Swathi

ಕೋಸ್ಟಲ್‌ವುಡ್‌‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ “ಇಂಗ್ಲೀಷ್” ತುಳು ಸಿನಿಮಾ ಎಪ್ರಿಲ್ 3ರಂದು ದೇಶ-ವಿದೇಶಗಳಲ್ಲಿ ಬಿಡುಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.13    ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22, ಕನ್ನಡ ಚಲನಚಿತ್ರದ ನಿರ್ಮಾಪರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ಇಂಗ್ಲಿಷ್ ತುಳು ಸಿನಿಮಾ ಎಪ್ರಿಲ್ 3ರಂದು ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಪುಣೆ, ಮುಂಬೈ ಹಾಗೂ ಗಲ್ಫ್‌ ರಾಷ್ಟ್ರಗಳಲ್ಲಿ ಏಕಕಾಲದಲ್ಲೇ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ ತಿಳಿಸಿದ್ದಾರೆ. ಈಗಾಗಲೇ […]

ಕೋಸ್ಟಲ್‌ವುಡ್‌‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ “ಇಂಗ್ಲೀಷ್” ತುಳು ಸಿನಿಮಾ ಎಪ್ರಿಲ್ 3ರಂದು ದೇಶ-ವಿದೇಶಗಳಲ್ಲಿ ಬಿಡುಗಡೆ Read More »

ಕರಾವಳಿ

ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಮಹಾಸಭೆ ➤ ಅಧ್ಯಕ್ಷ ಆಸಿಫ್, ಕಾರ್ಯದರ್ಶಿ ರಾಹಿಲ್, ಕೋಶಾಧಿಕಾರಿಯಾಗಿ ಅನ್ಸಾರ್ ಆಯ್ಕೆ

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಜ.13   ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಇದರ ನೂತನ ಅಧ್ಯಕ್ಷರಾಗಿ ಜಿ. ಆಸಿಫ್, ಕಾರ್ಯದರ್ಶಿಯಾಗಿ ರಾಹಿಲ್ ಹಾಗೂ ಕೋಶಾಧಿಕಾರಿಯಾಗಿ ಅನ್ಸಾರ್ ಎಸ್.ಪಿ. ಆಯ್ಕೆಯಾಗಿದ್ದಾರೆ. ಆತೂರು ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಹಾದಿ ಅನಸ್ ತಂಙಳ್ ಅಧ್ಯಕ್ಷತೆಯಲ್ಲಿ, ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆ ಚುನಾವಣಾಧಿಕಾರಿ ಹಾರಿಸ್ ಕೌಸರಿ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಇಸಾಕ್ ಬೊಲುಂಬುಡ, ಸಂಘಟನಾ

ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಮಹಾಸಭೆ ➤ ಅಧ್ಯಕ್ಷ ಆಸಿಫ್, ಕಾರ್ಯದರ್ಶಿ ರಾಹಿಲ್, ಕೋಶಾಧಿಕಾರಿಯಾಗಿ ಅನ್ಸಾರ್ ಆಯ್ಕೆ Read More »

ಕರಾವಳಿ

ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ➤ ಕಾರಿನಲ್ಲಿದ್ದವರಿಗೆ ಗಾಯ

(ನ್ಯೂಸ್ ಕಡಬ) newskadaba.com, ಪುತ್ತೂರು, ಜ.13   ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಜಖಂಗೊಂಡು ಕಾರಿನಲ್ಲಿದ್ದವರಿಗೆ ಗಾಯಗಳಾದ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಓಡ್ಲ ಎಂಬಲ್ಲಿ ನಿನ್ನೆ ನಡೆದಿದೆ. ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಕುಬ್ರ, ಕಮರುನ್ನೀಸಾ, ಚಾಲಕ ಅಲಿ ಮತ್ತು ಇತರರು ಗಾಯಗೊಂಡರು ಮತ್ತು ಎರಡೂ ವಾಹನಗಳು ಜಖಂಗೊಂಡ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ➤ ಕಾರಿನಲ್ಲಿದ್ದವರಿಗೆ ಗಾಯ Read More »

ಕರಾವಳಿ

ಕೊಣಾಜೆ ಒಕ್ಕೂಟ ಸದಸ್ಯರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com, ಕಡಬ, ಜ.13    ಕಡ್ಯ ಕೊಣಾಜೆ ಗ್ರಾಮದ ಕೊಣಾಜೆ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಶನಿವಾರ ಶ್ರಮದಾನ ನಡೆಸಲಾಯಿತು. ಕೊಣಾಜೆ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವವು ಜ.29ರಿಂದ ಆರಂಭವಾಗಲಿದ್ದು, ದೈವಸ್ಥಾನದ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಣಾಜೆ ಒಕ್ಕೂಟದ ಸದಸ್ಯರು ಶ್ರಮದಾನದ ಮೂಲಕ ಮದ್ಯಾಹ್ನದ ವರೆಗೆ ಕೆಲಸ ನಿರ್ವಹಿಸಿದರು. ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷ

ಕೊಣಾಜೆ ಒಕ್ಕೂಟ ಸದಸ್ಯರಿಂದ ಶ್ರಮದಾನ Read More »

ಕರಾವಳಿ

ಒರುಂಬಾಳು: ಪ್ರತಿಷ್ಠಾ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

(ನ್ಯೂಸ್ ಕಡಬ) newskadaba.com, ಕಡಬ, ಜ.13    ನೂಜಿಬಾಳ್ತಿಲ ಗ್ರಾಮದ ಒರುಂಬಾಳು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಗಣಹೋಮ ಕಾರ್ಯಗಳು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ನಡೆಯಿತು. ಶುಕ್ರವಾರ ಭಕ್ತಾಧಿಗಳಿಂದ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ನಡೆಯಿತು. ಶನಿವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ

ಒರುಂಬಾಳು: ಪ್ರತಿಷ್ಠಾ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ Read More »

ಕರಾವಳಿ

ನಿಧನ ನ್ಯೂಸ್

(ನ್ಯೂಸ್ ಕಡಬ) newskadaba.com, ಕಡಬ, ಜ.13    ಕಡಬ ತಾಲೂಕು ಆಲಂಕಾರು ಗ್ರಾಮದ ಬುಡೇರಿಯಾ ನಿವಾಸಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕುಕ್ಕ ಮುಗೇರ (67ವ) ಅಲ್ಪ ಕಾಲದ ಅಸೌಖ್ಯದಿಂದ ಸ್ವ-ಗೃಹದಲ್ಲಿ ಆದಿತ್ಯವಾರ ನಿಧನರಾದರು. ಮೃತರು ಒರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ನಿಧನ ನ್ಯೂಸ್ Read More »

ಕರಾವಳಿ

ರಸ್ತೆ ಸುರಕ್ಷತಾ ಸಪ್ತಾಹ -2020 ಮತ್ತು ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಪುತ್ತೂರು, ಜ.11   ಪುತ್ತೂರು ಸಂಚಾರ ಠಾಣಾ ವತಿಯಿಂದ 31 ನೇ ರಸ್ತೆ ಸುರಕ್ಷತಾ ಸಪ್ತಾಹ -2020 ನೇದರ ಜಾಥಾ ಕಾರ್ಯಕ್ರಮಕ್ಕೆ ಹಾಗೂ ಹೊಸ ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿ ಇಂದು ನಡೆಯಿತು. ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು , ಪುತ್ತೂರು ಇವರು ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ದಿನಕರ ಶೆಟ್ಟಿ ಹಾಗೂ

ರಸ್ತೆ ಸುರಕ್ಷತಾ ಸಪ್ತಾಹ -2020 ಮತ್ತು ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ Read More »

ಕರಾವಳಿ

ಕರಾವಳಿ ಉತ್ಸವದ ಮೆರವಣಿಗೆಯಲ್ಲಿ – ಸಾಂಸ್ಕೃತಿಕ ತಂಡಗಳು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    2019-20 ನೇ ಸಾಲಿನ ಕರಾವಳಿ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಸಾಂಸ್ಕೃತಿಕ ತಂಡಗಳ ವಿವರ ಇಂತಿವೆ:- ಗಿರಿ-ಸಿರಿ ಜಾನಪದ ಕಲಾ ತಂಡ(ರಿ).,ಕನ್ಯಾನ, ಬಂಟ್ವಾಳ ತಂಡದಿಂದ ಕೊರಗರ ಡೋಲು-ಕೋಲು ಕುಣಿತ, ರಮೇಶ ಕನ್ಯಾನ, ಶಿವಗಿರಿ ಹೊೈಗೆಗದ್ದೆ, ಕನ್ಯಾನ ಗ್ರಾಮ, ಬಂಟ್ವಾಳ ತಂಡದಿಂದ ಕರಡಿ-ಸಿಂಹ ನೃತ್ಯ, ರಾಮನಗರ ತಂಡದಿಂದ ಪೂಜಾ ಕುಣಿತ, ಕಾರವಾರ ತಂಡದಿಂದ ಸುಗ್ಗಿ ಕುಣಿತ, ಹಾವೇರಿ ತಂಡದಿಂದ ಬೇಡರ ಕುಣಿತ, ಚಿಕ್ಕಮಂಗಳೂರು ತಂಡದಿಂದ ಮಹಿಳಾ ವೀರಗಾಸೆ, ಮಾಗಡಿ ತಂಡದಿಂದ ನಂದಿಧ್ವಜ,

ಕರಾವಳಿ ಉತ್ಸವದ ಮೆರವಣಿಗೆಯಲ್ಲಿ – ಸಾಂಸ್ಕೃತಿಕ ತಂಡಗಳು Read More »

ಕರಾವಳಿ

ಬಾಲಕಾರ್ಮಿಕ ಕಾನೂನು ಅರಿವು ಕಾರ್ಯಾಗಾರ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯಾವಂತರ ಜಿಲ್ಲೆಯಾಗಿದ್ದು ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಸಮಸ್ಯೆಯು ತುಂಬಾ ಕಡಿಮೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ರವಿ ಎಮ್ ನಾಯಕ್  ಹೇಳಿದರು. ಶುಕ್ರವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘ, ದಕ್ಷಿಣ

ಬಾಲಕಾರ್ಮಿಕ ಕಾನೂನು ಅರಿವು ಕಾರ್ಯಾಗಾರ Read More »

ಕರಾವಳಿ

ಸಿರಿದೊಂಪ-ತುಡರ್ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಪ್ರತಿ ತಿಂಗಳ ಚಾವಡಿ ಕಾರ್ಯಕ್ರಮದಲ್ಲಿ ಒಬ್ಬ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಿದೆ. ಜನವರಿ 13 ರಂದು ಮಧ್ಯಾಹ್ನ  2 ಗಂಟೆಗೆ ಅಕಾಡೆಮಿ ಸಿರಿಚಾವಡಿಯಲ್ಲಿ ಹಿರಿಯ ಸಾಹಿತಿ ಮತ್ತು ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು ಇವರನ್ನು ಸನ್ಮಾನಿಸಲಾಗುವುದು ಹಾಗೂ  ‘ಸಿರಿದೊಂಪ – ತುಡರ್ ಎರಡು ಪುಸ್ತಕ’ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ತುಳು

ಸಿರಿದೊಂಪ-ತುಡರ್ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ Read More »

ಕರಾವಳಿ
Scroll to Top