‘ಹಳೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ’             ಡಿಕೆಶಿ ವಿರುದ್ಧ ಹೆಚ್‌ಡಿಕೆ ಟಾಂಗ್‌          

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.08.   ತಮ್ಮ ಬಗ್ಗೆ ವೀಡಿಯೋ ಪ್ಲೇ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅವರು ತಮ್ಮ ಹಳೆಯ ಚಾಳಿ ಬಿಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಮೈಸೂರು ಚಲೋ ಐದನೇ ದಿನದ ಪಾದಯಾತ್ರೆ ವೇಳೆ ಮಂಡ್ಯದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಬಹಳಷ್ಟು ಜನರು ಕೊಚ್ಚೆಗಳ ಬಗ್ಗೆ ಮಾತಾಡಬಾರದು ಎಂದು ಸಲಹೆ ಕೊಟ್ಟಿದ್ದಾರೆ. ನಾನು ಮಾತನಾಡಬಾರದು ಎಂದು ಕೊಂಡಿದ್ದೆ. ಮಂಡ್ಯದಲ್ಲಿ ಅವರು ಒಂದು ವೀಡಿಯೋ ಪ್ಲೇ ಮಾಡಿದ್ದಾರೆ. […]

 ‘ಹಳೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ’             ಡಿಕೆಶಿ ವಿರುದ್ಧ ಹೆಚ್‌ಡಿಕೆ ಟಾಂಗ್‌           Read More »

ಕರ್ನಾಟಕ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ-ಹತ್ಯೆ ಪ್ರಕರಣ        ಆರೋಪಿ ಅರೆಸ್ಟ್     

(ನ್ಯೂಸ್ ಕಡಬ)newskadaba.com ಮಂಗಳೂರು, ಆ.08.  14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 51 ವರ್ಷದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕತ್ತು ಹಿಸುಕಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ನಂತರ ಬಾಲಕಿಯ ಚಿಕ್ಕಪ್ಪ ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2024 ಕಲಂ 103 (1) ಬಿ.ಎನ್.ಎಸ್.ಯಂತೆ ಪ್ರಕರಣ ದಾಖಲಾಗಿರುತ್ತದೆ ಎನ್ನಲಾಗಿದೆ. ಆರೋಪಿಯನ್ನು ಫಕೀರಪ್ಪ ಹಣಮಪ್ಪ ಮಾದರ(51) ಎಂದು ಗುರುತಿಸಲಾಗಿದ್ದು, ಮೂಲತಃ ಬೆಳಗಾವಿ ಜಿಲ್ಲೆಯ ಹಂಚಿನಾಳ್,

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ-ಹತ್ಯೆ ಪ್ರಕರಣ        ಆರೋಪಿ ಅರೆಸ್ಟ್      Read More »

ಕರಾವಳಿ, ಕ್ರೈಮ್ ನ್ಯೂಸ್

 ಪ್ರವಾಸಿಗರನ್ನು ಸೆಳೆಯುತ್ತಿದೆ ಮಳೆಗಾಲದಲ್ಲಿ ಮಣಿಪಾಲದ ಅರ್ಬಿ ಜಲಪಾತ

(ನ್ಯೂಸ್ ಕಡಬ)newskadaba.com ಉಡುಪಿ, ಆ.07.  ಮಣಿಪಾಲದಲ್ಲಿ ಆರ್ಬಿ ಜಲಪಾತವು ಮಳೆಗಾಲದಲ್ಲಿ ಚಿಮ್ಮಿ, ಉಕ್ಕಿ ಹರಿದು ಅತ್ಯದ್ಭುತ ಪ್ರಾಕೃತಿಕ ದೃಶ್ಯವಾಗಿ ಮಾರ್ಪಾಡಾಗಿದ್ದು, ಜುಲೈನಲ್ಲಿ ಸುರಿದ ಭಾರಿ ಮಳೆಗೆ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದಟ್ಟವಾದ ಕಾಡಿನ ನಡುವೆ ಇರುವ ಈ ಅರ್ಬಿ ಜಲಪಾತವು ಬಂಡೆಗಳ ಮೇಲಿನ ನಿರಂತರ ಹರಿವಿನಲ್ಲಿ ಕೆಳಕ್ಕೆ ಬೀಳುವ ಮೂಲಕ ಅದ್ಬುತ ನೋಟದಲ್ಲಿ ಮನಸೂರೆಗೊಳಿಸುತ್ತದೆ. ಜಲಪಾತವು ಹಲವಾರು ಶುದ್ಧ ನೀರಿನ ಕ್ಯಾಸ್ಕೇಡ್‌ಗಳ ಮೂಲಕ ಹರಿಯುವ ದೃಶ್ಯವು ಪ್ರವಾಸಿಗರಿಗೆ ಸಂತೋಷವನ್ನು ನೀಡುತ್ತದೆ, ಇದು ಪ್ರಕೃತಿಯ ಪ್ರಿಯರಿಗೆ ಮನಸೂರೆಗೊಳಿಸುತ್ತದೆ.

 ಪ್ರವಾಸಿಗರನ್ನು ಸೆಳೆಯುತ್ತಿದೆ ಮಳೆಗಾಲದಲ್ಲಿ ಮಣಿಪಾಲದ ಅರ್ಬಿ ಜಲಪಾತ Read More »

ಕರಾವಳಿ

ಉಡುಪಿ: ಬೀದಿ ನಾಯಿಯಿಂದ ಗಾಯಗೊಂಡಿದ್ದ ನವಿಲಿನ ರಕ್ಷಣೆ

(ನ್ಯೂಸ್ ಕಡಬ)newskadaba.com ಉಡುಪಿ, ಆ.07.  ಬೀದಿನಾಯಿಯಿಂದ ಗಾಯಗೊಂಡಿದ್ದ ಹೆಣ್ಣು ನವಿಲನ್ನು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ್ ವೊಲಕಾಡ್ ಅವರು ರಕ್ಷಿಸಿದ ಘಟನೆ ಉಡುಪಿಯ ಭಹ್ಮಗಿರಿಯಲ್ಲಿ ನಡೆದಿದೆ. ಬೀದಿ ನಾಯಿಯೊಂದು ನವಿಲಿನ ಮೇಲೆ ದಾಳಿ ಮಾಡಿದ್ದು, ಹಾರಲು ಸಾಧ್ಯವಾಗದೆ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದೆ.ನವಿಲು ಕೆಸರಿನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಿತ್ಯನಾಡು ವೊಳಕಾಡುಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನವಿಲನ್ನು ತನ್ನ ರಕ್ಷಣೆಗೆ ತೆಗೆದುಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗಾಯಗೊಂಡ ಹಕ್ಕಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಅರಣ್ಯ ಇಲಾಖೆ ಘೋಷಿಸಿದೆ.

ಉಡುಪಿ: ಬೀದಿ ನಾಯಿಯಿಂದ ಗಾಯಗೊಂಡಿದ್ದ ನವಿಲಿನ ರಕ್ಷಣೆ Read More »

ಕರಾವಳಿ

7 ತಿಂಗಳ ಗರ್ಭಿಣಿ ಅಪಘಾತದಲ್ಲಿ ಮೃತ್ಯು                ರಸ್ತೆಯಲ್ಲೇ ಕಣ್ಣೀರಿಟ್ಟ ಪತಿ        

(ನ್ಯೂಸ್ ಕಡಬ)newskadaba.com ನೆಲಮಂಗಲ, ಆ.07.  ಪತಿ ಎದುರಲ್ಲೇ 7 ತಿಂಗಳ ಗರ್ಭಿಣಿ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಡೆಹಳ್ಳಿ ಗ್ರಾಮದ ಬಳಿ ನಡೆದಿದೆ. ಸಿಂಚನ(30) ಮಗುವಿನೊಂದಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನೆಲಮಂಗಲ ತಾಲೂಕಿನ ತೋಟನಹಳ್ಳಿ ಗ್ರಾಮದ ಮಂಜುನಾಥ್, ಸಿಂಚನ ದಂಪತಿ  ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಸ್ಕೂಟರ್‌ನಲ್ಲಿ ವಾಪಸ್ ತೆರಳುವಾಗ ಹಿಂಬದಿಯಿಂದ ಲಾರಿ ಗುದ್ದಿದೆ.ಸಿಂಚನ ರಸ್ತೆಗೆ ಬಿದ್ದಿದ್ದು ಅವರ ಮೇಲೆ ಲಾರಿ ಚಕ್ರ ಹರಿದಿದೆ. ಪರಿಣಾಮ ಸಿಂಚನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

7 ತಿಂಗಳ ಗರ್ಭಿಣಿ ಅಪಘಾತದಲ್ಲಿ ಮೃತ್ಯು                ರಸ್ತೆಯಲ್ಲೇ ಕಣ್ಣೀರಿಟ್ಟ ಪತಿ         Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.07.  ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು 19 ವರ್ಷದ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನು ಅತುಲ್ಯ ಜಿ ಎಂದು ಗುರುತಿಸಲಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಅತುಲ್ಯ ಚಿಕ್ಕಬಾಣಾವರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.

ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮದುವೆಯಾಗುವುದಾಗಿ ನಂಬಿಸಿ ವಂಚನೆ            ಆರೋಪಿ ಅರೆಸ್ಟ್             

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಆ.07.  ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಆಕೆಯಿಂದಲೇ ಲಕ್ಷ ಲಕ್ಷ ಹಣ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಬಿಜೆಪಿ ಮಾಧ್ಯಮ ಪ್ರಮುಖನೋರ್ವನನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಮಾಜಿ ಸಂಚಾಲಕ ಕಲ್ಯಾಣಿ ಶರತ್ ಎಸ್ ವಿ ಎಂದು ಗುರುತಿಸಲಾಗಿದೆ.ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ವಂಚನೆ            ಆರೋಪಿ ಅರೆಸ್ಟ್              Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೇಣು ಬಿಗಿದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಆ.07.  ಮಲ್ಲೇಶ್ವರ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಪತ್ತೆಗಾಗಿ ನಗರದ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ 15ನೇ ಕ್ರಾಸ್‌ನಲ್ಲಿರುವ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಗಿದ್ದು, ಮಹಿಳೆ ಕಟ್ಟಡದ ನಿವಾಸಿಯಾಗಿರಲಿಲ್ಲ. ಬೆಳಿಗ್ಗೆ 7.30 ರಿಂದ 7.45 ರ ನಡುವೆ ನಾಯಿಯೊಂದು ನಿರಂತರವಾಗಿ ಬೊಗಳಲು ಪ್ರಾರಂಭಿಸಿದ ನಂತರ ಕಟ್ಟಡದ ನಿವಾಸಿಯೊಬ್ಬರು ತಮ್ಮ ಫ್ಲಾಟ್‌ನಿಂದ ಹೊರಗೆ ಬಂದು ಪರಿಶೀಲಿಸಿದಾಗ

ನೇಣು ಬಿಗಿದು ಮಹಿಳೆ ಆತ್ಮಹತ್ಯೆ Read More »

ಕರ್ನಾಟಕ

ಬಜೆಟ್ ಗೆ ವ್ಯಾಪಕ ಟೀಕೆ            ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ)newskadaba.com  ನವದೆಹಲಿ, ಆ.07.  ಮೊದಲು ಮನೆಗಳನ್ನು ಖರೀದಿಸಿದ ವ್ಯಕ್ತಿಗಳಿಗೆ ಭೂಮಿ ಮಾರಾಟದ ಮೇಲಿನ LTCG (ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ) ತೆರಿಗೆಗೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಎರಡು ತೆರಿಗೆ ದರಗಳ ನಡುವೆ ಆಯ್ಕೆ ನೀಡುವ ಮೂಲಕ ಸರ್ಕಾರವು ಮಹತ್ವದ ಪರಿಹಾರವನ್ನು ನಾಗರಿಕರಿಗೆ ಕಲ್ಪಿಸಿದೆ. ಬಜೆಟ್ 2024-25 ಎಲ್ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು(indexation benefits) ತೆಗೆದು ಹಾಕಿತು. ಹೊಸ ದರಗಳು ಜಾರಿಗೆ ಬಂದಿದೆ.

ಬಜೆಟ್ ಗೆ ವ್ಯಾಪಕ ಟೀಕೆ            ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ      PIL ವಜಾ                         

(ನ್ಯೂಸ್ ಕಡಬ)newskadaba.com  ಬೆಂಗಳೂರು, ಆ.07.  ಕರ್ನಾಟಕದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ (ಕನ್ನಡಿಗರಿಗೆ) ಮೀಸಲು ಕಲ್ಪಿಸುವ ಉದ್ದೇಶಿತ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ. ನಗರದ ಬಿಳೇಕಹಳ್ಳಿಯ ಲೆಕ್ಕ ಪರಿಶೋಧಕಿ ಡಾ.ಆರ್‌. ಅಮೃತಲಕ್ಷ್ಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ ಎನ್ನಲಾಗಿದೆ.

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ      PIL ವಜಾ                          Read More »

ಕರ್ನಾಟಕ
Scroll to Top