ಈದ್ ಮೀಲಾದ್ , ಅಯೋಧ್ಯೆ ತೀರ್ಪು , ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ ;ಶಾಂತಿಯುತವಾಗಿ ಹಬ್ಬವನ್ನ ಆಚರಿಸಿ; ಅಯೋಧ್ಯೆ ತೀರ್ಪನ್ನ ಸಮಾನವಾಗಿ ಸ್ವೀಕರಿಸಿ ;ಈರಯ್ಯ ಡಿ ಎನ್ ಕರೆ
ಬೆಳ್ಳಾರೆ (ನ್ಯೂಸ್ ಕಡಬ ನ:07) : ಈದ್ ಮೀಲಾದ್ ,ಅಯೋಧ್ಯೆ ತೀರ್ಪು,ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಲ್ಲಾ ಮಸೀದಿ ,ಚರ್ಚ್, ದೇವಸ್ಥಾನ ,ಸಂಘ ಸಂಸ್ಥೆಗಳ ಪ್ರಮುಖರು ,ಜನಪ್ರತಿನಿಧಿಗಳು ,ಗ್ರಾಮಸ್ಥರೊಂದಿಗೆ ಶಾಂತಿ ಸಭೆಯು ನವಂಬರ್ 7 ರಂದು ರಾಜೀವ್ ಗಾಂಧೀ ಸಭಾಭವನದಲ್ಲಿ ನಡೆಯಿತು . ಈದ್ ಮೀಲಾದ್ ಹಬ್ಬವನ್ನ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಆಚರಣೆ ಮಾಡಿ,ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡದೆ,ಮೀಲಾದ್ ಜಾಥಾ ನಡೆಸುವವರೇ ಇದ್ದರೆ ಅನುಮತಿ ಪಡೆಯಿರಿ ,ವಾಹನ ಜಾಥಕ್ಕೆ ಅವಕಾಶ ವಿರಲ್ಲ ಎಂದು ಹೇಳಿದರು. […]



