ಕಡಬ ನ್ಯೂಸ್

ಎನ್.ಎ.ಡಿ.ಸಿ.ಪಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ.11ರಂದು ಉತ್ತರ ಪ್ರದೇಶ ರಾಜ್ಯದ ಮಥುರಾದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಈ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದಕ್ಷಿಣ ಕನ್ನಡ ಮತ್ತು ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇವರ ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇಲ್ಲಿ ಏರ್ಪಡಿಸಲಾಯಿತು. ಜಿಲ್ಲೆಯ ಪ್ರಗತಿ ಪರ ರೈತರಾದ ಮರಿಯಾ ಡಿಸೋಜ ಇವರು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ […]

ಎನ್.ಎ.ಡಿ.ಸಿ.ಪಿ ಕಾರ್ಯಕ್ರಮ Read More »

ಕರಾವಳಿ

2019-20 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟದ ಕ್ರೀಡೆಗಳೊಂದಿಗೆ ತ್ರೋಬಾಲ್ ಕ್ರೀಡೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.2019-20 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟದ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್, ಖೋಖೋ, ಕಬಡ್ಡಿ ಕ್ರೀಡೆಗಳೊಂದಿಗೆ ತ್ರೋಬಾಲ್ ಕ್ರೀಡೆಯನ್ನು ಸರ್ಕಾರದ ನಿರ್ದೇಶನದಂತೆ ಸಂಘಟಿಸಲಾಗಿದೆ. ಎಂದು ಉಪನಿರ್ದೇಶಕರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

2019-20 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟದ ಕ್ರೀಡೆಗಳೊಂದಿಗೆ ತ್ರೋಬಾಲ್ ಕ್ರೀಡೆ ಸೇರ್ಪಡೆ Read More »

ಕರಾವಳಿ

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು ➤ ವಿದ್ಯಾರ್ಥಿ ಸಂಘದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು ಇವರ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಇಂದು ಸಂಜೆ 6 ಗಂಟೆಗೆ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಮಣ್ಯ ಯಡಪಡಿತ್ತಾಯ ವಹಿಸಲಿದ್ದಾರೆ. ದ.ಕ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು ➤ ವಿದ್ಯಾರ್ಥಿ ಸಂಘದ ಉದ್ಘಾಟನೆ Read More »

ಕರಾವಳಿ

ವಯೋಶ್ರೇಷ್ಠ ಸಮ್ಮಾನ್ 2019 ಪ್ರಶಸ್ತಿ ➤ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿಯವರು 2019ನೇ ಸಾಲಿನ “ವಯೋಶ್ರೇಷ್ಠ ಸಮ್ಮಾನ್ 2019” ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಹಿರಿಯ ನಾಗರೀಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಂಘ ಸಂಸ್ಥೆಗಳು ಹಾಗೂ ನಾಗರೀಕರು ಅರ್ಜಿ ಸಲ್ಲಿಸಬಹ್ಮದು. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 17 ಆಗಿದ್ದು, ಅರ್ಜಿಯನ್ನು ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವಸ್ಟೋರ್, ಮಂಗಳೂರು-575006. ದೂರವಾಣಿ ಸಂಖ್ಯೆ: 0824-2458173,2455999 ಈ ಕಚೇರಿಗೆ ನೀಡಬೇಕು.

ವಯೋಶ್ರೇಷ್ಠ ಸಮ್ಮಾನ್ 2019 ಪ್ರಶಸ್ತಿ ➤ ಅರ್ಜಿ ಆಹ್ವಾನ Read More »

ಕರಾವಳಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ➤ ರೋಟಾವೈರಸ್ ಲಸಿಕೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ರೋಟಾವೈರಸ್ ಲಸಿಕೆ ನೀಡಿಕೆಗೆ ಗುರುವಾರ ಚಾಲನೆ ನೀಡಲಾಯಿತು. ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ರಾಮಕೃಷ್ಣ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೆನ್ಲಾಕ್ ಅಧೀಕ್ಷಕಿ ಡಾ|| ರಾಜೇಶ್ವರಿ ದೇವಿ ರೋಟಾ ವೈರಾಸ್ ಲಸಿಕೆಯನ್ನು ಮಗುವಿಗೆ ನೀಡುವ ಮೂಲಕ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ|| ಶೈಲಜ, ಜಿಲ್ಲಾ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ➤ ರೋಟಾವೈರಸ್ ಲಸಿಕೆ ಚಾಲನೆ Read More »

ಕರಾವಳಿ

ಸ್ಮಾರ್ಟ್ ಸಿಟಿ ಬಸ್ಸ್ ನಿರ್ಮಾಣ ಯೋಜನಾ ವೆಚ್ಚ ಅಧಿಕ ➤ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ಸೂಚನೆ.

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಡೆಗಳಲ್ಲಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್‍ಗಳ ಯೋಜನಾ ವೆಚ್ಚ ಅಧಿಕವಾಗಿರುವ ಬಗ್ಗೆ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ನಳೀನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡುತ್ತಿದ್ದರು. ಸ್ಮಾರ್ಟ್ ಸಿಟಿಯಡಿ ಪ್ರತಿ ಬಸ್ ಶೆಲ್ಟರ್‍ಗೆ ರೂ. 12 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಈ ಬಸ್ಸ್ ಶೆಲ್ಟರ್‍ನಲ್ಲಿ

ಸ್ಮಾರ್ಟ್ ಸಿಟಿ ಬಸ್ಸ್ ನಿರ್ಮಾಣ ಯೋಜನಾ ವೆಚ್ಚ ಅಧಿಕ ➤ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ಸೂಚನೆ. Read More »

ಕರಾವಳಿ

ತುಳು ಚಿತ್ರ ಗಿರಿಗಿಟ್ ಗೆ ನ್ಯಾಯಾಲಯ ತಡೆಯಾಜ್ಞೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.12.ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿರುವ ತುಳು ಚಿತ್ರ ‘ಗಿರಿಗಿಟ್‌ʼ ಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಚಿತ್ರದಲ್ಲಿ ನ್ಯಾಯಾಂಗ ಮತ್ತು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಕೀಲರ ಸಂಘವು ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆ. .ಕಿರಿಯ ಪ್ರಧಾನ ಸಿವಿಲ್‌ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.ವಕೀಲರ ಸಂಘದ ಪರವಾಗಿ ಹಿರಿಯ ವಕೀಲ ಎಂ.ಪಿ ಶೆಣೈ ವಾದ ಮಂಡಿಸಿದ್ದು, ಕಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಹರೀಶ್‌ ಅವರು ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದಾರೆ.ಈ

ತುಳು ಚಿತ್ರ ಗಿರಿಗಿಟ್ ಗೆ ನ್ಯಾಯಾಲಯ ತಡೆಯಾಜ್ಞೆ Read More »

ಕರಾವಳಿ

ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ‘ಮಾಹಿತಿ ಹಕ್ಕು ಕಾಯ್ದೆ 2005’ ಕುರಿತು ಕಾರ್ಯಗಾರ

(ನ್ಯೂಸ್ ಕಡಬ) newskadaba.com ಕುಂತೂರು,ಸಪ್ಟೆಂಬರ್.12. ಇಲಿನ ಮಾರ್ ಇವಾನಿಯೋಸ್ ಕಾಲೇಜಿನ ಪದವಿ ವಿಭಾಗದ ವಿದ್ಯಾರ್ಥಿಗಳು ಮತ್ತು ಬಿ.ಎಡ್. ಪ್ರಶಿಕ್ಷಣಾರ್ಥಿಗಳಿಗೆ ‘ಮಾಹಿತಿ ಹಕ್ಕು ಕಾಯ್ದೆ 2005’ ಕುರಿತು ಮಾಹಿತಿ ನೀಡುವ ಕಾರ್ಯಗಾರವನ್ನು ನಡೆಸಲಾಯಿತು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಕಾಲೇಜಿನ ಸಂಚಾಲಕ ವಂ/ರೆ/ಫಾ/ಡಾ/ ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಕಾರ್ಯಗಾರವನ್ನು ಪಿ.ಪಿ.ಟಿ ಪ್ರದರ್ಶನದ ಮೂಲಕ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಕುಮಾರಿ ಸಂಸೀನಾ ಸ್ವಾಗತಿಸಿ ಕುಮಾರಿ ನುಸೈಬಾ ಬಾನು ವಂದಿಸಿದರು.

ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ‘ಮಾಹಿತಿ ಹಕ್ಕು ಕಾಯ್ದೆ 2005’ ಕುರಿತು ಕಾರ್ಯಗಾರ Read More »

ಕರಾವಳಿ

ಹೊಂಡಗುಂಡಿಗಳಿಂದ ದುಸ್ತರಗೊಂಡಿರುವ ಕಡಬ-ಪೇರಡ್ಕ ಸಂಪರ್ಕ ರಸ್ತೆ!

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.12.ಕಲ್ಲುಗುಡ್ಡೆ, ಸೆ. 11: ಕಡಬ-ಪೇರಡ್ಕ ಸಂಪರ್ಕ ರಸ್ತೆಯಲ್ಲಿ ಅಪಾರ ಕಡೆಗಳಲ್ಲಿ ಡಾಮರು ಕಿತ್ತುಹೋಗಿ ಹೊಂಡ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕೀಡಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಡಬ ಹಳೆಸ್ಟೇಷನ್ ತಿರುವಿನಿಂದ ಕುಟ್ರುಪಾಡಿ ಚರ್ಚ್ ಬಳಿ ವರೆಗೆ ರಸ್ತೆ ತೀವ್ರ ದುಸ್ತರಗೊಂಡಿದ್ದು, ರಸ್ತೆಯ ಮಧ್ಯದಲ್ಲಿ ಅಲ್ಲಲ್ಲಿ ಹೊಂಡಗುಂಡಿಗಳು ಬೃಹದಾಕಾರದಲ್ಲಿ ನಿರ್ಮಾಣಗೊಂಡು ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದೀಗ ಹೊಂಡಗುಂಡಿಗಳಲ್ಲಿ ನೀರು ತುಂಬಿಕೊಂಡು ಸವಾರರಿಗೆ ಅಪಾಯವನ್ನು ತಂದೊಡ್ಡುವ ಭೀತಿ ಉಂಟಾಗಿದ್ದು, ಇನ್ನೊಂದು ವಾಹನಕ್ಕೆ ಜಾಗ

ಹೊಂಡಗುಂಡಿಗಳಿಂದ ದುಸ್ತರಗೊಂಡಿರುವ ಕಡಬ-ಪೇರಡ್ಕ ಸಂಪರ್ಕ ರಸ್ತೆ! Read More »

ಕರಾವಳಿ

ರೆಂಜಿಲಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ಸಂಘದ ಸದಸ್ಯರಿಗೆ ಧನಸಹಾಯ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,ಸಪ್ಟೆಂಬರ್.12.ರೆಂಜಿಲಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ಸಂಘದ ಸದಸ್ಯರಿಗೆ ಧನಸಹಾಯವನ್ನು ರವಿವಾರ ಹಸ್ತಾಂತರಿಸಲಾಯಿತು. ರೆಂಜಿಲಾಡಿ ಒಕ್ಕೂಟದ ಮೀನಾಡಿ ಸಿರಿ ತಂಡದ ಸದಸ್ಯೆ ಗುಲಾಬಿರ ಅವರ ಪತಿ ಶಿವಾಜಿ ಶೆಟ್ಟಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆ ಖರ್ಚಿಗಾಗಿ ರೆಂಜಿಲಾಡಿ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಡೆದ ಪದಗ್ರಹಣ ಸಂಗ್ರಹದ ಉಳಿಕೆ ಹಣದಲ್ಲಿ ರೂ. 4 ಸಾವಿರವನ್ನು ರೆಂಜಿಲಾಡಿ ಒಕ್ಕೂಟದ ಅಧ್ಯಕ್ಷರಾದ ಸುಂದರ ಅವರು ಗುಲಾಬಿ ಅವರ ಪುತ್ರಿ ಅವರಿಗೆ

ರೆಂಜಿಲಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ಸಂಘದ ಸದಸ್ಯರಿಗೆ ಧನಸಹಾಯ ಹಸ್ತಾಂತರ Read More »

ಕರಾವಳಿ
Scroll to Top