Ashitha Soodlu

ಲಾರಿಯಲ್ಲಿ ಸಾಗಿಸುತ್ತಿದ್ದ 24ಕ್ಕೂ ಹೆಚ್ಚು ಜಾನುವಾರು ರಕ್ಷಣೆ ➤ ನಾಲ್ವರು ಆರೋಪಿಗಳು ಪೋಲಿಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಪೊನ್ನಂಪೇಟೆ. ಆ,28:  ಕೇರಳದ ಕೊಲ್ಲಂಗೆ ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗಡಿಭಾಗ ಕುಟ್ಟ ಚೆಕ್‌ಪೋಸ್ಟ್ ಬಳಿ ಪೊಲೀಸರು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ. ಲಾರಿಯಲ್ಲಿ ಸಾಗಿಸುತ್ತಿದ್ದ 24ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಕೊಲ್ಲಂ ನಿವಾಸಿ ನಿಜಾಮ್, ಮಧ್ಯಪ್ರದೇಶದ ಭೂಪಾಲ್‍ನ ಶಾನು, ಫೈಜಾನ್, ಮೊಹಮದ್ ರಫೀ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಸಿಪಿಐ ಪರಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಕುಟ್ಟ ಪಿಎಸ್‌ಐ ಎಚ್.ಜೆ. ಚಂದ್ರಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.  

ಲಾರಿಯಲ್ಲಿ ಸಾಗಿಸುತ್ತಿದ್ದ 24ಕ್ಕೂ ಹೆಚ್ಚು ಜಾನುವಾರು ರಕ್ಷಣೆ ➤ ನಾಲ್ವರು ಆರೋಪಿಗಳು ಪೋಲಿಸರ ವಶಕ್ಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಾಸಕ ಎಸ್ ಅಂಗಾರರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ. ಆ,28:  ಶಾಸಕ ಎಸ್ ಅಂಗಾರರವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ.  ಅವರ ಕಾರಿನ ಚಾಲಕ ಮುರಳಿ ಎಂಬುವವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದೀಗಾ ಶಾಸಕ ಎಸ್ ಅಂಗಾರರವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ಅತಂಕ ಎದುರಾಗಿದೆ.

ಶಾಸಕ ಎಸ್ ಅಂಗಾರರಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ

ಪತ್ನಿಯ ಕಣ್ಣೆದುರೇ ಸಮುದ್ರ ಪಾಲಾದ ಪತಿ…!

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 28. ಈಜಲು ತೆರಳಿದ್ದ ಪತಿ ಸಮುದ್ರ ಪಾಲಾದ ಘಟನೆ ಇಂದು ಮಧ್ಯಾಹ್ನ ಗೋಕರ್ಣ ಸಮುದ್ರ ತೀರದಲ್ಲಿ ಜರಗಿದೆ. ಮೃತರನ್ನು ಅಂಕೋಲಾ ತಾಲೂಕಿನ ಅವರ್ಸಾ ಮೂಲದ ಅರವಿಂದ ಪಾಂಡುರಂಗ ಶೆಣೈ(45) ಎಂದು ಗುರುತಿಸಲಾಗಿದೆ. ಇವರು ಕೆಲ ತಿಂಗಳಿನಿಂದ ಅವರ್ಸಾದಲ್ಲಿಯೇ ಇದ್ದು, ಇಂದು ತನ್ನ ಪತ್ನಿಯೊಂದಿಗೆ ಮಹಾಬಲೇಶ್ವರ ದೇವರ ದರ್ಶನ ಪಡೆದ ಬಳಿಕ ಗೋಕರ್ಣ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಹೋಗಿದ್ದರೆನ್ನಲಾಗಿದೆ. ಇವರಿಗೆ ಸಮುದ್ರದಲ್ಲಿ ಈಜಾಡಲು ಮನಸ್ಸಾಗಿದ್ದರಿಂದ ಪತ್ನಿಯಲ್ಲಿ ಹೇಳಿ ನೀರಿಗೆ ಇಳಿದಿದ್ದು, ತೀರದಲ್ಲಿ

ಪತ್ನಿಯ ಕಣ್ಣೆದುರೇ ಸಮುದ್ರ ಪಾಲಾದ ಪತಿ…! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ ವ್ಯಾಪ್ತಿಯಲ್ಲಿ ಒಟ್ಟು 9 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಆ. 28: ಆರೋಗ್ಯ ಇಲಾಖೆಯ ವರದಿಯಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 29 ಪ್ರಕರಣಗಳು ಪತ್ತೆಯಾಗಿದೆ. ಕಡಬ ತಾಲೂಕಿನ ವ್ಯಾಪ್ತಿಯ ಆಲಂಕಾರು ನಿವಾಸಿ 32 ವರ್ಷದ ವ್ಯಕ್ತಿ ರಾಮಕುಂಜ ನಿವಾಸಿ 49 ವರ್ಷದ ಮಹಿಳೆ, ಪೆರಾಬೆ ನಿವಾಸಿ 53 ವರ್ಷದ ವ್ಯಕ್ತಿ ಗೋಳಿತೊಟ್ಟು ನಿವಾಸಿ 26 ವರ್ಷದ ಮಹಿಳೆ, ಕಡಬ ನಿವಾಸದ 45 ವರ್ಷದ ವ್ಯಕ್ತಿ, ನಿವಾಸಿ 80 ವರ್ಷದ ವೃಧ್ದ, ಕಾಮಣ ನಿವಾಸಿ 52 ವರ್ಷದ ವ್ಯಕ್ತಿ, ಬೆಳಂದೂರು

ಕಡಬ ವ್ಯಾಪ್ತಿಯಲ್ಲಿ ಒಟ್ಟು 9 ಮಂದಿಗೆ ಕೊರೋನಾ ದೃಢ Read More »

ಕರಾವಳಿ, ಕರ್ನಾಟಕ

ಬನ್ನೇರುಘಟ್ಟ ಪಾರ್ಕ್ ಆನೆ ಮರಿಗೆ “ಸುಧಾಮೂರ್ತಿ” ಹೆಸರು ನಾಮಕರಣದ ಮೂಲಕ ಗೌರವ

(ನ್ಯೂಸ್ ಕಡಬ) newskadaba.com ಆನೇಕಲ್. ಆ,28:  ಇತ್ತೀಚೆಗೆ ತಾನೇ ಕೇವಲ ತಿಂಗಳ ಅಂತರದಲ್ಲಿ ಉದ್ಯಾನವನದ ಎರಡು ಸಾಕಾನೆಗಳು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದವು. ವನ್ಯಜೀವಿ ಸಂರಕ್ಷಣೆಗಾಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೀಡಿರುವ ಕೊಡುಗೆ ಹಿನ್ನಲೆಯಲ್ಲಿ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಆನೆ ಮರಿಯೊಂದಕ್ಕೆ ಸುಧಾ ಮೂರ್ತಿ ಹೆಸರಿಡಲಾಗಿದೆ.     ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 45 ವರ್ಷದ ಸುವರ್ಣ ಎಂಬ ಆನೆ, ಹೆಣ್ಣು ಮರಿಗೆ ಜನ್ಮ ನೀಡಿದ್ದು, ಈ ಆನೆ ಮರಿಗೆ ಸುಧಾ ಮೂರ್ತಿ

ಬನ್ನೇರುಘಟ್ಟ ಪಾರ್ಕ್ ಆನೆ ಮರಿಗೆ “ಸುಧಾಮೂರ್ತಿ” ಹೆಸರು ನಾಮಕರಣದ ಮೂಲಕ ಗೌರವ Read More »

ಕರಾವಳಿ, ಕರ್ನಾಟಕ

ಸವಣೂರು : ನೂತನ ಕಡಬ ತಾ.ಪಂಚಾಯತ್ ನ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರಿಗೆ ಸ್ವಾಗತ

(ನ್ಯೂಸ್ ಕಡಬ) newskadaba.com ಸವಣೂರು , ಆ. 28.  ನೂತನ ಕಡಬ ತಾಲೂಕು ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸವಣೂರು ಕ್ಷೇತ್ರದ ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ ಅವರಿಗೆ ಸವಣೂರು ಜಂಕ್ಷನ್‌ನಲ್ಲಿ ಹೂವಿನ  ಹಾರ ಹಾಕಿ ಸ್ವಾಗತಿಸಲಾಯಿತು. ಈ ಸಂದರ್ಭ ಪುತ್ತೂರು  ತಾ.ಪಂ.ಅಧ್ಯಕ್ಷ  ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ಭವಾನಿ, ಚಿದಾನಂದ, ಮೀನಾಕ್ಷಿ ಮಂಜುನಾಥ್, ಹರೀಶ್ ಬಿಜತ್ರೆ,  ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ  ಸಕ್ರಮ  ಸಮಿತಿ  ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು  ಗ್ರಾಮ ಪಂಚಾಯತ್ ಮಾಜಿ

ಸವಣೂರು : ನೂತನ ಕಡಬ ತಾ.ಪಂಚಾಯತ್ ನ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರಿಗೆ ಸ್ವಾಗತ Read More »

ಕರಾವಳಿ, ಕರ್ನಾಟಕ

ಕರಾವಳಿಯಲ್ಲೊಂದು ಹೃದಯವಿದ್ರಾವಕ ಘಟನೆ ➤ ಮಗನಿಗೆ ಕೊರೊನಾ ಸೊಂಕು ಮನನೊಂದು ತಂದೆ ಆತ್ಮಹತ್ಯೆ.!

(ನ್ಯೂಸ್ ಕಡಬ) newskadaba.com ಉಡುಪಿ. ಆ,28:  ಮಗನಿಗೆ ಕೊರೊನಾ ಸೊಂಕು ಬಂದ ಹಿನ್ನಲೆ ಮನನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಿರ್ವಾದ ಕಳತ್ತೂರು ಗ್ರಾಮದ ಜ್ಯೋತಿ ನಗರ ಎಂಬಲ್ಲಿ ನಡೆದಿದೆ. ಸುಂದರಮೂಲ್ಯ (60) ಮನನೊಂದು ಆತ್ಮಹತ್ಯೆ ಮಾಡಿಕೊಂಡವರು.   ಇವರು ಬಿಪಿ, ಶುಗರ್ ಖಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಚಿಕಿತ್ಸೆಯಲ್ಲಿದ್ದರು. ಈ ನಡುವೆ ಇವರು ಪುತ್ರ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದರು. ಮಣಿಪಾಲದ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಅವರಲ್ಲಿ

ಕರಾವಳಿಯಲ್ಲೊಂದು ಹೃದಯವಿದ್ರಾವಕ ಘಟನೆ ➤ ಮಗನಿಗೆ ಕೊರೊನಾ ಸೊಂಕು ಮನನೊಂದು ತಂದೆ ಆತ್ಮಹತ್ಯೆ.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು : ಅಪಘಾತದಲ್ಲಿ ಗಾಯಗೊಂಡಿದ್ದ ಸುಳ್ಯ ಮೂಲದ ನ್ಯಾಯವಾದಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು. ಆ,28:  ನಗರದ ಬಿಜೈ KSRTC  ಬಳಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನ್ಯಾಯವಾದಿ ಬಿಎಂ ದುಗ್ಗಪ್ಪ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ‌ ನಿಧನರಾಗಿದ್ದಾರೆ.   ಸುಳ್ಯ ಮೂಲದ ಇವರು ನಗರದ ಆಕಾಶಭವನ ಬಳಿ ನೆಲೆಸಿದ್ದರು. ಬುಧವಾರ ಸಂಜೆ  ತನ್ನ ಮನೆಯಿಂದ ಬೆಸೆಂಟ್ ಶಿಕ್ಷಣ ಸಂಸ್ಥೆಯ ಬಳಿ ಇರುವ ಕಚೇರಿಗೆ ತೆರಳುತ್ತಿದ್ದಾಗ ಇವರು ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಇವರನ್ನು ಖಾಸಗಿ

ಮಂಗಳೂರು : ಅಪಘಾತದಲ್ಲಿ ಗಾಯಗೊಂಡಿದ್ದ ಸುಳ್ಯ ಮೂಲದ ನ್ಯಾಯವಾದಿ ಮೃತ್ಯು Read More »

ಕರಾವಳಿ, ಕರ್ನಾಟಕ

ಬೆಕ್ಕನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿದ ಆಸ್ಪತ್ರೆ

(ನ್ಯೂಸ್ ಕಡಬ) newskadaba.com ಸಿಡ್ನಿ. ಆ,28: ಪ್ರಾಣಿಗಳೆಂದರೇ ಹೆಚ್ಚಿನವರಿಗೆ ಬಲು ಪ್ರೀತಿ. ಅಚ್ಚುಮೆಚ್ಚು. ಹೀಗಿರುವಾಗ ಇಲ್ಲೊಂದು ಕಡೆ ಬೆಕ್ಕನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿದ್ದಾರೆ. ಹೌದು  ಆಸ್ಟ್ರೇಲಿಯಾದ ಆಸ್ಪತ್ರೆಯೊಂದನ್ನು ಇದನ್ನು ನಿಜವಾಗಿಸಿದೆ.     ಎಲ್ ವುಡ್‍ ಎಂಬ ಹೆಸರಿನ ಬೆಕ್ಕು ಕಳೆದ ಒಂದು ವರ್ಷದಿಂದ ರಿಚ್ಮಂಡ್ ನ ಆಸ್ಪತ್ರೆಯೊಂದರಲ್ಲಿ ಓಡಾಡಿಕೊಂಡಿತ್ತು. ಇದು ಆ ಆಸ್ಪತ್ರೆಯ ಸ್ಟಾಫ್ ಗಳಿಗೆ ಅಚ್ಚುಮೆಚ್ಚಾಗಿತ್ತು. ಇದೀಗ ಆ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಬೆಕ್ಕನ್ನು ಅಧಿಕೃತವಾಗಿ ಸೆಕ್ಯುರಿಟಿ ಗಾರ್ಡ್ ಸಿಬ್ಬಂದಿಯಾಗಿ ನೇಮಿಸಿಕೊಂಡಿದೆ! ಈ

ಬೆಕ್ಕನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿದ ಆಸ್ಪತ್ರೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಅನ್ನ ಭಾಗ್ಯದ ಅಕ್ಕಿಗೆ ಖದೀಮರಿಂದ ಕನ್ನ ➤ ಪಡಿತರ ಅಕ್ಕಿ ದಾಸ್ತಾನು, ಆರೋಪಿಗಳು ಪೋಲಿಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕುಂದಾಪುರ . ಆ,28:  ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ವಿತರಿಸುವ ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕಿದ ಘಟನೆ ಕುಂದಾಪುರ ತಾಲೂಕು ಕೋಟೇಶ್ವರದಲ್ಲಿ ನಡೆದಿದೆ. ಕೋಟೇಶ್ವರದ ನೇಂಪು ಎಂಬಲ್ಲಿ ಅಬ್ದುಲ್ ಸತ್ತಾರ್ ಅವರಿಗೆ ಸೇರಿದ ಹೋಲೋ ಬ್ಲಾಕ್ಸ್ ಕಟ್ಟಡದಲ್ಲಿ ಕ್ರಮವಾಗಿ ಸುಮಾರು 55 ಟನ್ ಪಡಿತರ ಅಕ್ಕಿ ಸಂಗ್ರಹಿಸಲಾಗಿದ್ದು ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಕುಂದಾಪುರ ಠಾಣೆ ಪೋಲಿಸರು ಪಡೆದಿದ್ದಾರೆ.   ಪ್ರಕರಣಕ್ಕೆ ಸಂಬಂಧಿಸಿದಂತೆ  ಖದೀಮರನ್ನ ಬಂಧಿಸಲಾಗಿದೆ. ಖದೀಮರು ಅಕ್ಕಿಯನ್ನು

ಅನ್ನ ಭಾಗ್ಯದ ಅಕ್ಕಿಗೆ ಖದೀಮರಿಂದ ಕನ್ನ ➤ ಪಡಿತರ ಅಕ್ಕಿ ದಾಸ್ತಾನು, ಆರೋಪಿಗಳು ಪೋಲಿಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top