Ashitha Soodlu

ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.07:  ಕೋಡಿಂಬಾಳ ಗ್ರಾಮದ ಮಜ್ಜಾರು ಕ್ರಾಸ್ ಸಮೀಪ ಅಕ್ರಮವಾಗಿ ಕಸಾಯಿಖಾನೆಗೆ ಎರಡು ಜಾನುವಾರುಗಳನ್ನು ಕೊಂಡೋಯ್ಯುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಕಡಬ ಪೋಲಿಸರು ಎರಡು ಹೋರಿ ಹಾಗೂ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಜಿ ಪಂಚಾಯತ್ ಸದಸ್ಯ ಪರಾರಿಯಾಗಿದ್ದಾರೆ. ಪುಳಿಕುಕ್ಕು ಎಂಬಲ್ಲಿಂದ ಮಡ್ಯಡ್ಕ ಎಂಬಲ್ಲಿಗೆ ಜಾನುವಾರನ್ನು ಕೊಂಡೊಯ್ಯಲಾಗುತ್ತಿದ್ದು ಮಡ್ಯಡ್ಕದ ಮನೆಯೊಂದರಲ್ಲಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಇಂದಿನ ಜಾನುವಾರು ಸಾಗಾಟದಲ್ಲಿ ಕಡಬದ ಮಾಜಿ ಬಿಜೆಪಿಯ ಸದಸ್ಯರೋರ್ವರು ಶಾಮಿಲಾಗಿರುವ ಬಗ್ಗೆ ಶಂಕೆ […]

ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ Read More »

ಕರಾವಳಿ

ಪುತ್ತೂರು: ಎರಡನೇ ದಿನವೂ ರಿಕ್ಕಿ ರೈಯವರ ಡ್ರಗ್ಸ್ ಕೇಸು ವಿಚಾರಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.07: ಡ್ರಗ್ಸ್‌ ದಂಧೆಗೆ ಸಂಬಂಧಪಟ್ಟಂತೆ ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ, ಮಾಜಿ ಭೂಗತ ಡಾನ್‌ ಎನ್. ಮುತ್ತಪ್ಪ ರೈಯವರ ಎಡನೇ ಪುತ್ರ ರಿಕ್ಕಿ ರೈಯವರ ವಿಚಾರಣೆ ಇದೀಗ ಎರಡನೇ ದಿನವೂ ಮುಂದುವರಿದಿದೆ. ಸಿಸಿಬಿ ಇನ್ಸ್ಪೆಕ್ಟರ್‌ ಪುನೀತ್‌ ನೇತೃತ್ವದ ತಂಡದಿಂದ ರಿಕ್ಕಿ ರೈ ವಿಚಾರಣೆ ನಡೆಯುತ್ತಿದೆ.     ಕಳೆದ ದಿನ ಬೆಂಗಳೂರಿನ ಸದಾಶಿವ ನಗರದಲ್ಲಿರುವ ರಿಕ್ಕಿ ರೈಯವರ ಫ್ಲ್ಯಾಟ್‌ ಮತ್ತು ಬಿಡದಿ ನಿವಾಸಕ್ಕೆ ದಾಲಿ ನಡೆಸಿ ರಿಕ್ಕಿ ರೈಯವರನ್ನು ವಿಚಾರಣೆಗೆ ಒಳಪಡಿಸಿದ್ದ

ಪುತ್ತೂರು: ಎರಡನೇ ದಿನವೂ ರಿಕ್ಕಿ ರೈಯವರ ಡ್ರಗ್ಸ್ ಕೇಸು ವಿಚಾರಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಮನೆಯವರು ಮಲಗಿದ್ದ ವೇಳೆ ಕಳ್ಳರ ಕೈಚಳಕ ➤ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.07: ಮನೆಯಲ್ಲಿ ಮನೆ ಮಂದಿ ಮಲಗಿದ್ದ ವೇಳೆ  ಬಾಗಿಲಿನ ಚಿಲಕ ಮುರಿದು ಕಳ್ಳರು ಒಳನುಗ್ಗಿದ ಘಟನೆ ಕಲ್ಲಡ್ಕ ಕರಿಂಗಾನ ಸಮೀಪದ ಅಮ್ಟೂರು ಮಸೀದಿ ಬಳಿ ಕಳೆದ ದಿನ ತಡರಾತ್ರಿ ಬೆಳಕಿಗೆ ಬಂದಿದೆ. ಕಳ್ಳರು ಕೋಣೆಯಲ್ಲಿದ್ದ ಕಪಾಟಿನ ಕೀ ತೆರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.     ಅಮ್ಟೂರು ನಿವಾಸಿ ಸುಲೈಮಾನ್ ಅವರ ಮನೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ 28 ಪವನ್ ಚಿನ್ನಾಭರಣಗಳು ಕಳವು ಮಾಡಿದ್ದು, ಸುಲೈಮಾನ್ ಅವರ

ಬಂಟ್ವಾಳ: ಮನೆಯವರು ಮಲಗಿದ್ದ ವೇಳೆ ಕಳ್ಳರ ಕೈಚಳಕ ➤ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು Read More »

ಕರಾವಳಿ

ಬಂಟ್ವಾಳ: ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಲೆಗೆ ಕಲ್ಲು ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.07: ಕೆಲಸದಲ್ಲಿ ನಿರತರಾಗಿದ್ದ ಸಿದ್ದಕಟ್ಟೆ ಬಳಿಯ ಸಂಗಬೆಟ್ಟುವಿನಲ್ಲಿ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಕಾರ್ಮಿಕರ ತಲೆಗೆ ಕಲ್ಲು ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ ಇಂದು ನಡೆದಿದೆ.     ಮೃತ ವ್ಯಕ್ತಿಯನ್ನು ಸಿದ್ದಕಟ್ಟೆಯ ಮಂಚಕಲ್ ಮೂಲದ ರಾಮಾನಂದ ಗೌಡ (30) ಎಂದು ಗುರುತಿಸಲಾಗಿದೆ. ಸಿದ್ದಕಟ್ಟೆ ಬಳಿಯ ಸಂಗಬೆಟ್ಟುವಿನಲ್ಲಿ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಈ ಮನೆ ನಿರ್ಮಾಣಕ್ಕಾಗಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಬಂಟ್ವಾಳ: ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಲೆಗೆ ಕಲ್ಲು ಬಿದ್ದು ಕಾರ್ಮಿಕ ಮೃತ್ಯು Read More »

ಕರಾವಳಿ

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಕಸಾಯಿ ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ➤ ಡಾ.ಭರತ್ ಶೆಟ್ಟಿ.ವೈ

(ನ್ಯೂಸ್ ಕಡಬ) newskadaba.com ಸುರತ್ಕಲ್, ಅ.07: ಕರಾವಳಿ ಜಿಲ್ಲೆಯಲ್ಲಿ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಕಸಾಯಿ ಖಾನೆ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಾ.ಭರತ್ ಶೆಟ್ಟಿ.ವೈ ರವರು ತಿಳಿಸಿದ್ದಾರೆ.     ರಸ್ತೆಬದಿಯಲ್ಲಿ ಮೇಯಲು ಬಿಟ್ಟ ದನಗಳನ್ನು ವಾಹನಗಳಲ್ಲಿ ತುಂಬಿಸಿ ಅಕ್ರಮ ಕಸಾಯಿ ಖಾನೆಗಳಿಗೆ ಮಾರುವುದು, ಬೀಡಾಡಿ ದನಗಳನ್ನು ಹಿಂಸಿಸಿ ಕೊಂಡೊಯ್ಯುವುದು, ಮಾರಾಕಾಯುಧಗಳನ್ನು ತೋರಿಸಿ ಹಟ್ಟಿಯಿಂದ ದನ ಕಳವು ಮಾಡುವುದು, ಮತ್ತಿತರ

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಕಸಾಯಿ ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ➤ ಡಾ.ಭರತ್ ಶೆಟ್ಟಿ.ವೈ Read More »

ಕರಾವಳಿ

ಪುತ್ತೂರು: ತಾ. ರಬ್ಬರ್‌ ಬೆಳೆಗಾರರ ಮಾರಾಟ ಸಂಸ್ಕರಣ ಸಹಕಾರ ಸಂಘದ ಚುನಾವಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.07: ನೆಲ್ಯಾಡಿಯಲ್ಲಿ ಮುಖ್ಯ ಕಛೇರಿ ಹೊಂದಿರುವ ಪುತ್ತೂರು ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಚುನಾವಣೆಯಲ್ಲಿ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪ್ರಸಾದ್‌ ಕೌಶಲ್‌ ಶೆಟ್ಟಿ ಬಿ, ಉಪಾಧ್ಯಕ್ಷರಾಗಿ ರೋಹಿ ಅಬ್ರಹಾಂ ಪದವು ಕುಂತೂರು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ಇಂದು ಮುಖ್ಯ ಕಛೇರಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಮಂಗಳೂರು ಇಲ್ಲಿನ ಪ್ರಥಮ ದರ್ಜೆ ಸಹಾಯಕ

ಪುತ್ತೂರು: ತಾ. ರಬ್ಬರ್‌ ಬೆಳೆಗಾರರ ಮಾರಾಟ ಸಂಸ್ಕರಣ ಸಹಕಾರ ಸಂಘದ ಚುನಾವಣೆ Read More »

ಕರಾವಳಿ

ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.07: ಕಂಡೆಕ್ಟರ್‌ ಕೈಯಿಂದ ಟಿಕೇಟ್‌ ಖರೀದಿಸಿದ್ದರೂ ಟಿಕೇಟ್‌ ಪರೀಕ್ಷಿಕರು ಆಗಮಿಸಿದ ವೇಳೆ ಟಿಕೇಟ್‌ ಕಾಣದಾಗಿ ವೃದ್ಧ ದಂಪತಿಗಳು ದಂಡಪಾವತಿಸಬೇಕಾಗಿ ಬಂದ ಘಟನೆ ಕಳೆದ ದಿನ ಉಪ್ಪಿನಂಗಡಿಯಲ್ಲಿ ನಡೆದಿದೆ.   ಪರೀಕ್ಷಿಕರು ಎಲ್ಲಾ ಪ್ರಯಾಣಿಕರಿಂದ ಟಿಕೇಟ್‌ ಪರಿಶೀಲನೆಗಾಗಿ ಟಿಕೇಟ್‌ ಕೇಳಿದಾಗ ಕೋಡಿಂಬಾಳ ನಿವಾಸಿಯ ದಂಪತಿಯ ಕೈಯಲ್ಲಿ ಟಿಕೇಟ್‌ ಕಳೆದುಹೋಗಿತ್ತು. ಟಿಕೇಟ್‌ ಖರೀದಿಸಿದ್ದೇವೆ ಎಂದು ದಂಪತಿಗಳು ಹೇಳಿದರೂ, ಟಿಕೇಟ್‌ ನೀಡಿದ್ದೇನೆಂದೂ ಕಂಡಕ್ಟರ್ ತಿಳಿಸಿದರೂ ಪರೀಕ್ಷಿಕರಿಗೆ ಟಿಕೇಟ್‌ ಲಭಿಸದ ಕಾರಣ ದಂಡ ಶುಲ್ಕ ಪಾವತಿಸಬೇಕೆಂದು ಅವರಿಗೆ

ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು Read More »

ಕರಾವಳಿ

ವಿದೇಶದಲ್ಲಿ ಸಲಿಂಗ ಮದುವೆಯಾದ ಕನ್ನಡಿಗ..!

(ನ್ಯೂಸ್ ಕಡಬ) newskadaba.com ಕೊಡಗು, ಅ.07:  ವಿದೇಶದಲ್ಲಿ, ಕೊಡಗಿನ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್​ ಎಂಬುವವರು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆ.26ರಂದು ಸಲಿಂಗ ಮದುವೆಯಾಗಿದ್ದಾರೆ. ಈ ಪೈಕಿ ಓರ್ವ ಕನ್ನಡಿಗ!.     ಕಳೆದ ಹತ್ತು ವರ್ಷದಿಂದ ವಿದೇಶದಲ್ಲೇ ನೆಲೆಸಿರುವ ಶರತ್ ಪೊನ್ನಪ್ಪ, ಗೆಳೆಯನನ್ನೇ ವರಿಸಿದ್ದಾನೆ. ಈತನ ವಿವಾಹ ಸಮಾರಂಭದಲ್ಲಿ ಹಲವರು ಭಾಗಿಯಾಗಿ ಶುಭ ಕೋರಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಮದುವೆ ಫೋಟೋ ಕಂಡ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಲಿಂಗ

ವಿದೇಶದಲ್ಲಿ ಸಲಿಂಗ ಮದುವೆಯಾದ ಕನ್ನಡಿಗ..! Read More »

ಕರ್ನಾಟಕ

ಪೆರಾಜೆ: ಅಪರೂಪದ ಚಿಟ್ಟೆ ಪತ್ತೆ

(ನ್ಯೂಸ್ ಕಡಬ) newskadaba.com ಪೆರಾಜೆ, ಅ.07: ಪಾತರಗಿತ್ತಿ ಎಂದು ಕರೆಯಲಾಗುವ ಚಿಟ್ಟೆಯ ಬಣ್ಣವನ್ನು, ಅದರ ಪಟಪಟ ಬಡಿಯುವ ರೆಕ್ಕೆಯನ್ನು ನೋಡಿದಾಕ್ಷಣ ಚಿಕ್ಕವರಿಗೆ ಮಾತ್ರವಲ್ಲ, ದೊಡ್ಡವರಿಗೂ ಕೂಡ ಇಷ್ಟವಾಗುತ್ತದೆ. ಮನಸ್ಸಿನಲ್ಲಿ ಎಷ್ಟೇ ದುಃಖಗಳಿದ್ದರೂ ಬಣ್ಣ ಬಣ್ಣದ ಚಿಟ್ಟೆಗಳನ್ನು ನೋಡಿದಾಕ್ಷಣ ಒಂದು ಕ್ಷಣ ಅವೆಲ್ಲವೂ ಮರೆಯಾಗುತ್ತದೆ.     ಚಿಟ್ಟೆಗಳು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೇ,ಅವು ನಮ್ಮ ಕೆಲವೊಂದು ಭಾವನೆಗಳನ್ನು ಸೂಚಿಸುತ್ತದೆ. ಆದರೆ ಇಲ್ಲೊಂದು ಪೆರಾಜೆ ಗ್ರಾಮದ ನಿಡ್ಯಮಲೆಯ ಅರುಣಗುಂಜ ಪುರುಷೋತ್ತಮ ಎಂಬವರ ಮನೆಯಲ್ಲಿ ಅಪರೂಪದ ಚಿಟ್ಟೆಯೊಂದು ಕಂಡುಬಂದಿದ್ದು, ಹಸಿರು ಹಾಗೂ

ಪೆರಾಜೆ: ಅಪರೂಪದ ಚಿಟ್ಟೆ ಪತ್ತೆ Read More »

ಕರಾವಳಿ

ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಭೂಪ ➤ ಇತ್ತ ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.07: ಹಾಥರಸ್​ನಲ್ಲಿ ನಡೆದಿದ  ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ಎಸ್​ಡಿಪಿಐ ಸಂಘಟನೆಯ ಮುಖಂಡನೊಬ್ಬ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಆತನ ಮಗ ದಲಿತ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು  ಮಹಮ್ಮದ್‌ ಫೈಝಲ್‌ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ. ಪೈಝಲ್​ಗೆ ಆಂಧ್ರ​ ಮೂಲದ ಯುವತಿಯೊಬ್ಬಳು ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ದೈಹಿಕ ಸಂಬಂಧಕ್ಕೂ ಅಲ್ಲದೆ,

ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಭೂಪ ➤ ಇತ್ತ ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top