Ashitha Soodlu

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ➤ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ , ಆ,15:  ಕೊರೋನಾ ಕರಿ ನೆರಳಿನ ನಡುವೆ 74ನೇ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಆಕರ್ಷಣೆ ಆಗಿರುವ ಕೆಂಪು ಕೋಟೆ ಕಾರ್ಯಕ್ರಮವೂ ಕೊರೋನಾ ಹಿನ್ನಲೆಯಲ್ಲಿ ಈ‌ ಸರಳವಾಗಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ಆಗಮಿಸಿದ್ದು, . ಇದಕ್ಕೂ ಮುನ್ನ ರಾಜ್​ಘಾಟ್​ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿಯ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಕೆಂಪುಕೋಟೆಗೆ ಆಗಮಿಸಿದರು. ರಕ್ಷಣಾ ಸಚಿವ ರಾಜನಾಥ್​ ಸಿಂಗ್ […]

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ➤ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಎಸ್.ಡಿ.ಪಿ.ಐ ಪಕ್ಷದ ಕುರಿತು ಸುಳ್ಳಾರೋಪ | ಪ್ರತಿಭಟನಾಕಾರರ ವಿರುದ್ದ ಠಾಣೆಗೆ ದೂರು

(ನ್ಯೂಸ್‌ ಕಡಬ) ಕಡಬ, ಆ. 15, ಡಿಜೆ ಹಳ್ಳಿಗೆ ಸಂಬಂಧಿಸಿದಂತೆ ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಕೋಮು ವಿಷಬೀಜ ಬಿತ್ತಿ ಗಲಭೆಗೆ ಪ್ರಚೋದನೆ ಮತ್ತು ಸುಳ್ಳು ಸುದ್ದಿ ಆರೋಪ ಮಾಡಿದ್ದಾರೆಂದು ಕಡಬ‌ ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟನಾಕಾರರ ವಿರುದ್ದ ಠಾಣೆಗೆ ದೂರು ನೀಡಿದ್ದಾರೆ. ಶಾಂತಿಪ್ರಿಯವಾದ ಕಡಬದಲ್ಲಿ ಕೋಮು ಪ್ರಚೋದನೆ ಮಾಡುವ ಮೂಲಕ ನಾಗರಿಕರಲ್ಲಿ ಭಯ, ಆತಂಕ ಮೂಡಿರುವುದಲ್ಲದೇ ಪಕ್ಷದ ವಿರುದ್ದ ಸುಳ್ಳು ಆರೋಪವನ್ನು ಎತ್ತಿಕಟ್ಟಿ, ಪ್ರತಿಭಟನೆಯ ಮೂಲಕ ವಿದ್ವಂಸಕ ಕೃತ್ಯ ನಡೆಸುವುದಾಗಿ ಬಹಿರಂಗ ಸವಾಲೆಸೆದಿರುವುದು ಕಡಬದ ಸ್ವಾಸ್ಥ್ಯವನ್ನು

ಎಸ್.ಡಿ.ಪಿ.ಐ ಪಕ್ಷದ ಕುರಿತು ಸುಳ್ಳಾರೋಪ | ಪ್ರತಿಭಟನಾಕಾರರ ವಿರುದ್ದ ಠಾಣೆಗೆ ದೂರು Read More »

ಕರಾವಳಿ

ಕಡಬ ತಾ. ಆಡಳಿತದ ವತಿಯಿಂದ ಸರಳವಾಗಿ ಸ್ವಾತಂತ್ರ್ಯೋತ್ಸ ಆಚರಣೆ ➤ ಧ್ವಜಾರೋಹಣ ನೆರವೇರಿಸಿದ ಕಡಬ ತಹಶೀಲ್ದಾರ್

(ನ್ಯೂಸ್ ಕಡಬ) newskadaba.com ಕಡಬ, ಆ,15:  ಕಡಬ ತಾಲೂಕು ಆಡಳಿತದ ವತಿಯಿಂದ ಕಡಬ  ಕಚೇರಿಯ ಮುಂಭಾಗದಲ್ಲಿ 74ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.   ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಧ್ವಜಾರೋಹಣ ನೆರವೇರಿಸಿ ಬಳಿಕ ಕಡಬದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯರಾದ ವಲ್ಸಮ್ಮ ಕೆ.ಟಿ., ಗಣೇಶ್ ಕೈಕುರೆ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಪುತ್ತೂರು ತಾಲೂಕು ಪಂಚಾಯತ್ ಮಾಜಿ

ಕಡಬ ತಾ. ಆಡಳಿತದ ವತಿಯಿಂದ ಸರಳವಾಗಿ ಸ್ವಾತಂತ್ರ್ಯೋತ್ಸ ಆಚರಣೆ ➤ ಧ್ವಜಾರೋಹಣ ನೆರವೇರಿಸಿದ ಕಡಬ ತಹಶೀಲ್ದಾರ್ Read More »

ಕರಾವಳಿ, ಕರ್ನಾಟಕ

74ನೇ ಸ್ವಾತಂತ್ರ್ಯ ದಿನಾಚರಣೆ ➤ ಜನತೆಗೆ ಶುಭಾಶಯ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ,15: 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಭಾಶಯಗಳನ್ನು ಕೋರಿದ್ದು, ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಿದರು.   ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಮಸ್ತ ಜನತೆಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಿರಂತರ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸಂಭ್ರಮಾಚರಣೆಯ

74ನೇ ಸ್ವಾತಂತ್ರ್ಯ ದಿನಾಚರಣೆ ➤ ಜನತೆಗೆ ಶುಭಾಶಯ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಅಕ್ರಮ 440 ವಿದೇಶಿ ಬಾಟಲಿಗಳ ಸಹಿತ ಆರೋಪಿ ಅರೆಸ್ಟ್

(ನ್ಯೂಸ್‌ ಕಡಬ) ಕಾಸರಗೋಡು, ಆ. 15, ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 440 ವಿದೇಶಿ ಬಾಟ್ಲಿಗಳನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಳಿಯಡ್ಕ ಸಮೀಪದ ರಾಮಕೃಷ್ಣ ಎಂಬವರು ತನ್ನ ಮನೆಯ ಹಿತ್ತಲಿನಲ್ಲಿ ಮೂರು ಗೋಣಿ ಚೀಲಗಳಲ್ಲಿ ಮದ್ಯವನ್ನು ತುಂಬಿಸಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಲಭಿಸಿದಂತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಾಸರಗೋಡು: ಅಕ್ರಮ 440 ವಿದೇಶಿ ಬಾಟಲಿಗಳ ಸಹಿತ ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಇವರು ಧ್ವಜಾರೋಹಣ ನೆರವೇರಿಸಿ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್, ಸುಭಾಸ್‍ಚಂದ್ರ ಬೋಸ್ ಮುಂತಾದ ಮಹನೀಯರ ತ್ಯಾಗ ಬಲಿದಾನದಿಂದ ನಮಗೆ 73 ವರ್ಷಗಳ ಹಿಂದೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದೆ. ನಮಗೆ ದೊರೆತ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದು ಯುವಜನರು ತಿಳಿದುಕೊಂಡು ತಪ್ಪು ದಾರಿ ಹಿಡಿಯಬಾರದು.

ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ Read More »

ಕರಾವಳಿ, ಕರ್ನಾಟಕ

ಅಕ್ಷರದಾಸೋಹ ಆಹಾರ ಸಾಮಾಗ್ರಿಗಳ ಸಾಗಾಣಿಕೆ – ಇ-ಟೆಂಡರ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14, ಆಗಸ್ಟ್ 2020 ರಿಂದ ಜುಲೈ 2021 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆ.ಎಫ್. ಮತ್ತು ಸಿ.ಎಸ್.ಸಿ ಸಗಟು ಮಳಿಗೆಯಿಂದ ಆಯಾ ತಾಲ್ಲೂಕಿನ ಅಕ್ಷರದಾಸೋಹ ಶಾಲಾ ಅಡುಗೆ ಕೇಂದ್ರಗಳಿಗೆ ಪೂರಕ ಆಹಾರ ಸಾಮಾಗ್ರಿಗಳನ್ನು ಸಾಗಾಣಿಕೆ ಮಾಡಲು ಅರ್ಹ ಟೆಂಡರ್‍ದಾರರಿಂದ ಅಲ್ಪಾವಧಿ ಇ-ಟೆಂಡರ್ ಕರೆಯಲಾಗಿದೆ. ಆಸಕ್ತ ಟೆಂಡರುದಾರರು ಅರ್ಜಿ ಫಾರಂಗಳನ್ನು ಸೆಪ್ಟೆಂಬರ್ 1 ರೊಳಗೆ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ www.eproc.karnataka.gov.in ನಿಂದ ಡೌನ್‍ಲೋಡ್ ಮಾಡಿ ಸೆಪ್ಟೆಂಬರ್ 2 ರೊಳಗೆ

ಅಕ್ಷರದಾಸೋಹ ಆಹಾರ ಸಾಮಾಗ್ರಿಗಳ ಸಾಗಾಣಿಕೆ – ಇ-ಟೆಂಡರ್ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಕ್ರೀಡಾ  ಪ್ರೋತ್ಸಾಹಧನಕ್ಕೆ  ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು ಆ. 14, 2020-21ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ   ಮತ್ತು  ಕ್ರೀಡಾ  ಇಲಾಖೆಯು  ಜಿಲ್ಲಾ ಪಂಚಾಯತ್ ಅನುದಾನದ ಅಡಿಯಲ್ಲಿ ಕ್ರೀಡಾ ಪ್ರೋತ್ಸಾಹಧನಕ್ಕೆ 30 ವರ್ಷಕ್ಕೆ ಒಳಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕ, ಬಾಲಕಿ ಹಾಗೂ ಪರುಷ, ಮಹಿಳಾ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ. ಕ್ರೀಡಾಪಟುಗಳು 2019-20 ನೇ ಸಾಲಿನಲ್ಲಿ (2019 ಎಪ್ರಿಲ್ 1 ರಿಂದ 2020 ಮಾರ್ಚ್ 31 ವರೆಗೆ) ಸರಕಾರದಿಂದ, ಕ್ರೀಡಾ ಇಲಾಖೆಯಿಂದ, ಅಧಿಕೃತ ನೊಂದಾಯಿತ ಕ್ರೀಡಾ ಸಂಘ

ಕ್ರೀಡಾ  ಪ್ರೋತ್ಸಾಹಧನಕ್ಕೆ  ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ – ಸಾಲ ಮತ್ತು ಸಹಾಯಧನ ಸೌಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14, 2020-21ನೇ ಉಪ್ಪಾರ ಮತ್ತು ಅದರ ಉಪಜಾತಿಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಸಾಲ ಯೋಜನೆ ಮತ್ತು ಅರಿವು ಶೈಕ್ಷಣಿಕ ಸಾಲ ಯೋಜನೆಗಳಲ್ಲಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಛಿಸುವ ಈ ಮೇಲ್ಕಂಡ ಜನಾಂಗದವರು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿಯಲ್ಲಿ ಅಥವಾ ನಿಗಮದ ವೆಬ್‍ಸೈಟ್‍ನಲ್ಲಿ ಪಡೆದು ಅರ್ಜಿಯೊಂದಿಗೆ ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪೋಟೋ ಮತ್ತು

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ – ಸಾಲ ಮತ್ತು ಸಹಾಯಧನ ಸೌಲಭ್ಯ Read More »

ಕರಾವಳಿ

ಬೀಡಾಡಿ ಜಾನುವಾರುಗಳಿಗೆ ಮೇವು ಮತ್ತು ಆಹಾರ ಒದಗಿಸಲು ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14, ಕೋವಿಡ್-19 ಅವಧಿಯಲ್ಲಿ ಬೀಡಾಡಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬೀಡಾಡಿ ಜಾನುವಾರುಗಳಿಗೆ ಮೇವು ಮತ್ತು ಪೌಷ್ಠಿಕ ಆಹಾರವನ್ನು ಒದಗಿಸಲು ಪಶುಪಾಲನಾ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿರುತ್ತದೆ. ಸಾರ್ವಜನಿಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು ಬೀಡಾಡಿ ಜಾನುವಾರುಗಳಿಗೆ ಮೇವು, ಪೌಷ್ಠಿಕ ಆಹಾರ ನೀಡುತ್ತಿರುವ ಫೋಟೋ, ಮೇವು, ಪೌಷ್ಠಿಕ ಆಹಾರ ಖರೀದಿಸಿದ ರಶೀದಿ ಹಾಗೂ ಸ್ಥಳೀಯ ಪಶುವೈದ್ಯಾಧಿಕಾರಿಗಳ ಶಿಫಾರಸ್ಸು ಪತ್ರವನ್ನು ಉಪ ನಿರ್ದೇಶಕರು (ಆಡಳಿತ), ಪಶುಪಾಲನಾ ಇಲಾಖೆ, ದ.ಕ. ಮಂಗಳೂರು

ಬೀಡಾಡಿ ಜಾನುವಾರುಗಳಿಗೆ ಮೇವು ಮತ್ತು ಆಹಾರ ಒದಗಿಸಲು ಅನುದಾನ ಬಿಡುಗಡೆ Read More »

ಕರಾವಳಿ, ಕರ್ನಾಟಕ
Scroll to Top