ಕಡಬ ನ್ಯೂಸ್

ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿವೆ ದ.ಕ,ಹಾಗೂ ಉಡುಪಿ ಜಿಲ್ಲೆಯ ಒಟ್ಟು 11 ಕನ್ನಡ ಶಾಲೆಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 11 ಶಾಲೆಗಳು ಬಾಗಿಲು ಹಾಕಿವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಅನುದಾನಿತ ಹಾಗೂ 2 ಸರ್ಕಾರಿ ಶಾಲೆ, ಉಡುಪಿ ಜಿಲ್ಲೆಯಲ್ಲಿ ಒಟ್ಟು 7 ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಕಣ್ಮುಚ್ಚಿವೆ. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಏನೆಕಲ್ಲು ಗ್ರಾಮದ ದೇವರಹಳ್ಳಿ ಮತ್ತು ಜಾಲ್ಸೂರು ಗ್ರಾಮದ ಕೆಮನಬಳ್ಳಿ ಸರ್ಕಾರಿ ಶಾಲೆಗಳು, ಬಂಟ್ವಾಳ ಕ್ಷೇತ್ರದ ಶಿರಂಕಲ್ಲು ಅನುದಾನಿತ, ಮಂಗಳೂರು ಉತ್ತರ ಕ್ಷೇತ್ರದ ಧೂಮಾವತಿ ಅನುದಾನಿತ ಶಾಲೆಗಳು ಬಾಗಿಲು […]

ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿವೆ ದ.ಕ,ಹಾಗೂ ಉಡುಪಿ ಜಿಲ್ಲೆಯ ಒಟ್ಟು 11 ಕನ್ನಡ ಶಾಲೆಗಳು Read More »

ಕರಾವಳಿ

ಎಸಿಬಿ ಬಲೆಗೆ ಬಿದ್ದ ಪುತ್ತೂರು ತಹಶೀಲ್ದಾರ್

(ನ್ಯೂಸ್ ಕಡಬ) newskadaba.com ಪುತ್ತೂರು, ಜೂನ್.21. ಜೂ. 20ರಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಲಂಚ ಸ್ವೀಕರಿಸಿದ ಆರೋಪದ ಮೇಲೆ ಪುತ್ತೂರು ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌ ಅವರನ್ನು ಬಂಧಿಸಿದರು. ಚುನಾವಣಾಕರ್ತವ್ಯದ ಸಿಬಂದಿಗೆ ಆಹಾರ ಪೂರೈಕೆಗೆ ಸಂಬಂಧಿಸಿದ ಬಿಲ್‌ಗೆ ಸಂಬಂಧಿಸಿ ಕ್ಯಾಟರಿಂಗ್‌ನವರಿಂದ ಲಂಚ ಸ್ವೀಕರಿಸಿದಾಗ ಬಲೆಗೆ ಬಿದ್ದಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭ ಕಂದಾಯ ಇಲಾಖೆ ಹಾಗೂ ಇತರ ಚುನಾ ವಣಾ ಕರ್ತವ್ಯದ ಸಿಬಂದಿಗೆ ಮಾ. 30ರಿಂದ ಎ. 18ರ ತನಕ ತರಬೇತಿ ಆಯೋಜಿಸಿದ್ದು ಅವರಿಗೆ ಪುತ್ತೂರಿನ ಪೈ

ಎಸಿಬಿ ಬಲೆಗೆ ಬಿದ್ದ ಪುತ್ತೂರು ತಹಶೀಲ್ದಾರ್ Read More »

ಕರಾವಳಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇರುವ ಅಂಗನವಾಡಿ ಕೇಂದ್ರಗಳು – ಪೆರ್ಮಾನ್ನೂರು ಗ್ರಾಮದ ಸೇವಂತಿಗುಡ್ಡೆ, ಹರೇಕಳ ಗ್ರಾಮದ ನ್ಯೂಪಡ್ಪು, ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿ ಸತ್ಯನಾರಾಯಣ, ಬೋಳಿಯಾರು ಗ್ರಾಮದ ರಂತಡ್ಕ, ಕೊಳಂಬೆ ಗ್ರಾಮದ ಅದ್ಯಪಾಡಿ-1, ಅಂಗನವಾಡಿ ಸಹಾಯಕಿರ ಹುದ್ದೆಗಳು ಖಾಲಿ ಇರುವ ಅಂಗನವಾಡಿ ಕೇಂದ್ರಗಳು – ಕಾರಿಂಜೆ ಗ್ರಾಮದ ತಾಕೊಡೆ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ ಅರ್ಜಿ ಆಹ್ವಾನ Read More »

ಕರಾವಳಿ

ಶೌಚಾಲಯರಹಿತ ಮನೆಗಳ ಸಮೀಕ್ಷೆ ಮಾಡಿ ➤ಮೀನಾಕ್ಷಿ ಶಾಂತಿಗೋಡು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಗ್ರಾಮ ಪಂಚಾಯತ್ ಮಟ್ಟದಲ್ಲಿ ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ದಾಖಲೆ ಇದ್ದು ಶೌಚಾಲಯ ಇಲ್ಲದಿರುವ ಹಾಗೂ ದಾಖಲೆ ಇಲ್ಲದೆ ಶೌಚಾಲಯ ಇಲ್ಲದಿರುವ ನೈಜ ಮಾಹಿತಿಯನ್ನು ಜುಲೈ 10 ರೊಳಗೆ ಜಿಲ್ಲಾ ಪಂಚಾಯತ್‍ಗೆ ನೀಡಬೇಕು ಎಂದು ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅಧಿಕಾರಿಗಳಿಗೆ ಸೂಚಿಸಿದರು. ಅವರಿಂದು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್ , ಜಿಲ್ಲಾ ನೆರವು

ಶೌಚಾಲಯರಹಿತ ಮನೆಗಳ ಸಮೀಕ್ಷೆ ಮಾಡಿ ➤ಮೀನಾಕ್ಷಿ ಶಾಂತಿಗೋಡು Read More »

ಕರಾವಳಿ

ಪ.ಜಾತಿ/ಪ.ವರ್ಗಗಳ ಕುಂದುಕೊರತೆ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಜೂನ್ 28 ರಂದು ಪೂರ್ವಾಹ್ನ 11 ಗಂಟೆಗೆ ತಹಶೀಲ್ದಾರ್, ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಕೋರ್ಟ್ ಹಾಲ್ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ಪ.ಜಾತಿ/ಪ.ವರ್ಗಗಳ ದೌರ್ಜನ್ಯ ಕುಂದುಕೊರತೆ ಬಗ್ಗೆ ಚರ್ಚಿಸಲು ಸಂಘ ಸಂಸ್ಥೆಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಎಂದು ಸಹಾಯಕ ನಿರ್ದೇಶಕರು(ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಪ.ಜಾತಿ/ಪ.ವರ್ಗಗಳ ಕುಂದುಕೊರತೆ ಸಭೆ Read More »

ಕರಾವಳಿ

ಮಂಗಳೂರು ನಗರ ಪೊಲೀಸ್ ಘಟಕದಲ್ಲಿ ವಾಹನಗಳ ಬಿಡಿಭಾಗಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಮಂಗಳೂರು ನಗರ ಪೊಲೀಸ್ ಘಟಕದ 2015-16, 2016-17, 2017-18 ನೇ ಸಾಲಿನ ವಾಹನದ ವಿಭಾಗದಲ್ಲಿರುವ ನಿರುಪಯುಕ್ತ ಹಳೇಯ ಟಯರ್ ಟ್ಯೂಬ್, ಮಡ್ಡಾಯಿಲ್ ಮತ್ತು ಇತರೆ ಬಿಡಿಭಾಗಗಳನ್ನು ನಗರದ ಸಶಸ್ತ್ರ ಮೀಸಲು ಪಡೆಯ ಮಂಗಳೂರು ನಗರ ಆವರಣದಲ್ಲಿ ಬಹಿರಂಗ ಹರಾಜು ನಡೆಯಲಿದೆ. ಜೂನ್ 27 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಆಯುಕ್ತರ ಕಚೇರಿ, ಮಂಗಳೂರು ನಗರ, ಮಂಗಳೂರು ಕಚೇರಿಯನ್ನು ಸಂಪರ್ಕಿಸಲು ಪೊಲೀಸ್ ಆಯುಕ್ತರ

ಮಂಗಳೂರು ನಗರ ಪೊಲೀಸ್ ಘಟಕದಲ್ಲಿ ವಾಹನಗಳ ಬಿಡಿಭಾಗಗಳ ಹರಾಜು Read More »

ಕರಾವಳಿ

ವಿವಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ವಿಶ್ವ ವಿದ್ಯಾನಿಲಯ ಕಾಲೇಜು, ಮಂಗಳೂರು ಹಳೇ ವಿದ್ಯಾರ್ಥಿ ಸಂಘ (ರಿ) ಇದರ ವಿಶೇಷ ಮಹಾ ಸಭೆ ಮತ್ತು ವಾರ್ಷಿಕ ಮಹಾಸಭೆಯು ಅಯೋಜಿಸಲಾಗಿದೆ. ಜೂನ್ 23 ರಂದು ಪೂರ್ವಾಹ್ನ 10.30 ಗಂಟೆಗೆ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಲಿದೆ ಎಂದು ಈ ಸಂಘದ ಅಧ್ಯಕ್ಷರಾದ ಬಿ.ಧರ್ಮಣ ನಾಯ್ಕ್ ರವರು ತಿಳಿಸಿದ್ದಾರೆ.

ವಿವಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸಭೆ Read More »

ಕರಾವಳಿ

ಪುತ್ತೂರು ಕೃಷಿ ಇಲಾಖಾವತಿಯಿಂದ ದರಪಟ್ಟಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಮಂಗಳೂರು ಜೂನ್ 20 (ಕರ್ನಾಟಕ ವಾರ್ತೆ);- ಉಪ ಕೃಷಿ ನಿರ್ದೇಶಕರು-II, ಪುತ್ತೂರು ಈ ಕಚೇರಿಗೆ 2019-20 ನೇ ಸಾಲಿಗೆ ಅಧಿಕೃತ ಸರಕಾರಿ ಕೆಲಸಕ್ಕಾಗಿ ಗುತ್ತಿಗೆ ಆಧಾರದಲ್ಲಿ ಹವಾ ನಿಯಂತ್ರಿತ ಟಾಟಾ ಇಂಡಿಕಾ/ಬೊಲೆರೋ/ ಮಹೇಂದ್ರ ಲೋಗನ್ ಸೇವೆಯನ್ನು ಚಾಲಕರ ಸಮೇತ ಬಾಡಿಗೆಗೆ ಪಡೆಯಲು ದರಪಟ್ಟಿ ಆಹ್ವಾನಿಸಲಾಗಿದೆ. ಅರ್ಹ ವಾಹನ ಮಾಲಕರು ಭರ್ತಿ ಮಾಡಿದ ಮೊಹರಾದ ಕೊಟೇಶನ್‍ಗಳನ್ನು ಖುದ್ದಾಗಿ/ ಅಂಚೆ ಮೂಲಕ ಉಪ ಕೃಷಿ ನಿರ್ದೇಶಕರು- II, ಜೆ.ವಿ. ಕಟ್ಟಡ, ಡೋರ್ ನಂ. 21-2-14

ಪುತ್ತೂರು ಕೃಷಿ ಇಲಾಖಾವತಿಯಿಂದ ದರಪಟ್ಟಿ ಆಹ್ವಾನ Read More »

ಕರಾವಳಿ

ಭೋವಿ ಜನಾಂಗದ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಕರ್ನಾಟಕ ಭೋವಿ ಅಭಿವೃದ್ದಿ ನಿಗಮವು, 2019-20ನೇ ಸಾಲಿಗೆ ಪರಿಶಿಷ್ಟ ಜಾತಿಯ ಭೋವಿ ಜನಾಂಗದ ಜನರ ಆರ್ಥಿಕ ಅಭಿವೃದ್ದಿಗಾಗಿ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ, ಮೈಕ್ರೋಕ್ರೆಡಿಟ್ ಯೋಜನೆ, ಮತ್ತು ಸಮಗ್ರ ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ. ಅರ್ಜಿ ಸ್ವೀಕರಿಸಲು ಕೊನೆಯ ದಿನ ಜುಲೈ 31 ಆಗಿರುತ್ತದೆ. ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು: ಅರ್ಜಿದಾರರು ಪರಿಶಿಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ

ಭೋವಿ ಜನಾಂಗದ ಸೌಲಭ್ಯಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಸಾಮಾನ್ಯ ಮತ್ತು ಮಾದರಿ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ➤ಆನ್ಲೈನ್ ಮೂಲಕ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳೂರು ತಾಲೂಕಿನ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ (ಸಾಮಾನ್ಯ ಮತ್ತು ಮಾದರಿ) ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಂದ 2019-20ನೇ ಸಾಲಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ- ಪ್ರವರ್ಗ-1, ಎಸ್.ಸಿ & ಎಸ್.ಟಿ ರೂ. 2.50 ಲಕ್ಷ, ಪ್ರವರ್ಗ-2ಎ, 2ಬಿ, 3ಎ, 3ಬಿ, ರೂ.

ಸಾಮಾನ್ಯ ಮತ್ತು ಮಾದರಿ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ➤ಆನ್ಲೈನ್ ಮೂಲಕ ಅರ್ಜಿ ಆಹ್ವಾನ Read More »

ಕರಾವಳಿ
Scroll to Top