ಕಡಬ ನ್ಯೂಸ್

ಪೆರ್ನೆಯ ಅಡಿಕೆ ವ್ಯಾಪಾರಿಗೆ ಚೂರಿಯಿಂದ ಇರಿದು ಹಣ ದೋಚಿದ ಪ್ರಕರಣ ➤ ಮೂವರು ಕಿಲಾಡಿ ಆರೋಪಿಗಳ ಅರೇಸ್ಟ್

(ನ್ಯೂಸ್ ಕಡಬ) newskadaba.com ಪೆರ್ನೆ ನ. 10: ಅಡಿಕೆ ವರ್ತಕನಿಗೆ ಚೂರಿಯಿಂದ ತಿವಿದು ಲಕ್ಷಾಂತರ ರೂಪಾಯಿ ದೋಚಿದ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಗಾಗಲೇ ಉಪ್ಪಿನಂಗಡಿ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.     ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕೋಟೆಕನಿ ಮಿತ್ತಪದವಿನ ಅಫ್ರೀದ್ (22), ಸೋಮವಾರ ಪೇಟೆಯ ದೊಡ್ಡಹನಕೊಡು ಗ್ರಾಮದ ಕಾಗಡಿಕಟ್ಟೆ ನಿವಾಸಿ ಜುರೈಝ್ (20) ಮತ್ತು ಬಂಟ್ವಾಳದ  ಬಡಗಬೆಲ್ಲೂರು ಗ್ರಾಮದ ಶಾಲೆ ಬಳಿ ನಿವಾಸಿ, ಹಾಲಿ ಕಡೆಶಿವಾಲಯ ದೊಡ್ಡಾಜೆಯಲ್ಲಿ ವಾಸವಿರುವ ಮೊಹಮ್ಮದ್ […]

ಪೆರ್ನೆಯ ಅಡಿಕೆ ವ್ಯಾಪಾರಿಗೆ ಚೂರಿಯಿಂದ ಇರಿದು ಹಣ ದೋಚಿದ ಪ್ರಕರಣ ➤ ಮೂವರು ಕಿಲಾಡಿ ಆರೋಪಿಗಳ ಅರೇಸ್ಟ್ Read More »

ಕರಾವಳಿ

ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರುಪಾಲಾದ ನವ ಜೋಡಿ.!

(ನ್ಯೂಸ್ ಕಡಬ) newskadaba.com ಮೈಸೂರು ನ. 10: ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಮಾಡಿಸಲು ಹೋದ ಇಬ್ಬರು ನವ ಜೋಡಿಗಳು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಮೈಸೂರಿನಲ್ಲಿ ಕಳೆದ ದಿನ ನಡೆದಿದೆ.‌ ತಲಕಾಡಿನ ಮುಡುಕುತೊರೆ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡುತ್ತಿದ್ದಾಗ, ಆಯತಪ್ಪಿ ನದಿಗೆ ಬಿದ್ದ ನವಜೋಡಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚಂದ್ರ ಹಾಗೂ ಶಶಿಕಲಾ ಸಾವನ್ನಪ್ಪಿದವರು. ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು ಹಾಗೂ ಶಶಿಕಲಾ ಇದೇ ನವೆಂಬರ್ 22 ರಂದು

ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರುಪಾಲಾದ ನವ ಜೋಡಿ.! Read More »

ಕರ್ನಾಟಕ

ಕಡಬ : ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ.09:  ಕ್ರೀಡೆ ಹಾಗೂ ಪ್ರಿಂಟಿಂಗ್ ಗೆ ಸಂಬಂಧಿಸಿದ ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಇಂದು (ನ.09) ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.     ಮಾಥನ್ ಚಾಕೋ ಹಾಗೂ ಬೃಜಿತಾ ದಂಪತಿ ರಿಬ್ಬನ್ ಕಟ್ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಕೆರ್ಮಾಯಿ ಚರ್ಚ್‌ನ ಧರ್ಮಗುರು ಫಾ| ಪೀಟರ್ ಜಾನ್ ದೀಪ ಬೆಳಗಿಸಿ ಶುಭಹಾರೈಸಿದರು. ನೂತನ ಸಂಸ್ಥೆಯಲ್ಲಿ ಸ್ಮರಣಿಕೆ‌, ಗಿಫ್ಟ್ ಐಟಂ, ಮಗ್ ಪ್ರಿಂಟಿಂಗ್,

ಕಡಬ : ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಶುಭಾರಂಭ Read More »

ಕರಾವಳಿ

ಕಡಬ: ಶ್ರೀಶಕ್ತಿ ಮೇಲ್ವಿಚಾರಕಿಯಾದ ನಿವೃತ್ತ ಹೇಮರಾಮ್ ದಾಸ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕೆರ್ಮಾಯಿ, ನ.9: ಕಡಬ ವಲಯ ಶ್ರೀಶಕ್ತಿ ಮೇಲ್ವಿಚಾರಕಿಯಾಗಿ ನಿವೃತ್ತರಾದ ಹೇಮರಾಮ್ ದಾಸ್ ರವರಿಗೆ ಕೆರ್ಮಾಯಿ ಅಂಗನಾವಾಡಿ ಶ್ರೀಶಕ್ತಿ ಸದಸ್ಯರಿಂದ ಬೀಳ್ಕೊಡುಗೆ ಕಾರ್ಯಕ್ರಮವು ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶಾಂತರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.     ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ. ಸದಸ್ಯರಾದ ಮೇದಪ್ಪ ಗೌಡ ಡೆಪ್ಪುಣಿ, ಭವಾನಿಶಂಕರ ಮೇಲಂಟ, ಅಂಗನಾವಾಡಿ ಕಾರ್ಯಕರ್ತರಾದ ಮಮತ, ಸಹಾಯಕಿಯವರಾದ ಹರಿಣಾಕ್ಷಿ ಯವರು ಉಪಸ್ಥಿತರಿದ್ದರು. ಅಂಗನಾವಾಡಿ ಕಾರ್ಯಕರ್ತೆ ಮಮತ ಸ್ವಾಗತಿಸಿ, ಸುಶೀಲ ರವರು ವಂದಿಸಿದರು, ಕಾರ್ಯಕ್ರಮವನ್ನು ಅಮೀನಾ ರವರು ನಿರುಪಿಸಿದರು.    

ಕಡಬ: ಶ್ರೀಶಕ್ತಿ ಮೇಲ್ವಿಚಾರಕಿಯಾದ ನಿವೃತ್ತ ಹೇಮರಾಮ್ ದಾಸ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ Read More »

ಕರಾವಳಿ

ಅಯೋದ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ದೀಪ ಬೆಳಗಲು ವೆಬ್‌ಸೈಟ್ ಮೂಲಕ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಅಯೋಧ್ಯೆ, ನ.9: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ವರ್ಚುವಲ್ ದೀಪೋತ್ಸವಕ್ಕೆ ಕೊರೋನಾ ಕಾರಣದಿಂದಾಗಿ ಅಯೋಧ್ಯೆಗೆ ಬರಲಾಗದವರು ಈ ಬಾರಿ ವೆಬ್ ಸೈಟ್ ಮೂಲಕ ದೀಪ ಬೆಳಗಲು ಅವಕಾಶ ಕಲ್ಪಿಸಲಾಗುತ್ತಿದೆ.     ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ದೀಪೋತ್ಸವ ಆಯೋಜಿಸಲಾಗುತ್ತಿದ್ದು,ಕಳೆದ 500 ವರ್ಷಗಳಿಂದ ಬಾಕಿ ಇರುವ ಕಾರ್ಯಕ್ರಮ ಇದಾಗಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಕಚೇರಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ

ಅಯೋದ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ದೀಪ ಬೆಳಗಲು ವೆಬ್‌ಸೈಟ್ ಮೂಲಕ ವ್ಯವಸ್ಥೆ Read More »

ಕರಾವಳಿ

ಸುಳ್ಯ: ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಯೋಜನಾ ಕಛೇರಿಯಲ್ಲಿ ಜ್ಞಾನತಾಣ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ನ.9: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಇದರ ಆಯೋಜನೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ “ಜ್ಞಾನತಾಣ” ಕಾರ್ಯಕ್ರಮವು ಇಂದು ಸುಳ್ಯದ ಶ್ರೀ.ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು.   ಕಾರ್ಯಕ್ರಮದ ಉದ್ಘಾಟನೆಯನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ನೆರವೇರಿಸಿದರು. ಅಧ್ಯಕ್ಷತೆಯನ್ನು ಸುಳ್ಯ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಎನ್.ಎ.ರಾಮಚಂದ್ರ ವಹಿಸಿದ್ದರು. ಶಿಕ್ಷಣ ಸಂಯೋಜಕರಾದ ಚಂದ್ರಶೇಖರ, ಉಡುಪಿಯ ಶ್ರೀ.ಕ್ಷೇ.ಧ.ಗ್ರಾ.ಯೋಜನಾ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್, ಸುಳ್ಯ

ಸುಳ್ಯ: ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಯೋಜನಾ ಕಛೇರಿಯಲ್ಲಿ ಜ್ಞಾನತಾಣ ಕಾರ್ಯಕ್ರಮ Read More »

ಕರಾವಳಿ

ಕಾಸರಗೋಡು: ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ನ.9: ಬಂದ್ಯೋಡು ಸಮೀಪ ಅಡ್ಕದಲ್ಲಿ ನಡೆದ ಗುಂಡಿನ ದಾಳಿ ಹಾಗೂ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಕುಂಬಳೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉಳಿಯತ್ತಡ್ಕದ ಸಮದಾನಿ(28) ಎಂದು ಗುರುತಿಸಲಾಗಿದೆ.     ಈತನ ವಿರುದ್ದ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಎಂಟಕ್ಕೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣ, ಲೂಟಿ, ಗಾಂಜಾ ಪ್ರಕರಣಗಳು ಈತನ ಮೇಲಿದೆ. ಕೆಲ ದಿನಗಳ ಹಿಂದೆ ಮಂಜೇಶ್ವರ ಕೊಡ್ಲಮೊಗರು ಎಂಬಲ್ಲಿ ಪೊಲೀಸ್ ವಾಹನಕ್ಕೆ ಈತ ಇನ್ನೊಂದು

ಕಾಸರಗೋಡು: ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಖಾಕಿ ಬಲೆಗೆ Read More »

ಕರ್ನಾಟಕ, ಸಿನಿಮಾ

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 4 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ನ.9: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 4 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.     ಕಡಬ ತಾಲೂಕಿನ ಚಾರ್ವಕದ 45 ವರ್ಷದ ವ್ಯಕ್ತಿ, 9 ವರ್ಷದ ಬಾಲಕನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.  

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 4 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ Read More »

ಕರಾವಳಿ

ಟಾಲಿವುಡ್ ನಟ ಚಿರಂಜೀವಿಗೆ ಕೊರೊನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಹೈದರಾಬಾದ್ ನ. 09: ಟಾಲಿವುಡ್ ಖ್ಯಾತ ನಟ ಚಿರಂಜೀವಿ ಕೊನಿಡೆಲಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಖಚಿತಪಡಿಸಿದ್ದು, ಆಚಾರ್ಯ ಸಿನಿಮಾ ಚಿತ್ರೀಕರಣ ಆರಂಭಿಸುವುದಕ್ಕೂ ಮುನ್ನ ಕೊರೊನಾ ಟೆಸ್ಟ್ ಗೆ ಒಳಗಾದೆ. ಈ ವೇಳೆ ಪಾಸಿಟಿವ್ ವರದಿ ಬಂದಿದೆ.   ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ. ಹೀಗಾಗಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಕಳೆದ 5 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ

ಟಾಲಿವುಡ್ ನಟ ಚಿರಂಜೀವಿಗೆ ಕೊರೊನಾ ಪಾಸಿಟಿವ್ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಎ.ಬಿ. ಮನೋಹರ ರೈ ನೇಮಕ

(ನ್ಯೂಸ್ ಕಡಬ) newskadaba.com  ಕುಕ್ಕೆ ಸುಬ್ರಹ್ಮಣ್ಯ, ನ.9: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರನ್ನಾಗಿ ಬಿಜೆಪಿ ನಾಯಕರಾದ ಎ. ಬಿ. ಮನೋಹರ ರೈ ಯವರನ್ನು ನೇಮಕ ಮಾಡಲಾಯಿತು.     ಈ ಹಿಂದೆ ಕಡಬ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬರವರು ಅಧ್ಯಕ್ಷರಾಗಿದ್ದು, ಇದೀಗ ರಾಜಕೀಯ ಪಕ್ಷದ ಪದಾಧಿಕಾರಿಗಳಾಗಿರುವವರು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರಬಾರದೆಂಬ ನಿಯಮದಿಂದ ಬದಲಾಯಿಸಿ, ಎ.ಬಿ. ಮನೋಹರ ರೈ ಯವರನ್ನು ಇಂದು ಶಾಸಕರ ನೇತೃತ್ವದಲ್ಲಿ ಅಧಿಕಾರವನ್ನು ಸ್ವೀಕಾರಗೈದರು.    

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಎ.ಬಿ. ಮನೋಹರ ರೈ ನೇಮಕ Read More »

ಕರಾವಳಿ
Scroll to Top