ಉಡುಪಿ: ಬೀದಿ ನಾಯಿಯಿಂದ ಗಾಯಗೊಂಡಿದ್ದ ನವಿಲಿನ ರಕ್ಷಣೆ



(ನ್ಯೂಸ್ ಕಡಬ)newskadaba.com ಉಡುಪಿ, ಆ.07.  ಬೀದಿನಾಯಿಯಿಂದ ಗಾಯಗೊಂಡಿದ್ದ ಹೆಣ್ಣು ನವಿಲನ್ನು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ್ ವೊಲಕಾಡ್ ಅವರು ರಕ್ಷಿಸಿದ ಘಟನೆ ಉಡುಪಿಯ ಭಹ್ಮಗಿರಿಯಲ್ಲಿ ನಡೆದಿದೆ.





ಬೀದಿ ನಾಯಿಯೊಂದು ನವಿಲಿನ ಮೇಲೆ ದಾಳಿ ಮಾಡಿದ್ದು, ಹಾರಲು ಸಾಧ್ಯವಾಗದೆ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದೆ.ನವಿಲು ಕೆಸರಿನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಿತ್ಯನಾಡು ವೊಳಕಾಡುಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನವಿಲನ್ನು ತನ್ನ ರಕ್ಷಣೆಗೆ ತೆಗೆದುಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗಾಯಗೊಂಡ ಹಕ್ಕಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಅರಣ್ಯ ಇಲಾಖೆ ಘೋಷಿಸಿದೆ.






error: Content is protected !!
Scroll to Top