ಉಪ್ಪಿನಂಗಡಿ: ಎಸ್.ಡಿ.ಪಿ.ಐ ವಲಯ ಸಮಿತಿ ಅಧೀನದ ಗಡಿಯಾರ ಎಂಬಲ್ಲಿ ಪಕ್ಷಕ್ಕೆ ಸೇರ್ಪಡೆ ಮತ್ತು ಹೊಸ ಬ್ರಾಂಚ್ ರಚನೆ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 05. ಬಿಳಿಯೂರು ಬ್ರಾಂಚ್ ವತಿಯಿಂದ ಹಲವಾರು ಕಾರ್ಯಕರ್ತರು ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆ ಗೊಳ್ಳುವ ಕಾರ್ಯಕ್ರಮವು ನಡೆಯಿತು. ಎಸ್.ಡಿ.ಪಿ.ಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಹಲವಾರು ಕಾರ್ಯಕರ್ತರು ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು ಮತ್ತು ಎಸ್‌ಡಿಪಿಐ ಉಪ್ಪಿನಂಗಡಿ ವಲಯ ಸಮಿತಿಯ ಅಧೀನದಲ್ಲಿ ಹೊಸ ಗಡಿಯಾರ ಬ್ರಾಂಚ್ ರಚಿಸಲಾಯಿತು. ಕಾರ್ಯಕ್ರಮದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಇಕ್ಬಾಲ್ ಕೆಂಪಿ ಅಧ್ಯಕ್ಷತೆ ವಹಿಸಿದ್ದರು […]









