Swathi

ತುಳು ಅಕಾಡೆಮಿ ವತಿಯಿಂದ ಮಾಸಾಶನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅನುಷ್ಠಾನಗೊಂಡು ಕಲಾವಿದರಿಗೆ ಮಾಸಾಶನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ತುಳು ಸಾಹಿತ್ಯ, ಜಾನಪದ, ದೈವಾರಾಧನೆ, ಪಾಡ್ದನ, ಮುಂತಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 60 ವರ್ಷ ವಯಸ್ಸು ದಾಟಿದ ಕಲಾವಿದರು ಮಾಸಾಶನ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಕಲಾಸೇವೆಯ ವಿವರ, ಭಾವಚಿತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಶಾಲಾ ವರ್ಗಾವಣೆ ಪ್ರತಿ, ಇವುಗಳ ದಾಖಲೆ ವಿವರಗಳನ್ನು ಅಧ್ಯಕ್ಷರು, ಕರ್ನಾಟಕ ತುಳು […]

ತುಳು ಅಕಾಡೆಮಿ ವತಿಯಿಂದ ಮಾಸಾಶನಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

 ಡಿ. 3 ರಿಂದ 6 ರವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3   ಹವಾಮಾನ ಇಲಾಖೆ, ಬೆಂಗಳೂರು, ಇವರು ನೀಡಿದ ಹವಾಮಾನ ಮುನ್ಸೂಚನೆಯಂತೆ ಡಿಸೆಂಬರ್ 3, 4, 5 ಮತ್ತು 6 ರಂದು ಅರಬ್ಬೀ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಈ ಮೂಲಕ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.  

 ಡಿ. 3 ರಿಂದ 6 ರವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ Read More »

ಕರಾವಳಿ

ಮಂಗಳೂರು ವಿವಿಯ ಬಿಬಿಎ ಪರೀಕ್ಷೆ ➤ಉಪ್ಪಿನಂಗಡಿಯ ಶಬಾನಾಗೆ 4ನೇ ರ್ಯಾಂಕ್

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಡಿ.3  ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 2019ರ ಎಪ್ರಿಲ್/ ಮೇ ತಿಂಗಳಲ್ಲಿ ನಡೆದ ಬ್ಯಾಚುಲರ್ ಆಫ್ ಬ್ಯುಸ್‍ನೆಸ್ ಅಡ್ಮೀನಿಸ್ಟ್ರೇಷನ್ (ಬಿಬಿಎ) ಪರೀಕ್ಷೆಯಲ್ಲಿ ಉಪ್ಪಿನಂಗಡಿ ನಿವಾಸಿ ಶಬಾನಾ ಅವರು ಶೇ.88.66 ಅಂಕ ಪಡೆದು 4ನೇ ರ್ಯಾಂಕ್ ಗಳಿಸಿದ್ದಾರೆ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ಉಪ್ಪಿನಂಗಡಿ ಬಳಿಯ ಗಾಂಧಿಪಾರ್ಕ್ ನಿವಾಸಿಯಾಗಿದ್ದು, ನೂರ್ ಮೊಹಮ್ಮದ್ ಮತ್ತು ಫರೀದಾ ಬೇಗಂ ದಂಪತಿಯ ಪುತ್ರಿ.  

ಮಂಗಳೂರು ವಿವಿಯ ಬಿಬಿಎ ಪರೀಕ್ಷೆ ➤ಉಪ್ಪಿನಂಗಡಿಯ ಶಬಾನಾಗೆ 4ನೇ ರ್ಯಾಂಕ್ Read More »

ಕರಾವಳಿ

ಕರಾಟೆಯಲ್ಲಿ ಸನ್ವಿತ್‍ಗೆ ಯಲ್ಲೋ ಬೆಲ್ಟ್

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.3  ಮಂಗಳೂರಿನ ಹಂಪನಕಟ್ಟೆ ಮಿಲಾಗ್ರೀಸ್ ವಿದ್ಯಾಸಂಸ್ಥೆಯಲ್ಲಿ ನವೆಂಬರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್ 2019ರ ಸ್ಪರ್ದೆಯಲ್ಲಿ ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಸನ್ವಿತ್ ಎಸ್. ವೈಯಕ್ತಿಕ ಕುಮಿಟೆಯ 11ನೇ ವಯೋಮಾನ ವಿಭಾಗದಲ್ಲಿ ಯಲ್ಲೋ ಬೆಲ್ಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ರೆಂಜಿಲಾಡಿ ಗ್ರಾಮದ ಸಂಕೇಶ ಪುರುಷೋತ್ತಮ ಹಾಗೂ ವಾರಿಜ ದಂಪತಿ ಪುತ್ರ. ಇವರು ಕರಾಟೆ ಶಿಕ್ಷಕ ಚಂದ್ರಶೇಖರ್ ಸುಳ್ಯ ಇವರಿಂದ ತರಭೇತಿ ಪಡೆದಿರುತ್ತಾರೆ.  

ಕರಾಟೆಯಲ್ಲಿ ಸನ್ವಿತ್‍ಗೆ ಯಲ್ಲೋ ಬೆಲ್ಟ್ Read More »

ಕರಾವಳಿ

ಕಡ್ಯ ಕೊಣಾಜೆ: ಕಿರು ಸೇತುವೆಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.3   ಕಡ್ಯ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮೇರು ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿರು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಡ್ಯ ಕೊಣಾಜೆ ಗ್ರಾ.ಪಂ. ವ್ಯಾಪ್ತಿಯ ಪಟ್ಟೆ ಮೂಡಾಲ ಎಸ್.ಸಿ. ಕಾಲೋನಿ ಸಂಪರ್ಕಿಸುವ ಕುಮೇರು ಎಂಬಲ್ಲಿ ಹರಿಯುತ್ತಿರುವ ತೋಡಿಗೆ ತಾ.ಪಂ.ನ ರೂ 2 ಲಕ್ಷ ಹಾಗೂ ಗ್ರಾ.ಪಂ.ನ ರೂ. 4 ಲಕ್ಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಿಸಲು ತಾ.ಪಂ. ಸದಸ್ಯೆ ಪಿ.ವೈ.ಕುಸುಮ ಅವರು ಶಂಕುಸ್ಥಾಪನೆ ನೆರವೇರಿಸಿ, ಶೀಘ್ರ ಕೆಲಸ ನಡೆಯಲಿ ಎಂದು ಪ್ರಾರ್ಥಿಸಿದರು.

ಕಡ್ಯ ಕೊಣಾಜೆ: ಕಿರು ಸೇತುವೆಗೆ ಶಂಕುಸ್ಥಾಪನೆ Read More »

ಕರಾವಳಿ

ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ , ಡಿ.3  ರಾಮನಗರ ಯುವಕ ಮಂಡಲದ ವತಿಯಿಂದ ಕಡ್ಯ ಕೊಣಾಜೆ ಶಾಲಾ ಕ್ರೀಡಾಂಗಣದಲ್ಲಿ 6ನೇ ವರ್ಷದ ದೀಪಾವಳಿ ಪ್ರಯುಕ್ತ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ನಡೆಯಿತು. ಕಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಗೌಡ ದೊಡ್ಡಮನೆ ಪಂದ್ಯಾಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಗೌಡ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮನಗರ ಯುವಕ ಮಂಡಲದ ಅಧ್ಯಕ್ಷ ಪುಂಡರೀಕಾಕ್ಷ ವಹಿಸಿದ್ದರು. ಹೊನ್ನಪ್ಪ ಗೌಡ ಕಲ್ಲೂರು, ಗಂಗಾಧರ ಗೌಡ ದೊಡ್ಡಮನೆ,

ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ Read More »

ಕರಾವಳಿ

ಎಸ್ ಬಿ ಕಾಲೇಜ್ ನೆಲ್ಯಾಡಿಯಲ್ಲಿ ನಾಳೆ ಪ್ರತಿಭೆಗಳ ಹಬ್ಬ – ಕಲಾ ಪರ್ವ 2k19

(ನ್ಯೂಸ್ ಕಡಬ) newskadaba.com, ನೆಲ್ಯಾಡಿ, ಡಿ.2  ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನ ಹೊರಸೂಸುವ ಉದ್ದೇಶದಿಂದ ಆಯೋಜಿಸಿದ ಕಲಾ ಪರ್ವ 2k19 ಹಬ್ಬವನ್ನು ದಿನಾಂಕ 3-12-2019 ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯಕ್ಷದರುವ ಫೌಂಡೇಶನ್‍ನ ಶ್ರೀ ಸತೀಶ್ ಪಾಟ್ಲಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರೂ, ಪ್ರಾಂಶುಪಾಲರೂ ಆದ ರೆ|ಫಾ|ಡಾ| ವರ್ಗೀಸ್ ಕೈಪನಡುಕ್ಕ ಒಐಸಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ|

ಎಸ್ ಬಿ ಕಾಲೇಜ್ ನೆಲ್ಯಾಡಿಯಲ್ಲಿ ನಾಳೆ ಪ್ರತಿಭೆಗಳ ಹಬ್ಬ – ಕಲಾ ಪರ್ವ 2k19 Read More »

ಕರಾವಳಿ

ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚಾದ ಕಪ್ಪು ಬಣ್ಣ

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಡಿ.2  ಹಿಂದೆಲ್ಲಾ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಎಲ್ಲರೂ ಹಿಂದೆಮುಂದೆ ನೋಡುತ್ತಿದ್ದರು. ಆದರೆ ಈಗ ಜನರ ಮನಸ್ಥಿತಿ, ನಂಬಿಕೆಗಳು ಬದಲಾಗುತ್ತಿವೆ. ಜನರು, ಕಪ್ಪು ಬಣ್ಣದ ಉಡುಗೆಯನ್ನು ಹುಟ್ಟು ಹಬ್ಬ, ಪೂಜೆ, ಮದುವೆ, ಹಬ್ಬ ಮತ್ತು ಹರಿದಿನಗಳಲ್ಲಿ ಉಡುತ್ತಿರಲಿಲ್ಲ. ಆದರೆ ಈಗೀಗ ಆ ಭಾವನೆ ದೂರವಾಗುತ್ತಿದೆ. ಕಪ್ಪು ಬಣ್ಣದ ಬಗೆಗಿನ ಅಭಿಪ್ರಾಯ ಬದಲಾಗುವುದಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟರೆ ಸಪೂರವಾಗಿ ಕಾಣಿಸುತ್ತೇವೆ ಎಂಬ ನಂಬಿಕೆಯೂ

ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚಾದ ಕಪ್ಪು ಬಣ್ಣ Read More »

ವಿಶೇಷ ಲೇಖನಗಳು

“ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು”

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.2  ಇತ್ತೀಚೆಗೆ ಸೌಜನ್ಯ ಮಹಿಳಾ ಮಂಡಲ(ರಿ) ಹೊೈಗೆಬೈಲ್ ಇವರು “ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ” ಇವರೊಂದಿಗೆ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಹಾಗೂ ಮಿಶನ್ ಮಮತಾದ ಸಂಯೋಜಕಿ ರಮಾಮಣಿ ಭಟ್ ಇವರು ಸೌಜನ್ಯದ ಸದಸ್ಯೆಯರನ್ನು ಉದ್ದೇಶಿಸಿ ಮಾತನಾಡುತ್ತಾ “ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು.” ಮಿಶನ್ ಮಮತಾ ಯೋಜನೆಯ ಮೂಲಕ ಸರಕಾರದ ಸಹಕಾರದೊಂದಿಗೆ ಈ ಕೆಲಸವನ್ನು ಆರಂಭಿಸಲಿದ್ದೇವೆ, ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ನಾವು

“ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು” Read More »

ಕರಾವಳಿ

ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧವೇ ಮಾವಿನ ಎಲೆ

(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ಡಿ.2.   ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನಲ್ಲಿ ಕೇವಲ ಹಣ್ಣಿನ ರುಚಿ ಮಾತ್ರವಲ್ಲದೆ, ಹಲವು ಔಷಧ ಗುಣಗಳಿಗೆ ಖ್ಯಾತಿ ಪಡೆದಿದೆ. ಮಾವಿನ ಹಣ್ಣಿನಲ್ಲಿ ಸಿಗುವ ವಿಟಮಿನ್ “ಸಿ’ ಅಂಶ ದೇಹಕ್ಕೆ ರೋಗನಿರೋಧಕ ಶಕ್ತಿ ಒದಗಿಸುತ್ತದೆ. ಮಾವಿನ ಹಣ್ಣಿನ ಜೊತೆಗೆ ಇದರ ಎಲೆಗಳು ಕೂಡ ಅನೇಕ ಔಷಧ ಗುಣಗಳನ್ನು ಹೊಂದಿವೆ. ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧ ಈಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಣಸಿಗುವ ರೋಗಗಳಲ್ಲಿ ಒಂದಾಗಿದೆ. ಮಾವಿನ ಎಲೆ ಚಹಾ ಸೇವನೆ

ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧವೇ ಮಾವಿನ ಎಲೆ Read More »

ಆರೋಗ್ಯ ಮಾಹಿತಿ
Scroll to Top