ನ್ಯೂಸ್ ಕಡಬ

ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ನ.11. ಅತಿವೇಗದಿಂದ ಬಂದ ಬೈಕೊಂದು ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಚಿಲ್ಲಾಪುರ ಗೇಟ್ ಬಳಿ ಶುಕ್ರವಾರ ತಡರಾತ್ರಿ  ನಡೆದಿದೆ. ಹಲಗೂರಿನ ಪ್ರತಾಪ್(23) ಬಾಣಸಮುದ್ರದ ಶಶಿ(24) ಮೃತ ದುರ್ದೈವಿಗಳು. ಘಟನೆಯಿಂದ ಪ್ರತಾಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಶಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅತಿವೇಗವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು Read More »

ಕರಾವಳಿ

ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ

(ನ್ಯೂಸ್ ಕಡಬ) newskadaba.com ಕಡಬ, ನ.09. ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ವರ್ಷದ ‘ಮೆಟ್ರಿಕ್ ಮೇಳ’ ಮಕ್ಕಳ ಮಾರುಕಟ್ಟೆ ಬುಧವಾರ ಯಶಸ್ವಿಯಾಗಿ ನಡೆಯಿತು. ಗ್ರಾಮೀಣ ಪ್ರದೇಶವಾದ ಸಬಳೂರು ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಗೆಡ್ಡೆ ಗೆಣಸು, ಹೂವು, ಹಣ್ಣು ಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಶಾಲಾ ಆವರಣದಲ್ಲಿ ಮಾರಾಟ ಮಾಡಿ ಸಂತೆಯ ವಾತಾವರಣವನ್ನು ನೆನಪಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವ್ಯವಹಾರ ಜ್ಞಾನವನ್ನು ವೃದ್ಧಿಸುವ ಕಾರ್ಯವನ್ನು ಮಾಡಲಾಯಿತು. ಪೋಷಕರು

ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ Read More »

ಕರಾವಳಿ

ಮಂಗಳೂರು: ಪರಾರಿಯಾಗಲು ಯತ್ನಿಸಿದ ವಿಚಾರಣಾದೀನ ಖೈದಿ ► ಸಾರ್ವಜನಿಕರ ಸಹಾಯದಿಂದ ಆರೋಪಿಯ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ 8, ಕರ್ತವ್ಯದಲ್ಲಿದ್ದ ಪೊಲೀಸರಿಗೆ ವಿಚಾರಣಾದೀನ ಖೈದಿಯೊಬ್ಬ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ಪಿವಿಎಸ್ ವೃತ್ತದ ಬಳಿ ಬುಧವಾರ ಮದ್ಯಾಹ್ನ ನಡೆದಿದೆ. ಕಳ್ಳತನ ಮತ್ತು ಗಾಂಜಾ ಪ್ರಕರಣದ ಆರೋಪಿಯಾಗಿರುವ ಪುಂಜಾಲಕಟ್ಟೆಯ ಖೈದಿಯನ್ನು ವಿಚಾರಣೆಗಾಗಿ ನ್ಯಾಯಲಯಕ್ಕೆ ಕರೆತಂದು, ಜೈಲಿಗೆ ಹಿಂತಿರುಗುತ್ತಿರುವಾಗ ಕೈಗೆ ಹಾಕಿದ ಸರಪಳಿಯಿಂದ ಪೊಲೀಸರ ಮೇಲೆ ದಾಳಿ ಮಾಡಿ, ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದರೆ ತಕ್ಷಣ ಎಚ್ಚೆತ್ತ ಪೊಲೀಸರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಟ್ರಾಫಿಕ್ ಪೊಲೀಸ್ ಹಾಗೂ ಸಾರ್ವಜನಿಕರ ಸಹಾಯದಿಂದ ಆತನನ್ನು ಸೆರೆಹಿಡಿಯುವಲ್ಲಿ

ಮಂಗಳೂರು: ಪರಾರಿಯಾಗಲು ಯತ್ನಿಸಿದ ವಿಚಾರಣಾದೀನ ಖೈದಿ ► ಸಾರ್ವಜನಿಕರ ಸಹಾಯದಿಂದ ಆರೋಪಿಯ ಸೆರೆ Read More »

ಕರಾವಳಿ

ಏರ್ ಟೆಲ್ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಗುಡ್ ನ್ಯೂಸ್ ► ಬಳಕೆಯಾಗದೇ ಉಳಿದ ಡಾಟಾವನ್ನು ಮುಂದಿನ ತಿಂಗಳು  ಬಳಕೆ ಮಾಡಬಹುದು

(ನ್ಯೂಸ್ ಕಡಬ) newskadaba.com ನವದೆಹಲಿ, ನ.8. ಏರ್ ಟೆಲ್ ಗ್ರಾಹಕರು ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡಾಟಾ ವ್ಯರ್ಥವಾಗದಂತೆ ತಡೆಗಟ್ಟಲು ಏರ್ ಟೆಲ್ ಕ್ರಮ ಕೈಗೊಂಡಿದ್ದು, ತಿಂಗಳಾಂತ್ಯಕ್ಕೆ ಬಳಕೆಯಾಗದ ಡಾಟಾವನ್ನು ಮುಂದಿನ ತಿಂಗಳು ಬಳಕೆ ಮಾಡಬಹುದಾದ ಸೌಲಭ್ಯವನ್ನು ಘೋಷಿಸಿದೆ. ರೋಲ್‍ಓವರ್ ಸೌಲಭ್ಯ ಎಂಬ ಹೊಸ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ತಾವು ಬಳಕೆ ಮಾಡದೇ ಇರುವ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡುವ ಅವಕಾಶವನ್ನು ನೀಡಿದೆ. ಈ ಹೊಸ ಸೌಲಭ್ಯ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು

ಏರ್ ಟೆಲ್ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಗುಡ್ ನ್ಯೂಸ್ ► ಬಳಕೆಯಾಗದೇ ಉಳಿದ ಡಾಟಾವನ್ನು ಮುಂದಿನ ತಿಂಗಳು  ಬಳಕೆ ಮಾಡಬಹುದು Read More »

ತಂತ್ರಜ್ಞಾನ

ಅಸಹಾಯಕ ಯುವಕನಿಗೆ ನೆರವು ನೀಡಿದ ಉಪ್ಪಿನಂಗಡಿ ಆಟೋ ಚಾಲಕರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.8. ಗ್ರಾಮೀಣ ಭಾಗದ ಆಟೋ ರಿಕ್ಷಾ ಚಾಲಕರು ಸಂಕಷ್ಟದ ಬದುಕು ಸಾಗಿಸಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿರುವುದು ಸಾಮಾನ್ಯ. ಆದರೆ ತಮ್ಮ ಸಮಸ್ಯೆಗಳ ನಡುವೆಯೂ ಉಪ್ಪಿನಂಗಡಿಯ ನೇತ್ರಾವತಿ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದವರು ಅಸಾಹಯಕರೊಬ್ಬರಿಗೆ ನೆರವಾಗುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ. ಅಪರಿಚಿತ ಊರಿನಲ್ಲಿ ಬಸ್ಸಿಗೆ ಹಣವಿಲ್ಲದೆ ಒಬ್ಬಂಟಿಯಾಗಿದ್ದ ಚಿತ್ರದುರ್ಗದ ಯುವಕನಾದ ಮೋಹನ್‌ ಅವರಿಗೆ ಆಟೋ ರಿಕ್ಷಾದವರು ಹಣ ಸಂಗ್ರಹಿಸಿ ಅವರನ್ನು ಮರಳಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಚಿತ್ರದುರ್ಗದ ಹೊಳಲ್ಕೆರೆಯವರಾಗಿದ್ದ ಮೋಹನ್‌ ಅವರ ಗೆಳೆಯ ಪುತ್ತೂರಿನಲ್ಲಿ ಕೆಲಸಕ್ಕಿದ್ದರು. ಆತನಿಗೆ ನೀಡಿದ್ದ

ಅಸಹಾಯಕ ಯುವಕನಿಗೆ ನೆರವು ನೀಡಿದ ಉಪ್ಪಿನಂಗಡಿ ಆಟೋ ಚಾಲಕರು Read More »

ಕರಾವಳಿ

ಕಡಬ: ಎಂಡೋ ಪೀಡಿತೆ ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ.8. ► ಇಲ್ಲಿನ ಕುಟ್ರುಪ್ಪಾಡಿ ಗ್ರಾಮದ ಪುರಿಯ ಎಂಬಲ್ಲಿ ಎಂಡೋ ಪೀಡಿತೆ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತಪಟ್ಟವರನ್ನು ಪುರಿಯ ನಿವಾಸಿ ಪೋಸ್ಟ್‌ಮ್ಯಾನ್ ರವಿ ಎಂಬವರ ಪುತ್ರಿ ಅಶ್ವಿನಿ(28) ಎಂದು ಗುರುತಿಸಲಾಗಿದೆ. ಈಕೆ ಹುಟ್ಟಿನಿಂದಲೇ ಎಂಡೋ ಪೀಡಿತಳಾಗಿ ಕಳೆದ ಇಪ್ಪತ್ತೆಂಡು ವರ್ಷಗಳಿಂದ ದೃಷ್ಟಿಕ ಳೆದುಕೊಂಡು ಪೋಷಕರ ಆಶ್ರಯದಲ್ಲಿ ಬೆಳೆದು ಬಂದಿದ್ದಾಳೆ. ಕಳೆದ ಹತ್ತು ದಿನಗಳಿಂದ ಖಾಯಿಲೆ ಉಲ್ಭಣಿಸಿ ಮೃತಪಟ್ಟಿದ್ದಾಳೆ. ರವಿಯವರ ಇಬ್ಬರೂ ಹೆಣ್ಣು ಮಕ್ಕಳು ಕೂಡಾ ಎಂಡೋ ಪೀಡಿತರಾಗಿದ್ದು, ಈ ಪೈಕಿ ಹಿರಿ ಮಗಳು

ಕಡಬ: ಎಂಡೋ ಪೀಡಿತೆ ಯುವತಿ ಮೃತ್ಯು Read More »

ಕರಾವಳಿ

ಕಡಬ: ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲಾ ಶತಮಾನೋತ್ಸವ ► ಪೂರ್ವಭಾವಿ ಸಭೆ, ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಕಡಬ, ನ.8. ಗ್ರಾಮೀಣ ಪ್ರದೇಶದಲ್ಲಿ 1919ರಲ್ಲಿ ಆರಂಭಗೊಂಡ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ. ವಿದ್ಯಾಲಯದ ಶತಮಾನದ ಹಾದಿಯಲ್ಲಿ ಸೇವೆಗೈದವರನ್ನು ಸ್ಮರಿಸುವ ಉತ್ಸವವನ್ನು 2018ರ ಕೊನೆಗೆ ನಡೆಸಲು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಮಾರ್ಗದರ್ಶನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಶಾಲಾ ಆಡಳಿತ ಮಂಡಳಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯರ ಉಪಸ್ಥಿತಿಯಲ್ಲಿ ಹಾಗೂ ಊರವರ ಸಹಭಾಗಿತ್ವದಲ್ಲಿ ಶತಮಾನೋತ್ಸವದ ಆಚರಣೆಗೆ ವಿವಿಧ ಸಮಿತಿಗಳಿಗೆ ಮುಖ್ಯಸ್ಥರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಕಡಬ: ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲಾ ಶತಮಾನೋತ್ಸವ ► ಪೂರ್ವಭಾವಿ ಸಭೆ, ಸಮಿತಿ ರಚನೆ Read More »

ಕರಾವಳಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುತ್ತಿದ್ದ ಪಾದಯಾತ್ರಿಕರಿಗೆ ► ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಕಡಬ, ನ.8. ತಣ್ಣೀರುಪಂತ ಶ್ರೀ ಶಾರದಾಂಬಾ ಭಜನಾ ಮಂದಿರ ಹಾಗೂ ಪುತ್ತಿಲ ದೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಆಶ್ರಯದಲ್ಲಿ ತನಿಯಪ್ಪ ಹಳೆಕೋಟೆ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಆಗಮಿಸಿದ 59 ಮಂದಿ ಪಾದಯಾತ್ರಿಕರಿಗೆ ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಸ್ವಾಗತ ಕೋರಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಪಾದಯಾತ್ರಿಕರನ್ನು ಭಜನಾ ಮಂದಿರಕ್ಕೆ ಬರಮಾಡಿಕೊಂಡು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಯಿತು. ಪೆರಾಬೆ ಗ್ರಾ.ಪಂ.ಉಪಾಧ್ಯಕ್ಷರಾದ ಜನಾರ್ದನ ಶೆಟ್ಟಿಯವರು ಭೋಜನದ ವ್ಯವಸ್ಥೆ ಮಾಡಿದ್ದರು. ಭಜನಾ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುತ್ತಿದ್ದ ಪಾದಯಾತ್ರಿಕರಿಗೆ ► ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ Read More »

ಕರಾವಳಿ

ಕಡಬ: ಕೊೖಲ ಗ್ರಾ.ಪಂ.ವ್ಯಾಪ್ತಿಯಲ್ಲಿ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ನ.8. ಕಾಂಗ್ರೆಸ್ ಹಮ್ಮಿಕೊಂಡಿರುವ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನ ಕೊೖಲ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯಿತು. ಕೊೖಲ ಗ್ರಾಮದ ಬೂತ್ ನಂ.1ರ ಶಕ್ತಿನಗರ ಅಬೂಬಕ್ಕರ್ರವರ ಮನೆಯಲ್ಲಿ, ಬೂತ್ ನಂ.2ರ ಆತೂರು ಬೈಲು ಬಿಪಾತುಮರವರು ಮನೆಯಲ್ಲಿ ಹಾಗೂ ವಳಕಡಮ ಭಜನಾ ಮಂದಿರದ ಬಳಿಯಲ್ಲಿ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನ ಉದ್ಘಾಟಿಸಿ ಚಾಲನೆ ನೀಡಲಾಯಿತು. ದ.ಕ.ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರ್ವೋತ್ತಮ ಗೌಡರವರು ಉದ್ಘಾಟಿಸಿ ಮಾತನಾಡಿ, ಕಳೆದ ನಾಲ್ಕುವರೇ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ

ಕಡಬ: ಕೊೖಲ ಗ್ರಾ.ಪಂ.ವ್ಯಾಪ್ತಿಯಲ್ಲಿ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಲತಾ ಬಿ. ► ಜಿಲ್ಲಾ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.8.  ಪ.ಪೂ.ಶಿಕ್ಷಣ ಇಲಾಖೆ ವತಿಯಿಂದ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಲತಾ ಬಿ.,ಇವರು 100 ಮೀ., 200 ಮೀ., ಓಟದಲ್ಲಿ ಪ್ರಥಮ ಹಾಗೂ 400 ಮೀ.ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಎಂ.ತರಬೇತಿ ನೀಡಿದ್ದಾರೆ.

ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಲತಾ ಬಿ. ► ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಕ್ರೀಡಾ ನ್ಯೂಸ್
Scroll to Top