗಳಿಂದ ಪ್ರತಿಜ್ಞೆ Read More »

ಕರಾವಳಿ

ದ.ಕ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ➤ಸಮಗ್ರ ಕೃಷಿ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಸಮಗ್ರ ಕೃಷಿ ಅಭಿಯಾನ ಸುಳ್ಯ ಹೋಬಳಿಯಲ್ಲಿ ಜೂನ್ 24 ರಿಂದ ಜೂನ್ 26 ರವರೆಗೆ ಹಾಗೂ ಪಂಜ ಹೋಬಳಿಯಲ್ಲಿ ಜೂನ್ 27 ರಿಂದ ಜೂನ್ 29 ರವರೆಗೆ ನಡೆಯಲಿದೆ. ಸುಳ್ಯ ಹೋಬಳಿಯ ಕೃಷಿ ಅಭಿಯಾನವನ್ನು ಜೂನ್ 24 ರಂದು ಪೂರ್ವಾಹ್ನ 10 ಗಂಟೆಗೆ ಸುಳ್ಯದ ಎಪಿಎಮ್‍ಸಿ ಪ್ರಾಂಗಣದಲ್ಲಿ ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕ

ದ.ಕ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ➤ಸಮಗ್ರ ಕೃಷಿ ಅಭಿಯಾನ Read More »

ಕರಾವಳಿ

ಮಂಗಳೂರು ಕೃಷಿ ಇಲಾಖೆಯಿಂದ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ಉಪ ಕೃಷಿ ನಿರ್ದೇಶಕರು-1, ಮಂಗಳೂರು ಕಚೇರಿಯ ಬಳಕೆಗಾಗಿ ಹೊರಗುತ್ತಿಗೆ ಬಾಡಿಗೆ ಆಧಾರದ ಮೇಲೆ ಆಸಕ್ತಿದಾರರಿಂದ ಸ್ಥಳೀಯವಾಗಿ ಟೆಂಡರ್ ಮೂಲಕ ಟಾಟಾ ಇಂಡಿಗೋ, ಟಾಟಾ ಇಂಡಿಕಾ-ಡಿಎಲ್‍ಎಕ್ಸ್ ಮಾದರಿಯ ಎ.ಸಿ. ವಾಹನವನ್ನು ಪಡೆಯಲು ತೀರ್ಮಾನಿಸಿದ್ದು ಆಸಕ್ತರು ಜುಲೈ 25 ರಂದು ಅಪರಾಹ್ನ 5 ಗಂಟೆ ಒಳಗೆ ಟೆಂಡರ್ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು. ಜುಲೈ 26 ರಂದು ಪೂರ್ವಾಹ್ನ 11 ಗಂಟೆಗೆ ಹಾಜರಿರುವ ಟೆಂಡರ್‍ದಾರರ ಸಮಕ್ಷಮ ಪರಿಶೀಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಟೆಂಡರ್ ನಮೂನೆಯನ್ನು

ಮಂಗಳೂರು ಕೃಷಿ ಇಲಾಖೆಯಿಂದ ಟೆಂಡರ್ ಆಹ್ವಾನ Read More »

ಕರಾವಳಿ

ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ಕರ್ನಾಟಕ ಜಾನಪದ ಅಕಾಡೆಮಿಯು ದಿನಾಂಕ: 01-01-2018ರಿಂದ 31-12-2018ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣ ಗೊಂಡಿರುವ ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಂತೆ ಮಿತಿಯಲ್ಲಿರುವ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ, ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಲೇಖಕರು/ಪ್ರಕಾಶಕರು/ಸಂಪಾದಕರು 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ,

ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳ ಆಹ್ವಾನ Read More »

ಕರಾವಳಿ

ಪಾಲಿಟೆಕ್ನಿಕ್ – ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ಕರ್ನಾಟಕ ಪಾಲಿಟೆಕ್ನಿಕ್, ಮಂಗಳೂರು ಈ ಸಂಸ್ಥೆಗೆ ಸಂಬಂಧಿಸಿದಂತೆ 2019-20 ನೇ ಸಾಲಿನಲ್ಲಿ 2 ವರ್ಷಗಳ ಐಟಿಐ/ ದ್ವಿತೀಯ ಪಿಯುಸಿ(ವಿಜ್ಞಾನ)/ ದ್ವಿತೀಯ ಪಿಯುಸಿ(ತಾಂತ್ರಿಕ ವಿಷಯಗಳು) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿಸಲ್ಲಿಸಲು ಅವಕಾಶವಿದೆ. ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ /3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸುಗಳಿಗೆ ಆನ್‍ಲೈನ್ ಇಂಟರಾಕ್ಟೀವ್ ಕೌನ್ಸೆಲಿಂಗ್ ಮೂಲಕ ಜೂನ್ 19 ರಿಂದ ಜೂನ್ 29 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ

ಪಾಲಿಟೆಕ್ನಿಕ್ – ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top