ಕರಾವಳಿ

ಪುತ್ತೂರು: ಬೈಕ್ ಸೀಟ್ ಕೆಳಗೆ ಸುತ್ತುವರಿದಿದ್ದ ಹಾವಿನ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 17.         ಬೈಕಿನ ಸೀಟಿನೊಳಗಡೆ  ಹಾರುವ ಹಾವೊಂದು ಸೇರಿಕೊಂಡ ಘಟನೆ  ಇಂದು ದರ್ಬೆಯಲ್ಲಿ ನಡೆದಿದೆ.   ಉರಗ ಪ್ರೇಮಿ ಬನ್ನೂರಿನ ತೇಜಸ್ ಎಂಬವರು ರಕ್ಷಣೆ ಮಾಡಿದ್ದಾರೆ. ದರ್ಬೆಯಲ್ಲಿರುವ ಗ್ಯಾರೇಜ್ ಒಂದಕ್ಕೆ ಬೈಕ್ ನಲ್ಲಿ‌ ಬಂದ ವ್ಯಕ್ತಿಯೊಬ್ಬರು ತನ್ನ ಬೈಕ್ ದುರಸ್ಥಿಗೊಳಿಸುವಂತೆ ಮೆಕ್ಯಾನಿಕ್ ಗೆ ತಿಳಿಸಿ‌ ಮೆಕ್ಯಾನಿಕ್ ಬೈಕ್ ನ ಸೀಟ್ ಕಳಚುತ್ತಿದ್ದಂತೆ ಬಣ್ಣ ಬಣ್ಣದ ಹಾವೊಂದು ಬೈಕ್ ಸೀಟ್ ಅಡಿಯಲ್ಲಿ ಸುತ್ತುವರಿದು‌ಕೊಂಡಿರುವುದು ಬೆಳಕಿಗೆ ಬಂತು. ಬಳಿಕ ಉರಗ ತಜ್ಞ ತೇಜಸ್ ಎಂಬವರಿಗೆ‌ ಈ ಕುರಿತು ಮಾಹಿತಿ ನೀಡಿ, […]

ಪುತ್ತೂರು: ಬೈಕ್ ಸೀಟ್ ಕೆಳಗೆ ಸುತ್ತುವರಿದಿದ್ದ ಹಾವಿನ ರಕ್ಷಣೆ Read More »

ಕರಾವಳಿ

ಅಡೆಕ್ಕಲ್ ಅಬ್ಬಾಸ್ ಹಾಜಿ ನಿಧನ ➤ ಎಸ್.ಡಿ.ಪಿ.ಐ ಸಂತಾಪ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ ಆ,17:  ಧಾರ್ಮಿಕ ಪಂಡಿತ ,ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಶತಾಯುಷಿ ಅಡೆಕ್ಕಲ್ ಅಬ್ಬಾಸ್ ಹಾಜಿ (103 ವರ್ಷ) ಯವರು ಇಂದು ಬೆಳಗ್ಗೆ ಅಲ್ಲಾಹನ ಕರೆಗೆ ಓಗೊಟ್ಟು ನಮ್ಮನ್ನು ಅಗಲಿರುತ್ತಾರೆ. ಅಡೆಕ್ಕಲ್  ಮಸೀದಿಯ ಸ್ಥಾಪಕ ಸದಸ್ಯರು. ಅಲ್ಲಿ ಬಹಳಷ್ಟು ಸಮಯದಿಂದ ಸೇವೆ ನೀಡಿದ ಅವರು ಎಲ್ಲರಿಗೂ ಚಿರಪರಿಚಿತರು ಮತ್ತು ಬಹುಮಾನ್ಯರಾಗಿದ್ದರು. ಕಾಸರಗೋಡಿನ ತಳಂಗರೆ ಹಾಗೂ ಹಾಸನ, ಚಿಕ್ಕಮಂಗಳೂರು ಜಿಲ್ಲೆಯ ಹಲವು ಸಮಸ್ತದ ಮಸೀದಿಗಳಲ್ಲಿ ಖತೀಬಾಗಿ,ಇಮಾಮಾಗಿ, ಮುದರ್ರಿಸ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಅವರು ಆರು ಗಂಡು

ಅಡೆಕ್ಕಲ್ ಅಬ್ಬಾಸ್ ಹಾಜಿ ನಿಧನ ➤ ಎಸ್.ಡಿ.ಪಿ.ಐ ಸಂತಾಪ Read More »

ಕರಾವಳಿ

ಮಂಗಳೂರು : ಸಫರ್ ಕ್ಲಬ್ ಮತ್ತು ಬ್ಲಡ್ ಹೆಲ್ಪ್ ಕೇರ್ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,17: ಮಂಚಿಲ ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ಬೃಹತ್ ರಕ್ತದಾನ ಶಿಬಿರ ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ನಲ್ಲಿ ನಡೆಯಿತು ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಯು.ಎಚ್ ಫಾರೂಕ್ ಮಾತನಾಡಿ ಪ್ರತೀ ವರ್ಷವು ನಾವು ಸ್ವಾತಂತ್ರ್ಯೋತ್ಸವದ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ, ಈ ಬಾರಿ

ಮಂಗಳೂರು : ಸಫರ್ ಕ್ಲಬ್ ಮತ್ತು ಬ್ಲಡ್ ಹೆಲ್ಪ್ ಕೇರ್ ವತಿಯಿಂದ ರಕ್ತದಾನ ಶಿಬಿರ Read More »

ಕರಾವಳಿ, ಕರ್ನಾಟಕ

 ಬೆಂಗಳೂರಿನಲ್ಲಿ ನಡೆಯುವ *ಹೀರೊ ಹೈ ಲೀಗ್* ತಂಡಕ್ಕೆ ಆರಂತೋಡಿನ ಯುವಕ ಅದ್ನಾನ್ ಪಟೇಲ್ ಆಯ್ಕೆ

(ನ್ಯೂಸ್ ಕಡಬ) newskadaba.com ಅರಂತೋಡು, ಆ,17:  ಇತ್ತೀಚೆಗೆ ಮಂಗಳೂರು ಎಫ್ ಸಿ ಮಂಗಳೂರು ಅಕಾಡೆಮಿಗೆ ನಡೆದ ಅಂಡರ್18 ಆಯ್ಕೆ ಟ್ರಯಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಹೀರೊ ಹೈ ಲೀಗ್ ಪಂದ್ಯಾಟದಲ್ಲಿ ಎಫ್ ಸಿ ಮಂಗಳೂರು ಫುಟ್ಬಾಲ್ ಅಸ್ಸೋಸಿಯೇಷನ್ ತಂಡದ ಪರವಾಗಿ ಅದ್ನಾನ್ ಪಟೇಲ್ ಪಾಲ್ಗೊಳ್ಳಲಿದ್ದಾರೆ.   ಆಲ್ ಇಂಡಿಯಾ ಫುಟ್ಬಾಲ್ ಅಸ್ಸೋಸಿಯೇಷನ್ ಗೆ ತನ್ನನ್ನು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಲವಾರು ಜಿಲ್ಲಾ  ಮತ್ತು ತಾಲೂಕು ಮಟ್ಟದ ಪಂದ್ಯಾವಳಿಯನ್ನು ಪ್ರತಿನಿಧಿಸಿ

 ಬೆಂಗಳೂರಿನಲ್ಲಿ ನಡೆಯುವ *ಹೀರೊ ಹೈ ಲೀಗ್* ತಂಡಕ್ಕೆ ಆರಂತೋಡಿನ ಯುವಕ ಅದ್ನಾನ್ ಪಟೇಲ್ ಆಯ್ಕೆ Read More »

ಕರಾವಳಿ, ಕರ್ನಾಟಕ

ಉಡುಪಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ಉಡುಪಿ, ಆ. 17, ಕೇರಳದ ನೋಂದಾಯಿತ ಡಸ್ಟರ್ ಕಾರೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ರಾತ್ರಿ ಮಣಿಪಾಲದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಢ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಮಣಿಪಾಲ ಪೊಲೀಸ್‌ ಠಾಣೆಯ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಉಡುಪಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೋಡೆರಿ ದೋಣಿ ದುರಂತ ➤ ಓರ್ವ ಮೀನುಗಾರನ ಮೃತ ದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಆ,17:  ಕುಂದಾಪುರ ಕಿರಿಮಂಜೇಶ್ವರ ಬಳಿ ಕೊಡೇರಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿ, 7 ಮೀನುಗಾರರನ್ನು ರಕ್ಷಿಸಿದ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿತ್ತು.     ಈ ಪೈಕಿ ಓರ್ವ ವ್ಯಕ್ತಿಯ ಮೃತ ದೇಹ ಸೋಮವಾರ ಪತ್ತೆಯಾಗಿದೆ.ಪತ್ತೆಯಾದ ಮೃತದೇಹವನ್ನು ಮೀನುಗಾರ  ನಾಗರಾಜ್ ಖಾರ್ವಿಯದ್ದು ಎಂದು ಗುರುತಿಸಲಾಗಿದ್ದು ಇತರೆ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.  

ಕೋಡೆರಿ ದೋಣಿ ದುರಂತ ➤ ಓರ್ವ ಮೀನುಗಾರನ ಮೃತ ದೇಹ ಪತ್ತೆ Read More »

ಕರಾವಳಿ, ಕರ್ನಾಟಕ

ಮಂಗಳೂರು ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ಮತ್ತೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಲಾಕ್‍ಡೌನ್ ಹಿನ್ನೆಲೆ ಮತ್ತು ಕೊರೊನಾ ಪ್ರಕರಣಗಳ ಹೆಚ್ಚಳದಿಂದ ಕಳೆದ ತಿಂಗಳು ಸ್ಥಗಿತಗೊಳಿಸಲಾಗಿದ್ದ ಮಂಗಳೂರು ಪ್ರೆಸ್‍ನ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾಗೋಷ್ಠಿಗಳನ್ನು ಆ.18ರಿಂದ ಮತ್ತೆ ಆರಂಭಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡಾ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರದ ನಿಯಮದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿಕೊಂಡು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತದೆ. ಎಲ್ಲ ಪತ್ರಕರ್ತರು ಹಾಗೂ ಪತ್ರಿಕಾಗೋಷ್ಠಿ ನಡೆಸುವವರೂ ಮಾಸ್ಕ್

ಮಂಗಳೂರು ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ಮತ್ತೆ ಆರಂಭ Read More »

ಕರಾವಳಿ

ಕೇರಳ-ದಕ್ಷಿಣ ಕನ್ನಡ ನಡುವೆ ಸಂಚಾರಕ್ಕೆ ಪಾಸ್ ಅಗತ್ಯ ➤ ಡಿ.ಸಿ. ಡಾ| ರಾಜೇಂದ್ರ ಕೆ.ವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ,17,  ಕೇರಳದಿಂದ ದ.ಕ. ಜಿಲ್ಲೆಗೆ ಪ್ರತೀ ದಿನ ದೈನಂದಿನ ಚಟುವಟಿಕೆಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಭಾಗಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಆಗಮಿಸುವವರು ಕಡ್ಡಾಯವಾಗಿ ಪಾಸ್‌ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.   ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ದೈನಂದಿನ ಚಟುವಟಿಕೆಗಳಿಗೆ ಪ್ರತಿದಿನ ಸಂಚರಿಸುವ ಸಾರ್ವಜನಿಕರು ಸ್ಥಳೀಯಾಡಳಿತ ಸಂಸ್ಥೆಗಳಿಂದ ಮಾಸಿಕ ಪಾಸ್‌ ಪಡೆದಿರಬೇಕು. ಅನಂತರ ಚೆಕ್ ಪೋಸ್ಟ್‌ಗಳಲ್ಲಿ ಒಳಬರುವ ಹಾಗೂ ಹೊರಹೋಗುವ ಸಂದರ್ಭದಲ್ಲಿ ತಮ್ಮ

ಕೇರಳ-ದಕ್ಷಿಣ ಕನ್ನಡ ನಡುವೆ ಸಂಚಾರಕ್ಕೆ ಪಾಸ್ ಅಗತ್ಯ ➤ ಡಿ.ಸಿ. ಡಾ| ರಾಜೇಂದ್ರ ಕೆ.ವಿ Read More »

ಕರಾವಳಿ, ಕರ್ನಾಟಕ

ಗುಂಡ್ಯ : ಸಿಮೆಂಟ್ ಸಾಗಾಟದ ಲಾರಿಗೆ ಬೆಂಕಿ ➤ ಚಾಲಕ, ಕ್ಲೀನರ್ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಗುಂಡ್ಯ, ಆ,17:  ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಗುಂಡ್ಯ ಸಮೀಪ ಸಿಮೆಂಟ್ ಸಾಗಾಟದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.       ಪರಿಣಾಮ ಲಾರಿ ಭಾಗಶ: ಸುಟ್ಟು ಹೋಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಗುಂಡ್ಯ ಗಡಿ ಸಮೀಪ ಬೆಂಕಿ ಕಾಣಿಸಿಕೊಂಡಿದೆ. ಇದರ ಅರಿವು ಆಗುತ್ತಿದ್ದಂತೆ ಚಾಲಕ ಲಾರಿ ನಿಲ್ಲಿಸಿದ್ದು ಬಳಿಕ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಗಿದೆ. ಬೆಂಕಿಯಿಂದಾಗಿ

ಗುಂಡ್ಯ : ಸಿಮೆಂಟ್ ಸಾಗಾಟದ ಲಾರಿಗೆ ಬೆಂಕಿ ➤ ಚಾಲಕ, ಕ್ಲೀನರ್ ಅಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ

ಕೊರೋನಾ ಸಂಕಷ್ಟ : ರೂ.200 ಕೋ. ಪ್ಯಾಕೇಜ್ ನೀಡುವಂತೆ ಕೇಂದ್ರಕ್ಕೆ ಪೇಜಾವರ ಶ್ರೀ ಪತ್ರ

(ನ್ಯೂಸ್ ಕಡಬ) newskadaba.com ಉಡುಪಿ. ಆ,17:  ಕೊರೋನಾ ವಿಪತ್ತಿನಿಂದ ದೇಶದ ನೂರಾರು ಗೋಶಾಲೆಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ತುರ್ತಾಗಿ ಕನಿಷ್ಟ ರೂ.200 ಕೋಟಿ ನಿರ್ವಹಣಾ ನಿಧಿಯನ್ನು ನೀಡುವಂತೆ ಒತ್ತಾಯಿಸಿ ಉಡುಪಿ ಗೋವರ್ಧನ ಗಿರಿ ಟ್ರಸ್ಟ್ ಅಧ್ಯಕ್ಷರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.   ಕಳೆದ 6-7 ತಿಂಗಳುಗಳಿಂದ ಕೊರೋನಾದಿಂದಾಗಿ ವಿವಿಧ ಕ್ಷೇತ್ರಗಳು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಂತೆಯೇ ದೇಶದ ಗೋಶಾಲೆಗಳು ತೊಂದರೆಗೊಳಗಾಗಿವೆ. ಗೋಶಾಲೆಗಳ ನಿರ್ವಹಣೆ ಅತ್ಯಂತ ವೆಚ್ಚದಾಯಕವಾಗಿದೆ. ಉಡುಪಿಯಲ್ಲಿ ನೀಲಾವರ ಕೊಡವೂರು

ಕೊರೋನಾ ಸಂಕಷ್ಟ : ರೂ.200 ಕೋ. ಪ್ಯಾಕೇಜ್ ನೀಡುವಂತೆ ಕೇಂದ್ರಕ್ಕೆ ಪೇಜಾವರ ಶ್ರೀ ಪತ್ರ Read More »

ಕರಾವಳಿ, ಕರ್ನಾಟಕ
Scroll to Top