Ashitha Soodlu

ಬೆಳಂದೂರು ಕಾಲೇಜಿಗೆ ಕಾಣಿಯೂರು ಶ್ರೀ ಭೇಟಿ

ಬೆಳಂದೂರು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಸೋಮವಾರ ಭೇಟಿ ನೀಡಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ ಮನೆಯಿಂದಲೇ ಮಕ್ಕಳ ಸಂಸ್ಕಾರ ರೂಪುಗೊಳ್ಳುವುದು. ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಗಿಡ ನೆಡುವ ಕಾರ್ಯವನ್ನೂ ಮಾಡಬೇಕು. ಈ ಮೂಲಕ ಉತ್ತಮ ವಾತಾವರಣವನ್ನು ನಿರ್ಮಿಸಬೇಕು. ಬೆಳಂದೂರು ಕಾಲೇಜಿನ ವಿದ್ಯಾರ್ಥಿಗಳು ಪಠ್ಯ ಹಾಗೂ ಇನ್ನಿತರ ವಿಚಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳಗಬೇಕೆಂದು ಸ್ವಾಮೀಜಿ ಆಶಿಸಿದರು. ಪೂರ್ಣಕುಂಭ ಸ್ವಾಗತ ಸ್ವಾಮೀಜಿಯವರನ್ನು ವಿದ್ಯಾರ್ಥಿಗಳು ಪೂರ್ಣಕುಂಭ […]

ಬೆಳಂದೂರು ಕಾಲೇಜಿಗೆ ಕಾಣಿಯೂರು ಶ್ರೀ ಭೇಟಿ Read More »

ಕರಾವಳಿ

ಪಾಲ್ತಾಡಿ ಮಂಜುನಾಥನಗರ ;ಶ್ರೀಕೃಷ್ಣ ಜನ್ಮಾಷ್ಟಮಿ

ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು  ಮಂಜುನಾಥನಗರ ಸಿದ್ದಿವಿನಾಯಕಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ  ಇಡ್ಯಡ್ಕ ಶಾಲಾ ಮುಖ್ಯಶಿಕ್ಷಕ ಜಯಂತ್ ವೈ ಅವರು ಧಾರ್ಮಿಕ ಉಪನ್ಯಾಸ ನೀಡಿ,ಪ್ರತೀ ಮನೆಮನೆಯಲ್ಲೂ  ಸಂಸ್ಕಾರ,ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು.ಸಂಸ್ಕಾರ ಬೋಧನೆಯಲ್ಲಿ ಭಜನೆ ಉತ್ತಮ ಮಾಧ್ಯಮ.ಭಜನೆಯಿಂದ ವಿಭಜನೆ ದೂರವಾಗಲು ಸಾಧ್ಯ.ಮಕ್ಕಳಿಗೆ ಎಳವೆಯಲ್ಲೇ ಸದ್ವಿಚಾರಗಲನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದರು. ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಹಿಸಿದ್ದರು.

ಪಾಲ್ತಾಡಿ ಮಂಜುನಾಥನಗರ ;ಶ್ರೀಕೃಷ್ಣ ಜನ್ಮಾಷ್ಟಮಿ Read More »

ಕರಾವಳಿ

ಸೆ.13:ಪುಣ್ಚಪ್ಪಾಡಿಯಲ್ಲಿ 30ನೇ ವರ್ಷದ ಗಣೇಶೋತ್ಸವ

ಪುಣ್ಚಪ್ಪಾಡಿ ; ಶ್ರೀ ಗೌರಿಗಣೇಶ ಸೇವಾ ಸಂಘಇದರ ವತಿಯಿಂದ ೩೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ.೧೩ರಂದು ಪುಣ್ಚಪ್ಪಾಡಿ ನೇರೋಳ್ತಡ್ಕ ವಿನಾಯಕನಗರದಲ್ಲಿ ನಡೆಯಲಿದೆ. ನಿವೃತ ಸೈನಿಕ ಪ್ರವೀಣ್ ಕುಮಾರ್ ರೈ ನೂಜಾಜೆ  ಧಜಾರೋಹಣ ನೆರವೇರಿಸುವರು. ಗಣಪತಿ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ಸಾರ್ವಜನಿಕರಿಂದ ಭಜನ ಕಾರ್ಯಕ್ರಮದ ಬಳಿಕ ಗಣಹೋಮ,ಶ್ರೀದೇವರ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶೋಭಾಯಾತ್ರೆ ಮೂಲಕ ಸಾಗಿ ಗೌರಿಹೊಳೆಯಲ್ಲಿ ವಿಗ್ರಹದ ಜಲಸ್ತಂಬನ ನಡೆಯಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ

ಸೆ.13:ಪುಣ್ಚಪ್ಪಾಡಿಯಲ್ಲಿ 30ನೇ ವರ್ಷದ ಗಣೇಶೋತ್ಸವ Read More »

ಕರಾವಳಿ

ಸೆ.13 :ಮಂಜುನಾಥ ನಗರದಲ್ಲಿ ೩೫ನೇ ವರ್ಷದ ಗಣೇಶೋತ್ಸವ

ಸವಣೂರು :ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘ ಇದರ ವತಿಯಿಂದ 35ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ  ಸೆ.13ರಂದು ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ. ಬೆಳಿಗ್ಗೆ ಗಣೇಶ ವಿಗ್ರಹದ ಪ್ರತಿಷ್ಟೆ ಯ ಬಳಿಕ ಭಜನ ಕಾರ್ಯಕ್ರಮ,ಮಹಾಪೂಜೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ಮದ್ಯಾಹ್ನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಭಾಸ್ಕರ ರೈ ಕುಂಜಾಡಿ  ವಹಿಸುವರು.ಕೆಯ್ಯೂರು ಸ.ಪ್ರೌಢಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್ ಧಾರ್ಮಿಕ ಉಪನ್ಯಾಸ ನೀಡುವರು. ನಂತರ ಮಂಜುನಾಥನಗರ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ

ಸೆ.13 :ಮಂಜುನಾಥ ನಗರದಲ್ಲಿ ೩೫ನೇ ವರ್ಷದ ಗಣೇಶೋತ್ಸವ Read More »

ಕರಾವಳಿ

ಪುರುಷರಕಟ್ಟೆ : ಪ್ರಯಾಣಿಕರ ತಂಗುದಾಣ ಉದ್ಘಾಟನೆ

ನರಿಮೊಗರು :ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಯ ಮೂಲಕ ಸಮಾಜದಲ್ಲಿ ಗುರುತಿಸುತ್ತಿದೆ.ಸಂಘ ಸಂಸ್ಥೆಗಳ ಈ ಕಾರ್ಯ ಶ್ಲಾಘನೀಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು  ಪುರುಷರಕಟ್ಟೆ ಯಲ್ಲಿ  ಯುವಕ ಮಂಡಲ ನರಿಮೊಗರು ಹಾಗೂ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದ ಜಂಟಿ ಆಶ್ರಯದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸುಮಾರು ೬೦ ಸಾವಿರ ರೂ.ವೆಚ್ಚದಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ನಗರ ಠಾಣಾ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್,ನರಿಮೊಗರು

ಪುರುಷರಕಟ್ಟೆ : ಪ್ರಯಾಣಿಕರ ತಂಗುದಾಣ ಉದ್ಘಾಟನೆ Read More »

ಕರಾವಳಿ

ಗ್ರಾಮಾಭಿವೃದ್ದಿ ಚಿಂತನೆಯ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘಕ್ಕೆ 35ರ ಸಂಭ್ರಮ

ಸವಣೂರು: ಗ್ರಾಮಾಭಿವೃದ್ದಿಯ ಚಿಂತನೆಯೊಂದಿಗೆ ಆರಂಭಗೊಂಡ ಪಾಲ್ತಾಡಿಯ ಮಂಜುನಾಥನಗರ ಶ್ರೀಸಿದ್ದಿವಿನಾಯಕ ಸೇವಾ ಸಂಘಕ್ಕೆ ಈಗ ೩೫ರ ಸಂಭ್ರಮ.ಅತೀ ಹಿಂದುಳಿದ ಗ್ರಾಮವಾಗಿದ್ದ ಪಾಲ್ತಾಡಿ ಗ್ರಾಮದ ಸರ್ವತೋಮುಖ ಅಭಿವೃದ್ದಿಗಾಗಿ  ಧಾರ್ಮಿಕ ಸಾಮಾಜಿಕ,ಸಾಂಸ್ಕೃತಿಕ ಕಾರ್ಯಗಳ ಮೂಲಕ ಜನರಿಗೆ ತಿಳುವಳಿಕೆಯನ್ನು ನೀಡಿ ಕರ್ತವ್ಯ ಹಾಗೂ ಬೇಡಿಕೆಗಳ ಕುರಿತು ಹೋರಾಟ ಮಾಡುವ ದೃಷ್ಟಿಯಿಂದ ಊರಿನ ಹಿರಿಯರಾದ ನ್ಯಾಯವಾದಿ ದಿ.ಕುಂಜಾಡಿ ರಘುನಾಥ ರೈ ಅವರ ನೇತೃತ್ವದಲ್ಲಿ 1983ರ ಗಣೇಶ ಚತುರ್ಥಿಯಂದು ಈ ಸೇವಾ ಸಂಘ ಆರಂಭಗೊಂಡಿತು. ಅಂದು ಇದರ ಸ್ಥಾಪಕಾಧ್ಯಕ್ಷರಾಗಿ ಬಿ.ಕೆ.ರಮೇಶ್ ಹಾಗೂ ಕಾರ್ಯದರ್ಶಿಯಾಗಿ ಪುರಂದರ ಗೌಡ

ಗ್ರಾಮಾಭಿವೃದ್ದಿ ಚಿಂತನೆಯ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘಕ್ಕೆ 35ರ ಸಂಭ್ರಮ Read More »

ಕರಾವಳಿ

ಮುಕ್ಕೂರು ಕುಂಡಡ್ಕ ;ಸೆ. 2 ರಂದು ವಿದ್ಯಾರ್ಥಿಗಳಿಗೆ ಸ್ಪರ್ಧೆ

Newskadaba.comಬೆಳ್ಳಾರೆ : ಮುಕ್ಕೂರು ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ 9 ನೇ ವರ್ಷದ ಕ್ರೀಡಾಕೂಟದ ಪ್ರಯುಕ್ತಸೆ.2 ರಂದು ಮುಕ್ಕೂರು, ಕುಂಡಡ್ಕ, ಕಾನಾವು ಹಾಗೂ ಆಸುಪಾಸಿನ ಪರಿಸರದಿಂದ ಸುಳ್ಯ, ಪುತ್ತೂರು ಹಾಗೂ ಇತರೆ ತಾಲೂಕಿನ ಖಾಸಗಿ-ಸರಕಾರಿ ಶಾಲೆಗೆ ತೆರಳುವ ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಸೆ.2 ರಂದು ಮುಕ್ಕೂರು ಶಾಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 1 ರಿಂದ 2 ನೇ ತರಗತಿ : ಕಾಳು ಹೆಕ್ಕುವುದು, ಕಪ್ಪೆ ಜಿಗಿತ, 3 ರಿಂದ 5 ನೇ ತರಗತಿ

ಮುಕ್ಕೂರು ಕುಂಡಡ್ಕ ;ಸೆ. 2 ರಂದು ವಿದ್ಯಾರ್ಥಿಗಳಿಗೆ ಸ್ಪರ್ಧೆ Read More »

ಕರಾವಳಿ

ಮಾಡಾವು 110 ಕೆ.ವಿ ವಿದ್ಯುತ್ ಸಬ್‍ಸ್ಟೇಷನ್‍ಗೆ ಸುಳ್ಯ ಶಾಸಕ ಅಂಗಾರ ಭೇಟಿ

Newskadaba.comಮಾಡಾವು ;ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾಡಾವು 110 ಕೆ.ವಿ ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿ ಆರಂಭವಾಗಿದ್ದು ಆ.6 ರಂದು ಸುಳ್ಯ ಶಾಸಕ ಎಸ್.ಅಂಗಾರರವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಕೆಪಿಟಿಸಿಎಲ್ ಅಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಸಕರು ವಿದ್ಯುತ್ ಸಬ್‍ಸ್ಟೇಷನ್ ಆರಂಭಕ್ಕೆ ಇರುವ ತೊಂದರೆಗಳು ಮತ್ತು ವಿದ್ಯುತ್ ಲೈನ್ ಹಾದು ಹೋಗುವ ದಾರಿಯ ಬಗ್ಗೆ ಇದ್ದ ವ್ಯಾಜ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ

ಮಾಡಾವು 110 ಕೆ.ವಿ ವಿದ್ಯುತ್ ಸಬ್‍ಸ್ಟೇಷನ್‍ಗೆ ಸುಳ್ಯ ಶಾಸಕ ಅಂಗಾರ ಭೇಟಿ Read More »

ಕರಾವಳಿ

ಸರ್ವೆ ಷಣ್ಮುಖ ಯುವಕ ಮಂಡಲದಿಂದ ಕಂಡಡೊಂಜಿ ದಿನ

Newskadaba.comನರಿಮೊಗರು : ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಇದರ ವತಿಯಿಂದ ಯುವಕ ಮಂಡಲದ ಸಕ್ರಿಯ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮ ‘ ಕಂಡಡೊಂಜಿ ದಿನ ‘ ಕರುಂಬಾರು ಗದ್ದೆಯಲ್ಲಿ ನಡೆಯಿತು. ಯುವಕ ಮಂಡಲದ ಗೌರವಾಧ್ಯಕ್ಷ, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಎಸ್ ಡಿ ಹಾಗೂ ಗೌರವ ಸಲಹೆಗಾರರಾದ ವೀರಪ್ಪ ಗೌಡ ಕರುಂಬಾರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು . ಎಸ್.ಡಿ.ವಸಂತ ಅವರು ಮಾತನಾಡಿ ,ಯುವಕ ಮಂಡಲದ ಸದಸ್ಯರಲ್ಲಿ ಪರಸ್ಪರ ಪ್ರೀತಿ , ವಿಶ್ವಾಸ ,

ಸರ್ವೆ ಷಣ್ಮುಖ ಯುವಕ ಮಂಡಲದಿಂದ ಕಂಡಡೊಂಜಿ ದಿನ Read More »

ಕರಾವಳಿ

ಕುಮಾರಮಂಗಲ ; ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Newskadaba.comಸವಣೂರು : ಮಕ್ಕಳು ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯೊಂದು ಅತ್ಯುತ್ತಮ ವೇದಿಕೆ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕಾರ್ಯ ಪ್ರತಿಭಾ ಕಾರಂಜಿಗಳ ಮೂಲಕವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಕೇವಲ ಸ್ಪರ್ದೇಗೆ ಸೀಮಿತವಾಗಬಾರದು ಎಂದು ಪುತ್ತೂರು ತಾ.ಪಂ.ಉಪಾಧ್ಯಕ್ಷೆ ಕು.ರಾಜೇಶ್ವರಿ ಕನ್ಯಾಮಂಗಲ ಹೇಳಿದರು. ಅವರು ಆ.7 ರಂದು ಕ್ಷೇತ್ರ ಶಿಕ್ಷಣಾ„ಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಸವಣೂರು ಇವುಗಳ ಆಶ್ರಯದಲ್ಲಿ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ

ಕುಮಾರಮಂಗಲ ; ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ Read More »

ಕರಾವಳಿ
Scroll to Top