ಕರ್ನಾಟಕ

ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10ಕ್ಕೆ-ಸಣ್ಣ ಪ್ಯಾಕ್

(ನ್ಯೂಸ್‌ ಕಡಬ) newskadaba.com,ಜ.24 ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಯಾಕ್‌ಗಳನ್ನು ಪರಿಚಯಿಸಿದೆ… ಹೊಸ ಬೆಲೆ ನಿಗದಿ ಪ್ರಕಾರ, ನಂದಿನಿ ಹಾಲು 160 ಮಿಲಿಲೀಟರ್ ಪ್ಯಾಕ್‌ನಲ್ಲಿ ರೂ.10ಕ್ಕೆ ಮಾರಾಟವಾಗಲಿದೆ. ಮೊಸರು 140 ಮಿಲಿಲೀಟರ್ ಪ್ಯಾಕ್‌ನಲ್ಲಿ ಇದೇ ದರಕ್ಕೆ ಲಭ್ಯವಾಗುತ್ತದೆ. ಇದುವರೆಗೆ ಹಾಲು ಮತ್ತು ಮೊಸರು 200 ಮಿಲಿಲೀಟರ್ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತಿತ್ತು. […]

ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10ಕ್ಕೆ-ಸಣ್ಣ ಪ್ಯಾಕ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ : ಸಾಲ ಮರುಪಾವತಿಸದೆ ನಕಲಿ ಪತ್ರ ತಯಾರಿಸಿ ಬ್ಯಾಂಕ್‌ಗೆ ವಂಚಿಸಿದ ಖದೀಮರು

(ನ್ಯೂಸ್‌ ಕಡಬ) newskadaba.com,ಜ.24 ಬೆಳ್ತಂಗಡಿ: ವಾಹನವೊಂದಕ್ಕೆ ಬ್ಯಾಂಕ್ ಆಫ್ ಬರೋಡದಿಂದ ತೆಗೆದ ಲಕ್ಷಾಂತರ ರೂ ಸಾಲವನ್ನು ಕಟ್ಟದೆ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್ ಮುಖ್ಯಸ್ಥರ ಪೋರ್ಜರಿ ಸಹಿಯನ್ನು ಲೆಟರ್ ಹೆಸ್ ನಲ್ಲಿ ಬಳಸಿ ಸಾಲ ಸಂಪೂರ್ಣ ಸಂದಾಯವಾಗಿರುವುದಾಗಿ ಸುಳ್ಳು ಪತ್ರವನ್ನು ಆರ್.ಟಿ.ಒ.ಕಚೇರಿಗೆ ನೀಡಿರುವುದರ ಕುರಿತು ದೂರು ದಾಖಲಾಗಿದೆ. ಮೂಲತಃ ಬೆಳ್ತಂಗಡಿ ನಿವಾಸಿಗಳಾದ ತನ್ವಿರ್ ಹಾಗೂ ಅವರ ತಾಯಿ ನೆಬಿಶಾ ಮತ್ತು ಜುನೈದ್ ಮೆಲ್ಕಾರ್ ಹಾಗೂ ರಮೀಝ್ ಆಲಿಶ್ ಉಪ್ಪಿನಂಗಡಿ ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ

ಬೆಳ್ತಂಗಡಿ : ಸಾಲ ಮರುಪಾವತಿಸದೆ ನಕಲಿ ಪತ್ರ ತಯಾರಿಸಿ ಬ್ಯಾಂಕ್‌ಗೆ ವಂಚಿಸಿದ ಖದೀಮರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿಯಲ್ಲಿ ಲಾರಿ ಪ್ಲೇಟ್ ಕಟ್; ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

(ನ್ಯೂಸ್‌ ಕಡಬ) newskadaba.com,ಜ.24 ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ತಿರುವು ಪಡೆದುಕೊಳ್ಳಲು ಸಾಧ್ಯವಾಗದೆ ಪ್ಲೇಟ್ ಕಟ್ ಆಗಿ ರಸ್ತೆ ಮಧ್ಯೆ ಬಾಕಿಯಾಗಿ ಟ್ರಾಫಿಕ್ ಜಾಮ್ ಉಂಟಾದ ಘಟನೆ ಶುಕ್ರವಾರ ಸಂಜೆ ನಡೆದಿದ್ದು ರಾತ್ರಿವರೆಗೂ ಟ್ರಾಫಿಕ್ ಜಾಮ್ ಮುಂದುವರಿದಿದೆ. ಪ್ಲೇಟ್ ಕಟ್ ಆಗಿರುವ ಕಾರಣದಿಂದ ಲಾರಿ ರಸ್ತೆಯಲ್ಲೇ ನಿಂತ ಕಾರಣ ಘನ ವಾಹನ ಸಂಚಾರಕ್ಕೆ ಅಡ್ಡಿ ಉಂಟಾ ಯಿತು. ಲಘು ವಾಹನಗಳಿಗೆ ಸಂಚರಿಸುವಷ್ಟು ಜಾಗವಿದ್ದು ಬೇಕಾಬಿಟ್ಟಿಯಾಗಿ ವಾಹನಗಳನ್ನು ನುಗ್ಗಿಸಿದ ಕಾರಣ ಮತ್ತಷ್ಟು

ಬೆಳ್ತಂಗಡಿಯಲ್ಲಿ ಲಾರಿ ಪ್ಲೇಟ್ ಕಟ್; ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಜ.24 : ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಒಣ ಹವೆ ಇರಲಿದ್ದು, ಚಳಿ ಮುಂದುವರೆಯಲಿದೆ. ಬೆಳಗಿನ ಜಾವ ಅಲ್ಲಲ್ಲಿ ಮಂಜಿನ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.. ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ 3 ರಿಂದ 4 ದಿನಗಳವರೆಗೆ ಕನಿಷ್ಠ ತಾಪಮಾನ ಸಾಮಾನ್ಯಕಿಂತ ಕಡಿಮೆಯಿರಲಿದೆ ಎಂದು ವರದಿ ಮಾಡಿದೆ.. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚಳ ರೈತರಿಗೆ ಅನೂಕಲಕಾರಿಯಾಗಿರುವ ಸಾಲ ಯೋಜನೆ

(ನ್ಯೂಸ್‌ ಕಡಬ) newskadaba.com,ಜ.24 ಬೆಂಗಳೂರು: ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲಕ್ಕೆ ನಿರೀಕ್ಷೆಗೂ ಮೀರಿ ಬೇಡಿಕೆ ಹೆಚ್ಚಿದ್ದು, ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ. ಕೃಷಿ ಚಟುವಟಿಕೆ ಪ್ರೋತ್ಸಾಹಿಸಲು ಹಾಗೂ ಗ್ರಾಮೀಣ ಭಾಗದ ಆರ್ಥಿಕತೆಯ ಜೀವನಾಡಿಯಾದ ಸಹಕಾರ ವಲಯದ ಬಲವರ್ಧನೆಗಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು 2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿತ್ತು. ಸಹಕಾರ ಸಾಲ ಸಂರಚನೆಯ

ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚಳ ರೈತರಿಗೆ ಅನೂಕಲಕಾರಿಯಾಗಿರುವ ಸಾಲ ಯೋಜನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜನಗಣತಿಯ ಮೊದಲ ಹಂತಕ್ಕೆ ತಯಾರಿ; 33 ಪ್ರಶ್ನೆಗಳನ್ನು ಸಿದ್ಧಪಡಿಸಿದ ಕೇಂದ್ರ ಸರ್ಕಾರ

(ನ್ಯೂಸ್‌ ಕಡಬ) newskadaba.com,ಜ,23 ನವದೆಹಲಿ: 2026-27 ರ ಜನಗಣತಿಯ ಹಂತ 1 ರಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ವಿವರಿಸುವ ಅಧಿಕೃತ ಅಧಿಸೂಚನೆಯನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ. ಇದನ್ನು ಮನೆ ಪಟ್ಟಿ ಮತ್ತು ವಸತಿ ಗಣತಿ ಎಂದೂ ಕರೆಯಲಾಗುತ್ತದೆ. ಗೃಹ ಸಚಿವಾಲಯ ಹೊರಡಿಸಿರುವ ಮತ್ತು ಗೆಜೆಟ್‌ನಲ್ಲಿ ಪ್ರಕಟವಾದ ಈ ಅಧಿಸೂಚನೆಯು, ದೇಶಾದ್ಯಂತ ಜನಗಣತಿ ಅಧಿಕಾರಿಗಳು ಮನೆಗಳಿಗೆ ಕೇಳುವ 33 ನಿರ್ದಿಷ್ಟ ಪ್ರಶ್ನೆಗಳನ್ನು ವಿವರಿಸಿದೆ. ಈ ಮೊದಲ ಹಂತವು ಮನೆಗಳ ಗುಣಮಟ್ಟ, ನೀರು, ವಿದ್ಯುತ್, ಶೌಚಾಲಯ, ಅಡುಗೆ ಸೌಲಭ್ಯಗಳು, ಆಸ್ತಿಗಳು ಮುಂತಾದವುಗಳನ್ನು

ಜನಗಣತಿಯ ಮೊದಲ ಹಂತಕ್ಕೆ ತಯಾರಿ; 33 ಪ್ರಶ್ನೆಗಳನ್ನು ಸಿದ್ಧಪಡಿಸಿದ ಕೇಂದ್ರ ಸರ್ಕಾರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಿಕ್ಷಕರು ಬೈದಿದ್ದಕ್ಕೆ ಬೇಸತ್ತು ವಿದ್ಯಾರ್ಥಿ ದುರಂತ ಅಂತ್ಯ? ಶಾಲಾ ಆವರಣದಲ್ಲೇ ಬಾಲಕ ಸಾವು

(ನ್ಯೂಸ್‌ ಕಡಬ) newskadaba.com,ಜ,23 ಯಾದಗಿರಿ : ಅಕ್ಷರ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ವಿದ್ಯಾರ್ಥಿಯೊಬ್ಬ ಶಾಲಾ ಆವರಣದಲ್ಲೇ ಅಕಾಲಿಕ ಮರಣಕ್ಕೀಡಾಗಿರುವ ಘಟನೆ ಯಾದಗಿರಿ ಜಿಲ್ಲೆಯ  ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಶಿಕ್ಷಕರ ನಿಂದನೆಯೇ ಬಾಲಕನ ಈ ನಿರ್ಧಾರಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. . ಈತ  ಸರ್ಕಾರಿ ಶಾಲೆಯಲ್ಲಿ  ವ್ಯಾಸಂಗ ಮಾಡುತ್ತಿದ್ದನು. ಜನವರಿ 21ರಂದು ಮಧ್ಯಾಹ್ನದ ವೇಳೆಗೆ ಶಾಲಾ ಆವರಣದಲ್ಲಿರುವ ಮರದ ಕೆಳಗೆ ಶವ ಪತ್ತೆಯಾಗಿದೆ. ಮರಕ್ಕೆ ಕಟ್ಟಿದ್ದ ಹಗ್ಗಕ್ಕೆ ಬಾಲಕ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ

ಶಿಕ್ಷಕರು ಬೈದಿದ್ದಕ್ಕೆ ಬೇಸತ್ತು ವಿದ್ಯಾರ್ಥಿ ದುರಂತ ಅಂತ್ಯ? ಶಾಲಾ ಆವರಣದಲ್ಲೇ ಬಾಲಕ ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

“ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಮ್ಯಾಕ್ಸ್ ಮಂಜು”

(ನ್ಯೂಸ್‌ ಕಡಬ) newskadaba.com,ಜ,23 : ಉಗ್ರಂ’, ‘ಮ್ಯಾಕ್ಸ್’ ಮುಂತಾದ ಸಿನಿಮಾಗಳಲ್ಲಿ ಅಬ್ಬರಿಸಿರುವ ಮಂಜು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉಗ್ರಂ ಮಂಜು ಅವರ ವಿವಾಹ ಮಹೋತ್ಸವ ಜರುಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಗ್ರಂ ಮಂಜು – ಸಂಧ್ಯಾ ಅವರ ಕಲ್ಯಾಣ ನೆರವೇರಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಮದುವೆ ಜರುಗಿದ್ದು, ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸಂಧ್ಯಾ ಕೊರಳಿಗೆ ಉಗ್ರಂ ಮಂಜು ಮಾಂಗಲ್ಯಧಾರಣೆ ಮಾಡಿದ್ದಾರೆ…..

“ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಮ್ಯಾಕ್ಸ್ ಮಂಜು” Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಹೆದ್ದಾರಿಯಲ್ಲಿ ಅಪ್ಪಳಿಸಿದ ಸಾವು ಲಾರಿ ಚಕ್ರದಡಿ ಸಿಲುಕಿ ಬ್ರಹ್ಮಾವರದ ಯುವಕ ದಾರುಣ ಸಾವು

(ನ್ಯೂಸ್‌ ಕಡಬ) newskadaba.com,ಜ,23 ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ಉಪ್ಪೂರು ಕೆಜಿ ರಸ್ತೆಯ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸರಕು ಸಾಗಣೆ ಲಾರಿಯ ಚಕ್ರದ ಅಡಿಯಲ್ಲಿ ಸಿಲುಕಿಕೊಂಡ ಬೈಕ್ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೃತರನ್ನು ಬ್ರಹ್ಮಾವರದ ಮಟಪಾಡಿ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಸವಾರನ ದೇಹವು ಛಿದ್ರವಾಗಿತ್ತು. ಅಪಘಾತದಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಹಾಲಿಂಗ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ

ಹೆದ್ದಾರಿಯಲ್ಲಿ ಅಪ್ಪಳಿಸಿದ ಸಾವು ಲಾರಿ ಚಕ್ರದಡಿ ಸಿಲುಕಿ ಬ್ರಹ್ಮಾವರದ ಯುವಕ ದಾರುಣ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಆರೋಪಿ ಬಂಧನ ಆಂಧ್ರಪ್ರದೇಶದಲ್ಲಿ ಉರ್ವಾ ಪೊಲೀಸರ ಯಶಸ್ವಿ ಕಾರ್ಯಾಚರಣೆ.

(ನ್ಯೂಸ್‌ ಕಡಬ) newskadaba.com,ಜ,23 ಮಂಗಳೂರು: 1997 ರಲ್ಲಿ ದಾಖಲಾದ ಸಂಚಲನ ಮೂಡಿಸಿದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಭಯಾನಕ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಸದಸ್ಯನನ್ನು ಮಂಗಳೂರು ನಗರದ ಉರ್ವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದ ವೆಂಕಟಪ್ಪ ಎಂಬುವರ ಪುತ್ರ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ಅಲಿಯಾಸ್ ಕೆ ಕೃಷ್ಣಪ್ಪ ಅಲಿಯಾಸ್ ಕೃಷ್ಣ (55) ಎಂದು ಗುರುತಿಸಲಾಗಿದೆ. ಅವರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಆರೋಪಿ ಬಂಧನ ಆಂಧ್ರಪ್ರದೇಶದಲ್ಲಿ ಉರ್ವಾ ಪೊಲೀಸರ ಯಶಸ್ವಿ ಕಾರ್ಯಾಚರಣೆ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top