ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆ..! 

(ನ್ಯೂಸ್ ಕಡಬ)newskadaba.com ಕಾಸರಗೋಡು, ಆ.10. ಚಿರತೆಯೊಂದು ಉರುಳಿಗೆ ಸಿಲುಕಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಉರುಳಿಗೆ ಸಿಲುಕಿದ ಸ್ಥಿತಿಯಲ್ಲಿ ಚಿರತೆ ಬೆಳಿಗ್ಗೆ ಪತ್ತೆಯಾಗಿತ್ತು.

ಬೊಬ್ಬೆ ಕೇಳಿ ಸ್ಥಳೀಯರು ಗಮನಿಸಿದಾಗ ಚಿರತೆ ಸಿಲುಕಿರುವುದು ಕಂಡು ಬಂದಿದ್ದು, ಅರಣ್ಯಾಧಿಕಾರಿ ನೇತೃತ್ವದ ತಂಡವು ಸ್ಥಳಕ್ಕಾಗಮಿಸಿತ್ತು. ಚಿರತೆಯ ಸೊಂಟಕ್ಕೆ ಉರುಳು ಬಿದ್ದಿರುವುದರಿಂದ ಸಮೀಪಕ್ಕೆ ತೆರಳಲು ಸಾಧ್ಯವಾಗಲಿಲ್ಲ . ಇದರಿಂದ ಪ್ರಜ್ಞೆ ತಪ್ಪಿಸಿ ರಕ್ಷಿಸಲು ವಯನಾಡಿನ ತಂಡದ ನೆರವು ಕೋರಲಾಗಿತ್ತು.

ಆದರೆ ತಂಡವು ಆಗಮಿಸುವ ಮೊದಲೇ ಸಂಜೆ ವೇಳೆಗೆ ಚಿರತೆ ಸಾವಿಗೀಡಾಗಿದೆ. ಹಂದಿಗಾಗಿ ಇಡಲಾಗಿದ್ದ ಉರುಳು ಚಿರತೆ ಸಾವಿಗೆ ಕಾರಣವಾಗಿದ್ದು, ಉರುಳು ಇರಿಸಿದ್ದು ಯಾರೆಂಬ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  15 ದಿನದೊಳಗೆ ಮರಳು ಸ್ಥಳಗಳನ್ನು ಗುರುತಿಸಿ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

 

error: Content is protected !!
Scroll to Top