Swathi

ಕೊರೊನಾ ಪರಿಣಾಮದಿಂದ ಭಾರತಕ್ಕೆ ಬರಲಾಗದೆ ಕಂಗಾಲಾದ ಚೀನಾ ದಂಪತಿ

(ನ್ಯೂಸ್ ಕಡಬ) newskadaba.com, ಮಿಡ್ನಾಪುರ್, ಫೆ.6. ಕೊರೋನಾ ವೈರಸ್ ಪರಿಣಾಮದಿಂದ ಮಗಳ ಮದುವೆಗೆ ಚೀನಾದಿಂದ ಭಾರತಕ್ಕೆ ಬರಲಾಗದೆ ಪೋಷಕರು ಹತಾಶರಾದ ಘಟನೆ ನಡೆದಿದೆ. 7 ವರ್ಷಗಳ ಹಿಂದೆ ಭಾರತದ ಯುವಕನಿಗೂ , ಚೀನಾದ ಯುವತಿಗೂ ಪ್ರೇಮಾಂಕುರವಾಗಿ ಫೆಬ್ರವರಿ 5 ರಂದು ವಿವಾಹವಾಗಲು ನಿಶ್ಚಯಿಸಿದ್ದರು.ಇದಕ್ಕಾಗಿ ಬಂಗಾಳದ, ಪೂರ್ವ ಮಿಡ್ನಾಪೂರ್ ನ ಯುವಕನ ಮನೆಯಲ್ಲಿ ಭರ್ಜರಿ ಸಿದ್ದತೆಯೂ ನಡೆದಿತ್ತು. ಆದರೆ ಚೀನಾದಲ್ಲಿದ್ದ ಯುವತಿ ಪೋಷಕರರಿಗೆ ಕೊರೋನಾ ವೈರಸ್ ಕಾರಣದಿಂದ ಮದುವೆ ಸಮಾರಂಭಕ್ಕೆ ಭಾರತಕ್ಕೆ ಬರಲಾಗದೇ ಹತಾಶರಾಗಿದ್ದಾರೆ. ಕೊರೊನಾ ವೈರಸ್ ಕಾರಣದಿಂದ […]

ಕೊರೊನಾ ಪರಿಣಾಮದಿಂದ ಭಾರತಕ್ಕೆ ಬರಲಾಗದೆ ಕಂಗಾಲಾದ ಚೀನಾ ದಂಪತಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ನಾಳೆಯಿಂದ ಅಜಿಲಮೊಗರು ಮಾಲಿದಾ ಉರೂಸ್

(ನ್ಯೂಸ್ ಕಡಬ) newskadaba.com, ಬಂಟ್ವಾಳ, ಫೆ.6. ಅಜಿಲಮೊಗರುವಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಸೈಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ಇವರ ಸವಿನೆನಪಿಗಾಗಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧವಾದ 747 ನೇ ಮಾಲಿದಾ ಉರೂಸ್ ನಾಳೆಯಿಂದ (ಫೆಬ್ರವರಿ) 7, 8, 9 ದಿನಾಂಕಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಉಲಮಾಗಳು, ಸಾದಾತುಗಳು, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನಾಳೆಯಿಂದ ಅಜಿಲಮೊಗರು ಮಾಲಿದಾ ಉರೂಸ್ Read More »

ಕರಾವಳಿ

ತುರ್ತು ಭೂಸ್ಪರ್ಶದ ವೇಳೆ ಸ್ಕಿಡ್ ಆಗಿ ತುಂಡಾದ ವಿಮಾನ ➤ ಮೂವರು ಮೃತ್ಯು, 179 ಜನರಿಗೆ ಗಾಯ

(ನ್ಯೂಸ್ ಕಡಬ) newskadaba.com, ಇಸ್ತಾನ್ ಬುಲ್, ಫೆ.6. ಪಶ್ಚಿಮ ಟರ್ಕಿಯ ಅಜ್ಮೀರ್ ನಿಂದ ಇಸ್ತಾನ್ ಬುಲ್ ನ ಸಬಿಹಾ ಗೋಕ್ಸೆನ್ ನಿಲ್ದಾಣಕ್ಕೆ ಬರುತ್ತಿದ್ದ 183 ಪ್ರಯಾಣಿಕರನ್ನು ಹೊತ್ತ ವಿಮಾನವೊಂದು ರನ್ ವೇಯಲ್ಲಿ ಸ್ಕಿಡ್ ಆದ ಪರಿಣಾಮ ತುಂಡು ತುಂಡಾಗಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ತುರ್ತು ಭೂ ಸ್ಪರ್ಶ ಮಾಡುವಾಗ ವೇ ಯಲ್ಲಿ ತೇವಾಂಶ ಹೆಚ್ಚಿದ್ದರಿಂದ ವಿಮಾನ ಸ್ಕಿಡ್ ಆಗಿ ಇಬ್ಬಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಮೃತಪಟ್ಟು, 179 ಜನರು

ತುರ್ತು ಭೂಸ್ಪರ್ಶದ ವೇಳೆ ಸ್ಕಿಡ್ ಆಗಿ ತುಂಡಾದ ವಿಮಾನ ➤ ಮೂವರು ಮೃತ್ಯು, 179 ಜನರಿಗೆ ಗಾಯ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಾಸಕರ ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.6  ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದ.ಕ ಜಿಲ್ಲೆಯ ಶಾಸಕ ಹರೀಶ್ ಪೂಂಜ, ಇವರ 2018-19ನೇ ಸಾಲಿನ ಅನುದಾನದಲ್ಲಿ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮ ವಿವಿಧೆಡೆಗಳಲ್ಲಿ ಸೋಲಾರ್ ದಾರಿದೀಪ ಅಳವಡಿಕೆ ಕಾಮಗಾರಿಗೆ ರೂ. 2 ಲಕ್ಷ, ಕುವೆಟ್ಟು ಗ್ರಾಮದ ಓಡಿಲ್ನಾಳ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ – ಬಣ್ಣ ಅಳವಡಿಸುವುದಕ್ಕೆ ರೂ. 2 ಲಕ್ಷ, ಕೊಕ್ರಾಡಿ ಗ್ರಾಮದ ಮೂಡುಬೈಲು ಕ್ರಾಸ್‍ನಿಂದ ಪುಣ್ಕೆದಬೆಟ್ಟು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ರೂ.

ಶಾಸಕರ ಅನುದಾನ ಬಿಡುಗಡೆ Read More »

ಕರಾವಳಿ, ಕರ್ನಾಟಕ

ಅಬ್ಬಕ್ಕ ಉತ್ಸವ 2020 – ಕವಿಗೋಷ್ಠಿಗೆ ಅರ್ಜಿ ಅಹ್ವಾನ

(ನ್ಯೂಸ್ ಕಡಬ) newskadaba.com,  ಮಂಗಳೂರು, ಫೆ.6.  ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಜರಗುವ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ  ಕವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಹಾಗೂ ಕನ್ನಡಗಳಲ್ಲಿ ಕನಿಷ್ಠ ಒಂದು ಕವನ ಸಂಕಲನವನ್ನು ಪ್ರಕಟಿಸಿರುವ ಕವಿಗಳಿಗೆ ಈ ಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು ತಾವು ಪ್ರಸ್ತುತ ಪಡಿಸಬಯಸುವ ಒಂದು ಕವಿತೆಯೊಂದಿಗೆ ಸಂಪೂರ್ಣ ಸ್ವವಿವರಗಳನ್ನೊಳಗೊಂಡ ಅರ್ಜಿಯನ್ನು ಫೆಬ್ರವರಿ 10 ರೊಳಗೆ ತಲುಪುವಂತೆ ಅಂಚೆ ಅಥವಾ ಮಿಂಚಂಚೆ ಮೂಲಕ  ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ

ಅಬ್ಬಕ್ಕ ಉತ್ಸವ 2020 – ಕವಿಗೋಷ್ಠಿಗೆ ಅರ್ಜಿ ಅಹ್ವಾನ Read More »

ಕರಾವಳಿ, ಕರ್ನಾಟಕ

ಅಬ್ಬಕ್ಕ ಉತ್ಸವ – ಕಲಾತಂಡಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.6. ದ.ಕ ಜಿಲ್ಲೆ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವವನ್ನು 2020ರ ಫೆಬ್ರವರಿ ತಿಂಗಳಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದೆ. ಅಬ್ಬಕ್ಕ ಉತ್ಸವ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಲು ಜಿಲ್ಲೆಯ ವಿವಿಧ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕಲಾತಂಡಗಳು ಅರ್ಜಿ ಸಲ್ಲಿಸುವಾಗ ತಮ್ಮ ಕಲಾಪ್ರಕಾರ, ಈ ಹಿಂದೆ ನೀಡಿರುವ ಕಾರ್ಯಕ್ರಮಗಳ ಬಗ್ಗೆ ವಿವರ, ಛಾಯಾಚಿತ್ರಗಳು ಈ ಬಗ್ಗೆ ಪತ್ರಿಕಾ ವರದಿಗಳನ್ನೊಳಗೊಂಡ ದಾಖಲೆಗಳು ಮತ್ತು ನಿರೀಕ್ಷಿಸುವ ಸಂಭಾವನೆ ವಿವರಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ

ಅಬ್ಬಕ್ಕ ಉತ್ಸವ – ಕಲಾತಂಡಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಪರಿಶಿಷ್ಟರ ಮೀಸಲಾತಿ ಹೆಚ್ಚಳ – ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.6 ಕರ್ನಾಟಕ ಸರ್ಕಾರ ನ್ಯಾಯಮೂತಿ ಹೆಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರ್ಕಾರಿ, ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ವರದಿಯನ್ನು ನೀಡುವಂತೆ ಆಯೋಗವನ್ನು ರಚಿಸಲಾಗಿರುತ್ತದೆ. ಹೆಚ್.ಎನ್. ನಾಗಮೋಹನ ದಾಸ್, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚನ್ಯಾಯಾಲಯ ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 10 ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ಕಲಾ ಮಂದಿರ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ, ಹುಣಸೂರು ರಸ್ತೆ,

ಪರಿಶಿಷ್ಟರ ಮೀಸಲಾತಿ ಹೆಚ್ಚಳ – ಸಮಾಲೋಚನಾ ಸಭೆ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ ಕನ್ವರೆ; ಶ್ರೀರಾಜನ್ ದೈವದ ನೇಮ

(ನ್ಯೂಸ್ ಕಡಬ) newskadaba.com, ಕಡಬ, ಫೆ.6 : ನೂಜಿಬಾಳ್ತಿಲ ಗ್ರಾಮದ ಕನ್ವರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ರಾಜನ್ ದೈವ ನೇಮ ನಡೆಯಿತು. ಸೋಮವಾರ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು, ರಾತ್ರಿ 7.30ಕ್ಕೆ ಬಾಳ್ತಿಲ ಚಾವಡಿಯಿಂದ ಶ್ರೀ ರಾಜನ್ ದೈವದ ಭಂಡಾರ ಹಿಡಿದು ಸಾರಿಮಂಟಮೆಗೆ ಬರಲಾಯಿತು. ಮಂಗಳವಾರ ಬೆಳಿಗ್ಗಿನ ಜಾವ ಶ್ರೀರಾಜನ್ ದೈವ ಹಾಗೂ ಗುಳಿಗ ದೈವದ ನೇಮ ನಡೆಯಿತು. ಬಳಿಕ ಶ್ರೀರಾಜನ್ ದೈವಕ್ಕೆ ಹರಕೆ ಸಲ್ಲಿಸಿ ದೈವವು ಸಾರಿಮಂಟಮೆಯಿಂದ

ನೂಜಿಬಾಳ್ತಿಲ ಕನ್ವರೆ; ಶ್ರೀರಾಜನ್ ದೈವದ ನೇಮ Read More »

ಕರಾವಳಿ

ರೆಂಜಿಲಾಡಿ: ಸತ್ಯಶಾಂತ ಪ್ರತಿಷ್ಠಾನದ ವತಿಯಿಂದ ಧನಸಹಾಯ

(ನ್ಯೂಸ್ ಕಡಬ) newskadaba.com, ಕಡಬ, ಫೆ.6. ಸತ್ಯ ಶಾಂತಿ ಪ್ರತಿಷ್ಠಾನದ ವತಿಯಿಂದ ರೆಂಜಿಲಾಡಿ ಸಾಂತೋಮ್ ಶಾಲೆಯ ವಿದ್ಯಾರ್ಥಿ ತನು ಅವರಿಗೆ ಕಲಿಕಾ ಸಹಯಾರ್ಥವಾಗಿ ಧನಸಹಾಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸತ್ಯಶಾಂತ ಪ್ರತಿಷ್ಠಾನದ  ಅಧ್ಯಕ್ಷೆ ಪ್ರಶಸ್ತ ಕಯತ್ರಿ ಶಾಂತ ಕುಂಟಿನಿ, ಅವರ ತಂದೆ ಡಿ.ಕೃಷ್ಣ ಭಟ್,  ಸತ್ಯಾತ್ಮ ಕುಂಟಿನಿ, ಶಿಕ್ಷಕಿಯರಾದ ಜ್ಯೋತಿ, ರೆಹಮತ್, ಪ್ರಿಯಾ, ಶಿಲ್ಪಾ, ಯುವ ಸಾಹಿತಿ ದಿಲೀಪ್ ವೇದಿಕ್ ಕಡಬ ಉಪಸ್ಥಿತರಿದ್ದರು.

ರೆಂಜಿಲಾಡಿ: ಸತ್ಯಶಾಂತ ಪ್ರತಿಷ್ಠಾನದ ವತಿಯಿಂದ ಧನಸಹಾಯ Read More »

ಕರಾವಳಿ

ಪರೀಕ್ಷಾ ಭಯ ನಿವಾರಣೆಗೆ ಸರಳ ಸೂತ್ರ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ. 5 ಈಗ ಪರೀಕ್ಷಾ ಸಮಯ, ಪರೀಕ್ಷೆ ಮುಗಿದರೂ ಓದಿದಷ್ಟು ಮುಗಿಯುವುದಿಲ್ಲ ಎಂಬುದು ಇಂದಿನ ವಿದ್ಯಾರ್ಥಿಗಳ ವಾದ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಮಕ್ಕಳಿಂದ ಹಿಡಿದು ಪೋಷಕರು, ಶಿಕ್ಷಕರಿಗೂ ಒಂದಲ್ಲ ಒಂದು ರೀತಿಯ ಆತಂಕ ಇದ್ದೇ ಇರುತ್ತದೆ. ಜೊತೆಗೆ ಈ ಸಮಯದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ವಿದ್ಯಾರ್ಥಿಗಳು ಭಯಭೀತರಾಗುತ್ತಾರೆ. ಇಂತಹ ಸಮಸ್ಯೆಗಳಿಂದ ಒತ್ತಡ ಹೆಚ್ಚಾಗಿ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಮಾಡಲಾಗುವುದಿಲ್ಲ. ಹಾಗಾಗಿ ಈ ತೊಂದರೆಗಳಿಂದ ಮುಕ್ತಿ ಹೊಂದಲು ಧ್ಯಾನ ಉಪಯುಕ್ತವಾಗಲಿದ್ದು, ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು

ಪರೀಕ್ಷಾ ಭಯ ನಿವಾರಣೆಗೆ ಸರಳ ಸೂತ್ರ Read More »

ಕರಾವಳಿ
Scroll to Top