ಮೂಡಬಿದಿರೆ: ‘ಅಂತರಾಷ್ಟ್ರೀಯ ಯುವ ದಿನ’ ಆಚರಣೆ

(ನ್ಯೂಸ್ ಕಡಬ)newskadaba.com ಮೂಡುಬಿದಿರೆ, ಆ.12.  ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿ ವಲಯ ಮತ್ತು ಭಾರತೀಯ ಕಥೊಲಿಕ ಯುವ ಸಂಚಲನ ಗಂಟಾಲ್ಕಟ್ಟೆ ಘಟಕ ಇದರ ಸಹಯೋಗದೊಂದಿಗೆ ಮೂಡಬಿದ್ರಿ ವಲಯದ ಯುವ ಜನರಿಗೆ ಒಂದು ದಿನದ ಮಾಹಿತಿ ಕಾರ್ಯಗಾರ “ಯವ ಎಕ್ತಾರ್ 2024” ಎಂಬ ಸಮಾಲೋಚನೆ ಸಭೆಯನ್ನು ಗಂಟಾಲ್ಕಟ್ಟೆಯ ನಿತ್ಯ ಸಹಾಯ ಮಾತ ಇಗರ್ಜಿಯ ಸಭಾಭವನದಲ್ಲಿ  ನಡೆಯಿತು.

ವಿಗಾರ್ ಜನರಲ್ ಹಾಗೂ ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿ ವಲಯದ ನಿರ್ದೇಶಕರಾದ ಅತಿ ವಂದನೀಯ ಫಾದರ್ ಒನಿಲ್ ಡಿಸೋಜಾ ಉದ್ಘಾಟಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿತ್ಯ ಸಹಾಯಮಾತ ಇಗರ್ಜಿ ಗಂಟಾಲ್ಕಟ್ಟೆಯ ಧರ್ಮಗುರುಗಳಾದ ಫಾದರ್ ರೊನಾಲ್ಡ್ ಡಿಸೋಜಾ ಆಗಮಿಸಿ ನೆರೆದಿರುವ ಯುವಜನರನ್ನು ಉದ್ದೇಶಿಸಿ “ಯುವಜನರು ಮತ್ತು ಇಂದಿನ ಕ್ರೈಸ್ತ ಸಭೆ” ಎಂಬ ವಿಷಯದ ಕುರಿತು ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.

Also Read  ಕಡಬ: ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ➤ ಕಲ್ಲಾಜೆಯಲ್ಲಿ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರಗಳು ➤ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್

 

 

error: Content is protected !!
Scroll to Top