Ashitha Soodlu

ಆರೋಗ್ಯ ಸಚಿವ ಶ್ರೀ ರಾಮುಲು ಕೊರೋನಾದಿಂದ ಗುಣಮುಖ

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಆ.17. ಕೊರೋನಾ ಸೋಂಕಿಗೆ ಒಳಗಾಗಿದ್ಧ ಅರೋಗ್ಯ ಸಚಿವ ಶ್ರೀರಾಮುಲು ಅವರು ಸಂಪೂರ್ಣ ಗುಣಮುಖರಾಗಿದ್ದು ಆದಿತ್ಯವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಅರೋಗ್ಯ ಸಚಿವರು ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ಪರೀಕ್ಷಾ ವರದಿಯು ನೆಗೆಟಿವ್‌ ಬಂದಿದ್ದು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆರೋಗ್ಯ ಸಚಿವ ಶ್ರೀ ರಾಮುಲು ಕೊರೋನಾದಿಂದ ಗುಣಮುಖ Read More »

ಕರಾವಳಿ

ಲಾಕ್ ಡೌನ್ ಹಿನ್ನೆಲೆ – 5 ತಿಂಗಳಿನಿಂದ ಸ್ತಬ್ಧವಾದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ

ಮಂಗಳೂರು: ಶತಮಾನದ ಇತಿಹಾಸವಿರುವ, ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣವು ಕೋವಿಡ್ ಕಾರಣದಿಂದಾಗಿ ಕಳೆದ 5 ತಿಂಗಳಿನಿಂದ  ರೈಲುಗಳ ಓಡಾಟವಿಲ್ಲದೆ ಸ್ತಬ್ಧವಾಗಿದೆ. ಇದೀಗ ಬೆಂಗಳೂರು- ಮಂಗಳೂರು ನಡುವೆ ಸ್ಥಗಿತಗೊಂಡಿರುವ ರೈಲುಗಳ ಪೈಕಿ ಕನಿಷ್ಠ ಒಂದನ್ನಾದರೂ ಪುನರಾರಂಭಿಸುವಂತೆ ಪ್ರಯಾಣಿಕರಿಂದ ಆಗ್ರಹ ಕೇಳಿಬರುತ್ತಿದೆ.   ಕೊರೋನಾ ಲಾಕ್‌ಡೌನ್‌ ಗಿಂತ ಮೊದಲು ಮಂಗಳೂರು ಸೆಂಟ್ರಲ್‌ನಿಂದ ಪ್ರತೀದಿನ 27 ರೈಲುಗಳು ದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸುಮಾರು 30,000 ಪ್ರಯಾಣಿಕರ ಆಗಮನ ಹಾಗೂ ನಿರ್ಗಮನವಿತ್ತು. ಸರಕು ಸಾಗಾಟ ರೈಲುಗಳು,

ಲಾಕ್ ಡೌನ್ ಹಿನ್ನೆಲೆ – 5 ತಿಂಗಳಿನಿಂದ ಸ್ತಬ್ಧವಾದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ Read More »

ಕರಾವಳಿ, ಕರ್ನಾಟಕ

ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ➤ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನಾವುಂದ, ಆ,17: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ  ಸರಕಾರಿ ಪದವಿ ಪೂರ್ವ ಕಾಲೇಜಿನ  ನಾವುಂದದ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.     ಮೃತ ವಿದ್ಯಾರ್ಥಿಯನ್ನು ಮರವಂತೆಯ ನಿವಾಸಿ ಕಿಶನ್ ಖಾರ್ವಿ(17) ಎಂದು ಗುರುತಿಸಲಾಗಿದೆ. ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಈತ  ದ್ವಿತೀಯ ವರ್ಷದ ದಾಖಲಾತಿಗಾಗಿ ಕಾಲೇಜಿಗೆ ಬಂದು ಹಿಂತಿರುಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಬೈಂದೂರು ಪೊಲೀಸ್

ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ➤ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಕ್ಷಣಾ ವಾಯುಪಡೆ ಮೂಲಕ ನದಿ ನೀರಿನಲ್ಲಿ ಸುಮಾರು 16 ಗಂಟೆಗಳ ಕಾಲ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಛತ್ತೀಸ್ ಗಢ, ಆ. 17. ಅಣೆಕಟ್ಟಿನಿಂದ ಹೊರ ಬಿಡಲಾಗಿದ್ದ ನೀರಿಗೆ ವ್ಯಕ್ತಿಯೋರ್ವ ಜಿಗಿದು, ನೀರಿನಿಂದ ದಡಕ್ಕೆ ಬರಲಾಗದೆ ಸುಮಾರು 16 ಗಂಟೆಗಳ ಕಾಲ ನದಿಯ ಬದಿಯಲ್ಲಿರುವ ಮರದ ಕೊಂಬೆಯ ರಕ್ಷಣೆ ಪಡೆದು ಬಳಿಕ ವಾಯುಪಡೆಯ ಸಹಾಯದೊಂದಿಗೆ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಛತ್ತೀಸ್ ಗಡದ ಬಿಲಾಸ್ಪುರ ದಲ್ಲಿ ರವಿವಾರ ನಡೆದಿದೆ.   ಛತ್ತೀಸ್ ಗಡ್ ನ ಬಿಲಾಸ್ ಪುರ ಜಿಲ್ಲೆಯಲ್ಲಿ ರವಿವಾರ ಭಾರಿ ಮಳೆಯಾಗಿದ್ದ ಪರಿಣಾಮ ಜಿಲ್ಲೆಯ ಪ್ರವಾಸಿ ತಾಣವಾದ ಖುತಘಾಟ್ ಅಣೆಕಟ್ಟಿನಲ್ಲಿ ನೀರಿನ

ರಕ್ಷಣಾ ವಾಯುಪಡೆ ಮೂಲಕ ನದಿ ನೀರಿನಲ್ಲಿ ಸುಮಾರು 16 ಗಂಟೆಗಳ ಕಾಲ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಬೈಕ್ ಸೀಟ್ ಕೆಳಗೆ ಸುತ್ತುವರಿದಿದ್ದ ಹಾವಿನ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 17.         ಬೈಕಿನ ಸೀಟಿನೊಳಗಡೆ  ಹಾರುವ ಹಾವೊಂದು ಸೇರಿಕೊಂಡ ಘಟನೆ  ಇಂದು ದರ್ಬೆಯಲ್ಲಿ ನಡೆದಿದೆ.   ಉರಗ ಪ್ರೇಮಿ ಬನ್ನೂರಿನ ತೇಜಸ್ ಎಂಬವರು ರಕ್ಷಣೆ ಮಾಡಿದ್ದಾರೆ. ದರ್ಬೆಯಲ್ಲಿರುವ ಗ್ಯಾರೇಜ್ ಒಂದಕ್ಕೆ ಬೈಕ್ ನಲ್ಲಿ‌ ಬಂದ ವ್ಯಕ್ತಿಯೊಬ್ಬರು ತನ್ನ ಬೈಕ್ ದುರಸ್ಥಿಗೊಳಿಸುವಂತೆ ಮೆಕ್ಯಾನಿಕ್ ಗೆ ತಿಳಿಸಿ‌ ಮೆಕ್ಯಾನಿಕ್ ಬೈಕ್ ನ ಸೀಟ್ ಕಳಚುತ್ತಿದ್ದಂತೆ ಬಣ್ಣ ಬಣ್ಣದ ಹಾವೊಂದು ಬೈಕ್ ಸೀಟ್ ಅಡಿಯಲ್ಲಿ ಸುತ್ತುವರಿದು‌ಕೊಂಡಿರುವುದು ಬೆಳಕಿಗೆ ಬಂತು. ಬಳಿಕ ಉರಗ ತಜ್ಞ ತೇಜಸ್ ಎಂಬವರಿಗೆ‌ ಈ ಕುರಿತು ಮಾಹಿತಿ ನೀಡಿ,

ಪುತ್ತೂರು: ಬೈಕ್ ಸೀಟ್ ಕೆಳಗೆ ಸುತ್ತುವರಿದಿದ್ದ ಹಾವಿನ ರಕ್ಷಣೆ Read More »

ಕರಾವಳಿ

ಅಡೆಕ್ಕಲ್ ಅಬ್ಬಾಸ್ ಹಾಜಿ ನಿಧನ ➤ ಎಸ್.ಡಿ.ಪಿ.ಐ ಸಂತಾಪ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ ಆ,17:  ಧಾರ್ಮಿಕ ಪಂಡಿತ ,ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಶತಾಯುಷಿ ಅಡೆಕ್ಕಲ್ ಅಬ್ಬಾಸ್ ಹಾಜಿ (103 ವರ್ಷ) ಯವರು ಇಂದು ಬೆಳಗ್ಗೆ ಅಲ್ಲಾಹನ ಕರೆಗೆ ಓಗೊಟ್ಟು ನಮ್ಮನ್ನು ಅಗಲಿರುತ್ತಾರೆ. ಅಡೆಕ್ಕಲ್  ಮಸೀದಿಯ ಸ್ಥಾಪಕ ಸದಸ್ಯರು. ಅಲ್ಲಿ ಬಹಳಷ್ಟು ಸಮಯದಿಂದ ಸೇವೆ ನೀಡಿದ ಅವರು ಎಲ್ಲರಿಗೂ ಚಿರಪರಿಚಿತರು ಮತ್ತು ಬಹುಮಾನ್ಯರಾಗಿದ್ದರು. ಕಾಸರಗೋಡಿನ ತಳಂಗರೆ ಹಾಗೂ ಹಾಸನ, ಚಿಕ್ಕಮಂಗಳೂರು ಜಿಲ್ಲೆಯ ಹಲವು ಸಮಸ್ತದ ಮಸೀದಿಗಳಲ್ಲಿ ಖತೀಬಾಗಿ,ಇಮಾಮಾಗಿ, ಮುದರ್ರಿಸ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಅವರು ಆರು ಗಂಡು

ಅಡೆಕ್ಕಲ್ ಅಬ್ಬಾಸ್ ಹಾಜಿ ನಿಧನ ➤ ಎಸ್.ಡಿ.ಪಿ.ಐ ಸಂತಾಪ Read More »

ಕರಾವಳಿ

ಮಂಗಳೂರು : ಸಫರ್ ಕ್ಲಬ್ ಮತ್ತು ಬ್ಲಡ್ ಹೆಲ್ಪ್ ಕೇರ್ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,17: ಮಂಚಿಲ ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ಬೃಹತ್ ರಕ್ತದಾನ ಶಿಬಿರ ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ನಲ್ಲಿ ನಡೆಯಿತು ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಯು.ಎಚ್ ಫಾರೂಕ್ ಮಾತನಾಡಿ ಪ್ರತೀ ವರ್ಷವು ನಾವು ಸ್ವಾತಂತ್ರ್ಯೋತ್ಸವದ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ, ಈ ಬಾರಿ

ಮಂಗಳೂರು : ಸಫರ್ ಕ್ಲಬ್ ಮತ್ತು ಬ್ಲಡ್ ಹೆಲ್ಪ್ ಕೇರ್ ವತಿಯಿಂದ ರಕ್ತದಾನ ಶಿಬಿರ Read More »

ಕರಾವಳಿ, ಕರ್ನಾಟಕ

 ಬೆಂಗಳೂರಿನಲ್ಲಿ ನಡೆಯುವ *ಹೀರೊ ಹೈ ಲೀಗ್* ತಂಡಕ್ಕೆ ಆರಂತೋಡಿನ ಯುವಕ ಅದ್ನಾನ್ ಪಟೇಲ್ ಆಯ್ಕೆ

(ನ್ಯೂಸ್ ಕಡಬ) newskadaba.com ಅರಂತೋಡು, ಆ,17:  ಇತ್ತೀಚೆಗೆ ಮಂಗಳೂರು ಎಫ್ ಸಿ ಮಂಗಳೂರು ಅಕಾಡೆಮಿಗೆ ನಡೆದ ಅಂಡರ್18 ಆಯ್ಕೆ ಟ್ರಯಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಹೀರೊ ಹೈ ಲೀಗ್ ಪಂದ್ಯಾಟದಲ್ಲಿ ಎಫ್ ಸಿ ಮಂಗಳೂರು ಫುಟ್ಬಾಲ್ ಅಸ್ಸೋಸಿಯೇಷನ್ ತಂಡದ ಪರವಾಗಿ ಅದ್ನಾನ್ ಪಟೇಲ್ ಪಾಲ್ಗೊಳ್ಳಲಿದ್ದಾರೆ.   ಆಲ್ ಇಂಡಿಯಾ ಫುಟ್ಬಾಲ್ ಅಸ್ಸೋಸಿಯೇಷನ್ ಗೆ ತನ್ನನ್ನು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಲವಾರು ಜಿಲ್ಲಾ  ಮತ್ತು ತಾಲೂಕು ಮಟ್ಟದ ಪಂದ್ಯಾವಳಿಯನ್ನು ಪ್ರತಿನಿಧಿಸಿ

 ಬೆಂಗಳೂರಿನಲ್ಲಿ ನಡೆಯುವ *ಹೀರೊ ಹೈ ಲೀಗ್* ತಂಡಕ್ಕೆ ಆರಂತೋಡಿನ ಯುವಕ ಅದ್ನಾನ್ ಪಟೇಲ್ ಆಯ್ಕೆ Read More »

ಕರಾವಳಿ, ಕರ್ನಾಟಕ

ಉಡುಪಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ಉಡುಪಿ, ಆ. 17, ಕೇರಳದ ನೋಂದಾಯಿತ ಡಸ್ಟರ್ ಕಾರೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ರಾತ್ರಿ ಮಣಿಪಾಲದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಢ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಮಣಿಪಾಲ ಪೊಲೀಸ್‌ ಠಾಣೆಯ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಉಡುಪಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ ➤ ಬಾಲಕಿಗೆ ಸಿಗರೇಟ್ನಿಂದ ಸುಟ್ಟ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಗೋರಖ್‌ಪುರ ಆ,17:  ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್‌ ರೇಪ್‌ ನಡೆದಿದ್ದು ಗೋರಖ್‌ಪುರ ಜಿಲ್ಲೆಯ ಗೋಲಾ ಎಂಬ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಸಿಗರೇಟ್‌ನಿಂದ ಸುಟ್ಟಿದ್ದಾರೆ.     ಭಾನುವಾರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆಯ ತಾಯಿಯು ನೀಡಿದ ಲಿಖಿತ ದೂರಿನನ್ವಯ ಪೊಲೀಸರು ಡೆಹ್ರಿಬಾರ್ ಗ್ರಾಮದ ಅರ್ಜುನ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.   ಇಟ್ಟಿಗೆ ಗೂಡು ಕಾರ್ಮಿಕರ ಅಪ್ರಾಪ್ತ ವಯಸ್ಕ ಪುತ್ರಿ

ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ ➤ ಬಾಲಕಿಗೆ ಸಿಗರೇಟ್ನಿಂದ ಸುಟ್ಟ ಕಿಡಿಗೇಡಿಗಳು Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top