Swathi

ಜಿಲ್ಲಾ ಮಟ್ಟದ ಬಾಸ್ಕೆಟ್‍ ಬಾಲ್ ಆಯ್ಕೆ ಪ್ರಕ್ರಿಯೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.27   2019-20ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಬಾಸ್ಕೆಟ್‍ಬಾಲ್ ಪಂದ್ಯಾವಳಿಯು ಜನವರಿ 18 ರಿಂದ 21 ರವರೆಗೆ ಪಂಜಾಬ್‍ನಲ್ಲಿ ನಡೆಯಲಿದ್ದು, ಡಿಸೆಂಬರ್ 30 ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಬಾಸ್ಕೆಟ್‍ಬಾಲ್ ತಂಡದ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಸರಕಾರಿ ನೌಕರರ ಪುರುಷರ ಬಾಸ್ಕೆಟ್‍ಬಾಲ್ ತಂಡವನ್ನು ಜಿಲ್ಲಾ ಮಟ್ಟದಿಂದ ಆಯ್ಕೆ ಮಾಡಿ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು […]

ಜಿಲ್ಲಾ ಮಟ್ಟದ ಬಾಸ್ಕೆಟ್‍ ಬಾಲ್ ಆಯ್ಕೆ ಪ್ರಕ್ರಿಯೆ Read More »

ಕರಾವಳಿ

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.27   ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ 2019-20 ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳೆಯರ ಅಭಿವೃದ್ಧಿಗಾಗಿ ಕನಿಷ್ಟ 5 ವರ್ಷಗಳಿಂದ ಮಹಿಳಾ ಅಭಿವೃದ್ದಿ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರೆ 5 ಕ್ಷೇತ್ರಗಳಾದ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತಾವನೆಯನ್ನು

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ – ಅರ್ಜಿ ಆಹ್ವಾನ Read More »

ಕರಾವಳಿ

ಆಲಂಕಾರು : ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ➤ ಜನವರಿ 2ರಿಂದ 5ರವರೆಗೆ ರಜತ ಸಂಭ್ರಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ

(ನ್ಯೂಸ್ ಕಡಬ) newskadaba.com, ಕಡಬ, ಡಿ.27    ಕಡಬ ತಾಲೂಕು ಆಲಂಕಾರು ಗ್ರಾಮದ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ರಜತ ಸಂಭ್ರಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭವು ಜನವರಿ 2ರಿಂದ ಮೊದಲ್ಗೊಂಡು 5ರವರೆಗೆ ಶಾಲಾ ವಠಾರದಲ್ಲಿ ನಡೆಯಲಿದೆ. ಸಮಾರಂಭದ ಚಪ್ಪರ ಮುಹೂರ್ತವು ಆದಿತ್ಯವಾರ ಸಂಜೆ ಗೋಧೊಳಿ ಲಗ್ನದಲ್ಲಿ ನಡೆಯಿತು. ಅರ್ಚಕ ನಾಗರಾಜ ಭಟ್ ಸುಳ್ಯ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಆಲಂಕಾರು ಗ್ರಾಮ ಪಂಚಾಯತ್ ಸದಸ್ಯ ಕೇಶವ ಗೌಡ ಆಲಡ್ಕ ಚಪ್ಪರ ಮುಹೂರ್ತದ ಹಿನ್ನೆಲೆಯಲ್ಲಿ ತೆಂಗಿನ ಕಾಯಿ

ಆಲಂಕಾರು : ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ➤ ಜನವರಿ 2ರಿಂದ 5ರವರೆಗೆ ರಜತ ಸಂಭ್ರಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.27   ರಾಷ್ಟ್ರೀಯ ಸೇವಾ ಯೋಜನೆಯು ನಿಸ್ವಾರ್ಥ ಸೇವಾ ಮನೋಭಾವನೆಯ ಒಬ್ಬ ಸ್ವಯಂ ಸೇವಕನನ್ನು ಹುಟ್ಟು ಹಾಕುತ್ತದೆ. ಶಿಬಿರದಲ್ಲಿ ಅನುಭವಿಸಿದ ಕೌಶಲ್ಯ, ಜೀವನ ಪಾಠ ಭವಿಷ್ಯದ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು. ಅಲಂಕಾರು ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಿದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಶಿಬಿರ ಉದ್ಘಾಟಿಸಿ ಮತನಾಡಿದ ಶ್ರೀ

ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ Read More »

ಕರಾವಳಿ

ಕಡಬದಲ್ಲಿ 37ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ ➤ ತಮ್ಮೊಳಗಿರುವ ರಾಕ್ಷಸಿ ಪ್ರವೃತ್ತಿಯನ್ನು ಮೊದಲು ತೊಲಗಿಸಿದರೆ ಸಮಾಜದಲ್ಲಿ ಶಾಂತಿ – ಒಡಿಯೂರು ಶ್ರೀ

(ನ್ಯೂಸ್ ಕಡಬ) newskadaba.com, ಕಡಬ, ಡಿ.27  ತಮ್ಮೊಳಗೆ ಅಡಗಿರುವ ರಾಕ್ಷಸಿ ಪ್ರವೃತ್ತಿಯನ್ನು ಮೊದಲು ತೊಲಗಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಬಹುದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ನಡೆದ 37ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಇಂದಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಆತಂಕಕಾರಿಯಾಗಿದೆ, ಇದಕ್ಕೆ ಮೂಲ

ಕಡಬದಲ್ಲಿ 37ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ ➤ ತಮ್ಮೊಳಗಿರುವ ರಾಕ್ಷಸಿ ಪ್ರವೃತ್ತಿಯನ್ನು ಮೊದಲು ತೊಲಗಿಸಿದರೆ ಸಮಾಜದಲ್ಲಿ ಶಾಂತಿ – ಒಡಿಯೂರು ಶ್ರೀ Read More »

ಕರಾವಳಿ

ದ.ಕ ಜಿಲ್ಲೆ ಗೃಹರಕ್ಷಕ ದಳ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26  ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಗೃಹರಕ್ಷಕರನ್ನು ಭರ್ತಿ ಮಾಡಲು ಮೂಡಬಿದ್ರಿ, ಸುರತ್ಕಲ್, ಪಣಂಬೂರು, ಮಂಗಳೂರು, ಮೂಲ್ಕಿ ಘಟಕಗಳಲ್ಲಿ ಪುರುಷರಿಂದ ಅರ್ಜಿ ಆಹ್ವಾನಿಸಲಾಗಿದ್ದು, 20 ವರ್ಷ ವಯಸ್ಸು ಮೇಲ್ಪಟ್ಟ  ಆಸಕ್ತ ಪುರುಷ ಅಭ್ಯರ್ಥಿಗಳು ಅರ್ಜಿ ನೀಡಬಹುದು. ಅರ್ಜಿಯನ್ನು ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್, ಮಂಗಳೂರು, ಕಚೇರಿ ದೂರವಾಣಿ ಸಂಖ್ಯೆ 0824-2220562 ಇಲ್ಲಿ ಪಡೆಯಬಹುದು ಎಂದು ದ.ಕ ಜಿಲ್ಲೆ ಸಮಾದೇಷ್ಟರ  ಪ್ರಕಟಣೆ ತಿಳಿಸಿದೆ.

ದ.ಕ ಜಿಲ್ಲೆ ಗೃಹರಕ್ಷಕ ದಳ – ಅರ್ಜಿ ಆಹ್ವಾನ Read More »

ಕರಾವಳಿ

ಜ.3 ರಂದು ಬಂಟ್ವಾಳ ತಾ. ಕೆ.ಡಿ.ಪಿ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26   ಬಂಟ್ವಾಳ ತಾಲೂಕು ಪಂಚಾಯತ್‍ನ 2019-20 ನೇ ಸಾಲಿನ ತ್ರೈಮಾಸಿಕ ಕೆ.ಡಿ.ಪಿ ಸಭೆ ಜನವರಿ 3 ರಂದು ಬೆಳಿಗ್ಗೆ 10.30 ಗಂಟೆಗೆ  ತಾಲೂಕು ಪಂಚಾಯತ್  ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಜ.3 ರಂದು ಬಂಟ್ವಾಳ ತಾ. ಕೆ.ಡಿ.ಪಿ ಸಭೆ Read More »

ಕರಾವಳಿ

ಕೇಂದ್ರ ಸರಕಾರಿ ಉದ್ಯೋಗ – ಉಚಿತ ಪರೀಕ್ಷಾ ಪೂರ್ವ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26   ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜನವರಿ 6 ರಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಇಚ್ಛಿಸುವ  ಅಭ್ಯರ್ಥಿಗಳು ತಮ್ಮ ಹೆಸರನ್ನು ಖುದ್ದಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಬೇಕು. ದೂರವಾಣಿ ಸಂಖ್ಯೆ  0824-2457139 ಸಂಪರ್ಕಿಸಬಹುದು ಎಂದು  ಉದ್ಯೋಗಾಧಿಕಾರಿ ಜಿಲ್ಲಾ ಉದ್ಯೋಗ ವಿನಿಮಯ

ಕೇಂದ್ರ ಸರಕಾರಿ ಉದ್ಯೋಗ – ಉಚಿತ ಪರೀಕ್ಷಾ ಪೂರ್ವ ತರಬೇತಿ Read More »

ಕರಾವಳಿ

ಚಾಕಲೇಟ್ ತಯಾರಿ ತರಬೇತಿ- ದಿನ ಮುಂದೂಡಿಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26    ಸಿರಿ ತೋಟಗಾರಿಕೆ ಸಂಘದ ವತಿಯಿಂದ ಡಿಸೆಂಬರ್ 21  ರಂದು ನಡೆಯಬೇಕಿದ್ದ ಚಾಕಲೇಟ್ ತಯಾರಿ (ಹುಟ್ಟುಹಬ್ಬ, ಹೊಸವರ್ಷ, ಕ್ರಿಸ್‍ಮಸ್ ಆಚರಣೆಗಳಲ್ಲಿ ಉಪಯೋಗಿಸುವ ಚಾಕಲೇಟ್ ತಯಾರಿ) ತರಬೇತಿ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ತರಬೇತಿಯನ್ನು ಡಿಸೆಂಬರ್ 27 ರಂದು ಬಾಲಭವನ, ಕದ್ರಿ ಉದ್ಯಾನವನದ ಹತ್ತಿರ ಆಯೋಸಲಾಗಿದೆ. ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರ್‍ವೆಲ್, ಮಂಗಳೂರು ಇಲ್ಲಿ ತರಬೇತಿ ಶುಲ್ಕ ನೀಡಿ ಡಿಸೆಂಬರ್ 26 ರೊಳಗೆ  ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ  ರುಕ್ಮಯ ದೂರವಾಣಿ ಸಂಖ್ಯೆ 9845523944

ಚಾಕಲೇಟ್ ತಯಾರಿ ತರಬೇತಿ- ದಿನ ಮುಂದೂಡಿಕೆ Read More »

ಕರಾವಳಿ

ಎಣ್ಮೂರು :ಕೆಮ್ಮಲೆ (ಹೇಮಳ) ನಾಗಬ್ರಹ್ಮ ದೇವಸ್ಥಾನಕ್ಕೆ ಸರಕಾರದಿಂದ 45 ಲಕ್ಷ ಬಿಡುಗಡೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.26   ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ಶ್ರೀ ನಾಗಬ್ರಹ್ಮ ದೇವಸ್ಥಾನದ ಜೀರ್ಣೊದ್ಧಾರವು ಊರ-ಪರವೂರ ಭಕ್ತರ ಸಹಕಾರದಿಂದ ನಡೆಯುತ್ತಿದ್ದು, ಆರ್ಥಿಕ ಅಡಚಣೆಯುಂಟಾದ ಸಂದರ್ಭದಲ್ಲಿ ಗ್ರಾಮಸ್ಥರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೇಟಿಯಾಗಿ ಸಮಸ್ಯೆ ಹೇಳಿದಾಗ ತಕ್ಷಣ ಸ್ಪಂದಿಸಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿಸಿ ಅನುದಾನದ ಭರವಸೆ ನೀಡಿದ್ದರು. ಇದೀಗ ಸರಕಾರದಿಂದ ಕೆಲವೇ ದಿನಗಳಲ್ಲಿ ರೂ. 45 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ದೇವಾಲಯಕ್ಕೆ ಅನುದಾನ ಒದಗಿಸಿಕೊಟ್ಟ ಮುಖ್ಯಮಂತ್ರಿಗಳಾದ ಬಿ. ಎಸ್.

ಎಣ್ಮೂರು :ಕೆಮ್ಮಲೆ (ಹೇಮಳ) ನಾಗಬ್ರಹ್ಮ ದೇವಸ್ಥಾನಕ್ಕೆ ಸರಕಾರದಿಂದ 45 ಲಕ್ಷ ಬಿಡುಗಡೆ Read More »

ಕರಾವಳಿ
Scroll to Top