ಕಡಬ ನ್ಯೂಸ್

ಜೀವರಕ್ಷಕತ್ವ ಕಳೆದುಕೊಳ್ಳುತ್ತಿರುವ ಆಂಟಿಬಯೋಟಿಕ್‍ಗಳು

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.20.ನಮ್ಮ ದೇಹಕ್ಕೆ ರೋಗಾಣುಗಳು ಸೇರಿಕೊಂಡು ದೇಹದೆಲ್ಲೆಡೆ ಸೋಂಕು ಉಂಟುಮಾಡಿ ತಮ್ಮ ರುದ್ರನರ್ತನವನ್ನು ಆರಂಭಿಸುವಾಗ, ಅಂತಹಾ ರೋಗಾಣುಗಳನ್ನು ಹತೋಟಿಯಲ್ಲಿಡುವ ಜೀವರಕ್ಷಕ ಔಷಧಿಗಳೇ ‘ಆಂಟಿಬಯೋಟಿಕ್‍ಗಳು’. ಅಲೆಗ್ಯಾಂಡರ್ ಪ್ಲೆಮಿಂಗ್ ಎಂಬ ಪುಣ್ಯಾತ್ಮ 1927ರಲ್ಲಿ ‘ಪೆನ್ಸಿಲಿನ್’ ಎಂಬ ಜೀವರಕ್ಷಕ ಆಂಟಿಬಯೋಟಿಕ್‍ನ್ನು ಕಂಡುಹಿಡಿದು ಲಕ್ಷಾಂತರ ಜನರ ಜೀವವನ್ನು ಉಳಿಸಿದೆ. ಅದರ ಬಳಿಕ ಸಾವಿರಾರು ವಿಧವಿಧದ ಆಂಟಿಬಯೋಟಿಕ್‍ಗಳು ಹುಟ್ಟಿಕೊಂಡವು. ಕಾಲಕ್ರಮೇಣ ಬ್ಯಾಕ್ಟೀರಿಯಾ ಹಾಗೂ ಇತರ ರೋಗಾಣುಗಳು ಕೂಡ ಆಂಟಿಬಯೋಟಿಕ್‍ಗಳಿಗೆ ಪ್ರತಿರೋಧಕತ್ವವನ್ನು ಬೆಳೆಸಿಕೊಂಡು ತನ್ನ ದೇಹದಲ್ಲಿ, ಜೀನ್‍ಗಳಲ್ಲಿ, ಆಓಂಗಳಲ್ಲಿ, ವರ್ಣತಂತುಗಳಲ್ಲಿಅಗತ್ಯ ಮಾರ್ಪಾಡು ಮಾಡಿಕೊಂಡು […]

ಜೀವರಕ್ಷಕತ್ವ ಕಳೆದುಕೊಳ್ಳುತ್ತಿರುವ ಆಂಟಿಬಯೋಟಿಕ್‍ಗಳು Read More »

ಕರಾವಳಿ

ಯುವಜನರಲ್ಲಿ ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.20.ಧೂಮಪಾನ ವಿಷಪಾನ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸಾಂಪ್ರದಾಯಿಕ ಧೂಮಪಾನದಲ್ಲಿ ಬೀಡಿ, ಸಿಗರೇಟು ಮುಂತಾದವುಗಳ ಮುಖಾಂತರ ತಂಬಾಕು ಉತ್ಪನ್ನಗಳನ್ನು ಉರಿಸಿ ಅದರಿಂದ ಬಂದ ನಿಕೋಟಿನ್  ಹೊಗೆಯನ್ನು ಜನರು ಆಸ್ವಾದಿಸುತ್ತಾ ಏನೋ ವಿಚಿತ್ರವಾದ ಸುಖವನ್ನು ಅನುಭವಿಸುತ್ತಾರೆ. ಧೂಮಪಾನದ ಹೊಗೆಯಲ್ಲಿ ಸಾವಿರಾರು ಕ್ಯಾನ್ಸರ್‍ಕಾರಕ ವಿಷಾನಿಲಗಳು ಇದೆಯೆಂದು ತಿಳಿದಿದ್ದರೂ ಜನರು ಅಲ್ಪ ಸಮಯದ ಸಂತಸಕ್ಕಾಗಿಯೋ, ಮೋಜಿಗಾಗಿಯೋ ಅಥವಾ ಇನ್ನಾವುದೇ ಕಾರಣಕ್ಕಾಗಿಯೋ ಸಾಂಪ್ರದಾಯಿಕ ಬೀಡಿ ಸಿಗರೇಟಿನ ದಾಸರಾಗುತ್ತಿರುವುದು ಬಹಳ ನೋವಿನ ವಿಚಾರ. ತಂಬಾಕು ಉತ್ಪನ್ನಗಳಿಂದ ಬಾಯಿ ಕ್ಯಾನ್ಸರ್, ಗಂಟಲಿನ

ಯುವಜನರಲ್ಲಿ ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು Read More »

ಕರಾವಳಿ

ಕಾರುಗಳ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ  ,ಸಪ್ಟೆಂಬರ್.20.ಎರಡು ಕಾರುಗಳ ಮದ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಗುರುವಾರ ಸಾಯಂಕಾಲ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಜಂಕ್ಷನ್‍ನಲ್ಲಿ ನಡೆದಿದೆ. ಗಾಯಾಳುಗಳನ್ನು ಬೆಳ್ತಂಗಡಿ ನಿವಾಸಿ ವಾಸುದೇವ ಗೋಖಲೆ(55) ಹಾಗೂ ಅವರ ಪತ್ನಿ ಪೂರ್ಣ ಗೋಖಲೆ(53) ಎಂದು ಗುರುತಿಸಲಾಗಿದೆ. ಕಡಬದಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಬಲ್ಯ ಜಂಕ್ಸನ್‍ನಲ್ಲಿ ನೆಲ್ಯಾಡಿಯತ್ತ ತಿರುವು ಪಡೆಯುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಕಡಬದತ್ತ ಆಗಮಿಸುತ್ತಿದ್ದ ಉಡುಪಿ ಜಿಲ್ಲೆಯ ಬೆಳ್ಮಣ್

ಕಾರುಗಳ ನಡುವೆ ಡಿಕ್ಕಿ Read More »

ಕರಾವಳಿ

ಕಡಬದಲ್ಲಿ ಶುಭಾರಂಭಗೊಂಡ ನಿಪ್ಪೋನ್ ಪೈಂಟ್ಸ್ ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ

(ನ್ಯೂಸ್ ಕಡಬ) newskadaba.com ಕಡಬ ,ಸಪ್ಟೆಂಬರ್.20.ಕಡಬ- ಪಂಜ ರಸ್ತೆಯಲ್ಲಿನ ಮಧುರಾ ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭಗೊಂಡಿರುವ ನಿಪ್ಪೋನ್ ಪೈಂಟ್ಸ್‍ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ ಎಂ.ಎಚ್ ಟ್ರೇಡರ್ಸ್‍ನ ಉದ್ಘಾಟನಾ ಸಮಾರಂಭ ಗುರವಾರ ನಡೆಯಿತು. ಸಂಸ್ಥೆಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀ ಪಿ.ಪಿ.ವರ್ಗೀಸ್ ಮಾತನಾಡಿ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಉದ್ಯಮ ವ್ಯವಹಾರಗಳು ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ.ಉತ್ತಮ ತಂತ್ರಜ್ಞಾನ, ಆಧುನಿಕ ವ್ಯವಸ್ಥೆಯೊಂದಿಗೆ ಉದ್ಯಮ ಸಂಸ್ಥೆಗಳು ಕಡಬ ಭಾಗದ ಜನ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗುತ್ತಿವೆ. ಬೇರೆ ಊರಿಂದ

ಕಡಬದಲ್ಲಿ ಶುಭಾರಂಭಗೊಂಡ ನಿಪ್ಪೋನ್ ಪೈಂಟ್ಸ್ ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ Read More »

ಕರಾವಳಿ

2019-20ನೇ ಸಾಲಿನಲ್ಲಿ ಪೂರ್ಣಾವಧಿ ಪಿ.ಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವ್ಯಾಸಂಗ ವೇತನಕ್ಕೆ ಅರ್ಜಿಆಹ್ವಾನ

(ನ್ಯೂಸ್ ಕಡಬ) newskadaba.com ಕರ್ನಾಟಕ ,ಸಪ್ಟೆಂಬರ್.20.2019-20ನೇ ಸಾಲಿನಲ್ಲಿ ಪೂರ್ಣಾವಧಿ ಪಿ.ಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವ್ಯಾಸಂಗ ವೇತನಕ್ಕೆ ಅರ್ಜಿಆಹ್ವಾನಿಸಲಾಗಿದೆ. ಪ್ರವರ್ಗ-1, 2ಎ, 3ಎ, 3ಬಿ ಹಾಗೂ ಇತರೆ ಒಬಿಸಿ ವರ್ಗಗಳಿಗೆ ಸೇರಿದ ಅರ್ಹ ನವೀಕರಣ ವಿದ್ಯಾರ್ಥಿಗಳಿಗೆ ಮಾಸಿಕ ರೂ.10,000/- ದಂತೆ ವ್ಯಾಸಂಗ ವೇತನ/ಫೆಲೋಶಿಪ್ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನ.ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್  www.backwardclasses.kar.nic.in ಹಾಗೂ ದೂರವಾಣಿ ಸಂಖ್ಯೆ:8050770004 ಸಂಪರ್ಕಿಸಬಹುದೆಂದು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ

2019-20ನೇ ಸಾಲಿನಲ್ಲಿ ಪೂರ್ಣಾವಧಿ ಪಿ.ಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವ್ಯಾಸಂಗ ವೇತನಕ್ಕೆ ಅರ್ಜಿಆಹ್ವಾನ Read More »

ಕರಾವಳಿ

ಮೌಲ್ಯಮಾಪನ ಅಧ್ಯಯನ ➤ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.20.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ” ಯೋಜನೆಯ ಮೌಲ್ಯಮಾಪನ ಅಧ್ಯಯನ ಕೈಗೊಳ್ಳಲು ಆಸಕ್ತ ಅರ್ಹ ಸಂಸ್ಥೆಗಳಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ. ಪ್ರಸ್ತಾವನೆಯನ್ನು ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನ. ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಮಂಗಳೂರು ದೂರವಾಣಿ ಸಂಖ್ಯೆ 0824-2451254 ಈ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಮೌಲ್ಯಮಾಪನ ಅಧ್ಯಯನ ➤ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ

ಪ್ರವಾಹ – ನೆರೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಕರ್ನಾಟಕ ,ಸಪ್ಟೆಂಬರ್.20.ಕರ್ನಾಟಕ ಫೋಟೋ ಜರ್ನಲಿಸ್ಟ್ ಯೂನಿಯನ್ ವತಿಯಿಂದ ರಾಜ್ಯದಲ್ಲಿ ಇತ್ತೀಚಿನ ಪ್ರವಾಹ – ನೆರೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಬುಧವಾರ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಂಗಳೂರಿನ ಛಾಯಾಗ್ರಾಹಕ ರಾಮಕೃಷ್ಣ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು ತೆಗೆದ ಛಾಯಾಚಿತ್ರಗಳನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು.

ಪ್ರವಾಹ – ನೆರೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ Read More »

ಕರಾವಳಿ

ಕಲೆ ಮತ್ತು ವಾಸ್ತುಶಿಲ್ಪಗಳಿಗೆ ವಿಶ್ವಕರ್ಮರ ಕೊಡುಗೆ ಅಪಾರ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಕರ್ನಾಟಕ ,ಸಪ್ಟೆಂಬರ್.20.ವಿಶ್ವಕರ್ಮ ಸಮುದಾಯದವರು ಈ ದೇಶದಲ್ಲಿ ಕಲೆ ಮತ್ತು ವಾಸ್ತುಶಿಲ್ಪ, ಮತ್ತು ಕರಕುಶಲತೆಗೆ ನಾಂದಿ ಹಾಡಿದವರು ಎಂದು ಬಂದರು, ಒಳನಾಡು ಜಲಸಾರಿಗೆ, ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವಕರ್ಮ ಜಯಂತಿಯು ವಿಶ್ವಕರ್ಮ ಸಮುದಾಯದವನ್ನು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ,

ಕಲೆ ಮತ್ತು ವಾಸ್ತುಶಿಲ್ಪಗಳಿಗೆ ವಿಶ್ವಕರ್ಮರ ಕೊಡುಗೆ ಅಪಾರ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ

ದ .ಕ ಜಿ. ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ➤ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕರ್ನಾಟಕ ,ಸಪ್ಟೆಂಬರ್.20.ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2019-20 ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೇಟ್ ಬಾಲ್, ಹ್ಯಾಂಡ್ ಬಾಲ್, ಕುಸ್ತಿ, ಟೇಬಲ್ ಟೆನ್ನಿಸ್, ನೆಟ್ ಬಾಲ್, ಭಾರ ಎತ್ತುವುದು ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ವರ್ಧೆಗಳು ಸಪ್ಟೆಂಬರ್ 21 ರಿಂದ 22 ರವರೆಗೆ ಮಂಗಳೂರು

ದ .ಕ ಜಿ. ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ➤ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ Read More »

ಕರಾವಳಿ

ಸರಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ➤ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.19. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ಕಬ್ಬನ್ ಉದ್ಯಾನವನ, ಬೆಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಕ್ಕಳಿಗೆ 2019 ನೇ ಸಾಲಿನ ಎಸ್.ಎಸ್.ಎಲ್.ಸಿ/ ಪಿ.ಯು.ಸಿ (State/CBSE/ICSE) ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದಕ್ಕೆ ಅರ್ಹರಾದವರು ಮಾಹಿತಿಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು ಅವರಿಗೆ ನೇರವಾಗಿ ಸಲ್ಲಿಸಬೇಕು. ಪ್ರತಿಭಾ ಪುರಸ್ಕಾರ ಅರ್ಜಿಯನ್ನು ಮಂಗಳೂರು

ಸರಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ➤ಅರ್ಜಿ ಆಹ್ವಾನ Read More »

ಕರಾವಳಿ
Scroll to Top