ಕಡಬ ನ್ಯೂಸ್

ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ತಡೆಯಾಜ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.11.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಗೆ ಜುಲೈ 11 ರಂದು ನಿಗದಿಯಾಗಿದ್ದ ಚುನಾವಣೆಗೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಂದರು ಇಲಾಖೆಯ ನಿರಂಜನ ಮೂರ್ತಿ ಅವರು ನ್ಯಾಯಸಮ್ಮತವಾಗಿ ಚುನಾವಣೆ ಪ್ರಕ್ರಿಯೆ ನಡೆದಿಲ್ಲವೆಂದು ಜಿಲ್ಲಾ ಸಂಘ ಹಾಗೂ ಚುನಾವಣಾಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ, ಪದಾಧಿಕಾರಿಗಳ ಚುನಾವಣೆ ನಡೆಸದಂತೆ ಪ್ರತಿವಾದಿಗಳ ವಿರುದ್ಧ ಏಕಪಕ್ಷೀಯ ಮಧ್ಯಾಂತರ ತಡೆಯಾಜ್ಞೆ ಕೋರಿದ್ದರು. […]

ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ತಡೆಯಾಜ್ಷೆ Read More »

ಕರಾವಳಿ

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ➤ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.11.2019ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ.60 ರಿಂದ 74.99 ಮತ್ತು ಶೇ.75 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 31.ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್: www.sw.kar.nic.in  ನೋಡಲು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ➤ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ Read More »

ಕರಾವಳಿ

2017ರ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ ➤ ಪ್ರಧಾನಿಗೆ ದೂರುನೀಡಿದ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜುಲೈ.10.ದೇಶದ ಹಲವಾರು ಕಡೆಗಳಲ್ಲಿ ವಿದ್ಯಾರ್ಥಿಗಳು ಭಾರತ್‌ ಸ್ಕೌಟ್ ಹಾಗೂ ಗೈಡ್ಸ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರ್‌ ರಾಷ್ಟ್ರೀಯ ಪರೀಕ್ಷೆ ಬರೆದು ಎರಡು ವರ್ಷ ಕಳೆದರೂ ಇನ್ನೂ ಫಲಿತಾಂಶ ಬಂದಿಲ್ಲ. ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಾತ್ವಿಕ್‌ ಶರ್ಮ ಬಿ.ಎಸ್‌. ಅವರು ಪ್ರಧಾನಮಂತ್ರಿಗೆ ದೂರು ನೀಡಿದ್ದಾರೆ.2017ರ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ. ಈ ಕುರಿತು 2018ರ ಡಿಸೆಂಬರ್‌ನಲ್ಲಿ ವಿದ್ಯಾರ್ಥಿಯು ಪಿಜಿ ಪೋರ್ಟಲ್ ಮೂಲಕ ಪ್ರಧಾನಿಗೆ ದೂರು ನೀಡಿದ್ದು, ಆ ದೂರನ್ನು

2017ರ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ ➤ ಪ್ರಧಾನಿಗೆ ದೂರುನೀಡಿದ ವಿದ್ಯಾರ್ಥಿ Read More »

ಕರಾವಳಿ

ರಾಜಭವನಕ್ಕೆ ಮುತ್ತಗೆ ಹಾಕಲು ಮುಂದಾದ ಕಾಂಗ್ರೆಸ್ ನಾಯಕರು ➤ ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.10.ಬುಧವಾರ ಮಧ್ಯಾಹ್ನ ರಾಜಭವನಕ್ಕೆ ಮುತ್ತಿಗೆ ಹಾಕಿ ಕಾಂಗ್ರೆಸ್‌ ನಾಯಕರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.  ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಾದ. ಆದ್ದರಿಂದ ರಾಜಭವನಕ್ಕೆ ಮುತ್ತಿಗೆಹಾಕಿ ಪ್ರತಿಭಟನೆಗೆ ಮುಂದಾದರು. ಕಾಂಗ್ರೆಸ್ ನಾಯಕರನ್ನು ತಡೆದು ಪ್ರತಿಭಟನೆಯನ್ನು  ಪೊಲೀಸರು ವಿಫ‌ಲಗೊಳಿಸಿದ್ದಾರೆ.ಕಾಂಗ್ರೆಸ್‌ ನ ಉಸ್ತುವಾರಿ ವೇಣುಗೋಪಾಲ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಮೆರವಣಿಗೆ ನಡೆಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು.ಬ್ಯಾರಿಕೇಡ್‌ಗಳನ್ನು ಹಾಕಿ ಮೆರವಣಿಗೆಗೆ ತಡೆ ಒಡ್ಡಿದ

ರಾಜಭವನಕ್ಕೆ ಮುತ್ತಗೆ ಹಾಕಲು ಮುಂದಾದ ಕಾಂಗ್ರೆಸ್ ನಾಯಕರು ➤ ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದ ಪೊಲೀಸರು Read More »

ಕರ್ನಾಟಕ

ಕರಾಚಿ: ಶೂಟೌಟ್ ಗೆ ಇಬ್ಬರ ಬಲಿ ➤ ಪಾಕಿಸ್ತಾನದ ಟಿವಿ ಚಾನೆಲ್ ನ ಆ್ಯಂಕರ್ ಹಾಗೂ ಆತನ ಗೆಳೆಯ

(ನ್ಯೂಸ್ ಕಡಬ) newskadaba.com ಕರಾಚಿ, ಜುಲೈ.10.ಪಾಕಿಸ್ತಾನದ ಬೋಲ್ ನ್ಯೂಸ್ ಚಾನೆಲ್ ಆ್ಯಂಕರ್ ಮುರೀದ್ ಅಬ್ಬಾಸ್ ಅವರನ್ನು ಖೈಯಾಬಾನ್ ಇ ಬುಖಾರಿ ಪ್ರದೇಶದ ಸಮೀಪದ ಕೆಫೆಯ ಹೊರಭಾಗದಲ್ಲಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಪತ್ರಕರ್ತ ಅಬ್ಬಾಸ್ ಮೇಲೆ ಅತೀಫ್ ಝಮಾನ್ ಎಂಬಾತ ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಬ್ಬಾಸ್ ಗೆಳೆಯ ಖೈಝಾರ್ ಹಯಾತ್ ಅವರ ಮೇಲೂ ಗುಂಡಿನ ದಾಳಿ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಯಾತ್ ಸಾವನ್ನಪ್ಪಿರುವುದಾಗಿ ವರದಿ

ಕರಾಚಿ: ಶೂಟೌಟ್ ಗೆ ಇಬ್ಬರ ಬಲಿ ➤ ಪಾಕಿಸ್ತಾನದ ಟಿವಿ ಚಾನೆಲ್ ನ ಆ್ಯಂಕರ್ ಹಾಗೂ ಆತನ ಗೆಳೆಯ Read More »

ಅಂತರ್ರಾಷ್ಟ್ರೀಯ ನ್ಯೂಸ್

ಸರಸ್ವತೀ ಪ್ರೌಢಶಾಲೆ ಹನುಮಾನ್ನಗರ ಕಡಬ ➤ 6 ವಿದ್ಯಾರ್ಥಿಗಳು NMMS ಸ್ಕಾಲರ್ ಶಿಪ್ ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಸರಸ್ವತೀ ಪ್ರೌಢಶಾಲೆ ಹನುಮಾನ್‍ನಗರ ,ಕಡಬ ಇಲ್ಲಿನ ಹದಿನಾಲ್ಕು ಮಂದಿ ವಿದ್ಯಾರ್ಥಿಗಳು NMMS ಪರೀಕ್ಷೆಯಲ್ಲಿ ಭಾಗವಹಿಸಿದ್ದು 6 ಮಂದಿ ವಿದ್ಯಾರ್ಥಿಗಳು NMMS ಸ್ಕಾಲರ್‍ಶಿಪ್‍ಗೆ ಆಯ್ಕೆಯಾಗಿರುತ್ತಾರೆ. ಯೂಥ್ ಫಾರ್ ಸೇವಾ ಹಾಗೂ ಸಿಸ್ಕೋ ಸಂಭ್ರಮ ತಂಡದ ಸಹಕಾರದಿಂದ ನೀಡಲಾಗುವ ಸ್ಕಾಲರ್‍ಶಿಪ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಗೀತಾ ಶ್ರೀ ಪಿ, ಜಸ್ಮಿತ್ ಕೆ ಪಿ, ನಿಹಾರ್ ರೈ ಕೆ, ಕೀರ್ತನ್ ರೈ, ಪವನ್ ಕೆ. ಪಿ, ಅಭಿಷೇಕ್ ಕೆ ಇವರು ತಲಾ ರೂ. 2500 ನ್ನು ಸಂಸ್ಥೆಯ

ಸರಸ್ವತೀ ಪ್ರೌಢಶಾಲೆ ಹನುಮಾನ್ನಗರ ಕಡಬ ➤ 6 ವಿದ್ಯಾರ್ಥಿಗಳು NMMS ಸ್ಕಾಲರ್ ಶಿಪ್ ಗೆ ಆಯ್ಕೆ Read More »

ಕರಾವಳಿ

ಕೆಡಿಪಿ ಸಭೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10. ಜುಲೈ 11 ರಂದು ದಕ್ಷಿಣ ಕನ್ನಡ  ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ  ತ್ರೈಮಾಸಿಕ ಕೆಡಿಪಿ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ತ್ರೈಮಾಸಿಕ ಕೆಡಿಪಿ ಸಭೆಯನ್ನು  ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೆಡಿಪಿ ಸಭೆ ಮುಂದೂಡಿಕೆ Read More »

ಕರಾವಳಿ

ಯುವತಿ ಕಾಣೆಯಾಗಿದ್ದಾರೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಮಂಗಳೂರು ತಾಲೂಕಿನ ಕಾರ್ನಾಡು ಗ್ರಾಮದ ಕೆ.ಎಸ್.ರಾವ್ ನಗರದ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರಿ ನೈಮಾ(23) ಎಂಬವರು ಜುಲೈ 1 ರಂದು ರಾತ್ರಿ ಮನೆಯಿಂದ ಕಾಣೆಯಾಗಿರುತ್ತಾರೆ. ಪ್ರಕರಣ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ಯುವತಿಯ ಚಹರೆ ಇಂತಿವೆ: ನೈಮಾ ಪ್ರಾಯ 23 ವರ್ಷ, 5.6 ಅಡಿ ಎತ್ತರ, ದೃಢಕಾಯ ಶರೀರ, ದುಂಡು ಮುಖ, ಬಿಳಿಮೈಬಣ್ಣ, ಕೆಂಪು ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು, ತಿಳಿದಿರುವ ಭಾಷೆ ಕನ್ನಡ, ಬ್ಯಾರಿ, ತುಳು,

ಯುವತಿ ಕಾಣೆಯಾಗಿದ್ದಾರೆ. Read More »

ಕರಾವಳಿ

ಗೃಹರಕ್ಷಕ ದಳದ ಕಚೇರಿಯಲ್ಲಿ ಸೇವಾನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ.

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಜುಲೈ 9 ರಂದು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು. ಇವರು ಕಳೆದ 24 ವರ್ಷಗಳಿಂದ ಪಣಂಬೂರು ಘಟಕದ ಘಟಕಾಧಿಕಾರಿಯಾಗಿ ಅಪೂರ್ವ ಸೇವೆ ಸಲ್ಲಿಸಿರುತ್ತಾರೆ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ: ಮುರಲೀ ಮೋಹನ್ ಚೂಂತಾರು ಇವರು ಹರೀಶ್ ಆಚಾರ್ ಅವರಿಗೆ ಹೂ, ಹಾರ, ಹಣ್ಣು ನೀಡಿ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನ ಮಾಡಿದರು. ಉಪಸಮಾದೇಷ್ಠರಾದ

ಗೃಹರಕ್ಷಕ ದಳದ ಕಚೇರಿಯಲ್ಲಿ ಸೇವಾನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ. Read More »

ಕರಾವಳಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ➤ ಮೊದಲು ಚಾಲ್ತಿಯಲ್ಲಿದ್ದ ಇ-ಮೇಲ್ ವಿಳಾಸದ ಬದಲಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತವು ಚಾಲ್ತಿಯಲ್ಲಿದ್ದ ಮಿಂಚಂಚೆ(ಇ-ಮೇಲ್) kssidcho@vsnl.com ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಹೊಸದಾಗಿ ಇನ್ನೊಂದು ಇ-ಮೇಲ್ ವಿಳಾಸವನ್ನು ನೀಡಿದೆ. ಇ-ಆಡಳಿತ ಇಲಾಖೆಯಿಂದ ಹೊಸದಾಗಿ ಪಡೆದಿರುವ kssidcho@karnataka.gov.in ನ್ನು ನಿಗಮದ ಅಧಿಕೃತ ಮಿಂಚಂಚೆ (ಇ-ಮೇಲ್) ಎಂದು ಪರಿಗಣಿಸಿರುತ್ತದೆ.ಆದುದರಿಂದ ಮುಂದಿನ ದಿನಗಳಲ್ಲಿ ಮಿಂಚಂಚೆ(ಇ-ಮೇಲ್)  kssidcho@vsnl.com ಬದಲಾಗಿ ಮಿಂಚಂಚೆ (ಇ-ಮೇಲ್) kssidcho@karnataka.gov.in  ಗೆ ವ್ಯವಹರಿಸಲು ಸಹಾಯಕ ವ್ಯವಸ್ಥಾಪಕರು ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ➤ ಮೊದಲು ಚಾಲ್ತಿಯಲ್ಲಿದ್ದ ಇ-ಮೇಲ್ ವಿಳಾಸದ ಬದಲಾವಣೆ Read More »

ಕರಾವಳಿ
Scroll to Top