ಕಡಬ ನ್ಯೂಸ್

ಭಾರಿ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ➤ ಭಾರತದಲ್ಲಿ ಈ ಸಮಯಕ್ಕೆ ಮೃತಪಟ್ಟವರ ಸಂಖ್ಯೆ 200 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆಗಸ್ಟ್.13.ಭಾರಿ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ಅನೇಕ ನಷ್ಟಗಳು ಉಂಟಾಗಿದ್ದು, ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗುಜರಾತ್ ಸೇರಿದಂತೆ ದೇಶದ ಹಲವೆಡೆ ಮಳೆ, ಪ್ರವಾಹ ಇನ್ನೂ ಮುಂದುವರೆದಿದೆ. ಸಂಭವಿಸಿದ ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಭಾರತದಲ್ಲಿ ಈ ಸಮಯಕ್ಕೆ ಮೃತಪಟ್ಟವರ ಸಂಖ್ಯೆ 200ಕ್ಕೇರಿದೆ. ಸುಮಾರು 200 ಮಂದಿ ಮೃತರಾಗಿದ್ದು, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿ 9 ಮಂದಿ […]

ಭಾರಿ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ➤ ಭಾರತದಲ್ಲಿ ಈ ಸಮಯಕ್ಕೆ ಮೃತಪಟ್ಟವರ ಸಂಖ್ಯೆ 200 ಕ್ಕೆ ಏರಿಕೆ Read More »

ಕರ್ನಾಟಕ

‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆಗಸ್ಟ್.13.‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆಗೊಳ್ಳಲಿದೆ.ಇದು ಕನ್ನಡ ಸಾಹಿತ್ಯವನ್ನು ಲೋಕಕ್ಕೆ ಪರಿಚಯಿಸುವ ನೆಟ್ವರ್ಕ್ ಇದಾಗಿದೆ.   ಪ್ರತಿವರ್ಷ ಕನ್ನಡದಲ್ಲಿ ಪ್ರಕಟವಾಗುವ ಸುಮಾರು 6000 ಪುಸ್ತಕಗಳ ಪೈಕಿ ಸರಿ ಸುಮಾರು 1,000 ಪುಸ್ತಕಗಳಿಗೆ ಮಾತ್ರ ವಿವಿಧ ಮಾಧ್ಯಮ (ಪತ್ರಿಕೆ, ಸೋಷಿಯಲ್ ಮೀಡಿಯಾ)ಗಳಿಂದ ‘ಪರಿಚಯ’ದ ಅವಕಾಶ ದೊರೆಯುತ್ತಿದೆ. ಅದರಿಂದಾಗಿ ಓದುಗರಿಗೆ ಪ್ರಕಟವಾಗುವ ಎಲ್ಲಾ ಪುಸ್ತಕಗಳ ಮಾಹಿತಿ ದೊರೆಯುತ್ತಿಲ್ಲ, ಎಲ್ಲಾ ಲೇಖಕರಿಗೆ ಓದುಗರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ ಮತ್ತು ಪುಸ್ತಕದ ವಿಮರ್ಶೆಯೂ ಸಾಧ್ಯವಾಗುತ್ತಿಲ್ಲ. ಈ

‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆ Read More »

ಕರಾವಳಿ

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಿರ್ಧರಿಸಿದೆ ಕರ್ನಾಟಕ

(ನ್ಯೂಸ್ ಕಡಬ) newskadaba.com ಮೈಸೂರು, ಆಗಸ್ಟ್.13.ಕಳೆದ ಎರಡು ತಿಂಗಳು ಬರ ಪರಿಸ್ಥಿತಿ ಎದುರಿಸಿದ್ದ ಕಾವೇರಿ ಕೊಳ್ಳ, ಈಗ ಮಳೆಯಿಂದ ತುಂಬಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿನ ಕಾವೇರಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ ನೀರು ಹಂಚಿಕೆ ವಿವಾದ ಸದ್ಯಕ್ಕೆ ನೀರಿನಲ್ಲಿ ಕೊಚ್ಚಿ ಹೋಗಲಿದೆ. ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಕಳೆದ ಸಭೆಯಲ್ಲಿ ನೆಮ್ಮದಿಯ ಸುದ್ದಿ ಕೊಟ್ಟಿತ್ತು. ಆದರೆ, ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಿರ್ಧರಿಸಿದೆ ಕರ್ನಾಟಕ Read More »

ಕರ್ನಾಟಕ

ಗಂಡಿಬಾಗಿಲು: ಬಕ್ರೀದ್ ಆಚರಣೆ ➤ ಕುಟುಂಬ ಬಂಧುತ್ವವನ್ನು ಆರಾಧಿಸು, ಅನ್ಯ ಧರ್ಮವನ್ನು ಗೌರವಿಸು-ಅನಸ್ ತಂಙಳ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಆಗಸ್ಟ್.13.ತ್ಯಾಗ, ಬಲಿದಾನ, ಐಕ್ಯತೆಯ ಸಂಕೇತವನ್ನು ಪ್ರತಿಪಾದಿಸುವ “ಈದುಲ್ ಅಝ್”ಹಾ ಪವಿತ್ರ ಬಕ್ರೀದ್ ಹಬ್ಬದ ವಿಶೇಷ ನಮಾಜು ಮತ್ತು ಕುತುಬಾ, ಪ್ರಾರ್ಥನೆ ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ಆ. 12ರಂದು ನಡೆಯಿತು. ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಹಾದಿ ಅನಸ್ ತಂಙಳ್ ಹಬ್ಬದ ಸಂದೇಶ ನೀಡಿ ಮಾತನಾಡಿ ನೆಬಿವರ್ಯರ ಸಂದೇಶವನ್ನು ಸಮೀಕರಿಸುವ ಮತ್ತು ಅದನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇಬ್ರಾಹಿಂ ನೆಬಿವರ್ಯರ ಸರಳ, ತ್ಯಾಗ ಜೀವನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರವಾಹ ಸಂತ್ರಸ್ಥರ ಸಂಕಷ್ಠಗಳಿಗೆ ಸಹಕಾರ

ಗಂಡಿಬಾಗಿಲು: ಬಕ್ರೀದ್ ಆಚರಣೆ ➤ ಕುಟುಂಬ ಬಂಧುತ್ವವನ್ನು ಆರಾಧಿಸು, ಅನ್ಯ ಧರ್ಮವನ್ನು ಗೌರವಿಸು-ಅನಸ್ ತಂಙಳ್ Read More »

ಕರಾವಳಿ

ಅಂಗಾಂಗ ದಾನಿಗಳ ದಿನ – ಆಗೋಸ್ಟ್ 13 ➤ ಸತ್ತ ಬಳಿಕವೂ ಸಾರ್ಥಕತೆ ಪಡೆಯಿರಿ

(ನ್ಯೂಸ್ ಕಡಬ) newskadaba.com , ಆಗಸ್ಟ್.13.ವಿಶೇಷ ಲೇಖನ: ಆಗಸ್ಟ್ 13ನ್ನು ಭಾರತದಾದ್ಯಂತ “ಅಂಗಾಂಗ ದಾನಿಗಳ ದಿನ” ಎಂದು ಆಚರಿಸಲಾಗುತ್ತಿದೆ. ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 130 ಕೋಟಿಗೂ ಜಾಸ್ತಿ ಜನ ಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್ ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಇವೆಯಾದರೂ, ದಾನಿಗಳ ಕೊರತೆ ಕಾಡುತ್ತಿದೆ. ಕೇವಲ ಸಾವಿರಗಳ

ಅಂಗಾಂಗ ದಾನಿಗಳ ದಿನ – ಆಗೋಸ್ಟ್ 13 ➤ ಸತ್ತ ಬಳಿಕವೂ ಸಾರ್ಥಕತೆ ಪಡೆಯಿರಿ Read More »

ಕರಾವಳಿ, ವಿಶೇಷ ಲೇಖನಗಳು

ಶಿವಾಜಿ ನಗರದಲ್ಲಿ ರಸ್ತೆ ಭೂಕಂಪ ➤ ವಾಹನ ಸಂಚಾರಕ್ಕೆ ಅಡ್ಡಿ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.12.ಮರ್ದಾಳ -ಕೆರ್ಮಯಿ ರಸ್ತೆಯ ಶಿವಾಜಿ ನಗರದಲ್ಲಿ ಕಳೆದ 5,6 ದಿನಗಳಿಂದ ಸುರಿಯುತ್ತಿದ್ದ ವಿಪರೀತ ಮಳೆಯಿಂದ ರಸ್ತೆಯಲ್ಲಿ ಒಸರು ಬಂದು ಭೂಕಂಪವಾಗಿ ರಸ್ತೆ ಸಂಪೂರ್ಣ ಹೂತುಕೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಆ. 11ರಂದು ನಡೆದಿದೆ. ರಸ್ತೆ ಹೊಂಡಬಿದ್ದು ಕೆಸರುಮಯವಾಗಿ ಆಟೋರಿಕ್ಷಾ ಸೇರಿದಂತೆ 2ವೀಲರ್, 4ವೀಲರ್ ಗಾಡಿಗಳು ಕೆಸರಿನಲ್ಲಿ ಹೂತು ಹೋಗುತ್ತಿದ್ದು ಮುಂದಕ್ಕೆ ಚಲಿಸದೆ ಪರಿಸರದವರು ಬಂದು ಮರದ ತುಂಡುಗಳನ್ನು ಹಾಕಿ ವಾಹನ ಮೇಲಕ್ಕೆ ಎತ್ತಲು ಸಹಕರಿಸಿದ್ದು ನಂತರ ಯಾವುದೇ ವಾಹನ ಆ

ಶಿವಾಜಿ ನಗರದಲ್ಲಿ ರಸ್ತೆ ಭೂಕಂಪ ➤ ವಾಹನ ಸಂಚಾರಕ್ಕೆ ಅಡ್ಡಿ Read More »

ಕರಾವಳಿ

ಭಾರತಕ್ಕೆ ಗೆಲುವಿನ ಪುಳಕ ಹುಟ್ಟಿಸಿದ ವಿರಾಟ್ ಕೊಹ್ಲಿಯ ಭರ್ಜರಿ ಶತಕ

(ನ್ಯೂಸ್ ಕಡಬ) newskadaba.com ಪೋರ್ಟ್‌ ಆಫ್‌ ಸ್ಪೇನ್, ಆಗಸ್ಟ್.12.ವಿಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 59 ರನ್‌ ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಿಗಧಿತ 50 ಓವ್‌ ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 279 ರನ್‌ ಗಳಿಸಿದರೆ, ಮಳೆಯ ಕಾರಣದಿಂದ 46 ಓವರ್‌ ಗೆ 270 ರನ್‌ ಗಳಿಸುವ ಗುರಿ ಪಡೆದ ವಿಂಡೀಸ್‌ 210 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿತು.ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ ಭಾರತಕ್ಕೆ

ಭಾರತಕ್ಕೆ ಗೆಲುವಿನ ಪುಳಕ ಹುಟ್ಟಿಸಿದ ವಿರಾಟ್ ಕೊಹ್ಲಿಯ ಭರ್ಜರಿ ಶತಕ Read More »

ಕ್ರೀಡಾ ನ್ಯೂಸ್

ದ. ಕ ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ➤ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ ಸಿ.ಎಂ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆಗಸ್ಟ್.12.ಇಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆಮಾಡಿದರು. ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ ಬಿ.ಎಸ್.ವೈ. ಅವರು ಅಲ್ಲಿ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.ಸ್ಥಳೀಯ ಶಾಸಕರಾಗಿರುವ ಹರೀಶ್ ಪೂಂಜಾ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಭಾರತೀಯ ಜನತಾ ಪಕ್ಷದ ಶಾಸಕರು ಮತ್ತು ಸ್ಥಳೀಯ ಮುಖಂಡರು ಬಿ.ಎಸ್.ವೈ. ಅವರಿಗೆ ಸಾಥ್ ನೀಡಿದರು.ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಹದಿಂದ ಉಂಟಾದ ಸಮಸ್ಯೆಯ ಕೇಳಿ ಗಂಭೀರತೆ

ದ. ಕ ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ➤ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ ಸಿ.ಎಂ Read More »

ಕರಾವಳಿ

ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ನಲುಗಿ ಹೋಗಿದೆ-ಮಲೆನಾಡು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆಗಸ್ಟ್.12.ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಭೂ ಕುಸಿತ ಹೆಚ್ಚಳವಾದ ಕಾರಣ ಸಂಪೂರ್ಣ ರಸ್ತೆಯೇ ನಾಶವಾಗುವ ಹಂತದಲ್ಲಿದೆ. ಬನ್ಕಲ್ ವ್ಯಾಪ್ತಿಯಲ್ಲಿ ರಸ್ತೆ ಅಂಚು ವಿಪರೀತ ಕುಸಿತಗೊಂಡಿರುವ ಕಾರಣ ತೆರವು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಇದರಿಂದಾಗಿ ಬೆಳ್ತಂಗಡಿ ಚಿಕ್ಕಮಗಳೂರು ಸಂಪರ್ಕ ಕಡಿತವಾಗಿದ್ದು, ಮುಂದಿನ ನಾಲ್ಕು ತಿಂಗಳು ಚಾರ್ಮಾಡಿ ಘಾಟಿಯ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.ಒಂದು ವಾರದಿಂದ

ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ನಲುಗಿ ಹೋಗಿದೆ-ಮಲೆನಾಡು Read More »

ಕರಾವಳಿ

ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಆಘಾತ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಮತ್ತೊಮ್ಮೆ ಸಾರಾಸಗಟಾಗಿ ತಳ್ಳಿಹಾಕಿದರೆ, ಪಾಕ್​ನ ಪರಮಾಪ್ತ ಚೀನಾ ಕೂಡ ಕೈಕೊಟ್ಟಿದೆ. ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ ಚೀನಾ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಆಘಾತ ಎದುರಾಗಿದೆ. ಕಾಶ್ಮೀರ ವಿಚಾರದಲ್ಲಿ ನೆರವಾಗುವಂತೆ ಪಾಕ್ ಮುಂದಿಟ್ಟ ಕೋರಿಕೆಯನ್ನು ಚೀನಾ ವಿದೇಶಾಂಗ ಸಚಿವ ವಾಂಗ್

ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಆಘಾತ Read More »

ಕರಾವಳಿ
Scroll to Top