ಕರ್ನಾಟಕ

ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ -ಮಗು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.3.ಮಹಿಳಾ ಚಾರ್ಟೆಟೆಡ್‌ ಅಕೌಂಟೆಟ್‌ಆಗಿದ್ದ ಭಾವನಾ ಎಂಬಾಕೆ ತನ್ನ ಎರಡು ವರ್ಷದ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌.ಟಿ.ನಗರದಪೊಲೀಸ್‌ ಠಾಣಾ ವಾಪ್ತಿಯಲ್ಲಿ ನೆನ್ನೆ ಸಂಜೆ ನಡೆದಿದೆ. ಆರ್‌.ಟಿ.ನಗರದ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ನಿವಾಸಿಯಾಗಿದ್ದ ಭಾವನಾ (29) ಹಾಗೂ ಆಕೆಯ ಎರಡು ವರ್ಷದ ಪುತ್ರ ದೇವಂತ್‌ ಮೃತರು. ಭಾವನಾಗೆ ಪತಿ ಹರಿಹಂಥ್‌ ಕಿರುಕುಳ ನೀಡುತ್ತಿದ್ದ. ಅದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಹರಿಹಂಥ್‌ನನ್ನು ವಶಕ್ಕೆ […]

ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ -ಮಗು Read More »

ಕರ್ನಾಟಕ

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದೆ ಪರದಾಡುತ್ತಿರುವ ಗಡಿ ಗ್ರಾಮಗಳು

(ನ್ಯೂಸ್ ಕಡಬ) newskadaba.com ಜಾಲ್ಸೂರು, ಜುಲೈ.1. ಈ ಗ್ರಾಮದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ತೆರೆಯಬೇಕೆನ್ನುವ ಕೂಗು 15 ವರ್ಷಗಳಿಂದ ಇದ್ದರೂ ಜನರ ಬೇಡಿಕೆ ಇನ್ನೂ ಈಡೇರಿಲ್ಲ.ಮೈಸೂರು-ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಲ್ಸೂರು ಗ್ರಾಮದಲ್ಲಿ ಸುಮಾರು 1,352 ಮನೆಗಳಿವೆ. 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ ಒಟ್ಟು 6,642 ಜನಸಂಖ್ಯೆ ಇದೆ.ಕೇರಳ- ಕರ್ನಾಟಕ ಗಡಿಭಾಗದ ಊರುಗಳ ಪ್ರಮುಖ ಪೇಟೆ ಜಾಲ್ಸೂರು. ಸರಕಾರಿ ಶಾಲೆ, ಬ್ಯಾಂಕ್‌, ಪೆಟ್ರೋಲ್ ಬಂಕ್‌, ಫ್ಯಾಕ್ಟರಿಗಳು ಎಲ್ಲವೂ ಇಲ್ಲಿವೆ. ಗ್ರಾಮದ ಮುಖ್ಯ ಪೇಟೆಯಾಗಿ ಬೆಳೆಯುತ್ತಿರುವ ಜಾಲ್ಸೂರಲ್ಲಿ ಪ್ರಾಥಮಿಕ ಆರೋಗ್ಯ

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದೆ ಪರದಾಡುತ್ತಿರುವ ಗಡಿ ಗ್ರಾಮಗಳು Read More »

ಕರ್ನಾಟಕ

ಸಾರಥಿ ಇಲ್ಲದ ಜೆಡಿಎಸ್ ಮಹಿಳಾ ಘಟಕಕ್ಕೆ ➤ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಮಹಿಳಾ ಘಟಕಕ್ಕೆ ಸಾರಥಿ ಇಲ್ಲದೆ 2018ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆಯ ರಥವನ್ನು ಜೆಡಿಎಸ್ ಎಳೆದದ್ದು ಇತಿಹಾಸ. ಸುಮಾರು 18 ತಿಂಗಳ ತರುವಾಯ ಜೆಡಿಎಸ್ ಮಹಿಳಾ ಘಟಕಕ್ಕೆ ಸಾರಥಿ ನೇಮಕ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಮೀಸಲಾತಿ ಕಲ್ಪಿಸಿಕೊಟ್ಟ ಜೆಡಿಎಸ್ ಮಹಿಳಾ ಘಟಕಕ್ಕೆ 18 ತಿಂಗಳಿಂದ ಅಧ್ಯಕ್ಷರೇ ಇರಲಿಲ್ಲ. ಮಧ್ಯಂತರ ಚುನಾವಣೆ ಗುಮ್ಮಹರಿಬಿಟ್ಟ ದೇವೇಗೌಡರು ಈಗ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದಾರೆ. ತತ್ಪರಿಣಾಮವಾಗಿ ಜೆಡಿಎಸ್ ಎಲ್ಲ ಘಟಕಗಳನ್ನು ಪುನಾರಚಿಸುತ್ತಿದ್ದು. ಒಂದೂವರೆ

ಸಾರಥಿ ಇಲ್ಲದ ಜೆಡಿಎಸ್ ಮಹಿಳಾ ಘಟಕಕ್ಕೆ ➤ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ಆಯ್ಕೆ Read More »

ಕರ್ನಾಟಕ

ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕಾರ್ಯಕರ್ತರ ಒತ್ತಾಯ ➤ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತಬ್ಬಿಬ್ಬು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಭಾನುವಾರ ಜೆ.ಪಿ ಭವನದಲ್ಲಿ ನಡೆದ ಬೆಂಗಳೂರು ನಗರ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಎದುರೇ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಸರ್ಕಾರ ಬಂದು ವರ್ಷವಾಗಿದೆ. ನಿಗಮ-ಮಂಡಳಿ ಸ್ಥಾನ ಏಕೆ ಭರ್ತಿ ಮಾಡಿಲ್ಲ? ಶಾಸಕರಿಗೆ ನಿಗಮ-ಮಂಡಳಿ ಕೊಡುತ್ತಿದ್ದೀರಿ. ನಾವು ಪಕ್ಷಕ್ಕೆ ದುಡಿದಿಲ್ಲವೇ? ನಮಗೂ ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕೆಲವರು ಒತ್ತಾಯಿಸಿದ್ದಕ್ಕೆ ದೇವೇಗೌಡರು ಒಂದು ಕ್ಷಣ ತಬ್ಬಿಬ್ಬಾದರು. ಕಾರ್ಯಕರ್ತರ ಆಕ್ರೋಶಕ್ಕೆ ಉತ್ತರಿಸಲಾಗದೆ ಸುಮ್ಮನೆ ಕುಳಿತರು. ಕೊನೆಗೆ ಪದಾಧಿಕಾರಿಗಳು ಹಾಗೂ

ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕಾರ್ಯಕರ್ತರ ಒತ್ತಾಯ ➤ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತಬ್ಬಿಬ್ಬು Read More »

ಕರ್ನಾಟಕ

ಅಘನಾಶಿನಿ ಒಡಲಿಗೆ ಮತ್ತೆ ಕುತ್ತು

(ನ್ಯೂಸ್ ಕಡಬ) newskadaba.com ಶಿರಸಿ, ಜೂನ್.28.ಅಘನಾಶಿನಿ ನದಿ ತನ್ನ ಸುತ್ತಲೂ ಯಾರೂ ಕಾಣದ ಅಪರೂಪದ ಕ್ಷಣ ಭಂಗುರ ನಿಧಿಗಳನ್ನು ತೋರ್ಪಡಿಸುತ್ತ ತನ್ನ ಪಾಡಿಗೆ ಹರಿಯುತ್ತಿತ್ತು. ಪಶ್ಚಿಮ ಘಟ್ಟದಲ್ಲಿನ ಅಳಿವನಂಚಿನ ಅನೇಕ ವನಸ್ಪತಿಗಳಿಗೂ ಆಶ್ರಯ ತಾಣವಾಗಿತ್ತು ಆದರೆ ಇದೀಗ ಅಘನಾಶಿನಿಗೆ ಅಪಾಯ ಎದುರಾಗಿದೆ. ಇಲ್ಲಿನ ನದಿಯ ನೀರನ್ನು ತಿರುಗಿಸಿ ಮಹಾ ನಗರದ ಕುಡಿಯುವ ನೀರಿನ ಯೋಜನೆಗೆ ಸೇರ್ಪಡೆಗೊಳಿಸಲು ತಯಾರಿನಡೆಸಲಾಗಿದೆ ಎಂಬ ಸಚಿವರ ಹೇಳಿಕೆಯು ಆತಂಕವನ್ನು ಉಂಟುಮಾಡಿದೆ.ಶಿರಸಿಯ ಶಂಕರ ಹೊಂಡದಲ್ಲಿ ಜನಿಸಿದ ಅಘನಾಶಿನಿ ನದಿ ಕರಾವಳಿಯಲ್ಲಿ ಸಮುದ್ರ ಸೇರುತ್ತದೆ. ಕುಮಟಾದಲ್ಲಿ

ಅಘನಾಶಿನಿ ಒಡಲಿಗೆ ಮತ್ತೆ ಕುತ್ತು Read More »

ಕರ್ನಾಟಕ

ಭರದಿಂದ ಸಾಗುತ್ತಿದೆ ಕಿಸಾನ್ ಸಮ್ಮಾನ್ ಯೋಜನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.27. ಕೇಂದ್ರ ಸರ್ಕಾರದಿಂದ ರೈತರಿಗೆ ವರ್ಷಕ್ಕೆ 6 ಸಾವಿರ ನೀಡುವ ಮಹತ್ವ ಪೂರ್ಣ ಯೋಜನೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅನುಷ್ಠಾನ ಗೊಳಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಹೆಚ್ಚಿನ ಶ್ರಮ ತೋರಿಸಿದಂತಿದೆ. ಲೋಕಸಭೆಗೆ ಮುಂಚೆ ಆಮೆಗತಿಯಲ್ಲಿದ್ದ ಈ ಯೋಜನೆ ಕೇವಲ 11 ರೈತರಿಗೆ ಮಾತ್ರ ಫ‌ಲಕಾರಿಯಾಗಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ ಪಿ.ಎಂ ಕಿಸಾನ್‌ ಯೋಜನೆ ಸಂಪೂರ್ಣ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ನೂತನ ಕೇಂದ್ರ ಸರ್ಕಾರ ರಚನೆಯಾದ ನಂತರ

ಭರದಿಂದ ಸಾಗುತ್ತಿದೆ ಕಿಸಾನ್ ಸಮ್ಮಾನ್ ಯೋಜನೆ Read More »

ಕರ್ನಾಟಕ

ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಪರಿಶೀಲಿಸಿದ ಬಿ.ವೈ ರಾಘವೇಂದ್ರ

(ನ್ಯೂಸ್ ಕಡಬ) newskadaba.com ಉಪ್ಪುಂದ, ಜೂನ್.26. ಮರವಂತೆ- ತ್ರಾಸಿ ಕರಾವಳಿ ತೀರ ಸಂರಕ್ಷಣೆ ಕಾಮಗಾರಿ ಹಾಗೂ ಮರವಂತೆ ಬ್ರೇಕ್‌ ವಾಟರ್‌ ಕಾಮಗಾರಿ ಪ್ರದೇಶಗಳಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ ರಾಘವೇಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರವಂತೆ ಬ್ರೇಕ್‌ ವಾಟರ್‌ ಕಾಮಗಾರಿ ಪರಿಶೀಲಿಸಿ ಮೀನುಗಾರರೊಂದಿಗೆ ಮಾತನಾಡಿದ ಅವರು ಬಾಕಿ ಉಳಿದಿರುವ ಬ್ರೇಕ್‌ ವಾಟರ್‌ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮೀನುಗಾರಿಕಾ ರಸ್ತೆಗೆ 27 ಲಕ್ಷ ರೂ. ಅನುದಾನದಲ್ಲಿ ರಸ್ತೆ ದುರಸ್ತಿ ಮಾಡುವುದಾಗಿ ತಿಳಿಸಿದರು. ಈ

ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಪರಿಶೀಲಿಸಿದ ಬಿ.ವೈ ರಾಘವೇಂದ್ರ Read More »

ಕರ್ನಾಟಕ

ಸ್ವಾವಲಂಬಿ ಜೀವನಕ್ಕೆ ಧರ್ಮಸ್ಥಳ ಯೋಜನೆ ವರದಾನ

(ನ್ಯೂಸ್ ಕಡಬ) newskadaba.com ದಾವಣಗೆರೆ, ಜೂನ್.25.ಸೋಮವಾರ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾವಣಗೆರೆ ತಾಲೂಕಿನ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಜನಮಂಗಳ ಕಾರ್ಯಕ್ರಮದಡಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ವ್ಹೀಲ್ಚೇರ್‌, ಶಿಷ್ಯವೇತನ, ಆಟೋರಿಕ್ಷಾ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಜನರು ಸ್ವಾವಲಂಬಿ

ಸ್ವಾವಲಂಬಿ ಜೀವನಕ್ಕೆ ಧರ್ಮಸ್ಥಳ ಯೋಜನೆ ವರದಾನ Read More »

ಕರ್ನಾಟಕ

ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆಯೇ ಜೆಡಿಎಸ್ ?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.24.ಜೆಡಿಎಸ್ ಸದ್ದಿಲ್ಲದೇ ಚುನಾವಣೆಗೆ ಸಿದ್ಧವಾಗುತ್ತಿದೆಯೇ? ಇಂಥದ್ದೊಂದು ಅನುಮಾನ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಮೂಡಲಾರಂಭಿಸಿದೆ. ಈ ಬಾರಿ ಚುನಾವಣೆಗೆ ಇನ್ನು 4 ವರ್ಷವಿರುವಾಗಲೇ ಸಭೆ, ಸಮಾವೇಶ, ಜಾತಿವಾರು ಸಮಾವೇಶ ನಡೆಸುತ್ತಿದ್ದು, ರಾಜ್ಯ ರಾಜಕೀಯ ರಂಗದಲ್ಲಿ ಚರ್ಚೆಗೀಡಾಗಿದೆ.  ಹಿಂದಿನ ಎಲ್ಲ ಚುನಾವಣೆ ಗಮನಿಸಿದರೆ ಕೊನೇ ಘಳಿಗೆಯಲ್ಲೇ ತಂತ್ರ, ರಣತಂತ್ರ ರೂಪಿಸುತ್ತ ಬಂದಿದೆ. ಆದರೆ, ಜೆಡಿಎಸ್, ಚುನಾವಣೆ ಸೋಲಿನ ಕಹಿ ಅನುಭವವನ್ನು ಮರೆತು ಮುನ್ನುಗ್ಗುತ್ತಿರುವುದು ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಅಚ್ಚರಿ ಉಂಟು ಮಾಡಿದೆ.ನಗರ ಸ್ಥಳೀಯ

ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆಯೇ ಜೆಡಿಎಸ್ ? Read More »

ಕರ್ನಾಟಕ

ರೈತರಿಗೆ ಸಮಗ್ರ ಮಾಹಿತಿ ಒದಗಿಸುವ ಪ್ರಚಾರ ವಾಹನಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಬೇತಮಂಗಲ,ಜೂನ್.20. ರೈತರಿಗೆ ಸಮಗ್ರ ಮಾಹಿತಿ ಒದಗಿಸುವ ಪ್ರಚಾರ ವಾಹನಕ್ಕೆ ಗ್ರಾಮದ ರೈತ ಸಂಪರ್ಕ ಕೇಂದ್ರ ಬಳಿ ಹಸಿರು ನಿಶಾನೆ ತೋರಿ ಮಾತನಾಡಿದ ಶಾಸಕಿ ಎಂ.ರೂಪಕಲಾ ರೈತರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಕೃಷಿ ಅಭಿಯಾನ ಸಹಕಾರಿಯಾಗಿದೆ ಎಂದು ನುಡಿದರು. ರೈತರು ಇಲಾಖೆಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಜತೆಗೆ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಈ ಅಭಿಯಾನ 6 ದಿನಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯಲಿದೆ. ಇದರೊಂದಿಗೆ ರೇಷ್ಮೆ, ಮೀನುಗಾರಿಕೆ,

ರೈತರಿಗೆ ಸಮಗ್ರ ಮಾಹಿತಿ ಒದಗಿಸುವ ಪ್ರಚಾರ ವಾಹನಕ್ಕೆ ಚಾಲನೆ Read More »

ಕರ್ನಾಟಕ
Scroll to Top