ಕರಾವಳಿ

5 ಗಂಟೆಗೆ ರಾಜ್ಯವನ್ನು ಉದ್ದೇಶಿಸಿ ಸಿಎಂ ಬಿಎಸ್ ವೈ ಭಾಷಣ

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.21:  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಂಗಳವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿಗಳು ಫೇಸ್ ಬುಕ್, ಯೂಟ್ಯೂಬ್ ಮೂಲಕ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಿ. ಎಸ್. ಯಡಿಯೂರಪ್ಪ ರಾಜ್ಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿದೆ. ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ ಲಾಕ್ ಡೌನ್ ಬುಧವಾರ ಬೆಳಗ್ಗೆ 5 ಗಂಟೆಗೆ ಮುಗಿಯಲಿದೆ. […]

5 ಗಂಟೆಗೆ ರಾಜ್ಯವನ್ನು ಉದ್ದೇಶಿಸಿ ಸಿಎಂ ಬಿಎಸ್ ವೈ ಭಾಷಣ Read More »

ಕರಾವಳಿ, ಕರ್ನಾಟಕ

ಉಡುಪಿ: ಪುತ್ತಿಗೆ ಮಠದ ‘ಸುಗುಣೇಂದ್ರ ತೀರ್ಥ ಶ್ರೀ’ಗಳಿಗೆ ಕೊವೀಡ್ -19 ದೃಢ

(ನ್ಯೂಸ್ ಕಡಬ) newskadaba.com ಉಡುಪಿ , ಜು.21:  ಕೃಷ್ಣ ನಗರಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ. ಇಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೂ ಕೊವೀಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಗುಣೇಂದ್ರ ಶ್ರೀಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಮಂಗಳವಾರ ವರದಿ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿರುವ

ಉಡುಪಿ: ಪುತ್ತಿಗೆ ಮಠದ ‘ಸುಗುಣೇಂದ್ರ ತೀರ್ಥ ಶ್ರೀ’ಗಳಿಗೆ ಕೊವೀಡ್ -19 ದೃಢ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಷ್ಟಮಿ, ಚೌತಿ, ವರಮಹಾಲಕ್ಷ್ಮೀ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com , ಜು.21: ಕೊರೊನಾ ಹಿನ್ನೆಲೆ ಕರಾವಳಿಯಲ್ಲಿ ಜು 25 ಶನಿವಾರದಂದು ನಡೆಯುವ ನಾಗರಪಂಚಮಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್‌‌‌ ಸಭೆಯಲ್ಲಿ ಮಾತನಾಡಿದ ಅವರು, ನಾಗಪಂಚಮಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿಲ್ಲ.     ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಸಾಂಕೇತಿಕವಾಗಿ ಆಚರಣೆ ಮಾಡಲು

ಅಷ್ಟಮಿ, ಚೌತಿ, ವರಮಹಾಲಕ್ಷ್ಮೀ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಪೊಲೀಸ್ ಠಾಣಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ➤ ಮುಂದಿನ 48 ಗಂಟೆಗಳ ಕಾಲ ಪುತ್ತೂರು ನಗರ ಪೊಲೀಸ್ ಠಾಣೆ ಮತ್ತೆ ಸೀಲ್‌ಡೌನ್

(ನ್ಯೂಸ್ ಕಡಬ) newskadaba.com ಪುತ್ತೂರು :ಜು.21., ಕಿಲ್ಲರ್ ಕೊರೋನಾ ಮತ್ತೆ ನಗರ ಪೊಲೀಸ್ ಠಾಣೆಯನ್ನು ಆವರಿಸಿದ್ದು, ಮತ್ತಿಬ್ಬರು ಸಿಬಂದಿಗಳಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದೀಗ ಠಾಣೆಯನ್ನು ಮುಂದಿನ 48 ಗಂಟೆಗಳ ಕಾಲ ಮತ್ತೆ ಸೀಲ್‌ಡೌನ್ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ನಗರ ಠಾಣೆಯ ಮಹಿಳಾ ಕಾನ್‌ಸ್ಟೇಬಲ್ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಸಂಜೆಯ ವೇಳೆಗೆ ಮತ್ತೆ ಇಬ್ಬರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು ಇದರಿಂದಾಗಿ ಠಾಣೆಯ ಒಟ್ಟು 6 ಮಂದಿ ಸಿಬಂದಿಗಳು ಕೊರೋನಾ ಸೋಂಕಿತರಾಗಿರುವುದು ದೃಢವಾಗಿದೆ.ಈ ನಿಟ್ಟಿನಲ್ಲಿ ನಗರ

ಪೊಲೀಸ್ ಠಾಣಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ➤ ಮುಂದಿನ 48 ಗಂಟೆಗಳ ಕಾಲ ಪುತ್ತೂರು ನಗರ ಪೊಲೀಸ್ ಠಾಣೆ ಮತ್ತೆ ಸೀಲ್‌ಡೌನ್ Read More »

ಕರಾವಳಿ

12 ಕಿ.ಮೀ. ದೂರ ಓಡಿ, ಕೊಲೆ ಆರೋಪಿ ಪತ್ತೆ ಮಾಡಿದ ಪೊಲೀಸ್ ಸ್ನೀಫರ್ ಡಾಗ್!

(ನ್ಯೂಸ್ ಕಡಬ) newskadaba.com ದಾವಣಗೆರೆ, ಜು.21:  ಪೊಲೀಸ್ ಸ್ನಿಫರ್ ಶ್ವಾನವೊಂದು ಸುಮಾರು 12 ಕಿ. ಮೀ. ದೂರ ಓಡುವ ಮೂಲಕ ವಾರದ ಹಿಂದಷ್ಟೇ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಕಂಡುಹಿಡಿದು ಬಂಧಿಸುವಲ್ಲಿ ನೆರವಾಗಿದೆ. ಈ ಮೂಲಕ ಹಿರೋ ಆಗಿ ಹೊರಹೊಮ್ಮಿದೆ. ದಾವಣಗೆರೆ ಜಿಲ್ಲೆಯ ಬಸವಪಟ್ಟಣದಲ್ಲಿ ಜುಲೈ 10 ರಂದು ಈ ಘಟನೆ ನಡೆದಿದೆ. ಸಾಲದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಒಬ್ಬಾತ ಪೊಲೀಸ್ ಠಾಣೆಯಿಂದ ಕಳವು ಮಾಡಲಾಗಿದ್ದ ರಿವಾಲ್ವರ್ ನಿಂದ ಮತ್ತೊರ್ವನನ್ನು ಗುಂಡಿಕ್ಕಿ ಹತ್ಯೆ

12 ಕಿ.ಮೀ. ದೂರ ಓಡಿ, ಕೊಲೆ ಆರೋಪಿ ಪತ್ತೆ ಮಾಡಿದ ಪೊಲೀಸ್ ಸ್ನೀಫರ್ ಡಾಗ್! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ ಕೋರ್ಟ್ ನ ನ್ಯಾಯಾಧೀಶರಿಗೆ ಕೋವಿಡ್ ಸೋಂಕು ದೃಢ ➤ ಕೋರ್ಟ್ ಎರಡು ದಿನ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಉಡುಪಿ, ಜು.21: ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ ಹಿನ್ನಲೆಯಲ್ಲಿ ಉಡುಪಿ ನ್ಯಾಯಾಲಯ ಸಂಕೀರ್ಣವನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ನ್ಯಾಯಾಧೀಶರಿಗೆ ಕೋವಿಡ್ -19 ಸೋಂಕು ದೃಢವಾದ ಹಿನ್ನಲೆಯಲ್ಲಿ ಕೋರ್ಟ್ ಆವರಣವನ್ನು ಎರಡು ದಿನ ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುವುದು. ಜು. 21 ಮತ್ತು 22ರಂದು ಕೋರ್ಟ್ ಸೀಲ್ ಡೌನ್ ಆಗಿರಲಿದೆ ಎಂದು ವರದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆಯಲ್ಲಿ ಮತ್ತೆ

ಉಡುಪಿ ಕೋರ್ಟ್ ನ ನ್ಯಾಯಾಧೀಶರಿಗೆ ಕೋವಿಡ್ ಸೋಂಕು ದೃಢ ➤ ಕೋರ್ಟ್ ಎರಡು ದಿನ ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ

ಕೇರಳದ ಯುವಕ ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿ

(ನ್ಯೂಸ್ ಕಡಬ) newskadaba.com ಉಡುಪಿ, ಜು.21: ಅನಾರೋಗ್ಯದಿಂದ ಕಳೆದ ಕೆಲ ದಿನಗಳಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಯುವಕನೋರ್ವ ಮೃತಪಟ್ಟಿದ್ದು, ಆತನಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ 35 ವರ್ಷದ ಯುವಕ ಕಿಡ್ನಿ ಸಮಸ್ಯೆಯಿಂದ ಕಳೆದ 15 ದಿನಗಳ ಹಿಂದ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ.   ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಯುವಕ ಮೃತಪಟ್ಟಿದ್ದಾನೆ. ಆತನ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಆತನಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ

ಕೇರಳದ ಯುವಕ ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿ Read More »

ಕರಾವಳಿ, ಕರ್ನಾಟಕ

ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಕ್ಷಣ ಗಣನೆ ಪ್ರಾರಂಭ ➤ ಉಡುಪಿ ಕ್ಷೇತ್ರದಿಂದ ಮಣ್ಣು ಸಂಗ್ರಹ

(ನ್ಯೂಸ್ ಕಡಬ) newskadaba.com ಉಡುಪಿ :ಜು.21., ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ದಿನ ಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಪುಣ್ಯ ಕ್ಷೇತ್ರಗಳಿಂದ ಮಣ್ಣು ಹಾಗೂ ನೀರು ಸಂಗ್ರಹದ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ. ಕೃಷ್ಣ ನಗರಿ ಉಡುಪಿಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಅದಮಾರು ಶ್ರೀ ಗಳಾದ ಈಶಪ್ರೀಯತೀರ್ಥ ಸ್ವಾಮೀಜಿ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿ, ಕೃಷ್ಣನ ಗಂಧ ಪ್ರಸಾದ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿ ಪವಿತ್ರ ಮಣ್ಣುನ್ನು ವಿಹಿಂಪ

ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಕ್ಷಣ ಗಣನೆ ಪ್ರಾರಂಭ ➤ ಉಡುಪಿ ಕ್ಷೇತ್ರದಿಂದ ಮಣ್ಣು ಸಂಗ್ರಹ Read More »

ಕರಾವಳಿ

ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮದ್ರಸ ಅಧ್ಯಾಪಕನ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ , ಜು.21: ತನ್ನ ಹದಿನಾರು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗೂನಡ್ಕ ಮೂಲದ ಮದ್ರಸ ಅಧ್ಯಾಪಕನೋರ್ವನನ್ನು ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಗೂನಡ್ಕ ಮೂಲದವನಾದ ಈತ ಇಲ್ಲಿಯೂ ಒಂದು ವಿವಾಹವಾಗಿದ್ದು, ಕಾಞಂಗಾಡ್ ನಲ್ಲಿ ಮತ್ತೊಂದು ವಿವಾಹವಾಗಿದ್ದ. ಈತನ ಮೇಲೆ ಈ ಹಿಂದೆಯೂ ಪೋಕ್ಸೋ ಕೇಸು ಸಹಿತ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. ಈತನ 16 ವರ್ಷದ ಮಗಳು ತನ್ನ ಮಾವನ ಸಹಕಾರದೊಂದಿಗೆ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಕಳೆದ ಕೆಲವು ವರ್ಷಗಳಿಂದ

ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮದ್ರಸ ಅಧ್ಯಾಪಕನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ :ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ➤ ಗೂಸ ತಿಂದ ಮುಖಂಡ

(ನ್ಯೂಸ್ ಕಡಬ) newskadaba.com ಸುಳ್ಯ, ಜು.21:  ವಿವಾಹಿತ ಮಹಿಳೆಯೊಂದಿಗೆ ಚೆಲ್ಲಾಟವಾಡುತ್ತಿದ್ದ ಸಮಯದಲ್ಲಿ ಪಕ್ಷದ ಮುಖಂಡನೋರ್ವ ಧರ್ಮದೇಟು ತಿಂದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಿಂದ ವರದಿಯಾಗಿದೆ. ಸುಳ್ಯ ಶಾಸಕರ ಮಾಜಿ ಆಪ್ತ ಕಾರ್ಯದರ್ಶಿ ಎನ್ನಲಾದ ಹಾಗೂ ಪಕ್ಷವೊಂದರಲ್ಲಿ ಸಕ್ರಿಯವಾಗಿರುವ ವ್ಯಕ್ತಿಯೋರ್ವ ವಿವಾಹಿತ ಮಹಿಳೆಯೊಬ್ಬರ ಜತೆ ಇರುವುದನ್ನು ಕಂಡು ಆ ಮಹಿಳೆಯ ಪತಿಯ ಸಹೋದರ ಕೈಯಲ್ಲಿದ್ದ ದೊಣ್ಣೆಯಿಂದ ಅವರಿಗೆ ಬಾರಿಸಿದರೆಂದು ಗಾಯಗೊಂಡ ಆತ ಅಲ್ಲಿಂದ ಓಡಿ ತಪ್ಪಿಸಿಕೊಂಡರೆಂದು ಹೇಳಲಾಗಿದೆ.ಅನೈತಿಕ ಸಂಬಂಧದ ವಿರುದ್ಧ ಈ ಹಿಂದೆಯೂ ಹಲವು ಬಾರಿ ಇವರಿಗೆ ಎಚ್ಚರಿಕೆ

ಸುಳ್ಯ :ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ➤ ಗೂಸ ತಿಂದ ಮುಖಂಡ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top