ಕಡಬ ನ್ಯೂಸ್

ಮಾರ್ ಇವಾನಿಯೋಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕುಂತೂರು, ಆಗಸ್ಟ್.16.ಇಲ್ಲಿನ ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆಗಳ ಪದವಿ ಮತ್ತು ಬಿ.ಎಡ್. ವಿಭಾಗಗಳ ವಿದ್ಯಾರ್ಥಿ ಸಂಘಗಳು ಹಾಗೂ ಭಾಷಾ ಸಂಘದ ಉದ್ಘಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾರ್ ಇವಾನಿಯೋಸ್ ಆಂಗ್ಲ ಮಾದ್ಯಮ ಶಾಲೆ ಕುಂತೂರು, ಇಲ್ಲಿನ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಸ್ಮಿನ್ ತೆರೆಸ್ ಡಿ.ಎಂ. ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ಕಲಿಕಾ ಪ್ರಕ್ರಿಯೆಯ ಜೊತೆಯಲ್ಲಿಯೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು […]

ಮಾರ್ ಇವಾನಿಯೋಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ Read More »

ಕರಾವಳಿ

ಉಪ್ಪಿನಂಗಡಿಯಲ್ಲಿ ಜ್ಯುವೆಲ್ಲರಿ ಶಾಪ್ ನಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಒಡವೆ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆಗಸ್ಟ್.16.ಉಪ್ಪಿನಂಗಡಿ ಶಾಲಾ ರಸ್ತೆಯಲ್ಲಿರುವ ಆರ್‌. ಕೆ ಜ್ಯುವೆಲ್ಲರಿ ಶಾಪ್ ಗೆ  ತಡರಾತ್ರಿ ಕಳ್ಳರು ನುಗ್ಗಿದ್ದು ಜ್ಯುವೆಲ್ಲರಿಯಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ದೋಚಲಾಗಿದೆ. ಕಳ್ಳರು ಗ್ಯಾಸ್‌ ಕಟ್ಟರ್‌ ಬಳಸಿ, ಅಂಗಡಿಯ ಶಟರ್‌ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಆದರೆ ಒಳಗಿದ್ದ ಲಾಕರ್ ರೂಮ್‌ ದೋಚಿಲ್ಲ.ಈ ಜ್ಯುವೆಲ್ಲರಿಗೆ ಒಬ್ಬ ಕಾವಲುಗಾರನಿದ್ದು, ಉಪ್ಪಿನಂಗಡಿ ಪೇಟೆಗೂ ಆತನೆ ಕಾವಲುಗಾರನಾಗಿದ್ದಾನೆ. ಆತ ರಾತ್ರಿ 1 ರಿಂದ 3 ಗಂಟೆಯವರೆಗೆ ಪೇಟೆಯ ರೌಂಡ್ಸ್‌ ಗೆ ಹೋಗುತ್ತಾನೆ. ಆ

ಉಪ್ಪಿನಂಗಡಿಯಲ್ಲಿ ಜ್ಯುವೆಲ್ಲರಿ ಶಾಪ್ ನಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಒಡವೆ ಕಳವು Read More »

ಕರಾವಳಿ

ಕಡಬ ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.16.ಕಡಬ ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಬಾಬುಮುಗೇರ ಧ್ವಜಾರೋಹಣ ನೆರವೇರಿಸಿದರು.   ತಾ.ಪಂ ಸದಸ್ಯ ಫಝಲ್ ಕೋಡಿಂಬಾಳ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು, ಗ್ರಾ.ಪಂ ಉಪಾಧ್ಯಕ್ಷೆ ಜ್ಯೋತಿ.ಡಿ ಕೋಲ್ಪೆ, ಸದಸ್ಯರಾದ ನೀಲಾವತಿಶಿವರಾಂ,ಸರೋಜಿನಿ ಆಚಾರ್ಯ, ಜಯಂತಿಗಣಪಯ್ಯ, ಕೆ.ಎಂ ಹನೀಫ್, ಆದಂ ಕುಂಡೋಳಿ, ಹರ್ಷ ಕೋಡಿ, ಸುಶೀಲ, ರೇವತಿ, ಯಶೋಧ, ಸಂಧ್ಯಾಮೋಹನ್, ಉಪಸ್ಥಿತರಿದ್ದರು. ಗ್ರಾ.ಪಂ ಅಬಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಕುಮಾರ್ ವಂದಿಸಿದರು. ಗ್ರಾ.ಪಂ ಸಿಬ್ಬಂದಿ ಹರೀಶ್

ಕಡಬ ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ Read More »

ಕರಾವಳಿ

ಕೊಂಬಾರು ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.16.ಕೊಂಬಾರು ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಅಜೀತ್ ಎಸ್ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಉಪಾಧ್ಯಕ್ಷೆ ಜಯಶ್ರೀರಾಮಚಂದ್ರ, ಸದಸ್ಯರಾದ ಮಧುಸೂದನ್ , ದೇವಕಿ , ಲಲಿತ, ಪುರುಷೋತ್ತಮ, ರಮೇಶ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಅಂಗನವಾಡಿ ಪುಟಾಣಿ ಮಕ್ಕಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಕೊಂಬಾರು ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ Read More »

ಕರಾವಳಿ

ನೂಜಿಬಾಳ್ತಿಲ ಬೆಥನಿ ಕಾಲೇಜಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.16.ಬೆಥನಿ ಕಾಲೇಜಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಿವೃತ್ತ ಸೇನಾನಿ ಐಸಕ್ ಎಮ್.ಜೆಯವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ನಿರ್ದೇಶಕರಾದ ರೆ|ಫಾ|ಸಕರಿಯಾಸ್ ನಂದಿಯಾಟ್ ಶುಭಹಾರೈಸಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೆಥನಿ ವಿದ್ಯಾಸಂಸ್ಥೆಯಿಂದ ಗೋಳಿಯಡ್ಕ ಜಂಕ್ಷನ್‍ವರೆಗೆ ಮೆರವಣಿಗೆ ನಡೆದು ಬಳಿಕ ವಿದ್ಯಾಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯರಾದ ಜಾರ್ಜ್ ಟಿ.ಎಸ್ ಸ್ವಾಗತಿಸಿ, ಪ್ರೌಢವಿಭಾಗದ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ವಂದಿಸಿದರು. ಉಪನ್ಯಾಸಕರು, ಶಿಕ್ಷಕರು-ಶಿಕ್ಷಕೇತರರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

ನೂಜಿಬಾಳ್ತಿಲ ಬೆಥನಿ ಕಾಲೇಜಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ Read More »

ಕರಾವಳಿ

ಆತೂರು: ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ವಲಯದ ಫ್ರೀಡಂ ಸ್ಕ್ವಾರ್ ವತಿಯಿಂದ ➤73ನೇ ಸ್ವಾತಂತ್ರ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಆತೂರು, ಆಗಸ್ಟ್.15.ಬದ್ರಿಯ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಬದ್ರಿಯಾ ಮಸೀದಿಯ ಜಮಾಅತ್ ಅಧ್ಯಕ್ಷರಾದ ಜ| ಅಬ್ದುಲ್ ರಝಾಕ್ ಬಿ. ಕೆ ಇವರ ಧ್ವಜಾರೋಹಣ ಮಾಡಿದರು. ಆತೂರು ತದ್ಬೀರುಲ್ ಇಸ್ಲಾಂ ಮದರಸದ ಅಬ್ದುಲ್ ಸಮದ್ ಅನ್ಸಾರಿ ಸ್ವಾಗತಸಿದರು. ಕಾರ್ಯಕ್ರಮದಲ್ಲಿ ಆತೂರು ಬದ್ರಿಯಾ ಮಸೀದಿಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಿರಾಜ್, ಉಪಾಧ್ಯಕ್ಷರು ಅಜೀಜ್, ಸದಸ್ಯರು ಕಾಸಿಮ್, ಗ್ರಾಮ ಫಂಚಾಯತ್ ಸದಸ್ಯರು ಕೆ ಎ ಸುಲೈಮಾನ್, ಎಸ್.ಕೆ.ಎಸ್.ಎಸ್.ಎಫ್ ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ, ತದ್ಬೀರುಲ್ ಇಸ್ಲಾಂ ಮದರಸದ

ಆತೂರು: ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ವಲಯದ ಫ್ರೀಡಂ ಸ್ಕ್ವಾರ್ ವತಿಯಿಂದ ➤73ನೇ ಸ್ವಾತಂತ್ರ್ಯೋತ್ಸವ ಆಚರಣೆ Read More »

ಕರಾವಳಿ

ಏಣಿತ್ತಡ್ಕ : ಅಂಗನವಾಡಿ ಕೇಂದ್ರ ➤ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ಕಡಬ ತಾಲೂಕು ಕೊೈಲ ಗ್ರಾಮದ ಏಣಿತ್ತಡ್ಕ (1) ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಅದ್ಯಕ್ಷೆ ತೃಪ್ತಿ ಕಡೆಂಬ್ಯಾಲು ದ್ವಜರೋಹಣಗೈದರು. ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾಬಿವೃದ್ದಿ ಸಮಿತಿ ಅಧ್ಯಕ್ಷ ಶೇಖರ ಗೌಡ ಕೊಲ್ಯ ಶುಭಹಾರೈಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಬಳೂರು ಒಕ್ಕೂಟ ಗಣೇಶ್ ಗೌಡ ಎರ್ಮಡ್ಕ, ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಗುರುಪ್ರಸಾದ್ ಸಬಳೂರು ಮೊದಲಾದವರು ಇದ್ದರು. ಅಂಗನವಾಡಿ ಕಾರ್ಯಕರ್ತೆ ವೇದಾವತಿ ಸ್ವಾಗತಿಸಿ ವಂದಿಸಿದರು. ಸಹಾಯಕಿ ಮೀನಾಕ್ಷಿ ಸಹಕರಿಸಿದರು.

ಏಣಿತ್ತಡ್ಕ : ಅಂಗನವಾಡಿ ಕೇಂದ್ರ ➤ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ Read More »

ಕರಾವಳಿ

ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಕಡ್ಯ-ಕೊಣಾಜೆ ➤ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಕಡ್ಯ-ಕೊಣಾಜೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಿವಪ್ಪ.ಗೌಡ ಹಾಕೋಟೆಕಾನ ಧ್ವಜಾರೋಹಣ ನೆರವೇರಿಸಿ ನಮ್ಮ ರಾಷ್ಟ್ರಇನ್ನು ಮುಂದಿನ ದಿನಗಳಲ್ಲಿ ಅಖಂಡವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು ಶುಭಹಾರೈಸಿದರು. ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ ಪಲ್ಲತ್ತಡ್ಕ, ಸದಸ್ಯ ಪೆÇಡಿಯ ಗೌಡ , ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಪಳ್ಳಿಗದ್ದೆ, ಕಡಬ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ರಘುಚಂದ್ರ ಮನೆಜಾಲು, ಸಿ.ಎ ಬ್ಯಾಂಕ್ ವ್ಯವಸ್ಥಾಪಕ

ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಕಡ್ಯ-ಕೊಣಾಜೆ ➤ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ Read More »

ಕರಾವಳಿ

ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ ➤ 73ನೇ ವರ್ಷ ದ ಸ್ವಾತಂತ್ರ್ಯೊತ್ವವ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ 73ನೇ ವರ್ಷ ದ ಸ್ವಾತಂತ್ರ್ಯೊತ್ವವ ದಿನಾಚರಣೆಯನ್ನು ಆಚರಿಸಲಾಯಿತು. ದ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ನೆರವೇರಿಸಿ ಶುಭಹಾರೈಸಿದರು. ಕಡ್ಯಕೊಣಾಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಯಶೋಧರ ಗೌಡ , ಸದಸ್ಯರಾದ ಪೊಡಿಯ ಗೌಡ,ಆನಂದ ಬಿ ಎಸ್. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಘಚಂದ್ರ ಗೌಡ ಮನೆಜಾಲು.ಕಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಣಾಜೆ

ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ ➤ 73ನೇ ವರ್ಷ ದ ಸ್ವಾತಂತ್ರ್ಯೊತ್ವವ ದಿನಾಚರಣೆ Read More »

ಕರಾವಳಿ

ಕಡಬದ ಶ್ರೀ ಗಣೇಶ್ ಬಿಲ್ಡಿಂಗ್‍ನಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ಕಡಬದ ಶ್ರೀ ಗಣೇಶ್ ಬಿಲ್ಡಿಂಗ್‍ನಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಬಿಲ್ಡಿಂಗ್ ಮಾಲಕರಾದ ಸುಂದರ ಮಂಡೆಕರ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಗಣೇಶ್ ಬಿಲ್ಡಿಂಗ್‍ನ ಎಲ್ಲ ಅಂಗಡಿಗಳ ಮಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮೋಹನ್ ಕೊಯಿಲ ಕಾರ್ಯಕ್ರಮ ನಿರೂಪಿಸಿ, ಕಿಶೋರ್ ಬರಮೇಲು ವಂದಿಸಿದರು. ಬಳಿಕ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.  

ಕಡಬದ ಶ್ರೀ ಗಣೇಶ್ ಬಿಲ್ಡಿಂಗ್‍ನಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ Read More »

ಕರಾವಳಿ
Scroll to Top