ಕರಾವಳಿ

ಮಂಗಳೂರು: ಪುಸ್ತಕ ಬಿಡುಗಡೆ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18.  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ ಇದರ ಆಶ್ರಯದಲ್ಲಿ ನವೆಂಬರ್ 21ರಂದು ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡರ ಎರಡು ಕೃತಿಗಳಾದ “ಕೆಲೆಪು ಪೆರಡೆ ಕೆಲೆಪು” ತುಳು ಕವನ ಸಂಕಲನ ಹಾಗೂ “ಬೇಲಿಯೊಳಗಿನ ಬೆಳೆ” ಪ್ರಬಂಧ ಸಂಕಲನ ಬಿಡುಗಡೆ  ಸಮಾರಂಭವನ್ನು ಮಂಗಳೂರು  ವಿ.ವಿ. ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ವಿ.ವಿ ಪ್ರಕಟಣೆಯು ತಿಳಿಸಿದೆ.

ಮಂಗಳೂರು: ಪುಸ್ತಕ ಬಿಡುಗಡೆ ಸಮಾರಂಭ Read More »

ಕರಾವಳಿ

ನೆಹರು ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್ ಲಾಲ್ ಜನ್ಮ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18 ಜಿಲ್ಲಾಮಟ್ಟದ ನೆಹರು ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್‍ ಲಾಲ್ ಜನ್ಮದಿನಾಚರಣೆಯನ್ನು ನಗರದ ತಾಲೂಕು ಕಚೇರಿ, ಎನ್.ಜಿ.ಓ ಹಾಲ್ ನಲ್ಲಿ  ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ರಾಮಚಂದ್ರ ಬೈಕಂಪಾಡಿ ಮಾತನಾಡಿ, ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲೆಯ ಯುವಕ ಹಾಗೂ ಯುವತಿ ಮಂಡಲದ ಮೂಲಕ ಸಾಮಾಜಿಕ ಶೈಕ್ಷಣಿಕ ಹಾಗೂ ಅರೋಗ್ಯ ಪೂರ್ಣ ಸಮಾಜವನ್ನು ಕಟ್ಟುವಲ್ಲಿ ಅತ್ಯುತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಯುವ ಜನರು ಸಾಮಾಜಿಕ ಮತ್ತು ಸಮುದಾಯದ ಕಾರ್ಯಕ್ರಮದ ಮೂಲಕ

ನೆಹರು ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್ ಲಾಲ್ ಜನ್ಮ ದಿನಾಚರಣೆ Read More »

ಕರಾವಳಿ, ಕರ್ನಾಟಕ

ನಟಿ,ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ

(ನ್ಯೂಸ್ ಕಡಬ) newskadaba.com ಚೆನ್ನೈ  ನ. 18:  ಬಹುಭಾಷಾ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಮೆಲ್ಮರುವಾತ್ತೂರ್ ಎಂಬಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್ ವೊಂದು ಖುಷ್ಬೂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಸಾತ್​ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣ ಜಖಂಗೊಂಡಿದೆ.ಈ ಘಟನೆ ಕುರಿತು ಖುಶ್ಭೂ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

ನಟಿ,ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ Read More »

ಕರಾವಳಿ

ಪುತ್ತೂರು: ಆಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 18:  ಕಳೆದ ದಿನ ಆರ್ಯಾಪು ಮರಿಕೆಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯೋರ್ವರನ್ನು ಪುತ್ತೂರು ಅಗ್ನಿ ಶಾಮಕ ದಳದವರು ರಕ್ಷಣೆ ಮಾಡಿದ ಘಟನೆ ನಡೆದಿದೆ.     ಬಾವಿಗೆ ಬಿದ್ದ ವೃದ್ಧೆಯನ್ನು ಆರ್ಯಾಪು ಮರಿಕೆ ನಿವಾಸಿ 90 ವರ್ಷ ಪ್ರಾಯದ ಸರಸ್ವತಿ ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ನೀರು ತರಲೆಂದು ಹೋದವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ವಿಷಯ ಕೇಳಿದ ಕೂಡಲೇ ಪಕ್ಕದ ಮನೆಯವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.

ಪುತ್ತೂರು: ಆಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ Read More »

ಕರಾವಳಿ

ಕಾಪು: ಆಕಸ್ಮಿಕವಾಗಿ ರೈಲಿನಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಪು, ನ. 18:  ರೈಲಿನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕಾಪುವಿನ ಇನ್ನಂಜೆ ಬಳಿ ನಡೆದಿದೆ.     ಮೃತ ದುರ್ದೈವಿಯನ್ನು ಇಮ್ರಾನ್‌ ಎಂದು ಗುರುತಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಮ್ರಾನ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.        

ಕಾಪು: ಆಕಸ್ಮಿಕವಾಗಿ ರೈಲಿನಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಉಡುಪಿ :ಆಕಸ್ಮಿಕವಾಗಿ ಕೆರೆಗೆ ಬಿದ್ದು ಯಕ್ಷಗಾನ ಕಲಾವಿದ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ ನ. 18: ಉಡುಪಿಯ ಅಮಾಸೆಬೈಲು ಗ್ರಾಮದ ಕೆಲ ಸುಗ್ಗಿಗದ್ದೆ ಸುದೀಪ ಶೆಟ್ಟಿ(24) ಅವರು ಮನೆಯ ಪಕ್ಕದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪಿದ್ದ ಘಟನೆ ನಡೆದಿದೆ.     ಯಕ್ಷಗಾನ ಕಲಾವಿದರಾಗಿದ್ದ ಸುದೀಪ ಶೆಟ್ಟಿ ಎರಡು ವರುಷದ ಹಿಂದೆ ರಸ್ತೆ  ಅಪಘಾತಕ್ಕೊಳಗಾಗಿ ಆಗಾಗ್ಗೆ ತಲೆಸುತ್ತು ಬಂದು ಬೀಳುತ್ತಿದ್ದರು. ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ಇದ್ದಾಗ ಮನೆಯವರು ಹುಡುಕಾಡಿದ್ದಾರೆ. ಈ ವೇಳೆ ಸುದೀಪ ಶೆಟ್ಟಿ ಅವರ ಮೃತದೇಹ ಸಮೀಪದ ನೀರಿನ ತೋಡಿನಲ್ಲಿ ಪತ್ತೆಯಾಗಿದೆ. ಮೇಗರವಳ್ಳಿ,

ಉಡುಪಿ :ಆಕಸ್ಮಿಕವಾಗಿ ಕೆರೆಗೆ ಬಿದ್ದು ಯಕ್ಷಗಾನ ಕಲಾವಿದ ಮೃತ್ಯು Read More »

ಕರಾವಳಿ

ಮಹಾಗಣಪತಿ ಸ್ಮರಣೆ ಮಾಡುತ್ತ ದಿನ ಭವಿಷ್ಯ ನೋಡೋಣ

ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ 9945410150 ಮೇಷ ರಾಶಿ ಕಚೇರಿ ಕಾರ್ಯಗಳಲ್ಲಿ

ಮಹಾಗಣಪತಿ ಸ್ಮರಣೆ ಮಾಡುತ್ತ ದಿನ ಭವಿಷ್ಯ ನೋಡೋಣ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ರಿಯಾಯಿತಿ ದರದ ಹೊಸ ಬಸ್ಸು ಪಾಸುಗಳ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17. ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸಕಾಲ ಸಂಬಂಧಿತ ಸೇವೆಗಳಾದ ವಿದ್ಯಾರ್ಥಿ ರಿಯಾಯಿತಿ ದರದ ಬಸ್ಸು ಪಾಸು, ವಿಕಲಚೇತನರ ರಿಯಾಯಿತಿ ಬಸ್ಸು ಪಾಸು, ಅಂಧರ ಉಚಿತ ಬಸ್ಸು ಪಾಸು, ಸ್ವಾತಂತ್ರ್ಯ ಹೋರಾಟಗಾರರ ಉಚಿತ ಬಸ್ಸು ಪಾಸು, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್, ಅಪಘಾತ ಪರಿಹಾರ ನಿಧಿ ಇವುಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತದೆ.           ನಿಗಮದ ಬಸ್ಸುಪಾಸು ಪಡೆಯುವ

ರಿಯಾಯಿತಿ ದರದ ಹೊಸ ಬಸ್ಸು ಪಾಸುಗಳ ವಿತರಣೆ Read More »

ಕರಾವಳಿ, ಕರ್ನಾಟಕ

ವಾರ್ಡ್ ಸಮಿತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17. ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‍ಗಳಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಸಾಂವಿಧಾನಿಕವಾಗಿ ವಾರ್ಡ್ ಸಮಿತಿಗಳನ್ನು ರಚಿಸಲು ಪಾಲಿಕೆಯ ವ್ಯಾಪ್ತಿಯೊಳಗಿನ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 4 ರ ವರೆಗೆ ವಿಸ್ತರಿಸಲಾಗಿದೆ. ಎಂದು ಮಹಾನಗರಪಾಲಿಕೆ ಆಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಡ್ ಸಮಿತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ Read More »

ಕರಾವಳಿ

ದ.ಕ ಜಿಲ್ಲೆಯಾದ್ಯಂತ ಮತದಾರರ ನೋಂದಣಿ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17. ನವೆಂಬರ್ 22, 29 ಹಾಗೂ ಡಿಸೆಂಬರ್ 6, ಮತ್ತು 13ರಂದು ಜಿಲ್ಲೆಯಾದ್ಯಂತ ಮಿಂಚಿನ ಮತದಾರರ ನೋಂದಾಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿಸೆಂಬರ್ 17 ಕೊನೆಯ ದಿನವಾಗಿದೆ.         ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಮತದಾರರ ಮಿಂಚಿನ ನೋಂದಾಣಿ ಅಭಿಯಾನವು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರೆಗೆ ನೋಂದಾಣಿ ಪ್ರಕ್ರಿಯೆಯು ನಡೆಯಲಿದ್ದು

ದ.ಕ ಜಿಲ್ಲೆಯಾದ್ಯಂತ ಮತದಾರರ ನೋಂದಣಿ ಅಭಿಯಾನ Read More »

ಕರಾವಳಿ, ಕರ್ನಾಟಕ
Scroll to Top