Ashitha Soodlu

ತೊಡಿಕಾನ: ಭಾರಿ ಗಾತ್ರದ ಗೋಲಿ ಮರವೊಂದು ಮನೆ ಮೇಲೆ ಬಿದ್ದು ಸಂಪೂರ್ಣ ಹಾನಿ ➤ಮನೆ ಮಂದಿಯೆಲ್ಲ ಪವಾಡ ಸದೃಶವಾಗಿ ಪಾರು

(ನ್ಯೂಸ್ ಕಡಬ) newskadaba.com ತೊಡಿಕಾನ , ಸೆ.13: ತೊಡಿಕಾನ ಗ್ರಾಮದ ಪಂಜಿಕೋಡಿ ಎಂಬಲ್ಲಿ ಇಂದು ಮುಂಜಾನೆ ಭಾರಿ ಗಾತ್ರದ ಗೋಲಿ ಮರವೊಂದು ಬಿದ್ದು ಮನೆಯ ಮುಕ್ಕಾಲು ಭಾಗ ಕುಸಿದು ಬಿದ್ದಿದ್ದು, ಮನೆ ಮಂದಿಯೆಲ್ಲ ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.     ಪಂಜಿಕೋಡಿ ಚಂದ್ರಶೇಖರ ಆಚಾರ್ಯ ಎಂಬವರ ಮನೆಗೆ ಭಾರಿ ಗಾತ್ರದ ಗೋಲಿ ಮರವೊಂದು ಬೆಳಿಗ್ಗೆ 8.15 ರ ಸಮಯಕ್ಕೆ ಬುಡ ಸಮೇತ ಉರುಳಿ ಬಿದ್ದಿದೆ. ಆ ಸಮಯದಲ್ಲಿ ಮನೆ ಮಂದಿಯೆಲ್ಲ ಒಳಗಿದ್ದರು. ಮರ ಬೀಳುವ […]

ತೊಡಿಕಾನ: ಭಾರಿ ಗಾತ್ರದ ಗೋಲಿ ಮರವೊಂದು ಮನೆ ಮೇಲೆ ಬಿದ್ದು ಸಂಪೂರ್ಣ ಹಾನಿ ➤ಮನೆ ಮಂದಿಯೆಲ್ಲ ಪವಾಡ ಸದೃಶವಾಗಿ ಪಾರು Read More »

ಕರಾವಳಿ, ಕರ್ನಾಟಕ

ಕಡಬ: ಜಲ ಸಂರಕ್ಷಣೆಯ ಸ್ಟಿಕ್ಕರ್‌ ಅಳವಡಿಸಿ ಅರಿವು ಮೂಡಿಸಿದ ಜೇಸಿಐ ಕಡಬ ಕದಂಬ ಘಟಕ

(ನ್ಯೂಸ್ ಕಡಬ) newskadaba.com ಕಡಬ, ಸೆ.13: ಜೇಸಿಐ ಕಡಬ ಕದಂಬ ಘಟಕವು ಜೆಸಿಐ ಸಪ್ತಾಹದ ಅಂಗವಾಗಿ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ 2 ನೇ ದಿನದ ಕಾರ್ಯಕ್ರಮ ಕಛೇರಿಯಲ್ಲಿ “ನೀರು ಉಳಿಸಿ- ಜೀವ ಉಳಿಸಿ” ಎಂಬ ಸ್ಟಿಕ್ಕರ್‌ ಬಿಡುಗಡೆ ಮಾಡಲಾಯಿತು.   ಜೇಸಿಐ ಕಡಬ ಕದಂಬ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌ ಎನ್.ಕೆ. ರವರು ಸ್ಟಿಕ್ಕರ್ ಬಿಡಿಗಡೆ ಮಾಡಿದರು. ಜೇಸಿ ಅಧ್ಯಕ್ಷ ಮೋಹನ್‌ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ಸುಪ್ತಾಹ ನಿರ್ದೇಶಕ ತಿರುಮಲೇಶ್‌ ಭಟ್‌ ಹೊಸಮಠ,

ಕಡಬ: ಜಲ ಸಂರಕ್ಷಣೆಯ ಸ್ಟಿಕ್ಕರ್‌ ಅಳವಡಿಸಿ ಅರಿವು ಮೂಡಿಸಿದ ಜೇಸಿಐ ಕಡಬ ಕದಂಬ ಘಟಕ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.13: ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ದಾರುಣ ಘಟನೆ ನೀಲೇಶ್ವರ ಬಂಗಳಂ ಎಂಬಲ್ಲಿ ನಡೆದಿದೆ. ಮೃತ ರಘುನಾಥ್ ( 55) ಎಂದು ಗುರುತಿಸಲಾಗಿದೆ.     ಕಳೆದ ದಿನ ಸಂಜೆ ಕೆಲಸ ಮುಗಿಸಿ ಮರಳುತ್ತಿದ್ದಾಗ ಮನೆ ಬಳಿ ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದಿದ್ದು ಇದನ್ನು ಗಮನಿಸಿದ್ದ ಪತ್ನಿ ಬೊಬ್ಬೆ ಹಾಕಿದ್ದಾರೆ. ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕೊರೊನಾ ತಪಾಸಣೆ ಬಳಿಕ ಮರಣೋತ್ತರ ಪರೀಕ್ಷೆ

ಕಾಸರಗೋಡು: ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದು ಕಾರ್ಮಿಕ ಮೃತ್ಯು Read More »

ಕರಾವಳಿ, ಕರ್ನಾಟಕ

ಬೆಳ್ಳಾರೆ: ಅಂಗಡಿಗೆ ನುಗ್ಗಿ ನಗದು ಕಳ್ಳತನ ➤ ಆರೋಪಿ ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.13: ಬೆಳ್ಳಾರೆ ಪೇಟೆಯಲ್ಲಿ ರಾತ್ರಿ ಅಂಗಡಿಗೆ ನುಗ್ಗಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆ.10 ರಂದು ರಾತ್ರಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿರುವ ಮಾಸ್ಟರ್‌ ಪ್ಲಾನ್‌ ಮತ್ತು ಪ್ಲೈವುಡ್‌ ಅಂಗಡಿಗೆ ನುಗ್ಗಿದ ಕಳ್ಳ ರೂ.9500 ನಗದು ಕದ್ದು ಪರಾರಿಯಾಗಿದ್ದ ಈ ಬಗ್ಗೆ ಅಂಗಡಿ ಮಾಲಕರು ಪೊಲೀಸರಿಗೆ‌ ದೂರು ನೀಡಿದ್ದಾರೆ.   ದೂರು ದಾಖಲಿಸಿಕೊಂಡ ಪೊಲೀಸರು ಸೆ.11 ರಂದು ರಾತ್ರಿ ಕಳ್ಳತನ ಮಾಡಿದ ಆರೋಪಿಯನ್ನು ಪಂಜಿಗಾರಿನಲ್ಲಿ ಬಂಧಿಸುವಲ್ಲಿ

ಬೆಳ್ಳಾರೆ: ಅಂಗಡಿಗೆ ನುಗ್ಗಿ ನಗದು ಕಳ್ಳತನ ➤ ಆರೋಪಿ ಪೊಲೀಸ್‌ ವಶಕ್ಕೆ Read More »

ಕರಾವಳಿ, ಕರ್ನಾಟಕ

ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ ಇಂದು 59 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ.12: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ 59 ಮಂದಿಗೆ ಕೊರೋನಾ ದೃಢಪಟ್ಟಿದೆ.     ಕಡಬ ತಾಲೂಕಿನ ಕಾಮಣದಲ್ಲಿ 29 ವರ್ಷ ಪ್ರಾಯದ ಯುವಕ, ಕೋಂಡಿಬಾಳದ 60 ವರ್ಷ ಪ್ರಾಯದ, 70 ವರ್ಷ ಪ್ರಾಯದ ವ್ಯಕ್ತಿ, ಕೊಲದ 45 ವರ್ಷ ಪ್ರಾಯದ ವಕ್ತಿ, 68 ವರ್ಷ ಪ್ರಾಯದ ಮಹಿಳೆ, ನೆಲ್ಯಾಡಿ 55 ವರ್ಷ ಪ್ರಾಯದ ವ್ಯಕ್ತಿ, 15 ವರ್ಷ ಪ್ರಾಯದ ಬಾಲಕ, 34 ವರ್ಷ ಪ್ರಾಯದ ವ್ಯಕ್ತಿ,

ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ ಇಂದು 59 ಮಂದಿಯಲ್ಲಿ ಕೊರೋನಾ ದೃಢ Read More »

ಕರಾವಳಿ

ಆಲಂಕಾರು: ಚಲಿಸುತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರ ➤ ಚಾಲಕ ಪ್ರಾಣಾಪಯದಿಂದ ಪಾರು

(ನ್ಯೂಸ್ ಕಡಬ) newskadaba.com ಕೊಯಿಲ, ಸೆ.12: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲ ಸಮೀಪದ ನೀರಾಜೆ ಎಂಬಲ್ಲಿ ಚಲಿಸುತ್ತಿದ್ದ ಓಮ್ನಿಯ ಮೇಲೆ ಮರವೊಂದು ಮುರಿದು ಬಿದ್ದ ಘಟನೆ ಇಂದು(ಶನಿವಾರ) ನಡೆದಿದೆ. ಮರ ಬಿದ್ದ ಪರಿಣಾಮದಿಂದಾಗಿ ಓಮ್ನಿ ಜಖಂಗೊಂಡು ಅದರ ಚಾಲಕ, ಕೊಯಿಲ ಶ್ರೀರಾಮ ಎಲೆಕ್ಟ್ರಿಕಲ್ಸ್‌ನ ಮಾಲಕ ಯೋಗಿಶ್‌ ಅಪಾಯದಿಂದ ಪಾರಾಗಿದ್ದಾರೆ.     ನಿರಂತರವಾಗಿ ಎಡೆಬಿಡದೆ ಸುರುಯುತ್ತಿದ್ದ ಮಳೆಗೆ ಕೊಯಿಲ ನೀರಾಜೆ ಸಮೀಪ ರಸ್ತೆ ಬದಿಯಲ್ಲಿದ್ದ ಹಲಸಿನ ಮರವೊಂದು ಮುರಿದು ಬಿದ್ದಿದೆ. ಈ ಘಟನೆಯ ಪರಿಣಾಮ ಸುಮಾರು ಅರ್ಧಗಂಟೆಯಷ್ಟುರಸ್ತೆಯಲ್ಲಿ

ಆಲಂಕಾರು: ಚಲಿಸುತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರ ➤ ಚಾಲಕ ಪ್ರಾಣಾಪಯದಿಂದ ಪಾರು Read More »

ಕರಾವಳಿ

ಕಾಣಿಯೂರು: ಬೆಳಂದೂರಿನಲ್ಲಿ ಸೆ.14 ರಂದು ಉಚಿತ ಕೋವಿಡ್‌ ಟೆಸ್ಟ್

(ನ್ಯೂಸ್ ಕಡಬ) newskadaba.com ಕಾಣಿಯೂರು, ಸೆ.12: ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಉಚಿತ ಕೋವಿಡ್‌ 19 ಪರೀಕ್ಷೆಯು ಸೆ.14 ರಂದು ಬೆಳಿಗ್ಗೆ ಬೆಳಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.   ಬೆಳಂದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾಮಣ, ಬೆಳಂದೂರು,ಕುದ್ಮಾರು ಗ್ರಾಮದ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದು ತಪಾಸನೆ ಮಾಡಿಕೊಳ್ಳುವಂತೆ ಬೆಳಂದೂರು ಗ್ರಾಮ ಪಂಚಾಯತ್‌ ಪ್ರಕಟನೆಯಲ್ಲಿ ತಿಳಿಸಿದೆ.    

ಕಾಣಿಯೂರು: ಬೆಳಂದೂರಿನಲ್ಲಿ ಸೆ.14 ರಂದು ಉಚಿತ ಕೋವಿಡ್‌ ಟೆಸ್ಟ್ Read More »

ಕರಾವಳಿ, ಕರ್ನಾಟಕ

ದೇಶಾದ್ಯಂತ ಇಂದಿನಿಂದ 80 ಹೊಸ ವಿಶೇಷ ರೈಲುಗಳ ಸಂಚಾರ ಆರಂಭ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.12: ಇಂದಿನಿಂದ ದೇಶಾದ್ಯಂತ 80 ಹೊಸ ವಿಶೇಷ ರೈಲುಗಳ ಸಂಚಾರ ಆರಂಭವಾಗಿದೆ. ಈಗಾಗಲೇ 230 ರೈಲುಗಳು ಸಂಚಾರ ಪ್ರಾರಂಭಿಸಿವೆ. ಈ ನಡುವೆ ಇದೀಗ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಮತ್ತೆ 80 ಹೊಸ ವಿಶೇಷ ರೈಲುಗಳನ್ನು ಬಿಡಲಾಗಿದೆ. ಇದರ ಸೀಟು ಕಾಯ್ದಿರಿಸುವಿಕೆ ಪ್ರಕ್ರಿಯೆಯೂ ಗುರುವಾರದಿಂದ ಪ್ರಾರಂಭವಾಗಿದೆ ಎನ್ನಲಾಗಿದೆ.     ಈ ಬಗ್ಗೆ ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ತಿಳಿಸಿದ್ದಾರೆ. ಹಾಗೇ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಮತ್ತು ಸಾಮಾಜಿಕ ಅಂತರ

ದೇಶಾದ್ಯಂತ ಇಂದಿನಿಂದ 80 ಹೊಸ ವಿಶೇಷ ರೈಲುಗಳ ಸಂಚಾರ ಆರಂಭ Read More »

ಕರಾವಳಿ, ಕರ್ನಾಟಕ

ಮಂಗಳೂರು: ಭಾರೀ ಮಳೆಯಿಂದಾಗಿ ಕೊಂಚಾಡಿಯ ಫ್ಲಾಟ್ ಹಿಂಭಾಗದ ಧರೆ ಕುಸಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.12: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳ ಮನೆಗಳು ಜಲಾವೃತವಾಗಿವೆ. ಬಿಡದೇ ಸುರಿದ ಮಳೆಯಿಂದಾಗಿ ಮಂಗಳೂರಿನ ಕೊಂಚಾಡಿಯಲ್ಲಿ 12 ಅಂತಸ್ತಿನ ಎಸೆಲ್ ಹೈಟ್ಸ್ ಫ್ಲ್ಯಾಟ್ ಹಿಂಭಾಗದಲ್ಲಿ ಧರೆ ಕುಸಿದಿದೆ. ಧರೆ ಕುಸಿದು ಹಲವು ವಾಹನಗಳು ಜಖಂ ಆಗಿವೆ. ಮುಂಜಾಗ್ರತಾ ಕ್ರಮವಾಗಿ ಫ್ಲ್ಯಾಟ್​ನಲ್ಲಿದ್ದ ನೂರಾರು ಮಂದಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಫ್ಲಾಟ್ ಮುಂಭಾಗದ ರಸ್ತೆ ಬಂದ್ ಮಾಡಲಾಗಿದ್ದು, ಸ್ಥಳಕ್ಕೆ

ಮಂಗಳೂರು: ಭಾರೀ ಮಳೆಯಿಂದಾಗಿ ಕೊಂಚಾಡಿಯ ಫ್ಲಾಟ್ ಹಿಂಭಾಗದ ಧರೆ ಕುಸಿತ Read More »

ಕರಾವಳಿ, ಕರ್ನಾಟಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೃಷ್ಣಾಷ್ಟಮಿ ➤ ಬಳಿಕ ಮತ್ತೆ ಕಾಶಿಕಟ್ಟೆಯವರೆಗೆ ಮೆರವಣಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.12: ಕಡಬ ತಾಲೂಕಿನ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ದಿನ ಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ನಡೆಯಿತು.     ಕಾಶಿಕಟ್ಟೆಯಲ್ಲಿ ಅಷ್ಟಮಿ ದಿನ ಪೂಜಿಸಲ್ಪಡುವ ಕೃಷ್ಣನ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಳಕ್ಕೆ ಆಗಮಿಸಿ ಬಳಿಕ ಮತ್ತೆ ಕಾಶಿಕಟ್ಟೆಗೆ ಮೆರವಣಿಗೆಯಲ್ಲಿ ಸಾಗಿಸಲಾಯಿತು.ಈ ವೇಳೆ ರಸ್ತೆಯುದ್ದಕ್ಕೂ ಮೊಸರು ಕುಡಿಕೆಗಳನ್ನು ಒಡೆದು ಕರಷ್ಣಾಷ್ಟಮಿ ಆಚರಿಸಲಾಯಿತು. ಪುರೋಹಿತ ಸನತ್‌ ನೂರಿತ್ತಾಯ, ದೇವಳದ ನಾಗೇಶ್‌ ಎ.ವಿ, ದಿನಕರ ಮತ್ತಿತರರು ಉಪಸ್ಥಿತರಿದ್ದರು.    

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೃಷ್ಣಾಷ್ಟಮಿ ➤ ಬಳಿಕ ಮತ್ತೆ ಕಾಶಿಕಟ್ಟೆಯವರೆಗೆ ಮೆರವಣಿ Read More »

ಕರಾವಳಿ, ಕರ್ನಾಟಕ
Scroll to Top