ನ್ಯೂಸ್ ಕಡಬ

ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ

(ನ್ಯೂಸ್ ಕಡಬ) newskadaba.com .ಪೆರಾಬೆ,  ಡಿ. 25  ಯಾವುದೇ ಸಂಸ್ಥೆಯ ಇತಿಹಾಸ ತಿಳಿದು ಕೆಲಸ ನಿರ್ವಹಿಸಿದರೆ ಇತಿಹಾಸ ನಿರ್ಮಿಸಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್ ಅಂಗಾರ ನುಡಿದರು. ಅವರು ಸೋಮವಾರ ರಾತ್ರಿ ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಸ್ವಾರ್ಥ ಬಿಟ್ಟು ಸಮರ್ಪಣಾ ಭಾವದಿಂದ ಸೇವೆ ಮಾಡಿದಾಗ ಭವಿಷ್ಯದಲ್ಲಿ ಇತಿಹಾಸ ನಿರ್ಮಿಸ ಬಹುದು. ಸರಕಾರಿ ಶಾಲೆಗಳನ್ನು ಕ್ಷೇತ್ರದ ಶಾಸಕರಿಂದ ಉಳಿಸಿಕೊಳ್ಳಲು ಅಸಾಧ್ಯವಾದರೂ ಗ್ರಾಮದ ಜನತೆಯಿಂದ ಮಾತ್ರ ಸಾಧ್ಯ. ಇದಕ್ಕಾಗಿ ಗ್ರಾಮದ […]

ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ Read More »

ಕರಾವಳಿ

ಗಂಡಿಬಾಗಿಲು: ಖುತುಬಿಯ್ಯತ್ ನೇರ್ಚೆ 45ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,  ಡಿ. 25.  ಊರು, ಸಮಾಜದ ಅಭಿವೃದ್ಧಿಯ ಚಿಂತನೆಯೊಂದಿಗೆ ಒಳ್ಳೆಯ ಕೆಲಸ ಮಾಡಿದರೆ ಅಂತಹವರಿಗೆ ಅಲ್ಲಾಹುವಿನ ಕಡೆಯಿಂದ ಸಹಾಯ ದೊರಕುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಎನ್.ಪಿ.ಎಂ. ಜಲಾಲುದ್ದೀನ್ ತಂಙಳ್ ಕುನ್ನುಂಗೈ ಹೇಳಿದರು.ಅವರು ಡಿ. 23ರಂದು ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಕಮಿಟಿ, ಖುತುಬಿಯ್ಯಾ ಜುಮಾ ಮಸೀದಿ ಗಂಡಿಬಾಗಿಲು ಇಲ್ಲಿ ಪ್ರತಿ ತಿಂಗಳು ಆಚರಿಸಿಕೊಂಡು ಬರುತ್ತಿರುವ ಖುತುಬಿಯ್ಯತ್ ನೇರ್ಚೆಯ 45ನೇವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗಂಡಿಬಾಗಿಲು ಖುತುಬಿಯ್ಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಅನಸ್ ಅಲ್‍ಹಾದಿ ತಂಙಳ್

ಗಂಡಿಬಾಗಿಲು: ಖುತುಬಿಯ್ಯತ್ ನೇರ್ಚೆ 45ನೇ ವಾರ್ಷಿಕೋತ್ಸವ Read More »

ಕರಾವಳಿ

ಕಡಬದಲ್ಲಿ ಮದ್ಯವರ್ಜನ ಶಿಬಿರ – ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ,  ಡಿ.25. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪುತ್ತೂರು ತಾಲೂಕಿನಲ್ಲಿ ನಡೆಯುವ 51ನೇ ಮದ್ಯವರ್ಜನ ಶಿಬಿರ ಕಡಬ ಒಕ್ಕಲಿಗ ಗೌಡ ಸಂಘದ ಸಭಾಭವನದಲ್ಲಿ ಜ.29ರಿಂದ ಫೆ.5ರ ತನಕ ನಡೆಯಿದ್ದು ಇದರ ಪೂರ್ವಭಾವಿ ಸಭೆ ಸೋಮವಾರ ಒಕ್ಕಲಿಗ ಸಭಾಭವನದಲ್ಲಿ ನಡೆಯಿತು.ನೂತನವಾಗಿ ಆಯ್ಕೆಯಾದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮಾತನಾಡಿ ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನು ಕಳೆದುಕೊಂಡಿರುವ ಅನೇಕ ಬಡ ಕುಟುಂಬಗಳಿಗೆ ಬದುಕಿನ ಬೆಳಕನ್ನು ನೀಡುವ ಶ್ರೀ ಕ್ಷೇತ್ರ

ಕಡಬದಲ್ಲಿ ಮದ್ಯವರ್ಜನ ಶಿಬಿರ – ಪೂರ್ವಭಾವಿ ಸಭೆ Read More »

ಕರಾವಳಿ

ರಾಷ್ಟ್ರೀಯ ದಂತ ವೈದ್ಯರ ದಿನ ► ಭಾರತ ದೇಶ ಕಂಡ ಮಹಾನ್ ದಂತ ವೈದ್ಯ ಡಾ|| ರಫಿಯುದ್ದೀನ್ ಅಹ್ಮದ್

(ನ್ಯೂಸ್ ಕಡಬ) newskadaba.com ಕಡಬ,  ಡಿ.25.ಭಾರತ ದೇಶ ಕಂಡ ಮಹಾನ್ ಅಪ್ರತಿಮ ದಂತ ವೈದ್ಯರಲ್ಲಿ ಒಬ್ಬರಾದ ಡಾ|| ರಫಿಯುದ್ದೀನ್ ಅಹ್ಮದ್ (1890-1965) ಡಿಸೆಂಬರ್ 24ರಂದು ಪಶ್ಚಿಮ ಬಂಗಾಲದ ಬರ್ದಾನ್‍ಪುರ ಎಂಬಲ್ಲಿ ಜನ್ಮ ತಾಳಿದರು. 1908ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಬಳಿಕ 1909ರಲ್ಲಿ ಅಮೇರಿಕಾದ ಲೋವಾ ಯುನಿವರ್ಸಿಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು 1915ರಲ್ಲಿ ದಂತ ವೈದ್ಯಕೀಯ ಪದವಿ ಪಡೆದರು. 1918ರವರೆಗೆ ಬೊಸ್ಟನ್ ಮತ್ತು ಮೆಸ್ಸಾಚುಸೆಟ್ಸ್‍ನಲ್ಲಿ ಕೆಲಸ ಮಾಡಿದರು. ಅಮೇರಿಕಾದಲ್ಲಿ ನೆಲೆಸಿ ಸಾಕಷ್ಟು

ರಾಷ್ಟ್ರೀಯ ದಂತ ವೈದ್ಯರ ದಿನ ► ಭಾರತ ದೇಶ ಕಂಡ ಮಹಾನ್ ದಂತ ವೈದ್ಯ ಡಾ|| ರಫಿಯುದ್ದೀನ್ ಅಹ್ಮದ್ Read More »

ವಿಶೇಷ ಲೇಖನಗಳು

ಕೋಡಿಂಬಾಳ: ಸ.ಉ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ  ► ಊರವರ ಸಹಕಾರವಿದ್ದಾಗ ಸರಕಾರಿ ಶಾಲೆಗಳ ಉಳಿವು ಸಾಧ್ಯ – ಪಿ.ಪಿ.ವರ್ಗೀಸ್

(ನ್ಯೂಸ್ ಕಡಬ) newskadaba.com ಕಡಬ,  ಡಿ.25.ಕೋಡಿಂಬಾಳ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ದ.22ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪುಟಾಣಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಸರಕಾರ ಇಂದು ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಅವರಿಗೆ ಬೇಕಾದ ಪೌಷ್ಠಿಕ ಆಹಾರ ವಿತರಿಸುತ್ತಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದು, ಸರಕಾರ ಈ ರೀತಿಯಾಗಿ

ಕೋಡಿಂಬಾಳ: ಸ.ಉ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ  ► ಊರವರ ಸಹಕಾರವಿದ್ದಾಗ ಸರಕಾರಿ ಶಾಲೆಗಳ ಉಳಿವು ಸಾಧ್ಯ – ಪಿ.ಪಿ.ವರ್ಗೀಸ್ Read More »

ಕರಾವಳಿ

ಕಡಬ: ಕರ್ನಾಟಕ ದ.ಸಂ.ಸ. ವತಿಯಿಂದ ಅಂಬೇಡ್ಕರ್ ಪರಿನಿಬ್ಬಾನ ದಿನಾಚರಣೆ

(ನ್ಯೂಸ್ ಕಡಬ) newskadaba.com  ಡಿ.  25. ಕಡಬ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ. ಕೃಷ್ಣಪ್ಪ ಸ್ಥಾಪಿತ 47.74/75) ಕಡಬ ತಾಲ್ಲೂಕು ಶಾಖೆ ವತಿಯಿಂದ 62 ನೇ ವರ್ಷದ ಅಂಬೇಡ್ಕರ್ ಪರಿನಿಬ್ಬಾನದಿನಾಚರಣೆಯನ್ನು ಕಡಬದ ಅಂಬೇಡ್ಕರ್ ಭವನದಲ್ಲಿ ದ.16ರಂದು ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡ ಆನಂದ ಮಿತ್ತಬೈಲ್ ಬಾಬಾ ಸಾಹೇಬರು ತನ್ನ ಇಡೀ ಜೀವನವನ್ನೇ ನಮ್ಮ ಏಳಿಗೆಗಾಗಿ ಮುಡಿಪಿಟ್ಟ ಧೀಮಂತ ವಿಶ್ವ ನಾಯಕರಾಗಿದ್ದು, ತನ್ನ ಮಗನ ಶವಕ್ಕೆ ಹಾಕಲು ಬಟ್ಟೆ ಇಲ್ಲದಿದ್ದರೂ

ಕಡಬ: ಕರ್ನಾಟಕ ದ.ಸಂ.ಸ. ವತಿಯಿಂದ ಅಂಬೇಡ್ಕರ್ ಪರಿನಿಬ್ಬಾನ ದಿನಾಚರಣೆ Read More »

ಕರಾವಳಿ

ಕಡಬದಿಂದ ಶಬರಿಮಲೆಗೆ ಪಾದಯಾತ್ರೆ

(ನ್ಯೂಸ್ ಕಡಬ) newskadaba.com  ಡಿ.  25. ಕಡಬ. ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಡಬದಿಂದ ನಾಲ್ವರು ಭಕ್ತರು ಪಾದಯಾತ್ರೆಯನ್ನು ಸೋಮವಾರದಿಂದ ಕೈಗೊಂಡಿದ್ದಾರೆ.ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ್ಯದರ್ಶಿ ಮನೋಹರ್ ರೈ ಬೆದ್ರಾಜೆ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕಳಾರ ಹಾಗೂ ಕಡಬ ಶ್ರೀ ದೇವಿ ಪ್ರೈಬ್ರೀಕೇಶನ್‍ನ ಸಹನ್ ಮತ್ತು ಇಚ್ಲಂಪಾಡಿಯ ವೇಣುಗೋಪಾಲ ರೈ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟವರು. ಸೋಮವಾರ ಕಡಬ ಬೆದ್ರಾಜೆ ಮನೆಯಲ್ಲಿ ಗೋಳಿಯಡ್ಕ ಶ್ರೀ ರವೀಂದ್ರನ್ ಗುರುಸ್ವಾಮಿಯವರ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಹೊರಟಿದ್ದಾರೆ, ಮನೋಹರ್

ಕಡಬದಿಂದ ಶಬರಿಮಲೆಗೆ ಪಾದಯಾತ್ರೆ Read More »

ಕರಾವಳಿ

ಹೊಸ ವರ್ಷದಿಂದ ಹೊಸ ನಿಯಮ ► ಕಾರು ಕೊಳ್ಳುವವರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ : !

(ನ್ಯೂಸ್ ಕಡಬ) newskadaba.com  ಡಿ.  22.ನವದೆಹಲಿ :ದಿಲ್ಲಿ ಟ್ರಾನ್ಸ್ ಪೋರ್ಟ್  ಇಲಾಖೆ ಮೂರು ಮುನಿಸಿಪಲ್ ಕಾರ್ಪೊರೇಷನ್ಗಳಲ್ಲಿ  ಒಂದು ಹೊಸ ನಿಯಮವನ್ನುಜಾರಿ ತರುತ್ತಿದೆ.ದಿಲ್ಲಿಯಲ್ಲಿ ಕಾರು ಕೊಳ್ಳಲು 2019ನೇ ಸಾಲಿನಿಂದ ಒನ್ ಟೈಮ್ ಪಾರ್ಕಿಂಗ್ ಶುಲ್ಕವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭರಿಸಬೇಕಿದೆ.  ಸದ್ಯ ಇರುವ ಶುಲ್ಕಕ್ಕಿಂತ 18 ಪಟ್ಟು ಏರಿಕೆಯಾಗಲಿದೆಯಂತೆ.ಟ್ರಾನ್ಸ್ ಪೋರ್ಟ್ ಕಮಿಷನರ್  ವರ್ಷ ಜೋಶಿ ಮಾಹಿತಿ ನೀಡಿದ್ದು,  ಜನವರಿ 1, 2019ರಿಂದ ನೂತನ ಪಾರ್ಕಿಂಗ್ ಶುಲ್ಕ ನೀತಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ. ಸದ್ಯ ಪಾರ್ಕಿಂಗ್ ಶುಲ್ಕವು 6 ಸಾವಿರದಿಂದ 75 ಸಾವಿರದವರೆಗೂ

ಹೊಸ ವರ್ಷದಿಂದ ಹೊಸ ನಿಯಮ ► ಕಾರು ಕೊಳ್ಳುವವರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ : ! Read More »

ಕರಾವಳಿ

ಬೆಳ್ಳಂಬೆಳಗ್ಗೆ ಆಲಂಕಾರಿನಲ್ಲಿ ಬಂದಿಳಿದ ಚಲನಚಿತ್ರ ನಟ ಹುಚ್ಚ ವೆಂಕಟೇಶ್ ► ಹುಚ್ಚುಚ್ಚಾಗಿ ಹಾಡುತ್ತಾ, ತನ್ನಷ್ಟಕ್ಕೇ ನಗಾಡುತ್ತಾ ಅಭಿಮಾನಿಗಳನ್ನು ರಂಜಿಸಿದ ವೆಂಕಟ್

(ನ್ಯೂಸ್ ಕಡಬ) newskadaba.com  ಆಲಂಕಾರು,  ಡಿ. 21.  ಚಲನಚಿತ್ರ ನಟ ಹುಚ್ಚಾ ವೆಂಕಟೇಶ್ ಆಲಂಕಾರು ಪೇಟೆಯಲ್ಲಿ ಬೆಳ್ಳಂಬೆಳಿಗ್ಗೆ ಸುತ್ತಾಡಿದ ಘಟನೆ ಶುಕ್ರವಾರ ನಡೆದಿದೆ. ಮಡಿಕೇರಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರಗೆ ನಡೆದ ಚಲನಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಮೂಲಕ ಉಡುಪಿಗೆ ಹೊರಟಿದ್ದರು. ಬೆಳಿಗ್ಗೆ ಏಳು ಗಂಟೆಯ ಸಮಯಕ್ಕೆ ಕಾರನ್ನು ತಾನೇ ಚಲಾಯಿಸಿಕೊಂಡು ಆಲಂಕಾರಿಗೆ ಆಗಮಿಸಿದ್ದರು. ಕಾರಿನಿಂದ ಇಳಿದ ವೆಂಕಟೇಶ್ ಥೇಟ್ ಹುಚ್ಚನಂತೆ ಕೈಯನ್ನು ಹಿಂದಕ್ಕೆ ಕಟ್ಟಿಕೊಂಡು ಜೋರಾಗಿ ಹಾಡು ಹೇಳಿಕೊಂಡು ತನ್ನಷ್ಟಕ್ಕೆ ಮಾತನಾಡಿಕೊಂಡು ಜೊತೆಗೆ ನಗುತ್ತಾ ರಸ್ತೆಯ

ಬೆಳ್ಳಂಬೆಳಗ್ಗೆ ಆಲಂಕಾರಿನಲ್ಲಿ ಬಂದಿಳಿದ ಚಲನಚಿತ್ರ ನಟ ಹುಚ್ಚ ವೆಂಕಟೇಶ್ ► ಹುಚ್ಚುಚ್ಚಾಗಿ ಹಾಡುತ್ತಾ, ತನ್ನಷ್ಟಕ್ಕೇ ನಗಾಡುತ್ತಾ ಅಭಿಮಾನಿಗಳನ್ನು ರಂಜಿಸಿದ ವೆಂಕಟ್ Read More »

ಕರಾವಳಿ

ಉಪ್ಪಿನಂಗಡಿ : ಪ್ರತಿಭಾನ್ವಿತ ವಿದ್ಯಾರ್ಥಿಗೆ ದಾನಿಗಳ ನೆರವು ಬೇಕಾಗಿದೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,  ಡಿ. 22.  ಉಪ್ಪಿನಂಗಡಿ:  ಪ್ರತಿಭಾನ್ವಿತ ವಿದ್ಯಾರ್ಥಿ ಹೆಸರು ವಿಜೇತ್ (19) . ಪ್ರತಿಭೆಗೆ ತಕ್ಕಂತೆ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಮುಂದಾದ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಶಿಕ್ಷಣವನ್ನು ಪಡೆಯುತ್ತಿರುವ ಈತನಿಗೆ ಕಾಡಿದ ರಕ್ತ ಸಂಬಂಧಿ ಕಾಯಿಲೆ ಇದೀಗ ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ ಒಳಗಾಗುವಂತೆ ಮಾಡಿದೆ. ಶಿಕ್ಷಣಕ್ಕಾಗಿ ಮಾಡಿದ ಸಾಲದ ಚಿಂತೆಯಲ್ಲಿದ್ದ ಆತನ ಕುಟುಂಬ ಇದೀಗ ಸುಮಾರು 30 ಲಕ್ಷ ರೂ ವೆಚ್ಚದ ಹೊಸ ಚಿಕಿತ್ಸ್ಸೆಯನ್ನು ನೀಡಲು ಅಸಹಾಯಕತೆಗೆ ಒಳಗಾಗಿದ್ದು,

ಉಪ್ಪಿನಂಗಡಿ : ಪ್ರತಿಭಾನ್ವಿತ ವಿದ್ಯಾರ್ಥಿಗೆ ದಾನಿಗಳ ನೆರವು ಬೇಕಾಗಿದೆ Read More »

ಕರಾವಳಿ
Scroll to Top