ಡೆಂಗ್ಯೂ ಪ್ರಕರಣ- ‘ಮುನ್ನೆಚ್ಚರಿಕೆ ಅಗತ್ಯ’                 ದಿನೇಶ್‌ ಗುಂಡೂರಾವ್‌ ಸೂಚನೆ                  

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.08. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಇಳಿಕೆ ಕಂಡರೂ ಅಕ್ಟೋಬರ್ ಅಂತ್ಯದವರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಗಳು ಕಡಿಮೆಯಾದ ಬಳಿಕ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬಂದಿತು ಎನ್ನಲು ಸಾಧ್ಯವಿಲ್ಲ. ಬಿಸಿಲು-ಮಳೆಯವಾತಾವರಣದಿಂದ ಪ್ರಕರಣಗಳ ಏರಿಳಿತವಾಗುತ್ತದೆ ಎಂದರು.

ರಾಜ್ಯದಲ್ಲಿ 259 ಮಂದಿ ಹೊಸದಾಗಿ ಡೆಂಗ್ಯೂ ಪೀಡಿತರಾಗಿರುವುದು ದೃಢಪಟ್ಟಿದ್ದು, ಈ ಜ್ವರ ಪೀಡಿತರಲ್ಲಿ 395 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಸಕ್ರಿಯ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2,085ಕ್ಕೆ ಇಳಿಕೆಯಾಗಿದೆ. ತೀವ್ರ ನಿಗಾ ಘಟಕದಲ್ಲಿರುವ ಆರು ಮಂದಿ ಸೇ ರಿ 258 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ಮಂಡ್ಯದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್‌ ಹರಸಾಹಸ..!

error: Content is protected !!
Scroll to Top