ನ್ಯೂಸ್ ಕಡಬ

ಸುಳ್ಯದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ►ಕೇರಳದ ಲಾಟರಿಯಲ್ಲಿ ಸಿಕ್ಕಿತ್ತು 80 ಲಕ್ಷ ರೂ. ಬಂಪರ್ ಬಹುಮಾನ

(ನ್ಯೂಸ್ ಕಡಬ) newskadaba.com.ಸುಳ್ಯ, ಜ.1. ಸುಳ್ಯತಾಲೂಕಿನ ದುಗಲಡ್ಕದ ಈಶ್ವರಡ್ಕ ಶಿವಕುಮಾರ್ ಎಂಬವರು ದುಗಲಡ್ಕದಲ್ಲಿ ಸುಮಾರು 15 ವರ್ಷ ದಿಂದ ರಿಕ್ಷಾ ಚಾಲಕರಾಗಿರುವ ಹಾಗೂ ಅವರು ಸುಳ್ಯ ಪಟ್ಟಣ ಪಂಚಾಯಿತಿ ದುಗ್ಗಲಡ್ಕ ವಾರ್ಡ್ನ ಪಂಪ್ ಆಪರೇಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಜೀವನದಲ್ಲಿ ಅವರೇ ಊಹಿಸಲಾಗದ ಅದೃಷ್ಟ ಘಟನೆ ನಡೆಯಿತು. ದೇವರ ದರ್ಶನಕ್ಕೆಂದು ಗಡಿನಾಡು ಕಾಸರಗೋಡು ಜಿಲ್ಲೆಗೆ ಹೋಗಿದ್ದ ಸಂದರ್ಭದಲ್ಲಿ ಖರೀದಿಸಿದ್ದ ಕೇರಳ ಲಾಟರಿಗೆ 80 ಲಕ್ಷ ರೂ. ಬಂಪರ್ ಬಹುಮಾನ ಹೊಡೆದಿರುವ ಪ್ರಸಂಗ ನಡೆದಿದೆ. ಡಿ.29ರಂದು ಅಡೂರು […]

ಸುಳ್ಯದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ►ಕೇರಳದ ಲಾಟರಿಯಲ್ಲಿ ಸಿಕ್ಕಿತ್ತು 80 ಲಕ್ಷ ರೂ. ಬಂಪರ್ ಬಹುಮಾನ Read More »

ಕರಾವಳಿ

ಕುಟ್ರುಪಾಡಿ: ಗ್ರಾಮ ಪಂಚಾಯತ್‍ವತಿಯಿಂದ ರಾಮಕೃಷ್ಣ ಮಿಷನ್ ಹಾಗೂ ದ.ಕ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com.ಕಡಬ, ಜ.1.ಕುಟ್ರುಪಾಡಿ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 30.12.2018ರಂದು ಪೂರ್ವಾಹ್ನ 7.00ಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ.ಕೆ.ಗೋಗಟೆ ಇವರು ಸ್ವಚ್ಚ ಗ್ರಾಮ ಅಭಿಯಾನ_ ಸ್ವಚ್ಚ ಕುಟ್ರುಪಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಇಂದು ನಮ್ಮೊಂದಿಗೆ ಕೈಜೋಡಿಸಿದ್ದು, ನಮ್ಮ ಗ್ರಾಮ ಸ್ವಚ್ಚ ಗ್ರಾಮವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ವಿವಿಧ ಕಾಲನಿಯ ಗ್ರಾಮಸ್ಥರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಪ್ರತಿ ತಿಂಗಳ

ಕುಟ್ರುಪಾಡಿ: ಗ್ರಾಮ ಪಂಚಾಯತ್‍ವತಿಯಿಂದ ರಾಮಕೃಷ್ಣ ಮಿಷನ್ ಹಾಗೂ ದ.ಕ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಅಡೆಂಜ: ಶಾಲಾ ಸುವರ್ಣ ಮಹೋತ್ಸವ ಉದ್ಘಾಟನೆ► ರಾಷ್ಟ್ರ ನಿರ್ಮಾಣ, ರಕ್ಷಣೆಯ ಶಿಕ್ಷಣ ಅಗತ್ಯ – ನಳಿನ್ ಕುಮಾರ್ ಕಟೀಲ್

(ನ್ಯೂಸ್ ಕಡಬ) newskadaba.com.ಕಡಬ, ಡಿ.31. ಮಾನವೀಯತೆ, ಮೌಲ್ಯಾಧಾರಿತ ಮಹಾ ಶಿಕ್ಷಣದೊಂದಿಗೆ ರಾಷ್ಟ್ರ ನಿರ್ಮಾಣದ, ದೇಶ ರಕ್ಷಣೆಯ ಶಿಕ್ಷಣ ನಮಗೆ ಇಂದು ಅಗತ್ಯವಾಗಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಡಿ.29ರಂದು ನೂಜಿಬಾಳ್ತಿಲ ಗ್ರಾಮದ ಅಡೆಂಜ ಕಿರಿಯ ಪ್ರಾಥಮಿಕ ಶಾಲಾ ಸುವರ್ಣ ಸಂಭ್ರಮ ಡಿಸೆಂಬರ್ 2018 ಕಾರ್ಯಕ್ರಮದಲ್ಲಿ ಶಾಲಾ ಕಂಪ್ಯೂಟರ್ ಹಾಗೂ ಗ್ರಂಥಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಶತಮಾನಗಳ ಶಾಲೆಗಳನ್ನು ಮೀರಿಸುವಂತಹ ಈ ಗ್ರಾಮೀಣ ಭಾಗದ ಕಿ.ಪ್ರಾ.ಶಾಲೆಯ ಕಾರ್ಯ ವೈಖರಿ ಶ್ಲಾಘನೀಯವಾಗಿದೆ. ಸಮಾಜದ ಜೊತೆ ಉತ್ತಮ

ಅಡೆಂಜ: ಶಾಲಾ ಸುವರ್ಣ ಮಹೋತ್ಸವ ಉದ್ಘಾಟನೆ► ರಾಷ್ಟ್ರ ನಿರ್ಮಾಣ, ರಕ್ಷಣೆಯ ಶಿಕ್ಷಣ ಅಗತ್ಯ – ನಳಿನ್ ಕುಮಾರ್ ಕಟೀಲ್ Read More »

ಕರಾವಳಿ

ನೂಜಿಬಾಳ್ತಿಲ: ಉ.ಹಿ.ಪ್ರಾ ಶಾಲೆಗೆ ಸಂಸದ ನಳಿನ್ ಕುಮಾರ್ ಬೇಟಿ ►ಶಾಲಾ ಕಟ್ಟಡ ದುರಸ್ತಿಗೆ ಎಸ್.ಡಿ.ಎಂ.ಸಿ.ಯಿಂದ ಮನವಿ

(ನ್ಯೂಸ್ ಕಡಬ) newskadaba.com.ಕಡಬ, ಡಿ.31. ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಡಿ.29ರಂದು ಬೇಟಿ ನೀಡಿ, ಶಾಲಾ ಸಮಸ್ಯೆಗಳ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಹಾಗೂ ಶಾಲಾ ಮುಖ್ಯ ಶಿಕ್ಷಕ ಶ್ರೇಯಾಂಸ್ ರೊಂದಿಗೆ ಚರ್ಚಿಸಿದರು.ಶಾಲಾ ಹಳೆಯ ಕಟ್ಟಡ ಸಂಪೂರ್ಣ ನಾದುರಸ್ತಿಯಲ್ಲಿದ್ದು, ಹೊಸ ಕಟ್ಟಡಕ್ಕೆ ಸಹಾಯಧನ ಒದಗಿಸುವಂತೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ, ಮುಖ್ಯ ಗುರು ಶ್ರೇಯಾಂಸ್ ಸಂಸದರಿಗೆ ಮನವಿ ಮಾಡಿದರು. ಸರಕಾರಿ ಶಾಲೆಗಳಿಗೆ ಬೇಕಾದ ರೀತಿಯಲ್ಲಿ ಸಹಾಯ

ನೂಜಿಬಾಳ್ತಿಲ: ಉ.ಹಿ.ಪ್ರಾ ಶಾಲೆಗೆ ಸಂಸದ ನಳಿನ್ ಕುಮಾರ್ ಬೇಟಿ ►ಶಾಲಾ ಕಟ್ಟಡ ದುರಸ್ತಿಗೆ ಎಸ್.ಡಿ.ಎಂ.ಸಿ.ಯಿಂದ ಮನವಿ Read More »

ಕರಾವಳಿ

ಆತೂರು ದಿಕ್ರ್ ಹಲ್ಖಾ ವಾರ್ಷಿಕೋತ್ಸವ ► ದಿಕ್ರ್, ಸ್ವಲಾತ್ ಹೇಳುವಾತನ ಜೀವನ ಧನ್ಯ ಆಗಲಿದೆ-ಮುರ್ಷಿದ್ ಫೈಝಿ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಡಿ.31  ದಿಕ್ರ್, ಸ್ವಲಾತ್‍ಗೆ ಅದರದ್ದೇ ಆದ ಪಾವಿತ್ರತೆ ಇದೆ, ಅದನ್ನು ಹೇಳುವಾತ ಸ್ವರ್ಗವಾಸಿ ಆಗಲಿದ್ದಾನೆ, ಆತನ ಜೀವನ ಧನ್ಯ ಆಗಲಿದೆ ಎಂದು ಆತೂರುಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುಹಿಯುದ್ದೀನ್ ಮುರ್ಷಿದ್ ಫೈಝಿ ಹೇಳಿದರು.ಅವರು ಡಿ. 29ರಂದು ಆತೂರು ಬದ್ರಿಯಾ ಜುಮಾ ಮಸೀದಿ ವತಿಯಿಂದ ಪ್ರತೀ ತಿಂಗಳು ಆಚರಿಸಿಕೊಂಡು ಬರುತ್ತಿರುವ ದಿಕ್ರ್ ಹಲ್ಖಾ ಇದರ 18ನೇ ವಾರ್ಷಿಕೋತ್ಸವ ಸಮಾರಂಭದ ಸಲುವಾಗಿ ಹಮ್ಮಿಕೊಳ್ಳಲಾದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಹಳಷ್ಟು ಮಂದಿ ದಿಕ್ರ್ ನಮಾಜು ಬಳಿಕ

ಆತೂರು ದಿಕ್ರ್ ಹಲ್ಖಾ ವಾರ್ಷಿಕೋತ್ಸವ ► ದಿಕ್ರ್, ಸ್ವಲಾತ್ ಹೇಳುವಾತನ ಜೀವನ ಧನ್ಯ ಆಗಲಿದೆ-ಮುರ್ಷಿದ್ ಫೈಝಿ Read More »

ಕರಾವಳಿ

ನೂಜಿಬಾಳ್ತಿಲ: ಶಾಲಾ ವಾರ್ಷಿಕ ಕ್ರೀಡೋತ್ಸವ ಸಮಾರಂಭ.

(ನ್ಯೂಸ್ ಕಡಬ) newskadaba.com.ಕಡಬ, ಡಿ.29  ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಕ್ರಿಡೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಡಿ.28ರಂದು ನಡೆಯಿತು. ಶಾಲೆಗೆ ನೂತನವಾಗಿ ನಿರ್ಮಿಸಲಾದ ಆವರಣಗೋಡೆಯನ್ನು ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಉದ್ಘಾಟಿಸಿ ಮಾತನಾಡಿ, ನೂಜಿಬಾಳ್ತಿಲ ಗ್ರಾ.ಪಂ. ಉ.ಹಿ.ಪ್ರಾ. ಶಾಲೆ ಹಾಗೂ ಇಲ್ಲಿಯ ಅಂಗನವಾಡಿ ಕೇಂದ್ರ ಒಳಗೊಂಡಂತೆ ಅತ್ಯುತ್ತಮವಾದ ಆವರಣ ಗೋಡೆ(ಕಂಪೌಂಡ್) ನಿರ್ಮಿಸಿದ್ದು ಶಾಲಾ ಪ್ರಮುಖ ದ್ವಾರವನ್ನು ಕೂಡ ರಚಿಸಲಾಗಿದೆ. ಇವತ್ತು ಈ ಕಂಪೌಂಡ್ ಉದ್ಘಾಟನೆ ನೆರವೇರಿಸುವ ಮೂಲಕ ಶಾಲಾ ವಠಾರದಲ್ಲಿ ಸಾರ್ವಜನಿಕವಾಗಿ

ನೂಜಿಬಾಳ್ತಿಲ: ಶಾಲಾ ವಾರ್ಷಿಕ ಕ್ರೀಡೋತ್ಸವ ಸಮಾರಂಭ. Read More »

ಕರಾವಳಿ

ಕುಟ್ರುಪ್ಪಾಡಿ: ಬೈಕ್ ಗಳ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com.,ಪುತ್ತೂರು, ಡಿ.29  ಪುತ್ತೂರು ತಾಲೂಕು ಕುಟ್ರುಪ್ಪಾಡಿ  ಗ್ರಾಮ ನೆಲಿವಿಳ ಮನೆ,  ಜಾನ್ಸನ್  ಎಂಬವರ ಪುತ್ರ  ಅಜೀಶ್ ಜಾನ್ಸನ್ ಎಂಬುವರು ದಿನಾಂಕ  26-12-2018 ರಂದು ರಾತ್ರಿ ಸುಮಾರು 12:00 ಗಂಟೆಗೆ ತನ್ನ ಅಕ್ಕ ಅನುಷಾ ರವರನ್ನು ತನ್ನ ಬೈಕ್ ನಂ: KA-21,L-7262, ನಲ್ಲಿ  ಕುಳ್ಳಿರಿಸಿಕೊಂಡು ಸಂಯುಕ್ತ ಕ್ರಿಸ್ಮಸ್ ಆಚರಣೆಯನ್ನು ಮುಗಿಸಿಕೊಂಡು ಕಡಬದಿಂದ ಮನೆ ಕಡೆಗೆ ಹೋಗುತ್ತಿದ್ದರು. ಆ  ಸಮಯದಲ್ಲಿ  ಪುತ್ತೂರು ತಾಲೂಕು ಕಡಬ ಗ್ರಾಮದ ಮುಳಿಮಜಲು ಎಂಬಲ್ಲಿಗೆ ತಲುಪಿದಾಗ, ಕುಟ್ರುಪ್ಪಾಡಿ ಗ್ರಾಮದ ಬಿನು ಎಂಬವರು ತನ್ನ ಬೈಕ್

ಕುಟ್ರುಪ್ಪಾಡಿ: ಬೈಕ್ ಗಳ ನಡುವೆ ಢಿಕ್ಕಿ Read More »

ಕರಾವಳಿ

ಬಂಟ್ವಾಳ: ನಾಟಕ ನೋಡಲು ಹೋಗಿ ಬಂದವನಿಗೆ ಕಾದಿತ್ತು ಶಾಕಿಂಗ್ ನ್ಯೂಸ್ !

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಡಿ.29.ಬಂಟ್ವಾಳ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮ,ಮುಂಡಡ್ಕ ಮನೆ ಕರುಣಕರ ಶೆಟ್ಟಿ ಪ್ರಾಯ  (50)   ಮುಂಡಡ್ಕ ಮನೆ, ಎಂಬವರು ದಿನಾಂಕ 25-12-2018 ರಂದು ಸಮಯ  ರಾತ್ರಿ 11.30 ಗಂಟೆಗೆ ತಮ್ಮ ಬಾಬ್ತು  ಬೈಕ್ KA 19 EY 7945 ನೇದನ್ನು ಕಳ್ಳಿಗೆ ಗ್ರಾಮದ ತೊಡಂಬಿಲ ಚರ್ಚ್ ಬಳಿ ನಿಲ್ಲಿಸಿ, ಚರ್ಚ್ ವಠಾರದಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಹೋಗಿದ್ದು, ನಂತರ ನಾಟಕ ಮುಗಿದ ನಂತರ ಸದ್ರಿ ಬೈಕನ್ನು ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ಸದ್ರಿ ಮೊಟರ್ ಸೈಕಲ್

ಬಂಟ್ವಾಳ: ನಾಟಕ ನೋಡಲು ಹೋಗಿ ಬಂದವನಿಗೆ ಕಾದಿತ್ತು ಶಾಕಿಂಗ್ ನ್ಯೂಸ್ ! Read More »

ಕರಾವಳಿ

ನೇರೆಂಕಿಗುತ್ತು: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ

(ನ್ಯೂಸ್ ಕಡಬ) newskadaba.com. ಕಡಬ,ಡಿ.29. ಭೂತಾರಾಧನೆಯಲ್ಲಿ ನಂಬಿಕೆಯೇ ಪ್ರಧಾನವಾಗಿದೆ. ಪೂಜೆ ಮಾಡುತ್ತಿರುವಂತೆಯೇ ಅಲ್ಲಿ ಸಾನಿಧ್ಯ ಸನ್ನಿಹಿತವಾಗುವುದೇ ದೈವರಾಧನೆಯ ವಿಶೇಷ ಕಲ್ಪನೆಯಾಗಿದೆ. ಇದು ಹಂತ ಹಂತವಾಗಿ ನಮ್ಮ ಮುಂದೆ ಪ್ರಕಟಗೊಳ್ಳುತ್ತದೆ ಎಂದು ಜಾನಪದ ವಿದ್ವಾಂಸ ಎಲ್ಲೂರು ಕೆ.ಲಕ್ಷ್ಮೀನಾರಾಯಣಕುಂಡಂತಾಯರವರು ಹೇಳಿದರು.ಕಡಬ ತಾಲೂ ಕು ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ಶ್ರೀ ದೈವಗಳ ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವದ ಪ್ರಯುಕ್ತ ನಡೆದ ಧರ್ಮಜಾಗೃತಿ ಸಭೆಯಲ್ಲಿ ಮುಖ್ಯ ಉಪನ್ಯಾಸ ನೀಡಿದರು. ಈಗ ದೈವರಾಧಾನೆಯಲ್ಲೂ

ನೇರೆಂಕಿಗುತ್ತು: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವತಿಯಿಂದ ವಾಳ್ಯ ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ

(ನ್ಯೂಸ್ ಕಡಬ) newskadaba.com. ಕಡಬ,ಡಿ.28. ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಕುಟ್ರುಪಾಡಿ ಗ್ರಾಮದ ವಾಳ್ಯ ಕಿ.ಪ್ರಾ.ಶಾಲೆಯಲ್ಲಿ ಒಂದು ವಾರಗಳ ಕಾಲ ನಡೆಯುವ ಎನ್ನೆಸೆಸ್ಸ್ ಶಿಬಿರದ ಉದ್ಘಾಟನೆ ನಡೆಯಿತು.ಕುಟ್ರುಪಾಡಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಕರುಣಾಕರ ಗೋಗಟೆ ಉದ್ಘಾಟಿಸಿ ಮಾತನಾಡಿ,    ಶಿಬಿರ ವಿದ್ಯಾರ್ಥಿಗಳಿಗೆ ಸಮರ್ಪಣಾ ಭಾವವನ್ನು ತಿಳಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಬಿರದಲ್ಲಿನ ಶಿಸ್ತು ಸಂಯವನ್ನು ತನ್ನ ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಉತ್ತಮ ನಾಗರೀಕನಾಗಿ ಬಾಳಬೇಕು ಎಂದರು. ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಇಚ್ಛಾಶಕ್ತಿಯೊಂದಿಗೆ ಎಲ್ಲರೂ

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವತಿಯಿಂದ ವಾಳ್ಯ ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ Read More »

ಕರಾವಳಿ
Scroll to Top