ಕುಖ್ಯಾತ ಭೂಗಳ್ಳ ಜಾನ್ ಮೋಸೆಸ್ ಬಂಧನ.!      

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24.  ನಕಲಿ ಆಸ್ತಿ ದಾಖಲೆಗಳನ್ನು ಸೃಷ್ಟಿಸಿ ನಗರದಲ್ಲಿ 100 ಕ್ಕೂ ಹೆಚ್ಚು ನಿವೇಶನಗಳನ್ನು ಕಬಳಿಸಿದ ಆರೋಪದ ಮೇಲೆ ಕುಖ್ಯಾತ ಭೂಗಳ್ಳರ ವಿರುದ್ಧ ಸಿಐಡಿ ಕಠಿಣ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ, 2000 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎನ್ನಲಾಗಿದೆ. KCOCA ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಮುಂದಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ. ಸಿಐಡಿ ಅಧಿಕಾರಿಗಳು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೋಸೆಸ್‌ನ ಸಹಚರರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ […]

ಕುಖ್ಯಾತ ಭೂಗಳ್ಳ ಜಾನ್ ಮೋಸೆಸ್ ಬಂಧನ.!       Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಅಪರಿಚಿತ ಕಾರು ಢಿಕ್ಕಿ.!   ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24. ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಆಯುಷ್ ಅಯ್ಯಪ್ಪ(21) ಎಂದು ಗುರುತಿಸಲಾಗಿದೆ. ಈತ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಅಪರಿಚಿತ ಕಾರು ಢಿಕ್ಕಿ.!   ಯುವಕನೋರ್ವ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ವ್ಯಕ್ತಿ ನಾಪತ್ತೆ.! ಪತ್ತೆಗಾಗಿ ಕುಟುಂಬಸ್ಥರ ಮನವಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು.24. ಕಳೆದ ಐದು ದಿನದಿಂದ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಮಾಣಿಮಜಲು ಗ್ರಾಮದಿಂದ ಯುವಕನೊಬ್ಬ ಕಾಣೆಯಾಗಿದ್ದಾನೆ ಎಂದು ವರದಿಯಾಗಿದ್ದು, ನಾಪತ್ತೆಯಾದ ಯುವಕನನ್ನು ಸಮದ್ ಎಂದು ಗುರುತಿಸಲಾಗಿದೆ. ಸಮದ್ ಮೂರು ಮಕ್ಕಳ ತಂದೆಯಾಗಿದ್ದು, ಆತ ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣ ಬಂಟ್ವಾಳ ಟೌನ್ ಪೋಲಿಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಥವಾ +91 90082 18612, +91 9901090586 ನಂಬರಿಗೆ ತಿಳಿಸಬೇಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ವ್ಯಕ್ತಿ ನಾಪತ್ತೆ.! ಪತ್ತೆಗಾಗಿ ಕುಟುಂಬಸ್ಥರ ಮನವಿ Read More »

ಕರಾವಳಿ, ಕರ್ನಾಟಕ

ನೀಟ್ ಯುಜಿ ಮರುಪರೀಕ್ಷೆಯ ಮನವಿ ತಿರಸ್ಕರಿಸಿದ ಸುಪ್ರಿಂ ಕೋರ್ಟ್

(ನ್ಯೂಸ್ ಕಡಬ)newskadaba.com ನವದೆಹಲಿ, ಜು.24. ನೀಟ್ಯು್ಜಿ 2024 ಮರುಪರೀಕ್ಷೆಯ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅರ್ಜಿದಾರರು ಆರೋಪಿಸಿದಂತೆ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಗೆ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಿತು.ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಆರೋಪಿಸಿದಂತೆ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಯನ್ನು ತೋರಿಸಲು ತನ್ನ ಮುಂದೆ

ನೀಟ್ ಯುಜಿ ಮರುಪರೀಕ್ಷೆಯ ಮನವಿ ತಿರಸ್ಕರಿಸಿದ ಸುಪ್ರಿಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಉಡುಪಿ, ಜು.24. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯೋರ್ವಳು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ.  ಮೃತ ಯುವತಿಯನ್ನು ನಯನಾ (17) ಎಂದು ಗುರುತಿಸಲಾಗಿದೆ. ನಯನಾ ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕವಾಗಿ ನೊಂದು ಫ್ಯಾನ್‌ ಗೆ ಚೂಡಿದಾರ್ ಕಟ್ಟಿಕೊಂಡು ಮನೆಯ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.  

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ವಾರಿಸುದಾರರಿಲ್ಲದ ಶವ ಸಂಸ್ಕಾರ 

(ನ್ಯೂಸ್ ಕಡಬ)newskadaba.com ಉಡುಪಿ, ಜು.24. 4 ವರ್ಷಗಳಿಂದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದ ವೃದ್ಧರು ನಿಧನ ಹೊಂದಿದ್ದು, ಸಂಬಂಧಿಕರ ಪತ್ತೆಯಾಗದೆ ಇರುವುದರಿಂದ ವಿಶು ಶೆಟ್ಟಿಯವರು ವೃದ್ಧರ ಶವ ಸಂಸ್ಕಾರವನ್ನು ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ನೆರವೇರಿಸಿದರು ಎನ್ನಲಾಗಿದೆ. ಮೃತರನ್ನು ವೃದ್ಧ ನಾಗಪ್ಪ ನಾಡಾರ್(85) ಎಂದು ಗುರುತಿಸಲಾಗಿದೆ. ಸಂಬಂಧಿಕರ ಪತ್ತೆಗೆ ಮಾಧ್ಯಮ ಪ್ರಕಟಣೆ ನೀಡಿದರೂ ಸಂಬಂಧಿಕರು ಪತ್ತೆ ಆಗಲಿಲ್ಲ. ಶವ ಸಂಸ್ಕಾರದಲ್ಲಿ ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲ ಹಾಗೂ ಆಶ್ರಮ ವಾಸಿಗಳು ಸಹಕರಿಸಿದರು. ಅಂಬಲಪಾಡಿ ಕೃಷ್ಣ ರವರು ಜೆ

ಉಡುಪಿ: ವಾರಿಸುದಾರರಿಲ್ಲದ ಶವ ಸಂಸ್ಕಾರ  Read More »

ಕರಾವಳಿ

ಕೇರಳದಲ್ಲಿ ನಿಫಾ ಕೇಸ್ ಪತ್ತೆ ಹಿನ್ನಲೆ ದ.ಕ ಜಿಲ್ಲೆಯಲ್ಲಿ ಕಟ್ಟೆಚ್ಚರಕ್ಕೆ ಕ್ರಮ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.24. ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ನಿಫಾ ವೈರಸ್‌ ಸೋಂಕಿಗೆ ತುತ್ತಾಗಿ ಕೇರಳದ ಮಲಪುರಂ ಜಿಲ್ಲೆಯ 14 ವರ್ಷದ ಬಾಲಕ ಇತ್ತೀಚೆಗೆ ಮೃತಪಟ್ಟಿದ್ದು, ಹೀಗಾಗಿ ಕೇರಳಕ್ಕೆ ಹೊಂದಿಕೊಂಡಿರುವ ದ.ಕ. ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.  ದ.ಕ. ಜಿಲ್ಲೆಗೆ ಶಿಕ್ಷಣ, ಚಿಕಿತ್ಸೆ ಮುಂತಾದ ಕಾರಣಗಳಿಗಾಗಿ ಕೇರಳದಿಂದ ಅನೇಕ ಮಂದಿ ಆಗಮಿಸುತ್ತಾರೆ. ರೋಗ ಲಕ್ಷಣ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸುವಂತೆ

ಕೇರಳದಲ್ಲಿ ನಿಫಾ ಕೇಸ್ ಪತ್ತೆ ಹಿನ್ನಲೆ ದ.ಕ ಜಿಲ್ಲೆಯಲ್ಲಿ ಕಟ್ಟೆಚ್ಚರಕ್ಕೆ ಕ್ರಮ Read More »

ಕರಾವಳಿ

ಗಾಳಿ ಮಳೆಗೆ ಏಕಾಏಕಿ ಉರುಳಿಬಿದ್ದ ವಿದ್ಯುತ್ ಕಂಬ ಕೆಲಕಾಲ ವಾಹನ ಸಂಚಾರ ಸ್ಥಗಿತ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು.24. ಭಾರೀ ಗಾಳಿ ಮಳೆಗೆ ವಿದ್ಯುತ್ ಕಂಬವೊಂದು ಉರುಳಿಬಿದ್ದ ಘಟನೆ ಬಿ.ಸಿ.ರೋಡ್ ಸರ್ಕಲ್ ಬಳಿ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಏಕಾಏಕಿ ವಿದ್ಯುತ್ ಕಂಬ ಉರುಳಿಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾಗಿದ್ದು, ಈಗಾಗಲೇ ಬಿ.ಸಿ.ರೋಡ್ ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸುತ್ತಲೂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂದರ್ಭ ಸವಾರರಿಗೆ ಚಾಲಕರಿಗೆ ಗೊಂದಲಗಳು ಉಂಟಾಗುತ್ತಿತ್ತು. ಇನ್ನು ಈ ಘಟನೆಯಿಂದಾಗಿ ವಾಹನ

ಗಾಳಿ ಮಳೆಗೆ ಏಕಾಏಕಿ ಉರುಳಿಬಿದ್ದ ವಿದ್ಯುತ್ ಕಂಬ ಕೆಲಕಾಲ ವಾಹನ ಸಂಚಾರ ಸ್ಥಗಿತ Read More »

ಕರಾವಳಿ

Fundraising Management Software for Nonprofits

Fundraising management software helps charities increase their matching donation revenue. It achieves this by simplifying the identification and cultivation of potential donors. This kind of software combines constituent data in a unified database and provides powerful donor communication tools to help build relationships with supporters. It can also streamline various types of fundraising activities including

Fundraising Management Software for Nonprofits Read More »

ಕರಾವಳಿ

ST/SC ಹಣ ಗ್ಯಾರಂಟಿ ಯೋಜನೆಗೆ ಬಳಕೆ BJP-JDS ಸಭಾತ್ಯಾಗ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.23. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಹಣವನ್ನು (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ–ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು ಎನ್ನಲಾಗಿದೆ. ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ-ಟಿಎಸ್‌ಪಿ ಹಣ ಬಳಕೆ ಮಾಡುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಸಿ.ಟಿ. ರವಿ, ಕೇಶವ ಪ್ರಸಾದ್, ಸುನೀಲ್‌ ವಲ್ಯಾ‍ಪುರೆ, ಡಾ.ಧನಂಜಯ ಸರ್ಜಿ ಕೂಡ ಧ್ವನಿಗೂಡಿಸಿದರು. ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಎಲ್ಲ

ST/SC ಹಣ ಗ್ಯಾರಂಟಿ ಯೋಜನೆಗೆ ಬಳಕೆ BJP-JDS ಸಭಾತ್ಯಾಗ Read More »

ಕರ್ನಾಟಕ
Scroll to Top