ಕಡಬ ನ್ಯೂಸ್

ಜಿಲ್ಲಾ ಸಂಚಾರಿ ನೇತ್ರ ಘಟಕ ➤ ನೇತ್ರ ಪರೀಕ್ಷಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಜಿಲ್ಲಾ ಸಂಚಾರಿ ನೇತ್ರ ಘಟಕ, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು, ಇವರ ಆಗಸ್ಟ್ ಮಾಹೆಯಲ್ಲಿ ನಡೆಯಲಿರುವ ನೇತ್ರ ಪರೀಕ್ಷಾ ಶಿಬಿರವನ್ನು ಏರರ್ಪಡಿಸಲಾಗಿದೆ. ಆದ್ದರಿಂದ ಆಗಸ್ಟ್ 27 ರಂದು ಡಾ. ಗೌರಿ ಪೈ ಕಲ್ಲಡ್ಕ ಇಲ್ಲಿ ನೇತ್ರ ಪರೀಕ್ಷಾ ಶಿಬಿರ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಸಂಚಾರಿ ನೇತ್ರ ಘಟಕ ➤ ನೇತ್ರ ಪರೀಕ್ಷಾ ಶಿಬಿರ Read More »

ಕರಾವಳಿ

ಕರಾವಳಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ➤ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ನೈಸರ್ಗಿಕದತ್ತವಾದ ಪ್ರಾಕೃತಿಕ, ಪಾರಂಪರಿಕ ಸಾಂಸ್ಕøತಿಕ ಚೆಲುವನ್ನು ಹೊಂದಿದೆ ಆದ್ದರಿಂದ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಏರ್ಪಡಿಸಲಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕುರಿತು “ಕನೆಕ್ಟ್-2019”ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಬೇಕಾಗುವ ಮೂಲಭೂತವಾದ ಸಂಪನ್ಮೂಲಗಳು ಸಾಕಷ್ಟು ಪ್ರಮಾಣದಲ್ಲಿದ್ದರೂ ಕೂಡ ಪ್ರವಾಸೋದ್ಯಮವನ್ನು

ಕರಾವಳಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ➤ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ 2 ದಿನ ವಾಹನ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ-73 (ಹಳೆ ರಾ.ಹೆ.234) ಮಂಗಳೂರು –ವಿಲ್ಲುಪುರಂ ರಸ್ತೆಯ ಕಿ.ಮೀ. 76.00 ರಿಂದ ಕಿ.ಮೀ 86.20 ರವರೆಗಿನ ಚಾರ್ಮಾಡಿ ಘಾಟ್ ಭಾಗದಲ್ಲಿ ಆಗಸ್ಟ್ 5 ರಿಂದ ಅಧಿಕ ಪ್ರಮಾಣದ ಮಳೆಯಾಗುತ್ತಿದೆ. ಆದ್ದರಿಂದ ಆ. 6 ರಂದು ಬಿರುಗಾಳಿ ಸಹಿತ ಸುರಿದ ಭಾರೀ ಪ್ರಮಾಣದ ಮಳೆಗೆ ರಸ್ತೆಗೆ ಬಾಗಿರುವ ದೊಡ್ಡ ಗಾತ್ರದ ಮರಗಳೊಂದಿಗೆ ಗುಡ್ಡಕುಸಿತ ಉಂಟಾಗಿರುತ್ತದೆ.ಚಾರ್ಮಾಡಿ ಘಾಟ್ ಭಾಗದಲ್ಲಿ ಇನ್ನೂ ಮಳೆ ಹೆಚ್ಚಾಗಿ ಬೀಳುತ್ತಿರುವ್ಯದರಿಂದ ಹಾಗೂ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ 2 ದಿನ ವಾಹನ ಸಂಚಾರ ನಿಷೇಧ Read More »

ಕರಾವಳಿ

ದ.ಕ ಜಿಲ್ಲೆಯಲ್ಲಿ ಜರುಗುವ ಹಬ್ಬ ಹರಿದಿನಗಳಲ್ಲಿ ➤ ಪ್ರಾಣಿ ಬಲಿ – ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ದ.ಕ ಜಿಲ್ಲೆಯಲ್ಲಿ ಜರುಗುವ ಬಕ್ರೀದ್ ಹಾಗೂ ಇತರೆ ಹಬ್ಬ ಹರಿದಿನಗಳಲ್ಲಿ ಪೂಜಾ ಸ್ಥಳಗಳಲ್ಲಿ/ಮಂದಿರಗಳಲ್ಲಿ ಸಾಮೂಹಿಕ ಪ್ರಾಣಿ ಹತ್ಯೆಯನ್ನು ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ ನಿಯಮದಂತೆ ಪ್ರಾಣಿ/ಕೋಳಿ ಬಲಿ ಕೊಡುವುದು ನಿಷೇಧಿಸಲ್ಪಟ್ಟಿದೆ ಹಾಗೂ ಪ್ರಾಣಿಗಳನ್ನು ಬಲಿ ಕೊಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಕರ್ನಾಟಕ ಗೋವಧೆ ಪ್ರತಿಬಂದಕ ಕಾಯ್ದೆ ಹಾಗೂ ಜಾನುವಾರು ಪರಿರಕ್ಷಣಾ ಅಧಿನಿಯಮ 64ರ ಸೆಕ್ಷನ್-4 ರ ಪ್ರಕಾರ ಗೋವು ಅಥವಾ ಎಮ್ಮೆಯ ಕರುವಿನ ವಧೆಯನ್ನು ನಿಷೇಧಿಸಿದೆ.ಈ ಎಲ್ಲಾ ಆದೇಶಗಳು

ದ.ಕ ಜಿಲ್ಲೆಯಲ್ಲಿ ಜರುಗುವ ಹಬ್ಬ ಹರಿದಿನಗಳಲ್ಲಿ ➤ ಪ್ರಾಣಿ ಬಲಿ – ನಿಷೇಧ Read More »

ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ➤ ಮಳೆ ನೀರು ಡ್ರೈನೇಜ್ಗೆ ಸಂಪರ್ಕ ಕಲ್ಪಿಸದಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಮಂಗಳೂರು ಮಹಾನಗರ ಪಾಲಿಕೆಯ ನಗರದ ಭೂಗತ ಒಳಚರಂಡಿ ಯೋಜನೆಯ ದೈನಂದಿನ ನಿರ್ವಹಣೆಯನ್ನು ನಿರ್ವಹಿಸುತ್ತಿದೆ. ನಗರದಾದ್ಯಂತ ಹಮ್ಮಿಕೊಂಡಿರುವ ಒಳಚರಂಡಿ ವ್ಯವಸ್ಥೆಗೆ ವಸತಿ ಸಂಪರ್ಕವನ್ನು ಪಾಲಿಕೆಯಿಂದ ಇತ್ತೀಚಿನ ದಿನಗಳಲ್ಲಿ ಒಳಚರಂಡಿ ಬಳಕೆದಾರರುಗಳು ಒಳಚರಂಡಿ ಜೋಡಣೆಗೆ ತಮ್ಮ ಹಿತ್ತಲಿನ ಮತ್ತು ಮನೆಯ ಸುತ್ತಮುತ್ತ ಬೀಳುವ ಮಳೆಯ ನೀರನ್ನು ಒಳಚರಂಡಿ ಆಳುಗುಂಡಿಗೆ ನೀಡಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಈ ಕಾರಣದಿಂದಾಗಿ ನಗರದ ರಸ್ತೆಗಳಲ್ಲಿ ಹಾಕಲಾಗಿರುವ ಆಳುಗುಂಡಿಗಳಿಂದ ತ್ಯಾಜ್ಯ ನೀರು ಮಳೆಯ ಸಂದರ್ಭದಲ್ಲಿ ಉಕ್ಕಿ ಹರಿದು ರಸ್ತೆಯಲ್ಲಿ ಮತ್ತು

ಮಂಗಳೂರು ಮಹಾನಗರ ಪಾಲಿಕೆ ➤ ಮಳೆ ನೀರು ಡ್ರೈನೇಜ್ಗೆ ಸಂಪರ್ಕ ಕಲ್ಪಿಸದಂತೆ ಸೂಚನೆ Read More »

ಕರಾವಳಿ

ಮಾರಕಾಸ್ತ್ರಗಳಿಂದ ಯುವಕನ ಕೊಲೆ ಮಾಡಿದ ನಾಲ್ವರು ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಡ್ಯ, ಆಗಸ್ಟ್.7.ಮಳವಳ್ಳಿ ತಾಲೂಕಿನ ಸಾತನೂರು ಬಳಿಯ ಕಾಳೇಗೌಡನದೊಡ್ಡಿಯ ಚಿಕ್ಕದೇವಯ್ಯ ಎಂಬುವರ ಪುತ್ರ ರಾಮು ಎಂಬಾತನನ್ನು ಹಾಡಹಗಲಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ರಾಮು(30) ಕೊಲೆಯಾದವ.ರಾಮು ಹಲಗೂರಿನಲ್ಲಿ ಬಿ.ಕೆ. ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದ. ಇಂದು ರಾಮು ಅಂಗಡಿಯಲ್ಲಿದ್ದಿದ್ದನ್ನು ನೋಡಿ ಬೆಳಗ್ಗೆ 10.10ಕ್ಕೆ ಮಾರಕಾಸ್ತ್ರಗಳನ್ನು ಹಿಡಿದು ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಹಲ್ಲೆ ಮಾಡಿ ಧೈರ್ಯದಿಂದಲೇ ಹೊರಗೆ ಮಚ್ಚು ಬೀಸುತ್ತ ಬಂದಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕನನ್ನು ತಕ್ಷಣ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ

ಮಾರಕಾಸ್ತ್ರಗಳಿಂದ ಯುವಕನ ಕೊಲೆ ಮಾಡಿದ ನಾಲ್ವರು ದುಷ್ಕರ್ಮಿಗಳು Read More »

ಕರ್ನಾಟಕ

ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ/ಬೆಂಗಳೂರು, ಆಗಸ್ಟ್.7.ಬಿಎಸ್ ಯಡಿಯೂರಪ್ಪ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೈಕಮಾಂಡ್ ಮುಖಂಡರನ್ನು ಭೇಟಿಯಾಗಿ, ಸಚಿವ ಸಂಪುಟ ರಚನೆ ಕುರಿತು ಚರ್ಚಿಸಿದ್ದರು. ಆದರೆ ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೂಡಲೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ವರದಿ ತಿಳಿಸಿದೆ.ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆ ಮುಂದೂಡಿಕೆಯಾಗಿದ್ದು, 2 ದಿನಗಳ ಬಳಿಕ ದೆಹಲಿಗೆ ವಾಪಸ್ ಬನ್ನಿ ಎಂದು ಬಿಜೆಪಿ ಹೈಕಮಾಂಡ್ ಬಿಎಸ್ ವೈಗೆ ಸೂಚನೆ ನೀಡಿದೆ.ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ

ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ Read More »

ಕರಾವಳಿ

ಉಪ್ಪಿನಂಗಡಿಯಲ್ಲಿ ನೇತ್ರಾವತಿಯ ತಟದಲ್ಲಿ ಪ್ರವಾಹ ಭೀತಿ ➤ ತುರ್ತು ಕಾರ್ಯಾಚರಣೆಗಾಗಿ ಗೃಹರಕ್ಷಕರ ತಂಡ ಸನ್ನದ್ಧವಾಗಿದ್ದು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆಗಸ್ಟ್.7.ಉಪ್ಪಿನಂಗಡಿಯಲ್ಲಿ ಆ. 6ರಿಂದ ಭಾರೀ ಮಳೆಯಿಂದಾಗಿ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ನಿಚ್ಚಳವಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ 24 ಮೀಟರ್‌ಗೇರಿದೆ. ಕುಮಾರಧಾರಾ ನದಿಯಲ್ಲೂ ನೀರು ರಭಸವಾಗಿ ಹರಿಯುತ್ತಿದೆ. ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಹರಿವಿಗೆ ತಡೆಯಾಗುತ್ತಿದೆ. ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನಸುಕಿನ ಜಾವ ಮೂರು ಗಂಟೆಗೆ 6 ಮೆಟ್ಟಿಲುಗಳು ಮಾತ್ರ

ಉಪ್ಪಿನಂಗಡಿಯಲ್ಲಿ ನೇತ್ರಾವತಿಯ ತಟದಲ್ಲಿ ಪ್ರವಾಹ ಭೀತಿ ➤ ತುರ್ತು ಕಾರ್ಯಾಚರಣೆಗಾಗಿ ಗೃಹರಕ್ಷಕರ ತಂಡ ಸನ್ನದ್ಧವಾಗಿದ್ದು Read More »

ಕರಾವಳಿ

ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆ: ಸಾರ್ವಜನಿಕರಾಗಲಿ ನೀರಿನೆಡೆಗೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮ➤ಬೆಳ್ಳಾರೆ ಪೊಲೀಸ್ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.7.ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಮುಂಜಾಗೃತೆವಹಿಸುವಂತೆ ಬೆಳ್ಳಾರೆ ಪೋಲೀಸ್ ಠಾಣಾಧಿಕಾರಿಯವರು ಸೂಚನೆ ನೀಡಿದ್ದಾರೆ. ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆಗಳಿದ್ದು, ಇಂತಹವುಗಳ ಕಡೆಗೆ ಸಾರ್ವಜನಿಕರಾಗಲಿ ಅಥವಾ ತಮ್ಮ ಮಕ್ಕಳಾಗಲಿ ನೀರಿನೆಡೆಗೆ ಹೋಗದಂತೆ ಮುನ್ನೆಚ್ಚರಿಕೆಯಿಂದ ವಹಿಸತಕ್ಕದ್ದು , ಹೆಚ್ಚು ಮಳೆಯಿಂದಾಗಬಹುದಾದ ಅವಘಡಗಳೇನಾದರೂ ತಮ್ಮ ಪರಿಸರದಲ್ಲಿ ಸಂಭವಿಸಿದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು, ನೈಸರ್ಗಿಕ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಿ ಆಗಬಹುದಾದ ಹೆಚ್ಚಿನ ಅನಾಹುತಗಳನ್ನು ನಿಯಂತ್ರಿಸುವಲ್ಲಿ ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ. ಅಂತಹ ಘಟನೆಗಳು

ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆ: ಸಾರ್ವಜನಿಕರಾಗಲಿ ನೀರಿನೆಡೆಗೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮ➤ಬೆಳ್ಳಾರೆ ಪೊಲೀಸ್ ಸೂಚನೆ Read More »

ಕರಾವಳಿ

ಅಪಾಯದಲ್ಲಿ ಕುಂಡಡ್ಕ ಸೇತುವೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.7.ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಾರೆಯಿಂದ ಪೆರುವಾಜೆ-ಕುಂಡಡ್ಕ -ನಾಡೋಳಿ-ಸಾರಕರೆ-ಸರ್ವೆ-ಮೂಲಕ ವೀರಮಂಗಲ ಮೂಲಕ ಕುಮಾರಧಾರ ತಲುಪುವ ಗೌರಿ ಹೊಳೆ ತನ್ನ ಹರಿವು ಹೆಚ್ಚಿಸಿಕೊಂಡಿದೆ. ಕಡಬ ತಾಲೂಕಿನ ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮವನ್ನು ಜೋಡಿಸುವಲ್ಲಿ ಗೌರಿಹೊಳೆಗೆ ಅಡ್ಡಲಾಗಿರುವ ಕುಂಡಡ್ಕ ಕಿರು ಸೇತುವೆಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಇದೆ. ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತಕ್ಕೆ ಬಂದಿರುವ ಸೇತುವೆಯೂ ಕೊಚ್ಚಿಹೋಗುವ ಭೀತಿಯನ್ನು ಜನತೆ ಎದುರಿಸುತ್ತಿದ್ದಾರೆ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ

ಅಪಾಯದಲ್ಲಿ ಕುಂಡಡ್ಕ ಸೇತುವೆ Read More »

ಕರಾವಳಿ
Scroll to Top